ಗೃಹ ಜ್ಯೋತಿ ಯೋಜನೆಗೆ ಆನ್ಲೈನ್ ಮೂಲಕ ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸಿ | Apply for Gruha Jyoti Yojana online on mobile

ಸರ್ಕಾರ ಜಾರಿಗೆ ತಂದಿರುವ ಮಹತ್ವಾಕಾಂಶ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆ (Gruha Jyoti Scheme) ಆನ್‌ಲೈನ್‌ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಅದಕ್ಕೆ ಬೇಕಾಗುವ ದಾಖಲೆಗಳು,ಅರ್ಜಿ ಸಲ್ಲಿಸುವ ವಿಧಾನ ಮತ್ತು ಷರತ್ತುಗಳ ಬಗ್ಗೆ ಮಾಹಿತಿ ಇಲ್ಲಿದೆ.

ಗೃಹ ಜ್ಯೋತಿ ಯೋಜನೆ

garantee schmeme kannada 1

ಈ ಯೋಜನೆಯ ಅಡಿಯಲ್ಲಿ ರಾಜ್ಯದ ಪ್ರತಿ ಮನೆಗೆ ಪ್ರತಿ ತಿಂಗಳಿಗೆ ಗರಿಷ್ಠ 200 ಯೂನಿಟ್ʼಗಳವರೆಗಿನ ಗೃಹ ಬಳಕೆಯ ವಿದ್ಯುತ್‌ ಉಚಿತ ನೀಡುವ ಯೋಜನೆ ಇದಾಗಿದೆ.

ಪ್ರತಿ ಗ್ರಾಹಕರ ತಿಂಗಳ ಸರಾಸಿ ಬಳಕೆಯ ಯೂನಿಟ್ ಗಳ ಮೇಲೆ ಶೇಕಡ 10 ರಷ್ಟು ಹೆಚ್ಚುವರಿ ಬಳಕೆಯ ವಿದುತ್‌ನ್ನು ಉಚಿತ ನೀಡಲಾಗುತ್ತದೆ.

ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ದಿನಾಂಕ :

ಗೃಹ ಜ್ಯೋತಿ ನೋಂದಣಿ ಪ್ರಕ್ರಿಯೆಯು ಜೂನ್ 18 ರಿಂದ ಆರಂಭಿಸಲಾಗಿದೆ.

gruha joyti icon

ಗೃಹ ಜ್ಯೋತಿ ಯೋಜನೆಯ ಷರತ್ತುಗಳು :

  • ಗೃಹ ಜ್ಯೋತಿ ಯೋಜನೆಯು ಗೃಹ ಬಳಕೆಯ ವಿದ್ಯುತ್ ಸಂಪರ್ಕಗಳಿಗೆ ಮಾತ್ರ ಅನ್ವಯ ಹಾಗೂ ವಾಣಿಜ್ಯ ಉದ್ದೇಶಗಳಿಗೆ ವಿದ್ಯುತ್ ಉಪಯೋಗಿಸಿದಲ್ಲಿ ಅನ್ವಯವಾಗುವುದಿಲ್ಲ.
  • ಪ್ರಸ್ತುತ ಚಾಲ್ತಿಯಲ್ಲಿರುವ ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಯೋಜನೆ ಮತ್ತು ಅಮೃತ ಜ್ಯೋತಿ ಯೋಜನೆಯ ಫಲಾನುಭವಿಗಳನ್ನು ಗೃಹ ಜ್ಯೋತಿ ಯೋಜನೆಯಡಿಯಲ್ಲಿ ಸೇರ್ಪಡಿಸಲಾಗುವುದು.
  • ಗೃಹ ವಿದ್ಯುತ್ ಬಳಕೆದಾರರ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಮಿಟರ್ ಗಳಿದ್ದಲ್ಲಿ, ಒಂದು ಮಿಟರ್ ಗೆ ಮಾತ್ರ ಈ ಯೋಜನೆಯಡಿಯ ಸೌಲಭ್ಯಕ್ಕೆ ಅರ್ಹರು.
  • ಈ ಯೋಜನೆಯ ಸೌಲಭ್ಯ ಪಡೆಯಲು ಗ್ರಾಹಕರು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು.
  • ಗ್ರಾಹಕರು Connection ID / Account ID ಅನ್ನು ಆಧಾರ್ ಗೆ ಕಡ್ಡಾಯವಾಗಿ ಜೋಡಣೆ ಮಾಡಬೇಕು.
IMG 20230617 WA0304

ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು :

  1. ಆಧಾರ್ ಕಾರ್ಡ್ ಪ್ರತಿ
  2. ವಿದ್ಯುತ್ ಸಂಪರ್ಕ ದಾಖಲಾತಿ / ವಿದ್ಯುತ್ ಬಿಲ್ ಪ್ರತಿ
  3. ಕರ್ನಾಟಕ ಖಾಯಂ ನಿವಾಸಿ ಪುರಾವೆ
  4. ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಬಾಡಿಗೆಯ ಕರಾರು ಪತ್ರ ಇರಬೇಕು.

ಗೃಹ ಜ್ಯೋತಿ ಯೋಜನೆಗೆ ಸೇವಾ ಸಿಂಧು ಅರ್ಜಿ ಸಲ್ಲಿಸುವುವ ವಿಧಾನ :

1.ಕೆಳಗೆ ನೀಡಿರುವ ಸೇವಾ ಸಿಂಧು ಪೋರ್ಟಲ್ ಅಧಿಕೃತ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ.

2.ಅಲ್ಲಿ ಗೃಹ ಜ್ಯೋತಿ ಎಂದು ನಮೂದಿಸಲಾಗಿರುತ್ತದೆ. ಅದರ ಮೇಲೆ ಕ್ಲಿಕ್‌ ಮಾಡಿ.

3.ಗೃಹ ಜ್ಯೋತಿ ಆನ್‌ಲೈನ್‌ ಅರ್ಜಿ ಸಿಗುತ್ತದೆ.

4.ನಂತರ ಅಲ್ಲಿ ಎಸ್ಕಾಂ ಹೆಸರು, Account ID/Connection ID, ನಿಮ್ಮ ಹೆಸರು, ವಿಳಾಸ (ವಿದ್ಯುತ್‌ ಬಿಲ್‌ನಲ್ಲಿರುವಂತೆ/ ಎಸ್ಕಾಂ ನಲ್ಲಿರುವಂತೆ) ತುಂಬಾ ಬೇಕು.

5.ಆದಾದ ನಂತರ ನೀವು ಮಾಲಿಕರ ಅಥವಾ ಬಾಡಿಗೆದಾರರ ಎನ್ನುವುದನ್ನು ನಮೂದಿಸಬೇಕು, ನಿಮ್ಮ ಆಧಾರ ಸಂಖ್ಯೆ, ಆಧಾರ ಕಾರ್ಡ್‌ ನಲ್ಲಿ ಇರುವಂತೆ ನಿಮ್ಮ ಹೆಸರನ್ನು, ನಿಮ್ಮ ಮೊಬೈಲ್‌ ನಂಬರ್‌ʼನ್ನು ಅಲ್ಲಿ ಭರ್ತಿ ಮಾಡಬೇಕು.

6.I Agree ಅಂತ ಇರುತ್ತದೆ ಅದರ ಮೇಲೆ ಕ್ಲಿಕ್‌ ಮಾಡಬೇಕು.

7.ಕೊನೆಯದಾಗಿ Word verification ಅಂತ ಇರುವಲ್ಲಿ ಅಲ್ಲಿ ಕಾಣುವ ನಂಬರ್‌ʼನ್ನು ಕೇಳಗೆ ನೀಡಿರುವ ಬಾಕ್ಸʼನಲ್ಲಿ ತುಂಬಬೇಕು. ನಂತರ Submit ಮೇಲೆ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ ಇಲ್ಲದೆ.

https://sevasindhugs.karnataka.gov.in/

Banner Energy Department final 2
IMG 20230619 203905
Sharing Is Caring:

Leave a Comment