KGID Computerised-ಬಗ್ಗೆ ಮಾಹಿತಿ
ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್.ಷಡಾಕ್ಷರಿರವರ ನೇತೃತ್ವದಲ್ಲಿ KGID ನಿರ್ದೇಶಕರಾದ ಡಾ. ರಾಜೇಂದ್ರ ಕುಮಾರ್ ಅವರನ್ನು ಭೇಟಿ ಮಾಡಿ, ಇಲಾಖೆಯ KGID ಪಾಲಿಸಿಗಳ ಗಣಕೀಕರಣ ಕಾರ್ಯ ಪ್ರಗತಿಯ ಬಗ್ಗೆ ಚರ್ಚಿಸಲಾಯಿತು. ಚರ್ಚಿತ ವಿಷಯಗಳು ಈ ಕೆಳಕಂಡಂತಿರುತ್ತದೆ.
1.ಪೈಲಟ್ ಪ್ರಾಜೆಕ್ಟ್ ನಲ್ಲಿ ಆಯ್ಕೆಯ 6 ಜಿಲ್ಲೆಗಳಲ್ಲಿ Online ಮೂಲಕ ಸಾಲ ಮತ್ತು ಅಂತಿಮ ಕ್ಲೈಮುಗಳನ್ನು, ಇತ್ಯಾದಿ ಇತ್ಯರ್ಥಪಡಿಸಲಾಗುತ್ತಿದೆ.
2.ನವೆಂಬರ್ ತಿಂಗಳಿನಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಾಲ, ಹೊಸ ಪಾಲಿಸಿಗಳ ವಿತರಣೆ ಮತ್ತು ಅಂತಿಮ ಕ್ಲೈಮುಗಳನ್ನು Online ಮೂಲಕ ಕಡ್ಡಾಯವಾಗಿ ನಿರ್ವಹಿಸಲಾಗುವುದು.
3.ವಿಮಾ ಅವಧಿಯನ್ನು 55 ವರ್ಷಗಳಿಂದ 60 ವರ್ಷಗಳಿಗೆ ಹೆಚ್ಚಿಸುವುದು.
4.ಪ್ರತಿ ವ್ಯವಹಾರದ ವಿವರಗಳನ್ನು ಪಾಲಿಸಿದಾರನ ಮೊಬೈಲ್ ಗೆ ಸಂದೇಶದ ಮೂಲಕ ಕಳುಹಿಸುವುದು.
5.ಸರ್ಕಾರದಿಂದ ಮಂಜೂರಾಗುವ ಬೋನಸ್ ನಗದು ಮೊತ್ತವನ್ನು ತಕ್ಷಣ ಪಾಲಿಸಿದಾರರ ಖಾತೆಗೆ ಜಮಾ ಮಾಡಲಾಗುವುದು.
6.ಗಣಕೀಕರಣ ಕಾರ್ಯದ ಪ್ರಗತಿ ಬಗ್ಗೆ ಪರಿಶೀಲನೆ ನಡೆಸಲು ಪ್ರತಿ ಗುರುವಾರ ಸಭೆ ನಡೆಸುವುದು.
7.ಹೆಚ್.ಆರ್.ಎಂ.ಎಸ್ ತಂತ್ರಾಂಶರೇತರ (Non-HRMS) ನಿಗಮ/ಮಂಡಳಿ/ಪ್ರಾಧಿಕಾರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ನೌಕರರ ಪಾಲಿಸಿಗಳಿಗೆ ಸಂಬಂಧಿಸಿದ ಆಯಾ ಡಿಡಿಓ ಮತ್ತು ಸಂಬಂಧಿಸಿದ ನೌಕರರಿಗೆ ಲಾಗಿನ್ ನಲ್ಲಿ ಮಾಹಿತಿ ನೀಡಲು ಅವಕಾಶ ಕಲ್ಪಿಸುವುದು.