ಗುರುಭ್ಯೋ ನಮಃ
ನಿಮ್ಮ ನಿವೃತ್ತಿ ಜೀವನ ಸುಖಕರವಾಗಿರಲಿ
ಸಾವಿರಾರು ವಿದ್ಯಾರ್ಥಿಗಳ ಬಾಳಿನಲ್ಲಿ ಅಕ್ಷರ ದೀಪವ ಉರಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿರುವ ಜಿಲ್ಲೆಯ ಶಿಕ್ಷಕರ ಪರಿಚಯವನ್ನು ತಮ್ಮ ಮುಂದಿಡುತ್ತಿದ್ದೇವೆ.
ಶ್ರೀ ಲಕ್ಷ್ಮಣ ನಾಯ್ಕ್ ಬಿ
ಸ.ಹಿ.ಪ್ರಾ ಶಾಲೆ ಪೆರ್ಲಂಪಾಡಿ
ಪುತ್ತೂರು ತಾಲೂಕು
ಎಪ್ರಿಲ್ 12 , 1962 ರಲ್ಲಿ ಜನಿಸಿದ ಶ್ರೀಯುತರು ಸ.ಹಿ.ಪ್ರಾ ಶಾಲೆ ಸಬ್ಬಡ್ಕ ಮತ್ತು ಪೆರ್ಲಂಪಾಡಿಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ ಬೆಳ್ಳಾರೆ ಜೂನಿಯರ್ ಕಾಲೇಜಿನಲ್ಲಿ ಪ್ರೌಢ ಶಿಕ್ಷಣವನ್ನು ಪಡೆದರು. ಟಿ.ಸಿ.ಹೆಚ್ ಪದವಿಯನ್ನು ಮಂಗಳೂರು ಡಯಟ್ ನಲ್ಲಿ ಪೂರೈಸಿ ಕೊಡಗು ಜಿಲ್ಲೆಯ ಸೋಮವಾರಪೇಟೆಯಲ್ಲಿ ಸೇವೆಗೆ ಸೇರಿದರು. ಕೊಡಗು ಜಿಲ್ಲೆಯ ಉತ್ತಮ ಜನ ಮೆಚ್ಚಿದ ಶಿಕ್ಷಕ, ಉತ್ತಮ ಗಣತಿದಾರ ಪ್ರಶಸ್ತಿ ಪಡೆದರು. ನಂತರ ಪುತ್ತೂರಿಗೆ ವರ್ಗಾವಣೆಗೊಂಡರು. ತಮ್ಮ ಉತ್ತಮ ಸೇವೆಗಾಗಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ , ಉತ್ತಮ ಎಸ್ಡಿಎಂಸಿ ಪ್ರಶಸ್ತಿ, ಉತ್ತಮ ತಾಲೂಕು ಶಿಕ್ಷಕ ಪ್ರಶಸ್ತಿ ಹೀಗೆ ಹತ್ತು ಹಲವು ಪುರಸ್ಕಾರಗಳಿಗೆ ಭಾಜನರಾದರು. ಪ್ರಸ್ತುತ ಪುತ್ತೂರು ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿರುವ ಇವರು ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ಮನೋರಮಾ ಕೆ
ಸ.ಹಿ.ಪ್ರಾ.ಶಾಲೆ ಪರ್ಲಡ್ಕ ಪುತ್ತೂರು ತಾಲೂಕು
ಸುಳ್ಯ ತಾಲೂಕು ಆರಂತೋಡು ಗ್ರಾಮದ ಕರಿಂಬಿ ದುರ್ಗಪ್ಪ ಗೌಡ ಮತ್ತು ಶ್ರೀಮತಿ ಸೀತಮ್ಮ ಇವರ 7ನೇ ಪುತ್ರಿಯಾದ ಮನೋರಮಾ ಕೆ ಇವರು ಎಪ್ರಿಲ್ 25, 1962 ರಂದು ಜನಿಸಿದರು. 1978 ನೇ ಇಸವಿಯಲ್ಲಿ ಪ್ರೌಢ ಶಿಕ್ಷಣವನ್ನು ಮುಗಿಸಿ ಶಿಕ್ಷಕರ ಶಿಕ್ಷಣ ತರಬೇತಿಯನ್ನು ಪಡೆಯಲು ಶಿಕ್ಷಕಿಯರ ತರಬೇತಿ ಕೇಂದ್ರ ಮಂಗಳೂರು ಇಲ್ಲಿಗೆ ಸೇರಿದರು. ಶಿಕ್ಷಣದ ಮೇಲೆ ಅಪಾರ ಕಾಳಜಿ ಇರುವ ತಾವು 1982ನೇ ಅಕ್ಟೋಬರ್ 2 ರಂದು ಮರ್ಕಂಜ ಗ್ರಾಮದ ಸರ್ಕಾರಿ ಹಿರಿಯ ಪ್ರಥಮಿಕ ಶಾಲೆ ಮಿತ್ತಡ್ಕ ಸೇರಿದರು ತದನಂತರ ಬಿಎಂಆರ್ಸಿಎಲ್ ಮೂಲಕ ಆಯ್ಕೆಗೊಂಡು ಪುತ್ತೂರು ತಾಲೂಕು ಸರ್ವೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸರ್ವೆ ಇಲ್ಲಿ 1985 ಜೂನ್ ತಿಂಗಳಲ್ಲಿ ಸೇವೆ ಪ್ರಾರಂಭಿಸಿದರು. 13 ವರ್ಷ ಸೇವೆ ಸಲ್ಲಿಸಿ ವರ್ಗಾವಣೆಗೊಂಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಂಡೂರು ಸೇವೆಯನ್ನು ಸಲ್ಲಿಸಿದರು. ನಂತರ 2007ನೇ ಮಾರ್ಚ್ 21ರಂದು ಮುಖ್ಯ ಗುರುಗಳಾಗಿ ಭಡ್ತಿಗೊಂಡು ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತೆಗ್ಗು ಇಲ್ಲಿಗೆ ವರ್ಗಾವಣೆಗೊಂಡರು. ಇಲ್ಲಿ ಸುಮಾರು ಎಂಟು ವರ್ಷಗಳ ಕಾಲ ಸೇವೆ ಸಲ್ಲಿಸಿ ಮುಂದೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕರ್ನಾಟಕ ಇಲ್ಲಿಗೆ ವರ್ಗಾವಣೆ ಬಯಸಿ ಬಂದರು. ಇಲ್ಲಿ ಸುಮಾರು ಏಳು ವರ್ಷಗಳ ಕಾಲ ಸೇವೆ ಸಲ್ಲಿಸಿ ಇದೀಗ ಸುಮಾರು 39 ವರ್ಷಗಳ ಕಾಲ ಸರ್ಕಾರಿ ಸೇವೆ ಸಲ್ಲಿಸಿ ಇಂದು ನಿವೃತ್ತಿ ಕೊಳ್ಳುತ್ತಿದ್ದಾರೆ.ತನ್ನ ಸೇವಾವಧಿಯಲ್ಲಿ ಅಪಾರ ವಿದ್ಯಾರ್ಥಿ ಬಳಗವನ್ನು ಹೊಂದಿರುವ ತಾವು ಶಾಲೆಗಳಲ್ಲಿ ಕ್ರೀಡೆ ಸಾಂಸ್ಕೃತಿಕ ಚಟುವಟಿಕೆ ಸ್ಕೌಟ್ ಗೈಡ್ಸ್ ಸೇವಾದಳ ಬುಲ್ಬುಲ್ ವಾರ್ಷಿಕೋತ್ಸವ ದಶಮಾನೋತ್ಸವ ಬೆಳ್ಳಿಹಬ್ಬ ಅಮೃತಮಹೋತ್ಸವ ಮುಂತಾದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಜನರ ಮೆಚ್ಚುಗೆಗೆ ಪಾತ್ರವಾಗಿರುವಿರಿ. ನಿಮ್ಮ ನಿವೃತ್ತಿ ಜೀವನವು ಸುಖ ನೆಮ್ಮದಿ ಸಮೃದ್ಧಿಯಿಂದ ಕೂಡಿರಲಿ ಎಂದು ಶುಭ ಹಾರೈಕೆಗಳು.
ಶ್ರೀಮತಿ ಶಾರದಾ ಪಿ
ಸ. ಉ. ಪ್ರಾ ಶಾಲೆ ಮಣಿಕರ
ಪುತ್ತೂರು ತಾಲೂಕು
27.04.1962 ರಲ್ಲಿ ಜನಿಸಿದ ಇವರು 26.11.1996 ರಲ್ಲಿ ಸೇವೆಗೆ ಸೇರಿದರು. ಪ್ರಸ್ತುತ ಮಣಿಕರ ಶಾಲೆಯಲ್ಲಿ ತಮ್ಮ 25 ವರ್ಷಗಳ ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.
ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀ ಶೀನಪ್ಪ ನಾಯ್ಕ ಎಸ್
ಸ.ಹಿ.ಪ್ರಾ ಶಾಲೆ ಗೋಳಿತೊಟ್ಟು
ಕಡಬ ತಾಲೂಕು
01.05.1962 ರಲ್ಲಿ ಜನಿಸಿದ ಶ್ರೀಯುತರು 06.02.1990 ರಲ್ಲಿ ಶಿಕ್ಷಕ ವೃತ್ತಿಗೆ ಸೇರಿದರು. ಅನೇಕ ಶಾಲೆಗಳಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ಗೋಳಿತೊಟ್ಟು ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಮ್ಮ ಉತ್ತಮ ಶಾಲಾಭಿವೃದ್ಧಿಯ ಕೆಲಸಗಳಿಗಾಗಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದಿರುವ ಇವರು ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.
ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀ ತೀರ್ಥೇಶ್ ಪಿ
ಸ.ಹಿ.ಪ್ರಾ ಶಾಲೆ ಕುಟ್ರುಪ್ಪಾಡಿ
ಕಡಬ ತಾಲೂಕು
ಸ.ಹಿ.ಪ್ರಾ ಶಾಲೆ ಕುಟ್ರುಪ್ಪಾಡಿಯ ಶಿಕ್ಷಕರಾದ ಶ್ರೀಯುತ ತೀರ್ಥೇಶ್ ಪಿ ಇವರು ಈ ತಿಂಗಳು ತಮ್ಮ ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ರೋಸಿ ಮಾರ್ಟಿಸ್
ಸ.ಹಿ.ಪ್ರಾ.ಶಾಲೆ ಕುಟ್ರುಪ್ಪಾಡಿ
ಕಡಬ ತಾಲೂಕು
ದಿನಾಂಕ 1.5.1962 ರಲ್ಲಿ ಜನಿಸಿದ ಇವರು ಸಹ ಶಿಕ್ಷಕರಾಗಿ ದಿನಾಂಕ 8.8.1994ರಲ್ಲಿ ಸ.ಹಿ.ಪ್ರಾ.ಶಾಲೆ ಆಲಂಕಾರು ಇಲ್ಲಿ ಸೇವೆಗೆ ಸೇರಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ವರ್ಗಾವಣೆ ಪಡೆದು ಸ.ಹಿ.ಪ್ರಾ.ಶಾಲೆ ಕುಟ್ರುಪ್ಪಾಡಿ ಇಲ್ಲಿ ಸೇರ್ಪಡೆಗೊಕಡು 19 ವರ್ಷ 9 ತಿಂಗಳ ಕಾಲ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.
ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ಲೂಸಿ ಕೆ
ಸ.ಉ.ಪ್ರಾ.ಶಾಲೆ, ನೂಜಿಬಾಳ್ತಿಲ
ಕಡಬ ತಾಲೂಕು
ಪುತ್ತೂರು ತಾಲೂಕಿನ ಶಿರಾಡಿ ಗ್ರಾಮದ ಶಿರ್ವತಡ್ಕದಲ್ಲಿ ಶ್ರೀಯುತ ಕುರಿಯಾಕೋಸ್ ಹಾಗೂ ಶ್ರೀಮತಿ ಮರಿಯಮ್ಮ ದಂಪತಿಗಳ ಪ್ರಥಮ ಪುತ್ರಿಯಾಗಿ ಜನಿಸಿದ ಇವರು, ಪ್ರಾಥಮಿಕ ಶಿಕ್ಷಣವನ್ನು ಸ.ಹಿ.ಪ್ರಾ.ಶಾಲೆ ಶಿರಾಡಿಯಲ್ಲಿ ಹಾಗೂ ಪ್ರೌಢ ಶಿಕ್ಷಣವನ್ನು ಉದನೆ ಸೈಂಟ್ ಅಂತೋನಿಯವರ ಪ್ರೌಢ ಶಾಲೆಯಲ್ಲಿ ಹಾಗೂ ಶಿಕ್ಷಕ ತರಬೇತಿಯನ್ನು ಕಪಿತಾನಿಯೋ ಮಂಗಳೂರು ಇಲ್ಲಿ ಪೂರೈಸಿ,10 ವರ್ಷಗಳ ಕಾಲ ಉಚಿತ ಸೇವೆ ಸಲ್ಲಿಸಿ 1996ರಲ್ಲಿ ಸರಕಾರಿ ಸೇವೆಗೆ ಸ.ಹಿ.ಪ್ರಾ.ಶಾಲೆ ಗೋಳಿದಡಿ ಇಲ್ಲಿ ಸೇರಿದರು. ನಂತರ ಸ.ಹಿ.ಪ್ರಾ.ಶಾಲೆ ನೇರ್ಲ ಇಲ್ಲಿ ಸೇವೆ ಸಲ್ಲಿಸಿ ನಂತರ ಸ.ಹಿ.ಪ್ರಾ.ಶಾಲೆ ರೆಂಜಿಲಾಡಿ ಹಾಗೂ ಸ.ಕಿ.ಪ್ರಾ.ಶಾಲೆ ಮೀನಾಡಿಯಲ್ಲಿ ಸಹ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಂತರ 2016ರಂದು ಸ.ಉ.ಪ್ರಾ.ಶಾಲೆ, ನೂಜಿಬಾಳ್ತಿಲ ಇಲ್ಲಿ ಸೇವೆಗೆ ಸೇರಿ, ಆರು ವರ್ಷಗಳ ಕಾಲ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.
ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ಸೆಲಿನ್ ಪಿಂಟೋ
ಸ.ಹಿ.ಪ್ರಾ.ಶಾಲೆ ನೆಟ್ಲ
ಬಂಟ್ವಾಳ ತಾಲೂಕು
ಇವರು ಮಂಗಳೂರು ತಾಲೂಕು ಮುಲ್ಲಕಾಡು ಎಂಬಲ್ಲಿ ಅಲ್ಫೋನ್ಸ್ ಪಿಂಟೊ ಹಾಗೂ ಶ್ರೀಮತಿ ವಿಕ್ಟೋರಿಯಾ ಲೋಬೊ ಇವರ ಪುತ್ರಿಯಾಗಿ ದಿನಾಂಕ 11.04.1962 ರಲ್ಲಿ ಜನಿಸಿದರು. ಇವರು ಪ್ರಾಥಮಿಕ ಶಿಕ್ಷಣವನ್ನು ಹೋಲಿ ಫ್ಯಾಮಿಲಿ ಹಿರಿಯ ಪ್ರಾಥಮಿಕ ಶಾಲೆ ದೇರೆಬೈಲ್ ಹಾಗೂ ಪ್ರೌಢ ಶಿಕ್ಷಣ ವನ್ನು ಮಹಾತ್ಮ ಗಾಂಧಿ ಸೆಂಟೆನರಿ ಹೈಸ್ಕೂಲ್ ಬೋಂದೆಲ್ ಹಾಗೂ ಶಿಕ್ಷಕ ತರಬೇತಿಯನ್ನು ಸೈಂಟ್ ಆನ್ಸ್ ಶಿಕ್ಷಕ ತರಬೇತಿ ಸಂಸ್ಥೆ ಮಂಗಳೂರು ಇಲ್ಲಿ ಪೂರೈಸಿ, ದಿನಾಂಕ 25.10.1982ರಲ್ಲಿ ಸ.ಹಿ.ಪ್ರಾ.ಶಾಲೆ ಕಾಡು ಮಠ ಇಲ್ಲಿ ಸೇವೆಗೆ ಸೇರಿ ದಿನಾಂಕ 17.06.1985ರಿಂದ ದಿನಾಂಕ 13.07.1991ರವರೆಗೆ ಡಿ ಎಲ್ ಆರ್ ಸಿ ಸೇವೆ ಸಲ್ಲಿಸಿ ನಂತರ ದಿನಾಂಕ13.07.1991ರಂದು ಸ.ಹಿ.ಪ್ರಾ.ಶಾಲೆ ಸಜಿಪ ಮೂಡ ಇಲ್ಲಿಗೆ ವರ್ಗಾವಣೆಗೊಂಡು ದಿನಾಂಕ 29.07.1994ರವರೆಗೆ ಸೇವೆ ಸಲ್ಲಿಸಿ ನಂತರ ದಿನಾಂಕ 29.07.1994ರಂದು ಸ.ಕಿ.ಪ್ರಾ.ಶಾಲೆ ಬೊಂಡಾಲ ಇಲ್ಲಿಗೆ ವರ್ಗಾವಣೆಗೊಂಡು 10 ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ದಿನಾಂಕ 19.02.2004ರಂದು ಸ.ಹಿ.ಪ್ರಾ.ಶಾಲೆ ಬೋಳಂಗಡಿ, ಇಲ್ಲಿಗೆ ವರ್ಗಾವಣೆಗೊಂಡು ಇಲ್ಲಿ ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ದಿನಾಂಕ 26.03.2007ರಿಂದ 11.04.2022ರವರೆಗೆ ಸ.ಹಿ.ಪ್ರಾ.ಶಾಲೆ ನೆಟ್ಲ ಇಲ್ಲಿ ಮುಖ್ಯ ಶಿಕ್ಷಕಿಯಾಗಿ 15 ವರ್ಷಗಳ ಕಾಲ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀ ಮುತ್ತಪ್ಪ ಗೌಡ ಏನೆಕಲ್
ಸ.ಮಾ.ಹಿ.ಪ್ರಾ.ಶಾಲೆ ಪಂಜ
ಸುಳ್ಯ ತಾಲೂಕು
ಇವರು ದಿನಾಂಕ 14.02.1990 ರಂದು ಸುಳ್ಯ ತಾಲೂಕಿನ ಕಳುಬೈಲು ಶಾಲೆಯಲ್ಲಿ ಶಿಕ್ಷಕ ವೃತ್ತಿಯನ್ನು ಆರಂಭಿಸಿ ನಂತರ ಸ.ಹಿ.ಪ್ರಾ.ಶಾಲೆ ಕರಿಕಳದಲ್ಲಿ ಸೇವೆ ಸಲ್ಲಿಸಿ ನಂತರ ಸ.ಮಾ.ಹಿ.ಪ್ರಾ.ಶಾಲೆ ಪಂಜದಲ್ಲಿ ಕರ್ತವ್ಯ ನಿರ್ವಹಿಸಿ ನಂತರ ಕೂತ್ಕುಂಜ ಮತ್ತು ಹರಿಪುರದಲ್ಲಿ ಸೇವೆ ಸಲ್ಲಿಸಿ ನಂತರ ಪ್ರತಿನಿಯುಕ್ತಿಗೊಂಡು ಪುನಃ ಸ.ಮಾ.ಹಿ.ಪ್ರಾ.ಶಾಲೆಯಲ್ಲಿ ಪ್ರಭಾರ ಮುಖ್ಯ ಗುರುಗಳಾಗಿ ಕರ್ತವ್ಯ ನಿರ್ವಹಿಸಿ ನಂತರ ದಿನಾಂಕ 14.02.2020ರಿಂದ ಅದೇ ಶಾಲೆಯಲ್ಲಿ ಪೂರ್ಣಕಾಲಿಕ ಮುಖ್ಯ ಗುರುಗಳಾಗಿ ಕರ್ತವ್ಯ ನಿರ್ವಹಿಸಿರುತ್ತಾರೆ.ಇವರ ಸೇವಾ ಅವಧಿಯಲ್ಲಿ ಪ್ರಾ.ಶಾ.ಶಿ.ಸಂಘದ ಖಜಾಂಚಿಯಾಗಿ ಸೇವೆಗೈದರು. ಉತ್ತಮ ಕಾರ್ಯಕ್ರಮ ನಿರೂಪಕರಾಗಿದ್ದ ಇವರು ಒಟ್ಟು 32ವರ್ಷ 2 ತಿಂಗಳು ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.
ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ರಮಾ ಕಿಶೋರಿ
ಸ.ಉ.ಪ್ರಾ.ಶಾಲೆ ಅಮರಪಡ್ನೂರು
ಸುಳ್ಯ ತಾಲೂಕು
ಇವರು ದಿನಾಂಕ 25.10.1982 ರಲ್ಲಿ ಸ.ಹಿ.ಪ್ರಾ.ಶಾಲೆ ಕುಳಾಲು, ಬಂಟ್ವಾಳ ಇಲ್ಲಿ ಸೇವೆಗೆ ಸೇರಿ ನಂತರ ಸ.ಹಿ.ಪ್ರಾ.ಶಾಲೆ ಕೋಟೆಮುಂಡುಗಾರು ಹಾಗೂ ಸ.ಹಿ.ಪ್ರಾ.ಶಾಲೆ ಶೇಣಿ ಹಾಗೂ ಸ.ಉ.ಪ್ರಾ.ಶಾಲೆ ಅಮರ ಪಡ್ನೂರು ಇಲ್ಲಿ ಶಿಕ್ಷಕಿಯಾಗಿ, ಮುಖ್ಯ ಶಿಕ್ಷಕಿಯಾಗಿ , ಒಟ್ಟು 39 ವರ್ಷ 6 ತಿಂಗಳು ಶಿಕ್ಷಣ ಕ್ಷೇತ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.
ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ರಾಜೇಶ್ವರಿ ಬಿ ಎಸ್
ಸ.ಹಿ.ಪ್ರಾ ಶಾಲೆ ಹೊಸಬೆಟ್ಟು
ಮಂಗಳೂರು ಉತ್ತರ
22.01.1996 ರಲ್ಲಿ ಉಡುಪಿ ತಾಲೂಕಿನ ಪುತ್ತೂರು ಶಾಲೆಯಲ್ಲಿ ಸೇವೆಗೆ ಸೇರಿದರು. ನಂತರ ಹೊಸಬೆಟ್ಟು ಶಾಲೆಗೆ ವರ್ಗಾವಣೆಗೊಂಡು ತಮ್ಮ 26 ವರ್ಷಗಳ ಸುದೀರ್ಘ ಸೇವೆಯಿಂದ ಈ ತಿಂಗಳು ನಿವೃತ್ತರಾಗುತ್ತಿದ್ದಾರೆ.
ಅವರ ನಿವೃತ್ತ ಜೀವನ ಸುಖಮಯವಾಗಿರಲಿ ಎಂದು ಹಾರೈಸುತ್ತೇವೆ.
ಶ್ರೀಮತಿ ಧರ್ಮವತಿ
ಸ.ಹಿ.ಪ್ರಾ ಶಾಲೆ ಕರ್ನಿರೆ
ಮಂಗಳೂರು ಉತ್ತರ
21.02.1997 ರಲ್ಲಿ ಸ.ಕಿ.ಪ್ರಾ.ಶಾಲೆ ಕಿಲ್ಪಾಡಿ ಇಲ್ಲಿ ಸೇವೆಗೆ ಸೇರಿದ ಧರ್ಮವತಿ ಇವರು ಈ ತಿಂಗಳು ಸ.ಹಿ.ಪ್ರಾ.ಶಾಲೆ ಕರ್ನಿರೆ ಇಲ್ಲಿ ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.
ಇವರಿಗೆ ನಿವೃತ್ತಿ ಜೀವನದ ಶುಭಾಶಯಗಳು.
ಶ್ರೀಮತಿ ಐರಿನ್ ಪಿಂಟೋ
ಸ.ಹಿ.ಪ್ರಾ ಶಾಲೆ ಬೈಕಂಪಾಡಿ ಫಿಶರಿಸ್
ಮಂಗಳೂರು ಉತ್ತರ
ಬಂಟ್ವಾಳ ತಾಲೂಕಿನ ಸರಕಾರಿ ಶಾಲೆ ಕುಂಡಬೆಟ್ಟು, ಬೊಳ್ಳೈರು ಶಾಲೆಗಳಲ್ಲಿ ದುಡಿದು ವರ್ಗಾವಣೆಗೊಂಡು ಮಂಗಳೂರು ತಾಲೂಕಿನ ಬಲ್ಮಠ ಶಾಲೆಯಲ್ಲಿ ಸೇವೆ ಸಲ್ಲಿಸಿದರು. ಐ.ಇ.ಆರ್.ಟಿ ಹಾಗೂ ಕಾಟಿಪಳ್ಳ 2ರ ಸಿ.ಆರ್. ಪಿ ಆಗಿ ಆಪಾರ ಅನುಭವ ಹೊಂದಿದ ಇವರು ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.
ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ಸಿಲಿನ್ ಪ್ಲಾಟೊ ಲೋಬೊ
ಸ.ಹಿ.ಪ್ರಾ ಶಾಲೆ ಇನ್ನೊಳಿ
ಮಂಗಳೂರು ದಕ್ಷಿಣ
04.04.1962 ರಲ್ಲಿ ಜನಿಸಿದ ಇವರು ಸುದೀರ್ಘ ತಮ್ಮ ಶೈಕ್ಷಣಿಕ ಸೇವೆಯಿಂದ ಈ ತಿಂಗಳು ಸ.ಹಿ.ಪ್ರಾ ಶಾಲೆ ಇನ್ನೊಳಿಯಲ್ಲಿ ನಿವೃತ್ತರಾಗುತ್ತಿದ್ದಾರೆ.
ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ಲಿಡ್ವಿನ್ ನೊರೊನಾ
ಸ.ಹಿ.ಪ್ರಾ ಶಾಲೆ ಒಡ್ಡೂರು
ಮಂಗಳೂರು ದಕ್ಷಿಣ
20.04.1962 ರಲ್ಲಿ ಜನಿಸಿದ ಇವರು 04.08.1998 ರಲ್ಲಿ ಸರಕಾರಿ ಸೇವೆಗೆ ಸೇರಿದರು. ತಮ್ಮ ಸುದೀರ್ಘ 24 ವರ್ಷಗಳ ಸೇವೆಯಿಂದ ಈ ತಿಂಗಳು ನಿವೃತ್ತರಾಗುತ್ತಿದ್ದಾರೆ.
ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಇಲಾಖೆಗೆ ಹಾಗೂ ಮಕ್ಕಳಿಗೆ ತನ್ಮೂಲಕ ಸಮಾಜಕ್ಕೆ ಉತ್ತಮ ಸೇವೆಯನ್ನು ನೀಡಿ ನಿವೃತ್ತರಾಗುತ್ತಿರುವ ತಮ್ಮನ್ನು ಪ್ರೀತಿಯಿಂದ ಗೌರವಿಸಿ ತಮ್ಮೆಲ್ಲರಿಗೂ ಭಗವಂತನು ಆಯುರಾರೋಗ್ಯ, ಐಶ್ವರ್ಯವನ್ನು ಕರುಣಿಸಲಿ, ತಮ್ಮ ನಿವೃತ್ತ ಜೀವನ ಸುಖಮಯವಾಗಿರಲಿ ಎಂದು ಜಿಲ್ಲೆಯ ಸಮಸ್ತ ಶಿಕ್ಷಕರ ಪರವಾಗಿ ಹಾರೈಸುತ್ತಿದ್ದೇವೆ.