21 ಜೂನ್ 2025 ರಂದು ನಡೆಯಲಿರುವ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ “ಯೋಗ ಸಂಗಮ” ಸಾಮೂಹಿಕ ಯೋಗ ಪ್ರಾತ್ಯಕ್ಷಿಕೆ ಕಾರ್ಯಕ್ರಮಕ್ಕೆ ಎಲ್ಲ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳು ಅಧಿಕೃತ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಲು ಸೂಚಿಸಲಾಗಿದೆ.
ಮೊಬೈಲ್ ಮೂಲಕ ಸುಲಭವಾಗಿ ನೋಂದಣಿ ಮಾಡುವ ಹಂತಗಳು ಇಲ್ಲಿವೆ:
1. ವೆಬ್‌ಸೈಟ್‌ಗೆ ಭೇಟಿ ನೀಡಿ
ಮೊಬೈಲ್ ಬ್ರೌಸರ್‌ನಲ್ಲಿ yoga.gov.in ಎಂದು ಟೈಪ್ ಮಾಡಿ ಸರ್ಚ್ ಮಾಡಿ.
ನಂತರ ‘Yoga Sangam’ ಲಿಂಕ್ ಕ್ಲಿಕ್ ಮಾಡಿ, ನಿಯಮಗಳನ್ನು ಒಪ್ಪಿಕೊಂಡು ‘Proceed to Registration’ ಆಯ್ಕೆ ಮಾಡಿ. (ಮೇಲೆ ನೀಡಲಾದ ಲಿಂಕ್ ಮೂಲಕ ನೇರ entry ಕೊಡಬಹುದು)
2. ಶಾಲೆಯ ವಿವರಗಳು (Organization Details)
ಶಾಲೆಯ ವರ್ಗ (Category), ಶಾಲೆಯ ಹೆಸರು, ರಾಜ್ಯ, ಜಿಲ್ಲೆ, ಪಿನ್ ಕೋಡ್ ಮತ್ತು ಸಂಪೂರ್ಣ ವಿಳಾಸವನ್ನು ಭರ್ತಿ ಮಾಡಿ ‘Next’ ಕ್ಲಿಕ್ ಮಾಡಿ.
3. ಸಂಪರ್ಕ ವಿವರಗಳು (Contact Details)
ಮುಖ್ಯ ಶಿಕ್ಷಕರ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸವನ್ನು ನೀಡಿ ವೆರಿಫೈ ಮಾಡಿ.
ಮೊಬೈಲ್‌ಗೆ ಬರುವ OTP ಯನ್ನು ನಮೂದಿಸಿ ‘Verify OTP’ ಪ್ರಕ್ರಿಯೆ ಪೂರ್ಣಗೊಳಿಸಿ.
4. ಸ್ಥಳದ ವಿವರಗಳು (Venue Details)
ಯೋಗ ಕಾರ್ಯಕ್ರಮ ನಡೆಯುವ ಸ್ಥಳದ ರಾಜ್ಯ, ಜಿಲ್ಲೆ, ಪಿನ್ ಕೋಡ್ ಮತ್ತು ವಿಳಾಸವನ್ನು ನಮೂದಿಸಿ.
ಗೂಗಲ್ ಮ್ಯಾಪ್ ಲೊಕೇಶನ್ ಕಡ್ಡಾಯವಲ್ಲ.
5. ಇತರ ವಿವರಗಳು ಮತ್ತು ಸಬ್ಮಿಟ್
ಆಯುಷ್ ಸಚಿವಾಲಯದಡಿ ಯೋಗ ದಿನ ಆಯೋಜಿಸಿದ ಹಿಂದಿನ ಅನುಭವ ಹಾಗೂ ಪ್ರಮಾಣೀಕೃತ ಯೋಗ ಶಿಕ್ಷಕರ ಲಭ್ಯತೆಯ ವಿವರಗಳಿಗೆ ‘Yes’ ಅಥವಾ ‘No’ ನೀಡಿ.
ಕೊನೆಯದಾಗಿ ಡಿಕ್ಲರೇಶನ್‌ನ ಮೂರು ಚೆಕ್‌ಬಾಕ್ಸ್‌ಗಳನ್ನು ಟಿಕ್ ಮಾಡಿ ‘Submit’ ಬಟನ್ ಒತ್ತಿ.
ಗಮನಿಸಿ:
ನೋಂದಣಿ ಯಶಸ್ವಿಯಾದ ನಂತರ ಪರದೆಯ ಮೇಲೆ ಬರುವ Reference Number ಅನ್ನು ಮುಂದಿನ ಆಕ್ಟಿವಿಟಿಗಳಿಗಾಗಿ ಸ್ಕ್ರೀನ್‌ಶಾಟ್ ಅಥವಾ ನೋಟ್ ಮಾಡಿಟ್ಟುಕೊಳ್ಳಿ.