---Advertisement---

ವಿದ್ಯಾರ್ಥಿಗಳಿಗೆ “ಇಂಟರ್ ನ್ಯಾಷನಲ್ ಸೈಬರ್’ ಒಲಂಪಿಯಾಡ್ (ICO)” ಸ್ಪರ್ಧೆ

By kspstadk.com

Updated On:

Follow Us
WhatsApp Group Join Now
Telegram Group Join Now

“ಇಂಟರ್ ನ್ಯಾಷನಲ್ ಸೈಬರ್’ ಒಲಂಪಿಯಾಡ್ (ICO)”
ವಿದ್ಯಾರ್ಥಿಗಳಲ್ಲಿ ಸೈಬರ್ ಭದ್ರತಾ ಜಾಗೃತಿಯನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿರುವ ಪ್ರತಿಷ್ಠಿತ ಸ್ಪರ್ಧೆಯಾಗಿದೆ. ರಾಜ್ಯದ ಸರ್ಕಾರಿ, ಅನುದಾನಿತ ಮತ್ತು
ಅನುದಾನರಹಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು “ಇಂಟರ್ ನ್ಯಾಷನಲ್ ಸೈಬರ್ ಒಲಂಪಿಯಾಡ್-2024” ಸ್ಪರ್ಧೆಯಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಭಾಗವಹಿಸುವಂತೆ ಉಲ್ಲೇಖದಲ್ಲಿ ತಿಳಿಸಿರುತ್ತಾರೆ.
ಈ ಸ್ಪರ್ಧೆಯು ಕಂಪ್ಯೂಟರ್ ವಿಜ್ಞಾನದಲ್ಲಿ ವಿದ್ಯಾರ್ಥಿಗಳ ಜ್ಞಾನ ಮತ್ತು ಕೌಶಲಗಳನ್ನು ಒರೆ ಹಚ್ಚುವ ಸಾಧನವಾಗಿದ್ದು, ಇಂಟರ್ ನೆಟ್ ಮತ್ತು ಸೈಬರ್ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುತ್ತದೆ. ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಹಾಗೂ ಅಗತ್ಯವಾದುದನ್ನು ಕಲಿಯಲು ಇದು ಉತ್ತಮ ಅವಕಾಶವಾಗಿದೆ. ಸ್ಪರ್ಧೆಯು , ಶಾಲಾ ಹಂತ, ಜಿಲ್ಲಾ ಹಂತ ಹಾಗೂ ಅಂತರಾಷ್ಟ್ರೀಯ ಹಂತದಲ್ಲಿ ನಡೆಯುತ್ತದೆ.

  1 ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ರೂ.150/- ಗಳ ನೊಂದಣಿ ಶುಲ್ಕವನ್ನು ಪಾವತಿಸಿ ಭಾಗವಹಿಸಬಹುದಾಗಿದೆ.

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 6 ರಿಂದ 10 ನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ನೋಂದಣಿ ಮಾಡಿಕೊಂಡು ಭಾಗವಹಿಸಬಹುದಾಗಿದೆ.
ಸ್ಪರ್ಧೆಯು ಬಹುಆಯ್ಕೆ ಆಧಾರಿತ ಪ್ರಶ್ನೆಗಳನ್ನೊಳಗೊಂಡಿರುತ್ತದೆ. ಭಾಗವಹಿಸಿದ ಪ್ರತಿ ವಿದ್ಯಾರ್ಥಿಗೂ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಶಾಲಾ ಮಟ್ಟದ ವಿಜೇತರು ಶಾಲಾ ಟಾಪರ್ ಪದಕ ಮತ್ತು ಸಾಧನೆಯ ಪ್ರಮಾಣಪತ್ರವನ್ನು ಪಡೆಯುತ್ತಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ವಿಜೇತರು ಪದಕ, ಪ್ರಮಾಣಪತ್ರದ ಜೊತೆಗೆ ನಗದು ಬಹುಮಾನವನ್ನು ಪಡೆಯುತ್ತಾರೆ. ಸ್ಪರ್ಧೆಯಲ್ಲಿ ಭಾಗವಹಿಸುವವರು ತಮ್ಮ ಅಭ್ಯಾಸಕ್ಕಾಗಿ ಪಠ್ಯಕ್ರಮ, ಮಾದರಿ ಪ್ರಶ್ನೆಪತ್ರಿಕೆ, ಮತ್ತು ಅಣುಕು ಪರೀಕ್ಷೆಯನ್ನು ಉಚಿತವಾಗಿ ನೀಡಲಾದ ವೆಬ್ ಸೈಟ್ ನಲ್ಲಿ ಪಡೆಯಬಹುದು.

1 ರಿಂದ 10 ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಮೊದಲ ಹಂತದಲ್ಲಿ ನಡೆಸಲಾಗುವ ಶಾಲಾ ಹಂತದ ಸ್ಪರ್ಧೆಗೆ ದಿನಾಂಕ 30-06-2024 ರ ಒಳಗಾಗಿ ನೊಂದಣಿ ಮಾಡುವಂತೆ ತಿಳಿಸಿದೆ. ಸ್ಪರ್ಧೆ ನಡೆಸುವ 15 ದಿನಗಳ ಮುಂಚಿತವಾಗಿ ಸ್ಪರ್ಧಾರ್ಥಿಗಳ ವಿವರವನ್ನು ಕಡ್ಡಾಯವಾಗಿ ಕೇಂದ್ರ ಕಛೇರಿಗೆ ಸಲ್ಲಿಸತಕ್ಕದ್ದು. ಸ್ಪರ್ಧೆಯ ಕುರಿತು ಹೆಚ್ಚಿನ ಮಾಹಿತಿಯ ವಿವರವನ್ನು ಪಡೆಯಲು www.cyberolympiad.org ಗೆ ಭೇಟಿ ನೀಡುವುದು ಅಥವಾ 9911554575 ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸುವುದು.

WhatsApp Group Join Now
Telegram Group Join Now

Join WhatsApp

Join Now

Join Telegram

Join Now

Leave a Comment