ಮುಖ್ಯ ಗುರುಗಳಿಗೆ ಭಡ್ತಿ ಕೌನ್ಸೆಲಿಂಗ್ ದಿನಾಂಕ30/04/2022 ಬೆಳಿಗ್ಗೆ 10 ಗಂಟೆಯಿಂದಸ್ಥಳ : brc ಕೇಂದ್ರ ಗಾಂಧಿ ನಗರ ಮಂಗಳೂರು ಉತ್ತರ ವಲಯ

ಮುಖ್ಯ ಗುರುಗಳಿಗೆ ಭಡ್ತಿ ಕೌನ್ಸೆಲಿಂಗ್

ದಿನಾಂಕ :30/04/2022 ಬೆಳಿಗ್ಗೆ 10 ಗಂಟೆಯಿಂದ

ಸ್ಥಳ : brc ಕೇಂದ್ರ ಗಾಂಧಿ ನಗರ ಮಂಗಳೂರು ಉತ್ತರ ವಲಯ

IMG 20220429 WA0035

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರು ದಕ್ಷಿಣ ಕನ್ನಡ ಜಿಲ್ಲಾ ಘಟಕ.ಮುಖ್ಯಶಿಕ್ಷಕರ ಮುಂಬಡ್ತಿ ಕೌನ್ಸಲಿಂಗ್ ನಲ್ಲಿ ಭಾಗವಹಿಸುವ ಶಿಕ್ಷಕರ ಗಮನಕ್ಕೆ,

1. ದಿನಾಂಕ 30-04-2022 ರಂದು ಮುಖ್ಯಶಿಕ್ಷಕರ ಭಡ್ತಿಗೆ ಕೌನ್ಸಿಲಿಂಗ್ ನಡೆಸಲಾಗುವುದು

2. C ವಲಯದ ಶಾಲೆಗಳನ್ನು ಮಾತ್ರ ಆಯ್ಕೆ ಮಾಡಲು ಅವಕಾಶವಿದೆ. ಆದರೆ C ವಲಯದಲ್ಲಿ ನಿರಂತರವಾಗಿ ಹತ್ತು ವರ್ಷ ಅಥವಾ ಸಂಚಿತವಾಗಿ ಹದಿನೈದು ವರ್ಷ ಸೇವೆಯನ್ನು ಸಲ್ಲಿಸಿದ ಸಹ ಶಿಕ್ಷಕರಿಗೆ A ಮತ್ತು B ವಲಯದ ಶಾಲೆಗಳನ್ನು ಆಯ್ಕೆ ಮಾಡಲು ಅವಕಾಶ ಇದೆ. .

3. ಒಟ್ಟು ಜಿಲ್ಲೆಯಲ್ಲಿ 148 ಮುಖ್ಯ ಶಿಕ್ಷಕರ ಹುದ್ದೆ ಮತ್ತು 07 ಪದವಿಧರೇತರ ಮುಖ್ಯ ಶಿಕ್ಷಕರ ಹುದ್ದೆಗಳಿಗೆ ಭಡ್ತಿ ಪ್ರಕ್ರಿಯೆಯನ್ನು ಕೈಗೊಳ್ಳಲಾಗುವುದು.

4. ಸೇವೆಗೆ ಸೇರಿದ ದಿನಾಂಕ ವನ್ನು ಆಧರಿಸಿ ಜೇಷ್ಠತಾ ಪಟ್ಟಿಯನ್ನು ತಯಾರಿಸಲಾಗಿದೆ. ರೋಸ್ಟರ್ ಬಿಂದು ಆದರಿಸಿ ಬಡ್ತಿ ಪ್ರಕ್ರಿಯೆಯನ್ನು ಕೈಗೊಳ್ಳಲಾಗುವುದು.

5. ಭಡ್ತಿ ನಿರಾಕರಣೆಗೆ ಅವಕಾಶವಿದ್ದು, ಭಡ್ತಿ ನಿರಾಕರಿಸಿದ ಶಿಕ್ಷಕರು ಕಾಲಮಿತಿ ವೇತನ ಭಡ್ತಿಯನ್ನು(time bound) ಪಡೆಯಲು ಅವಕಾಶ ಇರುವುದಿಲ್ಲ. ಅಲ್ಲದೆ ಭಡ್ತಿ ನಿರಾಕರಿಸಿದ ಶಿಕ್ಷಕರಿಗೆ ಮುಂದಿನ ಒಂದು ವರ್ಷಗಳ ವರೆಗೆ ಮುಖ್ಯ ಶಿಕ್ಷಕರ ಹುದ್ದೆಯ ಭಡ್ತಿ ಗೆ ಅವಕಾಶವಿಲ್ಲ.

6. ಜೇಷ್ಠತಾ ಪಟ್ಟಿಯಲ್ಲಿ ಹೆಸರು ಇರುವ ಶಿಕ್ಷಕರು ಕೌನ್ಸಿಲಿಂಗ್ ಪ್ರಕ್ರಿಯೆಗೆ ದಿನಾಂಕ 30-04-2022 ರಂದು ಪೂರ್ವಾಹ್ನ 10 ಗಂಟೆಗೆ ಸರಿಯಾಗಿ ಹಾಜರಿರಬೇಕು. ಕೌನ್ಸಿಲಿಂಗ್ ಪ್ರಕ್ರಿಯೆಗಳು ಬಿ ಆರ್ ಸಿ ಗಾಂಧಿನಗರ ಮಂಗಳೂರು ಇಲ್ಲಿ ನಡೆಯಲಿವೆ.

7. ಅಂತಿಮ ಜೇಷ್ಠತಾ ಪಟ್ಟಿ ಮತ್ತು ಖಾಲಿ ಹುದ್ದೆಗಳ ಪಟ್ಟಿಯನ್ನು ಇಲಾಖೆ ವತಿಯಿಂದ ಪ್ರಕಟಿಸಲಾಗಿದೆ. ಇದನ್ನು ಗಮನಿಸಿ ಶಿಕ್ಷಕರು ಹಾಜರಾಗುವುದು.

8.ಕೌನ್ಸೆಲಿಂಗ್ ಭಾಗವಹಿಸುವ ಶಿಕ್ಷಕರು ಗುರುತಿನ ಚೀಟಿಯೊಂದಿಗೆ ಹಾಜರಾಗುವುದು

9. ಕೌನ್ಸಿಲಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸುವ ಎಲ್ಲಾ ಶಿಕ್ಷಕರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಸಂಘದ ವತಿಯಿಂದ ವ್ಯವಸ್ಥೆ ಮಾಡಲಾಗುವುದು.KSPSTA ದಕ್ಷಿಣ ಕನ್ನಡ ಜಿಲ್ಲೆ.

Sharing Is Caring:

Leave a Comment