---Advertisement---

ದಕ್ಷಿಣ ಕನ್ನಡ ಜಿಲ್ಲೆ : ಏಪ್ರಿಲ್ 30 ಕೆ ಸಹಶಿಕ್ಷಕರ ಹುದ್ದೆಯಿಂದ ಮುಖ್ಯ ಗುರುಗಳ ಹುದ್ದೆಗೆ ಮತ್ತು ಮುಖ್ಯ ಗುರುಗಳ ಹುದ್ದೆಯಿಂದ ಪದವೀಧರೇತರ ಮುಖ್ಯ ಗುರುಗಳ ಹುದ್ದೆಗೆ ಭಡ್ತಿ ಹೆಚ್ಚಿನ ಮಾಹಿತಿ ಇಲ್ಲಿದೆ

By kspstadk.com

Published On:

Follow Us
Hm pramotion
---Advertisement---
WhatsApp Group Join Now
Telegram Group Join Now

ಈ ದಿನ ಉಪನಿರ್ದೇಶಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಿದ ಮುಖ್ಯಾಂಶಗಳು

  1. ದಿನಾಂಕ 30-04-2022 ರಂದು ಮುಖ್ಯಶಿಕ್ಷಕರ ಭಡ್ತಿಗೆ ಕೌನ್ಸಿಲಿಂಗ್ ನಡೆಸಲಾಗುವುದು
  2. C ವಲಯದ ಶಾಲೆಗಳನ್ನು ಮಾತ್ರ ಆಯ್ಕೆ ಮಾಡಲು ಅವಕಾಶವಿದೆ.
  3. ಒಟ್ಟು ಜಿಲ್ಲೆಯಲ್ಲಿ 148 ಮುಖ್ಯ ಶಿಕ್ಷಕರ ಹುದ್ದೆ ಮತ್ತು 07 ಪದವಿಧರೇತರ ಮುಖ್ಯ ಶಿಕ್ಷಕರ ಹುದ್ದೆಗಳಿಗೆ ಭಡ್ತಿ ಪ್ರಕ್ರಿಯೆಯನ್ನು ಕೈಗೊಳ್ಳಲಾಗುವುದು.
  4. ಸೇವೆಗೆ ಸೇರಿದ ದಿನಾಂಕ ವನ್ನು ಆಧರಿಸಿ ಜೇಷ್ಠತಾ ಪಟ್ಟಿಯನ್ನು ತಯಾರಿಸಲಾಗಿದೆ. ರೋಸ್ಟರ್ ಬಿಂದು ಆದರಿಸಿ ಬಡ್ತಿ ಪ್ರಕ್ರಿಯೆಯನ್ನು ಕೈಗೊಳ್ಳಲಾಗುವುದು.
  5. ಭಡ್ತಿ ನಿರಾಕರಣೆಗೆ ಅವಕಾಶವಿದ್ದು, ಭಡ್ತಿ ನಿರಾಕರಿಸಿದ ಶಿಕ್ಷಕರು ಕಾಲಮಿತಿ ವೇತನ ಭಡ್ತಿಯನ್ನು(time bound) ಪಡೆಯಲು ಅವಕಾಶ ಇರುವುದಿಲ್ಲ. ಅಲ್ಲದೆ ಭಡ್ತಿ ನಿರಾಕರಿಸಿದ ಶಿಕ್ಷಕರಿಗೆ ಮುಂದಿನ ಒಂದು ವರ್ಷಗಳ ವರೆಗೆ ಮುಖ್ಯ ಶಿಕ್ಷಕರ ಹುದ್ದೆಯ ಭಡ್ತಿ ಗೆ ಅವಕಾಶವಿಲ್ಲ.
  6. ಜೇಷ್ಠತಾ ಪಟ್ಟಿಯಲ್ಲಿ ಹೆಸರು ಇರುವ ಶಿಕ್ಷಕರು ಕೌನ್ಸಿಲಿಂಗ್ ಪ್ರಕ್ರಿಯೆಗೆ ದಿನಾಂಕ 30-04-2022 ರಂದು ಪೂರ್ವಾಹ್ನ 10 ಗಂಟೆಗೆ ಸರಿಯಾಗಿ ಹಾಜರಿರಬೇಕು. ಸ್ಥಳವನ್ನು ನಾಳೆ ತಿಳಿಸಲಾಗುವುದು.
  7. ಅಂತಿಮ ಜೇಷ್ಠತಾ ಪಟ್ಟಿ ಮತ್ತು ಖಾಲಿ ಹುದ್ದೆಗಳ ಪಟ್ಟಿಯನ್ನು ಇಲಾಖೆ ವತಿಯಿಂದ ನಾಳೆ ಪ್ರಕಟಿಸಲಾಗುವುದು.
  8. ಕೌನ್ಸಿಲಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸುವ ಎಲ್ಲಾ ಶಿಕ್ಷಕರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಸಂಘದ ವತಿಯಿಂದ ವ್ಯವಸ್ಥೆ ಮಾಡಲಾಗುವುದು.KSPSTA ದಕ್ಷಿಣ ಕನ್ನಡ ಜಿಲ್ಲೆ.

IMG 20220428 WA0060

ಅಂತಿಮ ಜೇಷ್ಟತಾ ಪಟ್ಟಿಮುಖ್ಯ ಗುರುಗಳ ಖಾಲಿ ಹುದ್ದೆಗಳ. ವಿವರಗಳನ್ನು ನಾಳೆ update ಮಾಡಲಾಗುವುದು

WhatsApp Group Join Now
Telegram Group Join Now

Join WhatsApp

Join Now

Join Telegram

Join Now

Leave a Comment