ಮುಖ್ಯ ಶಿಕ್ಷಕರ ಗಮನಕ್ಕೆ:
5 8 9ನೇ ತರಗತಿಯ ಎಸ್ಎ 2 ಮೌಲ್ಯಾಂಕನ ಕ್ಕೆ ಸಂಬಂಧಿಸಿದಂತೆ
👉ಪ್ರತಿ ಕೊಠಡಿಗೆ 24 ವಿದ್ಯಾರ್ಥಿಗಳ ಆಸನ ವ್ಯವಸ್ಥೆ ಮಾಡಿಕೊಳ್ಳುವುದು
👉5 ತರಗತಿ ಮಕ್ಕಳಿಗೆ ಪ್ರತಿ ವಿಷಯಕ್ಕೆ ನಾಲ್ಕು ಪುಟಗಳ ಒಂದು ಹಾಳೆ
👉8ನೇ ತರಗತಿ ಮಕ್ಕಳಿಗೆ
ಪ್ರತಿ ವಿಷಯಕ್ಕೆ ನಾಲ್ಕು ಪುಟಗಳ ಎರಡು ಹಾಳೆಗಳು,
👉9ನೇ ತರಗತಿ ಮಕ್ಕಳಿಗೆ ಪ್ರತಿ ವಿಷಯಕ್ಕೆ ನಾಲ್ಕು ಪುಟಗಳ ಮೂರು ಹಾಳೆಗಳನ್ನು ಹಾಗೂ ಕಡ್ಡಾಯವಾಗಿ
ಉತ್ತರ ಪತ್ರಿಕೆಗಳಿಗೆ ksqaac ವತಿಯಿಂದ ನೀಡಿರುವ ಮಾದರಿ ಮುಖಪುಟಗಳನ್ನು ಸೇರಿಸಿ ಮಕ್ಕಳಿಗೆ ಒದಗಿಸುವುದು
👉 ತಮ್ಮ ಶಾಲೆಯಲ್ಲಿ ನೊಂದಣಿ ಯಾಗಿರುವ ಎಲ್ಲಾ ವಿದ್ಯಾರ್ಥಿಗಳ ಪ್ರತಿ ವಿಷಯದ ಹಾಜರಾತಿ ಮತ್ತು ಗೈರು ಹಾಜರಾತಿ ವಹಿಯನ್ನುಯನ್ನು ನಿರ್ವಹಿಸಿ ಹಾಜರದ ವಿದ್ಯಾರ್ಥಿಗಳ ಸಹಿಯನ್ನು ಪಡೆದುಕೊಳ್ಳುವುದು. ಗೈರು ಹಾಜರಾದ ವಿದ್ಯಾರ್ಥಿಗಳಿಗೆ ಗೈರು ಎಂದು ನಮೂದಿಸುವುದು
👉 ಪ್ರತಿ ದಿನದ ತರಗತಿವಾರು, ವಿಷಯವಾರು ಹಾಜರಾತಿ , ಗೈರು ಹಾಜರಾತಿ ವಹಿಯನ್ನು ಪ್ರತ್ಯೇಕವಾಗಿ ನಿರ್ವಹಿಸುವುದು.
👉 ಪ್ರತಿದಿನದ ಪ್ರಶ್ನೆ ಪತ್ರಿಕೆಗಳನ್ನು ತರಗತಿವಾರು, ವಿಷಯವಾರು ಪ್ರತ್ಯೇಕವಾಗಿ cover ಗಳಲ್ಲಿ ನೀಡಲಾಗುತ್ತದೆ. ಅದೇ cover ಗಳನ್ನ ಬಳಸಿ ಉತ್ತರ ಪತ್ರಿಕೆಗಳನ್ನು ಬಂಡಲ್ ಮಾಡಿ ಕವರ್ ಮೇಲೆ ನೀಡಲಾಗಿರುವ ಎಲ್ಲಾ ಮಾಹಿತಿಗಳನ್ನು ತಪ್ಪದೇ ನಮೂದಿಸುವುದು.( ಜಿಲ್ಲೆಯ ಹೆಸರು ,ಬ್ಲಾಕಿನ ಹೆಸರು ,ಶಾಲೆಯ ಹೆಸರು, ಶಾಲೆಯ ಡೈಸ್ ಸಂಖ್ಯೆ, ವಿಷಯ, ಮಾಧ್ಯಮ, ನೋಂದಣಿಯಾಗಿರುವ ವಿದ್ಯಾರ್ಥಿಗಳ ಸಂಖ್ಯೆ, ಹಾಜರಾದ ವಿದ್ಯಾರ್ಥಿಗಳ ಸಂಖ್ಯೆ, ಗೈರು ಹಾಜರಾದ ವಿದ್ಯಾರ್ಥಿಗಳ ಸಂಖ್ಯೆ)
👉 ಮೇಲ್ಕಂಡ ಎಲ್ಲ ಮಾಹಿತಿಗಳನ್ನು ನಮೂದಿಸಿ ಮುಖ್ಯ ಶಿಕ್ಷಕರು ಸಹಿ ಮಾಡಿ ಮೊಹರು ಹಾಕಿ ತರಗತಿವಾರು ,ವಿಷಯವಾರು
ಪ್ರತ್ಯೇಕ ಬಂಡಲ್ ಗಳನ್ನು ತಯಾರಿಸುವುದು (ಮಕ್ಕಳ ಹಾಜರಾತಿಗೆ ಮತ್ತು ಉತ್ತರ ಪತ್ರಿಕೆಗಳ ಸಂಖ್ಯೆಗೆ ತಾಳೆ ಹೊಂದಿರುವುದು ಖಾತ್ರಿಪಡಿಸಿಕೊಂಡು ಬಂಡಲ್ ಮಾಡುವುದು)
👉 ಮಕ್ಕಳು ಮೌಲ್ಯಾಂಕನಕ್ಕೆ ಬರುವಾಗ ಮೊಬೈಲ್ , ಕ್ಯಾಲ್ಕುಲೇಟರ್, ಸ್ಮಾರ್ಟ್ ವಾಚ್, ಡಿಜಿಟಲ್ ವಾಚ್ ತರದಂತೆ ಕ್ರಮವಹಿಸುವುದು
👉 ಪ್ರತಿದಿನ ಬಂಡಲ್ ಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ನಿಯೋಜಿಸಿರುವಂತಹ ಅಧಿಕಾರಿಗಳಿಗೆ ನೀಡುವುದು
ಮೌಲ್ಯಮಾಪನ ನಂತರ:
👉ದಿನಾಂಕ 28.03.2024 ರೊಳಗೆ ಮಕ್ಕಳ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ನಂತರ ಶಾಲೆಗಳಿಗೆ ಹಿಂತಿರುಗಿಸಲಾಗುವುದು, ಎಲ್ಲ ಮಕ್ಕಳ ಎಲ್ಲಾ ವಿಷಯಗಳ ಉತ್ತರ ಪತ್ರಿಕೆಗಳನ್ನು ಇರುವುದು ಖಾತ್ರಿಪಡಿಸಿಕೊಂಡು ಹಿಂಪಡೆಯುವುದು.
👉 ವಿದ್ಯಾರ್ಥಿಗಳು ಗಳಿಸಿರುವಂತಹ ಅಂಕಗಳನ್ನು ಕ್ರೂಢೀಕರಿಸಿ ಗ್ರೇಡ್ ಗಳಿಗೆ ಪರಿವರ್ತಿಸಿ ದಿನಾಂಕ 04 .04 .2024 ರೊಳಗೆ ಎಸ್ ಎ ಟಿ ಎಸ್ ತಂತ್ರಾಂಶದಲ್ಲಿ ನಮೂದಿಸುವುದು.
👉 ಸಮುದಾಯದತ್ತ ಶಾಲೆಯ ದಿನ ಮಕ್ಕಳ ಫಲಿತಾಂಶವನ್ನು ಮಕ್ಕಳು ಹಾಗೂ ಅವರ ಪೋಷಕರಿಗೆ ಮಾತ್ರ ನೀಡುವುದು
👉 ಒಟ್ಟಾರೆ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಯುವಂತೆ ಕ್ರಮವಹಿಸುವುದು.
ಸೋಮವಾರದಿಂದ 5, 8, 9 ಮತ್ತು 11 ನೇ ತರಗತಿಯ ಬೋರ್ಡ್ ಪರೀಕ್ಷೆ ಹೈಕೋರ್ಟ್ ನಿಂದ ಮಂಜೂರು ಯಥಾ ಪ್ರಕಾರ ಸೋಮವಾರದಿಂದ ಪರೀಕ್ಷೆ ನಡೆಯುತ್ತವೆ
ಈ ಮೂಲಕ ಎಲ್ಲಾ ಶಾಲಾ ಮುಖ್ಯ ಶಿಕ್ಷಕರಲ್ಲಿ ತಿಳಿಯಪಡಿಸುವುದೇನೆಂದರೆ,5,8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ಮೌಲ್ಯಾಂಕನ ಪರೀಕ್ಷೆ ದಿನಾಂಕ 11.03. 24ರಂದು ನಡೆಯುತ್ತಿದ್ದು,
- ಪ್ರತಿ ಉತ್ತರ ಪತ್ರಿಕೆಗೆ( Answer paper)ಈ ಮೇಲೆ ಸೂಚಿಸಿರುವ ಬೋರ್ಡಿನ ಜೆರಾಕ್ಸ್ ಮುಖಪುಟವನ್ನು ಕಡ್ಡಾಯವಾಗಿ ಲಗತ್ತಿಸಿ, ( ಪಿನ್ ಮಾಡುವುದು/ ಅಂಟಿಸುವುದು )
- ಮೌಲ್ಯಮಾಪನಕ್ಕೆ ಕಳುಹಿ ಸುವುದು
- ಪ್ರತಿ ಕ್ಲಸ್ಟರ್ ಸಿಆರ್ಪಿಗಳು, ಈ ಮಾಹಿತಿಯನ್ನು ಪ್ರತಿ ಶಾಲೆಗೆ ತಿಳಿಸುವುದು.
- 5ನೇ ತರಗತಿಯವರಿಗೆ ಪ್ರತಿ ವಿದ್ಯಾರ್ಥಿಗೆ,4 ಮುಖಪುಟ ( ಕನ್ನಡ ಇಂಗ್ಲಿಷ್ ಗಣಿತ ಪರಿಸರ ವಿಜ್ಞಾನ ), ಹಾಗೂ 8 ಮತ್ತು 9ನೇ ತರಗತಿಯವರಿಗೆ, 6 ಮುಖಪುಟ ( ಕನ್ನಡ,ಇಂಗ್ಲಿಷ್ ಹಿಂದಿ, ಗಣಿತ ವಿಜ್ಞಾನ ಸಮಾಜ ವಿಜ್ಞಾನ) ಬಳಸುವುದು ಹಾಗೂ ಮುಖಪುಟದಲ್ಲಿನ ಮಾಹಿತಿಯನ್ನು ಕಡ್ಡಾಯವಾಗಿ ತುಂಬುವುದು.BEO/ BRCC
2023-24ನೇ ಸಾಲಿನಲ್ಲಿ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು
ಅನುದಾನರಹಿತ ಶಾಲೆಗಳ 5, 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ದಿನಾಂಕ: 11.03.2024
ರಿಂದ ಮೌಲ್ಯಾಂಕನವನ್ನು ನಡೆಸುವ ಬಗ್ಗೆ