Step 1
SATS Portal ನಲ್ಲಿ SATS Username ಮತ್ತು Password ಬಳಸಿ Login ಆಗಬೇಕು.
Step 2
ಎಡಗಡೆ ಇರುವ main menu ನಲ್ಲಿ Student management 1-10 ಮೇಲೆ click ಮಾಡಬೇಕು.
Step 3
Admission details ಮೇಲೆ click ಮಾಡಬೇಕು. ಅಲ್ಲಿ Enrollment 1st standard ಎಂಬ option ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದಾಗ ಹೊಸ page ತೆರೆದುಕೊಳ್ಳುತ್ತದೆ.
Step 4
ಮೊದಲಿಗೆ Medium instructions ಇರುವಲ್ಲಿ ಕನ್ನಡ ಮಾಧ್ಯಮ ಅಥವಾ ಇಂಗ್ಲೀಷ್ ಮಾಧ್ಯಮ, ಸರಿಯಾಗಿ ನಮೂದಿಸಬೇಕು.
Mother tongue ಇರುವಲ್ಲಿ ಮಗುವಿನ ಮಾತೃಭಾಷೆ ಸರಿಯಾಗಿ ತುಂಬಬೇಕು.
Section ಇರುವಲ್ಲಿ , ಯಾವ ಸೆಕ್ಷನ್ ಗೆ ಮಗು ದಾಖಲಾಗಬೇಕು ಎಂದು ತುಂಬಿಸಿ. ಒಂದೇ ಸೆಕ್ಷನ್ ಇದ್ದಲ್ಲಿ A ಎಂದು ಎಂಟ್ರಿ ಮಾಡುವುದು.
Language group ನಲ್ಲಿ ಮಗುವಿನ ತರಗತಿಗೆ ಸಂಬಂಧಿಸಿದ Language group ನಮೂದಿಸಬೇಕು.
Step 5
ಮಗುವಿನ ಹೆಸರು ಹಾಗೂ ತಂದೆ ತಾಯಿಯ ಹೆಸರನ್ನು ಇಂಗ್ಲೀಷ್ ಹಾಗೂ ಕನ್ನಡದಲ್ಲಿ ನಮೂದಿಸಬೇಕು. First name ಇರುವ box ನಲ್ಲಿ ಸಂಪೂರ್ಣ ಹೆಸರು ನಮೂದಿಸಬೇಕು.
ಜನನ ದಿನಾಂಕ ಸರಿಯಾಗಿ ತುಂಬಿಸಬೇಕು. ಮಗುವಿನ ವಯಸ್ಸು ಅಗತ್ಯ ವಯಸ್ಸಿಗಿಂತ ಹೆಚ್ಚು ಇದ್ದಲ್ಲಿ ಕಾರಣ ಕೇಳುತ್ತದೆ. ಸೂಕ್ತ ಕಾರಣ ನಮೂದಿಸಿ.
Gender , Nationality, Social category, Child with special need ಇವುಗಳ ಎದುರು * ಚಿಹ್ನೆ ಇರುವ ಕಾರಣ ಕಡ್ಡಾಯವಾಗಿ ತುಂಬುವುದು.
ಆಧಾರ್, ತಂದೆ, ತಾಯಿಯ ಆಧಾರ್ ರಕ್ತದ ಗುಂಪು ಜಾತಿ ಆದಾಯ ಪ್ರಮಾಣ ಪತ್ರದ ಸಂಖ್ಯೆ , ಬಿಪಿಎಲ್ ಕಾರ್ಡ್ ಸಂಖ್ಯೆ ಇವುಗಳನ್ನು ಲಭ್ಯವಿದ್ದರೆ ತುಂಬಿಸುವುದು. ಇಲ್ಲದಿದ್ದರೆ ಮತ್ತೆ ತುಂಬಿಸಲು ಅವಕಾಶ ಇದೆ.
SC ST ಮಕ್ಕಳಿಗೆ ಜಾತಿ ಆದಾಯ ಪ್ರಮಾಣ ಪತ್ರದ ಸಂಖ್ಯೆ ತುಂಬಿಸುವುದು. ಕಾರಣಾಂತರದಿಂದ ಲಭ್ಯವಿಲ್ಲದಿದ್ದಲ್ಲಿ 0000 ಎಂದು ನಮೂದಿಸಿ ಸಿಕ್ಕಿದ ಬಳಿಕ ಎಡಿಟ್ ಮಾಡುವುದು.
ವಿಳಾಸ ಇರುವಲ್ಲಿ URBAN/RURAL ಸರಿಯಾಗಿ ನಮೂದಿಸುವುದು. ನಂತರ ಮಗುವಿನ ವಿಳಾಸ ತುಂಬಿಸುವುದು ಕಡ್ಡಾಯ.
ದಾಖಲಾತಿ ಸಂಖ್ಯೆಯನ್ನು ನಮೂದಿಸಬೇಕು.
ಮೊಬೈಲ್ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ ಲಭ್ಯವಿದ್ದಲ್ಲಿ ತುಂಬಿಸುವುದು. ಇಲ್ಲದಿದ್ದರೆ ಮತ್ತೆ ತುಂಬಿಸಲು ಅವಕಾಶ ಇದೆ.
Step 5
ಎಲ್ಲಾ ಮಾಹಿತಿಯನ್ನು ಸರಿಯಾಗಿ ಗಮನಿಸಿ Submit ಕೊಡಬೇಕು. ಈಗ student enrolled successfully ಎಂದು ಬರುತ್ತದೆ. ಜೊತೆಗೆ ಮಗುವಿನ SATS ಸಂಖ್ಯೆ ಸಿಗುತ್ತದೆ.