Pink whatsapp virus ತಡೆಯಲು ಹೀಗೆ ಮಾಡಿ | Whats app pink

ಪಿಂಕ್ ವಾಟ್ಸಪ್ ಎನ್ನುವ ವೈರಸ್ ಲಿಂಕ್ : ಇದನ್ನು ಒತ್ತಿದರೆ ಹುಷಾರ್

ಮಂಗಳೂರು, ಎ.16: ಶುಕ್ರವಾರ ಸಂಜೆಯ ಹೊತ್ತಿಗೆ ವಾಟ್ಸಪ್ ಜಾಲತಾಣದಲ್ಲಿ ವಿಶೇಷ ಅತಿಥಿಯ ಆಗಮನವಾಗಿತ್ತು. ಪಿಂಕ್ ಬಣ್ಣದ ಸಿಂಬಲ್ ಜೊತೆಗೆ ಪಿಂಕ್ ವಾಟ್ಸಪ್, ನ್ಯೂ ವರ್ಶನ್ ಹೆಸರಿನಲ್ಲಿ ಲಿಂಕ್ ಒಂದು ಹರಿದಾಡಿತ್ತು. ಲಿಂಕ್ ಒತ್ತಿದ ಅದೆಷ್ಟೋ ಮಂದಿ
ಲಿಂಕಾಸುರನ ಹೊಸ ಅವತಾರ ಕಂಡು ಬೆಚ್ಚಿ ಬಿದ್ದಿದ್ದರು.

IMG 20210416 WA0012 min

ಆ ಲಿಂಕ್ ಒತ್ತಿದ ಕೂಡಲೇ ತನ್ನಷ್ಟಕ್ಕೇ ಅವರ ಹೆಸರಲ್ಲಿ ಅದೇ ಲಿಂಕ್ ಫಾರ್ವಡ್ ಆಗ್ತಾ ಇತ್ತು. ಯಾರ ಜೊತೆಗೆಲ್ಲಾ ವಾಟ್ಸಪ್ ಕನೆಕ್ಷನ್ ಇಟ್ಟುಕೊಂಡಿದ್ದಾರೋ ಅವರೆಲ್ಲರಿಗೂ ಲಿಂಕ್ ತನ್ನಿಂದ ತಾನೇ ಹೋಗ್ತಾ ಇತ್ತು. ಪಿಂಕ್( pink whatsapp) ಹೆಸರಲ್ಲಿ ಯಾರೋ ಮಾಂತ್ರಿಕ ಲಿಂಕ್ ಬಿಟ್ಟು ಯಾಮಾರಿಸಿದ್ದಾರೆ.

ಬೇರೇನೂ ಹಾನಿ ಇಲ್ಲದಿದ್ದರೂ, ಈ ಲಿಂಕ್ ತನ್ನಿಂದ ತಾನೇ ಒತ್ತಿದ ವ್ಯಕ್ತಿ ಎಷ್ಟು ಗ್ರೂಪ್ ಗಳಲ್ಲಿ ಸದಸ್ಯರಾಗಿದ್ದಾರೆ ಮತ್ತು ಅವರ ಜೊತೆ ವೈಯಕ್ತಿಕವಾಗಿ ಯಾರೆಲ್ಲ ಲಿಂಕ್ ಹೊಂದಿದ್ದಾರೆ ಅವೆರಲ್ಲರಿಗೂ ಈ ಲಿಂಕ್ ಹೋಗ್ತಾ ಇತ್ತು.

ಹೊಸ ವರ್ಷನ್ ಏನೋ ಇರಬೇಕು ಎಂದು ಹೊಸ ವ್ಯಕ್ತಿ ಅದನ್ನು ಒತ್ತಿದ ಕೂಡಲೇ ಅದು ಮತ್ತೆ ಎಲ್ಲರ ಜೊತೆಗೂ ಹಂಚಿಕೆ ಆಗ್ತಾ ಇತ್ತು. ಇದು ಹೊಸ ರೀತಿಯ ವೈರಸ್ ಆಗಿದ್ದು ವಾಟ್ಸಪಲ್ಲಿ ಕುಟ್ಟುತ್ತಾ ಇರುವ ಶೂರರೆಲ್ಲಾ ಈ
ಲಿಂಕಾಸುರನ ಕೂಪಕ್ಕೆ ಸಿಲುಕಿ ಕೆಲಕಾಲ ಒದ್ದಾಡಿದ್ದಾರೆ.

ಕೆಲವರಂತೂ ಈ ಲಿಂಕ್ ವೈರಸ್ ಅನ್ನೋದು ಗೊತ್ತಾಗುತ್ತಲೇ ಮತ್ತೆ ಡಿಲೀಟ್ ಬಟನ್ ಒತ್ತಲು ಆರಂಭಿಸಿದ್ದಾರೆ. ಆದರೆ, ಒಮ್ಮೆ ಒತ್ತಿದರೆ ಮುಗೀತು ಕ್ಷಣಾರ್ಧದಲ್ಲಿ ಸಾವಿರಾರು ಮಂದಿಗೆ ಲಿಂಕ್ ಹಂಚಿಕೆಯಾಗಿರುತ್ತೆ. ಸಾವಿರಾರು ಮಂದಿ ಈ ಲಿಂಕ್ ಕೂಪಕ್ಕೆ ಒದ್ದಾಡುವಂತಾಗಿದೆ. ಮೀಡಿಯಾ ಮಂದಿಯೂ ಇದರಿಂದ ಹೊರತಾಗಿಲ್ಲ.

ಈ ಬಗ್ಗೆ ಗೂಗಲಲ್ಲಿ ಕೇಳಿ ನೋಡಿದರೆ, ಪಿಂಕ್ ವಾಟ್ಸಪ್ ಅನ್ನೋ ಕಾನ್ಸೆಪ್ಟ್ ಇದೆಯಂತೆ. ಒಂದೇ ಮೊಬೈಲಲ್ಲಿ ಎರಡು ರೀತಿಯಲ್ಲಿ ವಾಟ್ಸಪ್ ಬಳಕೆಗೆ ಅನುವು ಮಾಡುವ ಏಪ್ ಅದು. ಒಂದೇ ನಂಬರಿನಲ್ಲಿ ಎರಡು ಬಗೆಯಲ್ಲಿ ವಾಟ್ಸಪ್ ಬಳಕೆ ಮಾಡಿಕೊಳ್ಳಲು ಪಿಂಕ್
ವಾಟ್ಸಪ್ ಬಳಕೆ ಮಾಡಬಹುದು ಎಂದಿದೆ. ಆದರೆ, ಈ ಪಿಂಕ್ ವಾಟ್ಸಪ್( pink whatsapp virus) ಹೆಸರಲ್ಲಿ ಯಾರೋ ಕಿಡಿಗೇಡಿಗಳು ಈ ರೀತಿಯ ವೈರಸ್ ಲಿಂಕನ್ನೇ ತೆರೆದು ಹರಿಯಬಿಟ್ಟಿದ್ದಾರೆ

ಪಿಂಕ್ ವ್ಯಾಟ್ಸಪ ಸಂದೇಶಗಳನ್ನು ಕಳಿಸುವವರು ಅದನ್ನು ನಿಲ್ಲಿಸಲು ಈ ಕೆಳಗಿನ ಅಂಶಗಳನ್ನು ಗಮನಿಸಿ.
ಸೆಟ್ಟಿಂಗ್‌ಗೆ ಹೋಗಿ App manegement ನಲ್ಲಿ App list ಇರುತ್ತದೆ. ಆಲೀಸ್ಟ್ ನಲ್ಲಿ ಪಿಂಕ್ ವ್ಯಾಟ್ಸಪ App ಇರುತ್ತದೆ ಅದನ್ನು ಕ್ಲಿಕ್ ಮಾಡಿ force stop ಮಾಡಿ

Sharing Is Caring:

Leave a Comment