ಕಲಿಕಾ ಚೇತರಿಕೆ ಸಾಮಾನ್ಯ ಪ್ರಶ್ನೆಗಳು

WhatsApp Group Join Now
Telegram Group Join Now

1)ಪ್ರತಿ ವರ್ಷ ನಡೆಯುತ್ತಿದ್ದ ಸೇತುಬಂಧಕ್ಕಿಂತ ಇದು ಹೇಗೆ ಭಿನ್ನವಾಗಿದೆ?

ಕಲಿಕಾ ಚೇತರಿಕೆಯು ಕಲಿಕಾ ಅಂತರವನ್ನು ಸರಿದೂಗಿಸುವ ನಿಟ್ಟಿನಲ್ಲಿಆಯೋಜಿಸಿರುವ ಉಪಕ್ರಮವಾಗಿದೆ. ಇದು ಕಲಿಕೆಯಲ್ಲಿ ಉಂಟಾಗಿರುವನಷ್ಟವನ್ನು ತುಂಬುವುದಲ್ಲದೆ ಕಲಿಕೆಯನ್ನು ಕಲಿಕಾಫಲಗಳ ಆಧಾರದ ಮೇಲೆವ್ಯವಸ್ಥಿತವಾಗಿ ಬೋಧಿಸಲು ಮಾಡಿರುವ ಪ್ರಯತ್ನವಾಗಿದೆ. ಆದ್ದರಿಂದ ಇದುಇಡೀ ವರ್ಷ ನಡೆಯುವ ಪ್ರಕ್ರಿಯೆಯಾಗಿದೆ. ಈ ಪ್ರಕ್ರಿಯೆಯು ಕಲಿಕಾ ನಷ್ಟವನ್ನುಭರಿಸುವುದು, ಹೊಸ ಕಲಿಕೆಯನ್ನು ಸಾಧಿಸುವುದು ಮತ್ತು ಮೌಲ್ಯಮಾಪನ ಈಎಲ್ಲಾ ಅಂಶಗಳನ್ನು ಒಳಗೊಂಡಿದೆ.

2) ಕಲಿಕಾ ಚೇತರಿಕೆಯ ಉಪಕ್ರಮವನ್ನು ಕೇವಲ ಸರ್ಕಾರಿ ಶಾಲೆಗಳಲ್ಲಿ ಮಾತ್ರ ಏಕೆಅಳವಡಿಸಿಕೊಳ್ಳಲಾಗುತ್ತಿದೆ?

ನಮ್ಮ ರಾಜ್ಯದಲ್ಲಿ ಶಾಲೆ ಮುಚ್ಚಿದ ಕಾರಣದಿಂದಾದ ಕಲಿಕಾ ನಷ್ಟವು ಹೆಚ್ಚಾಗಿಕಂಡುಬಂದಿದೆ. ವರ್ಚುವಲ್ ಕಲಿಕಾ ಮಾಧ್ಯಮಕ್ಕೆ ಸೌಲಭ್ಯಗಳ ಕೊರತೆ,ನೆಟ್‌ವರ್ಕ್ ಕೊರತೆ ಮತ್ತು ಮೊಬೈಲ್ ಹಾಗೂ ಇತರೆ ಸಾಧನ ಸಲಕರಣೆಗಳಕೊರತೆಯಿಂದಾಗಿ ಸಾಕಷ್ಟು ಸರ್ಕಾರಿ ಶಾಲೆಯ ಮಕ್ಕಳು ದೂರ ಶಿಕ್ಷಣದಿಂದವಂಚಿತರಾಗಿದ್ದಾರೆ. ಆದಕಾರಣ ಸರ್ಕಾರವು ಜವಾಬ್ದಾರಿಯುತವಾಗಿಕಾರ್ಯಕ್ರಮವನ್ನು ಸರ್ಕಾರಿ ಶಾಲೆಗಳಲ್ಲಿ ಅಳವಡಿಸಿಕೊಳ್ಳಲು ತೀರ್ಮಾನಿಸಿದೆ.ಆದಾಗ್ಯೂ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳುಚೇತರಿಕೆಯನ್ನು ತಮ್ಮ ಅಗತ್ಯಾನುಸಾರವಾಗಿ ಅಳವಡಿಸಿಕೊಳ್ಳಲು ಸೂಚಿಸಲಾಗಿದೆ.ಅವರು ಯಾವುದೇ ಸಂದರ್ಭದಲ್ಲಿಯೂ ಕೂಡ ಇಲಾಖೆಯನ್ನು ಸಂಪರ್ಕಿಸಿಹೆಚ್ಚಿನ ಮಾಹಿತಿಯನ್ನು ತೆಗೆದುಕೊಳ್ಳಲು ಪ್ರೇರೇಪಿಸಲಾಗಿದೆ.

3) ಶಿಕ್ಷಕರು ಪಾಠಯೋಜನೆಯನ್ನು ಮಾಡಿಕೊಳ್ಳಬೇಕೆ? ಹೌದಾದರೆ ಹೇಗೆಮಾಡಿಕೊಳ್ಳಬೇಕು?

ಪಾಠಯೋಜನೆಯು ಶಿಕ್ಷಕರು ಪಾಠವನ್ನು ಹೇಗೆ ಮಾಡಬೇಕೆಂಬುದರಮಾರ್ಗಸೂಚಿ. ಶಿಕ್ಷಕರ ಕೈಪಿಡಿಯು ಕಲಿಕಾ ಫಲಗಳನ್ನಾಧರಿಸಿ ಪಾಠ ಮಾಡುವಪ್ರಕ್ರಿಯೆಯನ್ನು ವಿವರಿಸುತ್ತದೆ. ಆದಾಗ್ಯೂವಿವರಿಸುತ್ತದೆ. ಆದಾಗ್ಯೂ ಶಿಕ್ಷಕರು ತಮ್ಮದೇಆದಪಾಠಯೋಜನೆಯನ್ನು ಕಲಿಕಾಫಲಗಳ ಆಧಾರದ ಮೇಲೆ ತಮ್ಮ ತರಗತಿಯಮಕ್ಕಳಿಗನುಗುಣವಾಗಿ ತಯಾರಿಸಿಕೊಳ್ಳಲು ಪ್ರೇರೇಪಿಸಲಾಗಿದೆ.

4) ಕಲಿಕಾ ಚೇತರಿಕೆ ಸಂದರ್ಭದಲ್ಲಿ ಪಠ್ಯಪುಸ್ತಕಗಳನ್ನು ಹೇಗೆ ಬಳಸಿಕೊಳ್ಳಬೇಕು?

ಪಠ್ಯಪುಸ್ತಕಗಳ ಉಲ್ಲೇಖಗಳನ್ನು ಕಲಿಕಾ ಫಲಗಳ ಆಧಾರದ ಮೇಲೆ ಶಿಕ್ಷಕರಕೈಪಿಡಿಯಲ್ಲಿ ನೀಡಲಾಗಿದೆ. ಆದ್ದರಿಂದ ಶಿಕ್ಷಕರು ತರಗತಿಗೆ ಮುಂಚೆ ಶಿಕ್ಷಕರಕೈಪಿಡಿಯನ್ನು ಓದಿ ಅಗತ್ಯಾನುಸಾರವಾಗಿ ಪ್ರತಿ ವಿಷಯದಲ್ಲಿ ಪಠ್ಯಪುಸ್ತಕಗಳನ್ನುಅಗತ್ಯವಿದ್ದಲ್ಲಿ ಕಲಿಕಾಹಾಳೆಗಳಿಗೆ ಪೂರಕವಾಗಿ ಬಳಸಲು ಪ್ರೇರೇಪಿಸಲಾಗಿದೆ.

5) ಕಲಿಕಾಹಾಳೆ ಮತ್ತು ಅಭ್ಯಾಸ ಹಾಳೆಗಳಿಗಿರುವ ವ್ಯತ್ಯಾಸವೇನು?

ಹಾಳೆಯನ್ನು ಕೊಟ್ಟಿರುವ ಪುಸ್ತಕದಿಂದಹರಿದುಬೇರ್ಪಡಿಸಬಹುದಾಗಿದೆ. ಇದು ಮೌಲ್ಯಮಾಪನ ಮತ್ತು ಹಿಮ್ಮಾಹಿತಿ ಹೀಗೆಹಲವು ಉದ್ದೇಶಗಳಿಗೆ ಬಳಸಬಹುದಾಗಿದೆ. ಇದು ಮಕ್ಕಳ ಕೃತಿ ಸಂಪುಟತಯಾರಿಸಲು ಅನುಕೂಲ ಮಾಡುತ್ತದೆ. ಅಭ್ಯಾಸ ಹಾಳೆಯ ಬಳಕೆಯು ಅಭ್ಯಾಸಮತ್ತು ಮೌಲ್ಯಮಾಪನಕ್ಕೆ ಮಾತ್ರ ಸೀಮಿತವಾಗಿರುತ್ತದೆ.

6) ಕಲಿಕಾ ಚೇತರಿಕೆ ಅಳವಡಿಸಿಕೊಂಡಾದ ಮೇಲೂ ಪ್ರತೀ ಅವಧಿಯು 45 ನಿಮಿಷಇರುತ್ತದೆಯೇ?

ಹೌದು, ಕಲಿಕಾ ಚೇತರಿಕೆ ಅಳವಡಿಸಿಕೊಂಡಾದ ಮೇಲೂ ಪ್ರತೀ ಅವಧಿಯು45 ನಿಮಿಷ ಇರುತ್ತದೆ.ಮೌಲ್ಯಾಂಕನ/ಮೌಲ್ಯಮಾಪನಕ್ಕೆ ಸಂಬಂಧಿಸಿದ ಪ್ರಶ್ನೆಗಳು

7) ಮಕ್ಕಳ ಸ್ತರಗಳನ್ನು SATS ನಲ್ಲಿ ಗ್ರೇಡ್ ಗಳಾಗಿ ಪರಿವರ್ತಿಸುವುದು ಹೇಗೆ?

SATS ನಲ್ಲಿ ಎಂಟ್ರಿ ಮಾಡುವುದು ಆಡಳಿತಾತ್ಮಕವಾಗಿ ಅನಿವಾರ್ಯ. ಇದನ್ನುಯಾವ ರೀತಿ ಮಾಡಬೇಕೆಂಬುದರ ಮಾಹಿತಿಯನ್ನು ಸುತ್ತೋಲೆಯ ಮೂಲಕಇಲಾಖೆಯು ಎಲ್ಲಾ ಶಿಕ್ಷಕರಿಗೂ ಸದ್ಯದಲ್ಲೇ ತಿಳಿಸಿಕೊಡುತ್ತದೆ.

8) ಪಠ್ಯಪುಸ್ತಕದಲ್ಲಿರುವ ಕಲಿಕಾಫಲಗಳು ಮತ್ತುಚೇತರಿಕೆಯಲ್ಲಿಅಳವಡಿಸಿಕೊಂಡಿರುವ ಕಲಿಕಾ ಫಲಗಳು ಬೇರೆ ಬೇರೆಯಾಗಿವೆ. ಇವುಗಳಲ್ಲಿಮೌಲ್ಯಮಾಪನದ ಉದ್ದೇಶದ ಹಿನ್ನೆಲೆಯಲ್ಲಿ ಯಾವುದನ್ನು ಪರಿಗಣಿಸಬೇಕು?

ಪಠ್ಯಪುಸ್ತಕದಲ್ಲಿರುವ ಕಲಿಕಾಫಲಗಳು ಮತ್ತು ಕಲಿಕಾ ಚೇತರಿಕೆಯಲ್ಲಿಅಳವಡಿಸಿಕೊಂಡಿರುವ ಕಲಿಕಾ ಫಲಗಳು ಬೇರೆ ಬೇರೆಯಲ್ಲ.ಕೋವಿಡ್ 19 ರಿಂದಾಗಿ ಹಿಂದಿನ ಎರಡು ಶೈಕ್ಷಣಿಕ ವರ್ಷಗಳಲ್ಲಿವಿದ್ಯಾರ್ಥಿಗಳು ಪೂರ್ಣಪ್ರಮಾಣದಲ್ಲಿ ಕಲಿಕಾ ಸಾಮರ್ಥ್ಯಗಳನ್ನು ಗಳಿಸಿಕೊಳ್ಳಲುಸಾಧ್ಯವಾಗಿರುವುದಿಲ್ಲ. ಹಾಗಾಗಿ ಹಿಂದಿನ ಎರಡು ವರ್ಷಗಳಲ್ಲಿಗಳಿಸಿಕೊಳ್ಳಲೇಬೇಕಾದ ಅತ್ಯಗತ್ಯ ಕಲಿವಿನ ಫಲಗಳು ಮತ್ತು ಪ್ರಸಕ್ತ ಶೈಕ್ಷಣಿಕವರ್ಷದ ಪ್ರಮುಖ ಕಲಿಕಾ ಫಲಗಳೊಂದಿಗೆ ಕಲಿಕೆಯನ್ನು ಸಾಧಿಸುವಉದ್ದೇಶದೊಂದಿಗೆಚೇತರಿಕೆ ಉಪಕ್ರಮವನ್ನುಅನುಷ್ಠಾನಿಸಲಾಗುತ್ತಿರುವುದರಿಂದ ಕಲಿಕಾಹಾಗೂ ಶಿಕ್ಷಕರಕೈಪಿಡಿಗಳಲ್ಲಿರುವ ಕಲಿಕಾಫಲಗಳನ್ನೇ ಮೌಲ್ಯಮಾಪನದ ಉದ್ದೇಶದ ಹಿನ್ನೆಲೆಯಲ್ಲಿಪರಿಗಣಿಸಬೇಕಾಗುತ್ತದೆ.

9) ವಿಷಯವಾರು ಮತ್ತು ತರಗತಿವಾರು ಸಾಮಾನ್ಯವಾದ ಪ್ರಶ್ನೆಪತ್ರಿಕೆದೊರೆಯುತ್ತದೆಯೇ?

ಇಲ್ಲ, ಶಿಕ್ಷಕರು ಶಾಲಾಹಂತದಲ್ಲಿ ತರಗತಿ ಸಂದರ್ಭಕ್ಕನುಸಾರವಾಗಿಪ್ರಶ್ನೆಪತ್ರಿಕೆಗಳನ್ನು ಮತ್ತು ಮೌಲ್ಯಮಾಪನ ಪ್ರಕ್ರಿಯೆಗಳನ್ನು ಅಳವಡಿಸಿಕೊಳ್ಳಲುಪ್ರೇರೇಪಿಸಲಾಗಿದೆ.

10) ಯಾವ ದಾಖಲೆಗಳನ್ನು/ಆಧಾರಗಳನ್ನು ನಿರ್ವಹಿಸಬೇಕು?

ಮಕ್ಕಳ ಕಲಿಕಾ ಪ್ರಗತಿಯನ್ನು ಬಿಂಬಿಸುವ ನೈದಾನಿಕ ಪರೀಕ್ಷೆಗಳಫಲಿತಗಳು, ಕಲಿಕಾ ಹಾಳೆಗಳಿಂದ ಕೂಡಿದ ವಿದ್ಯಾರ್ಥಿಯ ಕೃತಿಸಂಪುಟ ಮತ್ತುಉಪಾಖ್ಯಾನ ಪುರಾವೆಗಳನ್ನು ಕಲಿಕಾ ಚೇತರಿಕೆಯ ಸಂದರ್ಭದಲ್ಲಿನಿರ್ವಹಿಸಬೇಕು. ಯಾವುದೇ ಸಂಶಯಗಳಿದ್ದಲ್ಲಿ ಇಲಾಖೆಯನ್ನು ಸಂಪರ್ಕಿಸಿರಿ.

11) ನೈದಾನಿಕ ಪರೀಕ್ಷೆ ಮತ್ತು ಪೂರ್ವ ಪರೀಕ್ಷೆಗಳಿಗಿರುವ ವ್ಯತ್ಯಾಸಗಳೆನು?

ನೈದಾನಿಕ ಪರೀಕ್ಷೆಯು ಮಕ್ಕಳ ಪೂರ್ವ ಕಲಿಕಾ ಜ್ಞಾನವನ್ನು ತಿಳಿಯಲುಇರುವ ಸಾಧನವಾಗಿದೆ. ಇದು ಮಕ್ಕಳ ಅಗತ್ಯವನ್ನು ತಿಳಿದುಕೊಳ್ಳುವುದರಜೊತೆಗೆ ಅದನ್ನು ಪೂರೈಸಲು ಯಾವ ರೀತಿ ಯೋಜನೆ ಹಾಕಿಕೊಳ್ಳಬೇಕುಎಂಬುದನ್ನು ನಿರ್ಧರಿಸಲು ಸಹಾಯ ಮಾಡುತ್ತದೆ.ರೀತಿಯಾದ ಸಮಗ್ರ ಮಾಹಿತಿಯನ್ನುಪೂರ್ವ ಪರೀಕ್ಷೆಯು ಈನೀಡುವುದಿಲ್ಲ.

12) ಎಲ್ಲಾ ಪೋಷಕರು ಮತ್ತು ಅಧಿಕಾರಿ ವರ್ಗದವರಿಗೆ ಕಲಿಕಾಚೇತರಿಕೆಯಮಾಹಿತಿಯನ್ನು ನೀಡಲಾಗುತ್ತದೆಯೇ?

ಇಲಾಖೆಯು ಎಲ್ಲಾ ಭಾಗಿದಾರರಿಗೂ ಕಲಿಕಾಚೇತರಿಕೆಯ ಬಗ್ಗೆ ಮಾಹಿತಿನೀಡಲು ಹಲವಾರು ( ಇಲಾಖೆಯ ಅಧಿಕಾರಿಗಳಿಗೆ ಹಾಗೂ ಶಿಕ್ಷಕ ಸಂಘದಪದಾಧಿಕಾರಿಗಳಿಗೆ ಕಾರ್ಯಾಗಾರ, ವಿಡಿಯೋಕಾನ್ಸರೆನ್ಸ್ ಟೆಲಿಕಾನ್ಸರೆನ್ಸ್)ಅಗತ್ಯ ಕ್ರಮಗಳನ್ನು ಅನುಸರಿಸಿದೆ.ಪ್ರಾರಂಭೋತ್ಸವ ಸಂದರ್ಭದಲ್ಲಿ ಪೋಷಕರನ್ನು ಹಾಗೂಎಸ್.ಡಿ.ಎಂ.ಸಿ ಸಮಿತಿಯ ಅಧ್ಯಕ್ಷರು ಹಾಗೂ ಎಲ್ಲಾ ಸದಸ್ಯರನ್ನು ಆಹ್ವಾನಿಸಿಉಪಕ್ರಮದ ಅರಿವು ಮೂಡಿಸಿ ಅನುಷ್ಟಾನಕ್ಕಾಗಿ ಸಹಕಾರ ಕೋರುವ ಮಾದರಿಪತ್ರವನ್ನು ಸಿದ್ಧಪಡಿಸಿದ್ದು,ರಾಜ್ಯದ47702 ಸರ್ಕಾರಿ ಶಾಲೆಗಳಿಗೂಉಪನಿರ್ದೇಶಕರು (ಆಡಳಿತ) ಹಾಗೂ ಉಪನಿರ್ದೇಶಕರು ( ಅಭಿವೃದ್ಧಿ)ರವರು ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮುಖೇನ ಎಲ್ಲಾ ಸರ್ಕಾರಿ ಶಾಲೆಗಳಮುಖ್ಯಸ್ಥರಿಗೆ ತಲುಪಿಸುವಂತೆ ಕ್ರಮವಹಿಸಿದೆ.

13) ಕಲಿಕಾಚೇತರಿಕೆಯು ಈ ವರ್ಷ ಪೂರ್ತಿ ನಡೆಯುತ್ತದೆಯೇ?

ಹೌದು, ಕಲಿಕಾ ಅಂತರವನ್ನು ಸರಿದೂಗಿಸಿ ಪ್ರಸಕ್ತ ತರಗತಿಯ ಅಗತ್ಯಕಲಿಕಾಫಲಗಳನ್ನು ಸಾಧಿಸಲು 2022-23ರ ಶೈಕ್ಷಣಿಕ ವರ್ಷ ಪೂರ್ತಿಕಲಿಕಾಚೇತರಿಕೆಯನ್ನು ಅಳವಡಿಸಿಕೊಳ್ಳಲಾಗುತ್ತಿದ್ದು“ಕಲಿಕಾಚೇತರಿಕೆ ವರ್ಷ ಎಂಬುದಾಗಿ ಘೋಷಿಸಲಾಗಿದೆ.

14) ಕಲಿಕಾ ಹಾಳೆಗಳಲ್ಲಿ ಕೊಟ್ಟಿರುವುದಕ್ಕಿಂತ ಹೆಚ್ಚಿನ ಚಟುವಟಿಕೆಗಳನ್ನು ಶಿಕ್ಷಕರುಕೈಗೊಳ್ಳಬಹುದೇ?

ಕಲಿಕಾಹಾಳೆಗಳಲ್ಲಿ ಮತ್ತುಶಿಕ್ಷಕರ ಕೈಪಿಡಿಗಳಲ್ಲಿ ಕೊಟ್ಟಿರುವಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಸಾಧಿಸಿದ ನಂತರವಷ್ಟೇ ಹೆಚ್ಚಿನಚಟುವಟಿಕೆಗಳನ್ನು ಕೈಗೊಳ್ಳಲು ಪ್ರೋತ್ಸಾಹಿಸಲಾಗಿದೆ.

15) ಪ್ರೌಢಶಾಲಾ ವಿದ್ಯಾರ್ಥಿಗಳು NTSE ಮತ್ತು ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆಕಲಿಕಾಚೇತರಿಕೆಯ ಸಂದರ್ಭದಲ್ಲಿ ಯಾವ ರೀತಿ ತಯಾರಿ ಮಾಡಿಕೊಳ್ಳಬಹುದು?

ಕಲಿಕಾಚೇತರಿಕೆಯು ಶಾಲೆಗಳನ್ನು ಪೂರ್ಣವಾಗಿ ತೆರೆಯಲು ಸಾಧ್ಯವಾಗದಪರಿಣಾಮವಾಗಿ ಕಲಿಕಾ ನಷ್ಟವನ್ನು ಭರಿಸಲು ಕಂಡುಕೊಂಡಿರುವಉಪಕ್ರಮವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಇಚ್ಚಿಸಿರುವವಿದ್ಯಾರ್ಥಿಗಳು ಕಲಿಕಾ ಚೇತರಿಕೆಯಲ್ಲಿ ಸೂಚಿಸಿರುವ ಕಲಿಕೆಯನ್ನು ಸಾಧಿಸಿದನಂತರ ತಮ್ಮದೇ ಹಂತದಲ್ಲಿ ವೈಯಕ್ತಿಕವಾಗಿ ತಯಾರಿಮಾಡಿಕೊಳ್ಳಬಹುದು.ಹಾಗೂ ಶಿಕ್ಷಕರ ಸಹಾಯವನ್ನು ಪಡೆಯಬಹುದಾಗಿದೆ.

16) ಸಕಾರಾತ್ಮಕ/ರಚನಾತ್ಮಕ ಹಿಮ್ಮಾಹಿತಿಯನ್ನು ಕೊಡುವುದು ಹೇಗೆ?

ಉದಾಹರಣೆಕೊಡಿ.ರಚನಾತ್ಮಕ ಹಿಮ್ಮಾಹಿತಿಯು ಮಕ್ಕಳಲ್ಲಿ ಕಲಿಕಾಪ್ರಗತಿಯನ್ನು ಉಂಟುಮಾಡಬೇಕು.ಮತ್ತು ಶಿಕ್ಷಕರಿಗೆ ವಿದ್ಯಾರ್ಥಿಗಳ ಬಗ್ಗೆ ಸೂಕ್ತವಾದ ಮಾಹಿತಿ ನೀಡುವಂತಿರಬೇಕು.ನಕಾರಾತ್ಮಕ ಟೀಕೆಗಳನ್ನು ಬಳಸದೇ ಇರುವಂತೆ ಎಚ್ಚರಿಕೆ ವಹಿಸಬೇಕು.ಉದಾಹರಣೆಗಳುಉದಾ-l: ವಿದ್ಯಾರ್ಥಿಯು ಚಟುವಟಿಕೆಗಳನ್ನು ಸಂಪೂರ್ಣಗೊಳಿಸಲುಪ್ರಯತ್ನಿಸಿದ್ದಾನೆ. ನಿಗದಿತ ಸಾಮರ್ಥ್ಯಗಳನ್ನು ಗಳಿಸಲು ಇನ್ನೂ ಹೆಚ್ಚಿನಅಭ್ಯಾಸದ ಅಗತ್ಯವಿದೆ. ಈ ಚಟುವಟಿಕೆಗೆ ಮುನ್ನ ಬೇರೆ ಸುಲಭವಾದಚಟುವಟಿಕೆಗಳನ್ನು ಮಾಡುವುದರಿಂದ ಮಗು ಈ ಸಾಮರ್ಥ್ಯವನ್ನು ಗಳಿಸಲುನೆರವಾಗುತ್ತದೆ.ಉದಾ-2: ವಿದ್ಯಾರ್ಥಿಗೆ ಈ ಚಟುವಟಿಕೆಗಳು ಸವಾಲಿನದ್ದಾಗಿದೆ. ಹಾಗಾಗಿಬೇರೆ ಸುಲಭವಾದ ಅಭ್ಯಾಸ ಚಟುವಟಿಕೆಗಳನ್ನು ಮಾಡಲು ಸೂಚಿಸಿದ್ದೇನೆ.ಉದಾ-3: ವಿದ್ಯಾರ್ಥಿಯು ಕಲಿಕಾಫಲವನ್ನು ಸಮರ್ಥವಾಗಿಅರ್ಥಮಾಡಿಕೊಂಡಿದ್ದಾನೆ.ಆದ್ದರಿಂದ ಮುಂದಿನ ಸಾಮರ್ಥ್ಯಕ್ಕೆಹೋಗಬಹುದು.

17) ಒಬ್ಬ ಶಿಕ್ಷಕರು ಒಂದಕ್ಕಿಂತ ಹೆಚ್ಚಿನ ಕಲಿಕಾ ಚೇತರಿಕೆ ತರಬೇತಿಗೆ ಹೋಗಬೇಕೆ?

( ಒಬ್ಬ ಶಿಕ್ಷಕರು ಹೆಚ್ಚಿನ ವಿಷಯಗಳನ್ನು ಪಾಠ ಬೋಧಿಸುತ್ತಿರುವ ಸಂದರ್ಭದಲ್ಲಿ)ಕಲಿಕಾ ಚೇತರಿಕೆಯ ಮೂಲಭೂತ ತತ್ವವುವಿಷಯಗಳಲ್ಲಿಯೂ ಒಂದೇ ಆಗಿರುತ್ತದೆ.ಒಬ್ಬ ಶಿಕ್ಷಕರು ಕಲಿಕಾ ಚೇತರಿಕೆಯಒಂದು ವಿಷಯದ ಬಗ್ಗೆ ತರಬೇತಿ ಪಡೆದರೆ,ಅದೇ ತತ್ವವನ್ನು ಬೋಧಿಸುತ್ತಿರುವಇತರ ವಿಷಯಗಳಿಗೂ ಅಳವಡಿಸಿಕೊಳ್ಳಬಹುದಾಗಿದೆ.ಆದ್ದರಿಂದ ಪ್ರತಿಯೊಬ್ಬಶಿಕ್ಷಕರೂ ಯಾವುದಾದರೊಂದು ವಿಷಯದಲ್ಲಿತರಬೇತಿಯನ್ನುಪಡೆಯುವುದು ಅನಿವಾರ್ಯವಾಗಿದೆ. ಹಾಗಾಗಿ ಬೋಧಿಸುತ್ತಿರುವ ಎಲ್ಲಾವಿಷಯಗಳಲ್ಲೂ ತರಬೇತಿ ಪಡೆಯುವ ಅವಶ್ಯಕತೆ ಇರುವುದಿಲ್ಲ.

WhatsApp Group Join Now
Telegram Group Join Now
Sharing Is Caring:

Leave a Comment