
- ನಲಿಕಲಿ ಘಟಕಗಳಲ್ಲಿ ದ್ವಿತೀಯ ಭಾಷೆ ಇಂಗ್ಲಿಷ್ ವಿಷಯಕ್ಕೆ ಸಂಬಂಧಿಸಿದಂತೆ ಇ.ಎನ್.ಕೆ ಲೆವೆಲ್-01, ಲೆವೆಲ್-02 ಮತ್ತು ಲೆವೆಲ್-03ರ ಪಠ್ಯಕ್ರಮಗಳ ಅನುಷ್ಠಾನ ಕಡ್ಡಾಯವಾಗಿರುತ್ತದೆ.
- 01ನೇ ತರಗತಿಯಲ್ಲಿ 40 ದಿನಗಳ ವಿದ್ಯಾ ಪ್ರವೇಶದ ನಂತರ ಇ.ಎನ್.ಕೆ ಲೆವೆಲ್-01ರ ಅನುಷ್ಠಾನಕ್ಕೆ ಕಲಿಕಾ
ಏಣಿಯಂತೆ (Ladder) ಅಗತ್ಯ ಕ್ರಮವಹಿಸುವುದು. - 02 ಮತ್ತು 03ನೇ ತರಗತಿಯಲ್ಲಿ 40+05 ದಿನಗಳ ಸೇತು ಬಂಧ ಸಹಿತ ಆರಂಭಿಕ ಕಲಿಕೆಯು ಸಾಗಬೇಕಿದ್ದು,
ಅನುಬಂಧದಂತೆ ಪರಿಷ್ಕೃತ ಸೇತು ಬಂಧ ಚಟುವಟಿಕೆಗಳ ಅನುಷ್ಠಾನಕ್ಕೆ ಕ್ರಮವಹಿಸುವುದು - ಸೇತು ಬಂಧ ಪಠ್ಯಕ್ರಮವು ಶೇ.20ರಷ್ಟು Listening & Speaking (L&S) ಮತ್ತು ಶೇ.80ರಷ್ಟು Reading &
Writing (R&W) ಮೇಲೆ ಕೇಂದ್ರಿಕೃತವಾಗಿರುತ್ತದೆ. - Sight words ಅಭ್ಯಾಸಗಳ ಜೊತೆಗೆ ಕ್ರಿಯಾತ್ಮಕ ವ್ಯಾಕರಣ ಮತ್ತು ಶಬ್ದಕೋಶವನ್ನು ಅಭಿವೃದ್ಧಿಪಡಿಸುವಸಲುವಾಗಿ ಭಾಷಾ ಆಟಗಳು-ಸಂಭಾಷಣೆಯ ವೃತ್ತ (Language Ganes & Conversation Circles)ಗಳನ್ನು L&S ನ ಭಾಗವಾಗಿ ಆಯ್ಕೆಮಾಡಿಕೊಳ್ಳಲಾಗಿರುತ್ತದೆ
- ‘I spy’ and ‘Passing the Parcel’, ‘fire in the mountain’, ‘Simon Says’, ನಂತಹ ಹಂತದಲ್ಲಿ ಬಳಸುವುದು ಸೂಕ್ತವಾಗಿದ್ದು, ವ್ಯಾಕರಣ ಪರಿಕಲ್ಪನೆಗಳ ಸಲುವಾಗಿ ಇವುಗಳಿಗೆ ಪ್ರಾಮುಖ್ಯತೆಯನ್ನು
ನೀಡಲಾಗಿದೆ. - Conversation Circles
Possessive pronouns, tenses, singular and plural, use of
apostrophe, use of we, they, their and our’ ನಂತಹ ಪ್ರಶ್ನೆಗಳಿಗೆ ಮಕ್ಕಳು ಮೌಖಿಕವಾಗಿ ಉತ್ತರಿಸಲು
ಹಾಗೂ ಈ ಬಗ್ಗೆ ಹೆಚ್ಚು ಅಭ್ಯಾಸ ಮಾಡಲು ಅವಕಾಶಗಳನ್ನು ಕಲ್ಪಿಸಲಾಗಿದೆ.
ಅವಧಿಗಳ ನಿರ್ವಹಣೆ: - Begin with 30 min of R&W
- Followed by 20 min of L&S
- End with 30 min of R&W
- ಒಂದನೇ ತರಗತಿಯ ವಿದ್ಯಾರ್ಥಿಗಳು ವಿದ್ಯಾ ಪ್ರವೇಶ ಚಟುವಟಿಕೆಗಳನ್ನು ಪೂರ್ಣಗೊಳಿಸಲು ನಿರ್ದೇಶನವನ್ನು
ನೀಡಿ, 02 ಮತ್ತು 03ನೇ ತರಗತಿಯ ವಿದ್ಯಾರ್ಥಿಗಳಿಗೆ ಈ ಮೇಲಿನ ಅವಧಿಯಂತೆ ಜೊತೆ ಜೊತೆಯಾಗಿ ಸೇತು
ಬಂಧ ಚಟುವಟಿಕೆಗಳನ್ನು ಆರಂಭಿಸುವುದು. ಗ್ರಹಿಸಲು ಕಷ್ಟಕರವಾದ ಪರಿಕಲ್ಪನೆ/ವಿಷಯಗಳಿಗೆ ವಿಶೇಷ
ಗಮನವನ್ನು ನೀಡುವುದು. - ಬರವಣಿಗೆಯ ಅಭ್ಯಾಸ/ನಿಯೋಜಿತ ಕೆಲಸಗಳಿಗೆ ಮಕ್ಕಳು 04 ಗೆರೆಗಳ ನೋಟ್ ಬುಕ್ ಬಳಸುವಂತೆ ಶಿಕ್ಷಕರು
ಮಾರ್ಗದರ್ಶನವನ್ನು ನೀಡುವುದು. - ಅಭ್ಯಾಸಗಳ ದೃಢೀಕರಣಕ್ಕಾಗಿ ನಿಯಮಿತವಾದ ನಿಯೋಜಿತ ಕೆಲಸಗಳು ಅತ್ಯಗತ್ಯವಿದ್ದು, ಅದನ್ನು ಶಿಕ್ಷಕರು
ನೀಡುವುದಲ್ಲದೇ, ಸೂಕ್ತ ಸಮಯದಲ್ಲಿ ಪರಿಶೀಲಿಸಿ, ಹಿಮ್ಮಾಹಿತಿಯನ್ನು ನೀಡಿ, ಪ್ರತೀ ತಪ್ಪುಗಳನ್ನು ಸರಿಪಡಿಸಿ,
ಸರಿಯಾದ ಕಲಿಕೆಗೆ ಮಾರ್ಗದರ್ಶನವನ್ನು ಒದಗಿಸುವುದು. - 02 ಮತ್ತು 03ನೇ ತರಗತಿಯಲ್ಲಿ ಸೇತು ಬಂಧ ಸಹಿತ ಆರಂಭಿಕ ಕಲಿಕೆಗೆ ಸಿದ್ಧಪಡಿಸಲಾದ 40+05 ದಿನಗಳಮಾದರಿಯನ್ನು ಅನುಸರಿಸಿ, ಎಫ್.ಎ-01ರ ಮೌಲ್ಯಾಂಕನಕ್ಕೆ ಕ್ರಮವಹಿಸುವುದು. ಈ ಹಂತದಲ್ಲಿ ‘Let us Do’and I Can Do’ ಮೌಲ್ಯಮಾಪನ ಕಾರ್ಡ್‌ಗಳನ್ನು ಬಳಸಬಹುದಾಗಿದ್ದು, ಇವುಗಳ ಜೊತೆಗೆ ಮಕ್ಕಳ spellingability ಪರೀಕ್ಷಿಸಲು dictation of words ನೀಡುವುದನ್ನು ಮೌಲ್ಯಾಂಕನದಲ್ಲಿ ಅಳವಡಿಸಿಕೊಳ್ಳಬಹುದಾಗಿದೆ.ಇ.ಎನ್.ಕೆ ಲೆವೆಲ್-03ರ ಪಠ್ಯಕ್ರಮ ಕುರಿತು ತರಗತಿ ಕಲಿಕಾ ಪ್ರಕ್ರಿಯೆಯನ್ನು ಅರ್ಥೈಸಲು ವೀಡಿಯೋಗಳನ್ನುಸಿದ್ಧಪಡಿಸಿ, ಡಿ.ಎಸ್.ಇ.ಆರ್.ಟಿ ವೆಬ್ ಸೈಟ್‌ನಲ್ಲಿ ಅಪ್ಲೋಡ್ ಮಾಡಲಾಗುವುದು. ಈಗಾಗಲೇ ದೀಕ್ಷಾ ಪೋರ್ಟಲ್‌ನಲ್ಲಿ ಅಪ್ಲೋಡ್ ಮಾಡಲಾಗಿರುವ ಇ.ಎನ್.ಕೆ ವೀಡಿಯೋ ಸಾಮಗ್ರಿಗಳನ್ನು ಅವಲೋಕಿಸಲುಶಿಕ್ಷಕರಿಗೆ ಸೂಚಿಸಲಾಗಿದೆ. (ಅನುಬಂಧ 04 ಅನ್ನು ಅವಲೋಕಿಸಿ)
(ಇ) Bilingual/ ದ್ವಿಭಾಷಾ ಮಾಧ್ಯಮ ಶಾಲೆಗಳಿಗೆ ಸಂಬಂಧಿಸಿದ ಕ್ರಮಗಳು:
- Bilingual / ದ್ವಿಭಾಷಾ ಮಾಧ್ಯಮದ ಶಾಲೆಗಳ ಒಂದನೇ ತರಗತಿಯಲ್ಲಿಯೂ 40 ದಿನಗಳ ವಿದ್ಯಾ ಪ್ರವೇಶಕಾರ್ಯಕ್ರಮವನ್ನು ಅನುಬಂಧದಲ್ಲಿನ ಸೂಚಿತ ಚಟುವಟಿಕೆಗಳಂತೆ ಅನುಷ್ಠಾನಗೊಳಿಸುವುದು.
- ಸದರಿ ಶಾಲೆಗಳ 02 ಮತ್ತು 03ನೇ ತರಗತಿಗಳಲ್ಲಿ ಜೂನ್ ಮಾಹೆಯ ಆರಂಭದ ದಿನದಿಂದಲೂ Transition
Activities ಅನುಷ್ಠಾನಕ್ಕೆ ಕ್ರಮವಹಿಸುವುದು. ಇವುಗಳ ಕಲಿಕೆ ಮುಕ್ತಾಯವಾದ ನಂತರ ಮಾಹೆವಾರು ಪಾಠಗಳ
ಹಂಚಿಕೆಯಂತೆ ಪ್ರಸಕ್ತ ಸಾಲಿನ ಕಲಿಕಾಂಶಗಳ ನಿರಂತರ ಕಲಿಕೆಯನ್ನು ಆರಂಭಿಸಲು ಕ್ರಮವಹಿಸುವುದು. - ದ್ವಿಭಾಷಾ ಮಾಧ್ಯಮದ 04 ಮತ್ತು 05ನೇ ತರಗತಿಗಳಲ್ಲಿ ಆಯುಕ್ತರ ಹಂತದಿಂದ ಹೊರಡಿಸಲಾದ ಶೈಕ್ಷಣಿಕ
ಮಾರ್ಗದರ್ಶಿಯಂತೆಯೇ ನಿಗದಿತ ದಿನಗಳವರೆಗೂ ಸೇತು ಬಂಧ ಚಟುವಟಿಕೆಗಳ ಅನುಷ್ಠಾನಕ್ಕೆ ಅಗತ್ಯ
ಕ್ರಮವಹಿಸಲು ಶಿಕ್ಷಕರಿಗೆ ಮಾರ್ಗದರ್ಶನ ನೀಡುವುದು. (Transition Activities ಮತ್ತು Bridge Course
Activities ವಿವರಗಳನ್ನು ಡಿ.ಎಸ್.ಇ.ಆರ್.ಟಿ. ವೆಬ್‌ಸೈಟ್‌ನಲ್ಲಿ ಪ್ರಕಟಗೊಳಿಸಲಾಗುವುದು.)