ಈ ದಿನ ಉಪನಿರ್ದೇಶಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಿದ ಮುಖ್ಯಾಂಶಗಳು
- ದಿನಾಂಕ 30-04-2022 ರಂದು ಮುಖ್ಯಶಿಕ್ಷಕರ ಭಡ್ತಿಗೆ ಕೌನ್ಸಿಲಿಂಗ್ ನಡೆಸಲಾಗುವುದು
- C ವಲಯದ ಶಾಲೆಗಳನ್ನು ಮಾತ್ರ ಆಯ್ಕೆ ಮಾಡಲು ಅವಕಾಶವಿದೆ.
- ಒಟ್ಟು ಜಿಲ್ಲೆಯಲ್ಲಿ 148 ಮುಖ್ಯ ಶಿಕ್ಷಕರ ಹುದ್ದೆ ಮತ್ತು 07 ಪದವಿಧರೇತರ ಮುಖ್ಯ ಶಿಕ್ಷಕರ ಹುದ್ದೆಗಳಿಗೆ ಭಡ್ತಿ ಪ್ರಕ್ರಿಯೆಯನ್ನು ಕೈಗೊಳ್ಳಲಾಗುವುದು.
- ಸೇವೆಗೆ ಸೇರಿದ ದಿನಾಂಕ ವನ್ನು ಆಧರಿಸಿ ಜೇಷ್ಠತಾ ಪಟ್ಟಿಯನ್ನು ತಯಾರಿಸಲಾಗಿದೆ. ರೋಸ್ಟರ್ ಬಿಂದು ಆದರಿಸಿ ಬಡ್ತಿ ಪ್ರಕ್ರಿಯೆಯನ್ನು ಕೈಗೊಳ್ಳಲಾಗುವುದು.
- ಭಡ್ತಿ ನಿರಾಕರಣೆಗೆ ಅವಕಾಶವಿದ್ದು, ಭಡ್ತಿ ನಿರಾಕರಿಸಿದ ಶಿಕ್ಷಕರು ಕಾಲಮಿತಿ ವೇತನ ಭಡ್ತಿಯನ್ನು(time bound) ಪಡೆಯಲು ಅವಕಾಶ ಇರುವುದಿಲ್ಲ. ಅಲ್ಲದೆ ಭಡ್ತಿ ನಿರಾಕರಿಸಿದ ಶಿಕ್ಷಕರಿಗೆ ಮುಂದಿನ ಒಂದು ವರ್ಷಗಳ ವರೆಗೆ ಮುಖ್ಯ ಶಿಕ್ಷಕರ ಹುದ್ದೆಯ ಭಡ್ತಿ ಗೆ ಅವಕಾಶವಿಲ್ಲ.
- ಜೇಷ್ಠತಾ ಪಟ್ಟಿಯಲ್ಲಿ ಹೆಸರು ಇರುವ ಶಿಕ್ಷಕರು ಕೌನ್ಸಿಲಿಂಗ್ ಪ್ರಕ್ರಿಯೆಗೆ ದಿನಾಂಕ 30-04-2022 ರಂದು ಪೂರ್ವಾಹ್ನ 10 ಗಂಟೆಗೆ ಸರಿಯಾಗಿ ಹಾಜರಿರಬೇಕು. ಸ್ಥಳವನ್ನು ನಾಳೆ ತಿಳಿಸಲಾಗುವುದು.
- ಅಂತಿಮ ಜೇಷ್ಠತಾ ಪಟ್ಟಿ ಮತ್ತು ಖಾಲಿ ಹುದ್ದೆಗಳ ಪಟ್ಟಿಯನ್ನು ಇಲಾಖೆ ವತಿಯಿಂದ ನಾಳೆ ಪ್ರಕಟಿಸಲಾಗುವುದು.
- ಕೌನ್ಸಿಲಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸುವ ಎಲ್ಲಾ ಶಿಕ್ಷಕರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಸಂಘದ ವತಿಯಿಂದ ವ್ಯವಸ್ಥೆ ಮಾಡಲಾಗುವುದು.KSPSTA ದಕ್ಷಿಣ ಕನ್ನಡ ಜಿಲ್ಲೆ.
ಅಂತಿಮ ಜೇಷ್ಟತಾ ಪಟ್ಟಿಮುಖ್ಯ ಗುರುಗಳ ಖಾಲಿ ಹುದ್ದೆಗಳ. ವಿವರಗಳನ್ನು ನಾಳೆ update ಮಾಡಲಾಗುವುದು