ಪ್ರಾಥಮಿಕ/ಪ್ರೌಢಶಾಲಾ ಶಿಕ್ಷಕರು ಹಾಗೂ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಆದ್ಯ ಗಮನಕ್ಕೆ

20211110 194409 min 1
WhatsApp Group Join Now
Telegram Group Join Now

ಮಾನ್ಯ ಶಿಕ್ಷಣ ಸಚಿವರಾದ ಶ್ರೀ ಬಿ.ಸಿ. ನಾಗೇಶ್ ರೊಂದಿಗೆ ಇಂದು ವಿಧಾನ ಸೌಧದ ಸಚಿವರ ಕೊಠಡಿಯಲ್ಲಿ ನಡೆದ ವಿಶೇಷ ಸಭೆಯಲ್ಲಿ ರಾಜ್ಯಾಧ್ಯಕ್ಷರು ಪ್ರಸ್ತಾಪಿಸಿದ ಶಿಕ್ಷಕರುಗಳ / ಉಪನ್ಯಾಸಕರ ಸಮಸ್ಯೆಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಯಿತು.
ಮಾನ್ಯ ಸಚಿವರು ಶಿಕ್ಷಕರುಗಳ/ ಉಪನ್ಯಾಸಕರ ಸಮಸ್ಯೆಗಳನ್ನು ಆದಷ್ಟು ಬೇಗ ಇತ್ಯರ್ಥಪಡಿಸುವುದಾಗಿ ಸ್ಪಷ್ಠ ಭರವಸೆ ನೀಡಿದರು. ಈ ಸಭೆಯಲ್ಲಿ ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳಾದ ಶ್ರೀ ಸೆಲ್ವಕುಮಾರ್ ಹಾಗೂ ಮಾನ್ಯ ಶಿಕ್ಷಣ ಸಚಿವರ ಆಪ್ತ ಕಾರ್ಯದರ್ಶಿಯವರಾದ ಶ್ರೀ ಎಂ.ಆರ್. ರವಿರವರು ಉಪಸ್ಥಿತರಿದ್ದರು.

• ರಾಜ್ಯದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ (1-5ನೇ ತರಗತಿ) ಸುಮಾರು 75 ಸಾವಿರ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಹಿಂದಿನ ಸೇವಾ ಜೇಷ್ಠತೆಯನ್ನು ಪರಿಗಣಿಸಿ ಪರೀಕ್ಷೇ ನಡೆಸದೇ 6-8ನೇ ತರಗತಿ ಶಾಲೆಗಳಿಗೆ ಮೇಲ್ದರ್ಜೆಗೇರಿಸಲು/ ವೀಲಿನಗೊಳಿಸಲು ಕಾರ್ಯಕಾರಿ ಆದೇಶ ಹೊರಡಿಸುವ ಮೂಲಕ 75 ಸಾವಿರ ಪದವೀಧರ ಶಿಕ್ಷಕರುಗಳು ಹಲವಾರು ವರ್ಷಗಳ ಸಮಸ್ಯೆಯನ್ನು ಬಗೆಹರಿಸುವುದು.

• 1998-1999ರಲ್ಲಿ ಸೇವೆಗೆ ಸೇರ್ಪಡೆಗೊಂಡು, ಮಾನ್ಯ ಭಾರತ ಸರ್ವೋಚ್ಚ ನ್ಯಾಯಾಲಯಲದ ಆದೇಶದ ಹಿನ್ನೆಲೆಯಲ್ಲಿ ಸೇವೆಯಿಂದ ವಜಾಗೊಂಡ ಸುಮಾರು 4000 ಪ್ರಾಥಮಿಕ/ಪ್ರೌಡಶಾಲಾ ಶಿಕ್ಷಕರು 2003ರಲ್ಲಿ ಮರು ನೇಮಕಾತಿ ಹೊಂದಿದ್ದು, ಮರುನೇಮಕಾತಿ ಹೊಂದುವ ಪೂರ್ವದಲ್ಲಿ ಸಲ್ಲಿಸಿರುವ 4-5 ವರ್ಷಗಳ ಸೇವೆಯನ್ನು ಪರಿಗಣಿಸಿ ಕಾಲ್ಪನಿಕವಾಗಿ ವೇತನ ನಿಗದಿಗೊಳಿಸುವುದು.

• ಗ್ರಾಮೀಣ ಕೃಪಾಂಕ ರಹಿತ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಲು ಸೂಕ್ತ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳಿಗೆ ತಿಳಿಸಲಾಯಿತು.

• ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರು, ಬಡ್ತಿ ಪ್ರೌಢಶಾಲಾ ಸಹ ಶಿಕ್ಷಕರು ಹಾಗೂ ಬಡ್ತಿ ಉಪನ್ಯಾಸಕರು ಪದೋನ್ನತಿ ಹೊಂದಿದ ಕಾರಣ 10,15,20,25 ಮತ್ತು 30 ವರ್ಷಗಳ ಕಾಲಮಿತಿ ಬಡ್ತಿ ಸೌಲಭ್ಯದಿಂದ ವಂಚಿತರಾಗಿರುತ್ತಾರೆ. ಇದರಿಂದಾಗಿ ಬಡ್ತಿ ಪಡೆಯದೆ ಇರುವವರಿಗಿಂತ 2-3 ವಾರ್ಷಿಕ ಕಡಿಮೆ ವೇತನ ಬಡ್ತಿಗಳನ್ನು ವೇತನ ಪಡೆಯುತ್ತಿರುವುದು ಸಾಮಾಜಿಕ ನ್ಯಾಯ ತತ್ವಕ್ಕೆ ವಿರುದ್ದವಾಗಿದೆ. ಈ ವೇತನ ತಾರತಮ್ಯವನ್ನು ಸರಿಪಡಿಸುವುದು.

• ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಪರಸ್ಪರ ವರ್ಗಾವಣೆಯ ನೀತಿಯನ್ನು ಜಾರಿಗೆ ತರುವುದು. ಹಾಗೂ ಅಂತರ ಜಿಲ್ಲಾ ವರ್ಗಾವಣೆ ಹೊಂದಲು ‘ಒಂದು ಬಾರಿಗೆ’(O.T.S.) ವರ್ಗಾವಣೆ ಅವಕಾಶ ಕಲ್ಪಿಸುವುದು.

• ಬಿಡುವಿನ ಅವಧಿಯಲ್ಲಿ ಕರ್ತವ್ಯ ನಿರ್ವಹಿಸುವ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಿಗೆ ಗಳಿಕೆ ರಜೆ ಮಂಜೂರು ಮಾಡುವುದು ಹಾಗೂ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ವೃಂದದಿAದ ಶಿಕ್ಷಣ ಸಂಯೋಜಕರ ಹುದ್ದೆಗೆ ನೇಮಿಸುವಾಗ ಸೇವಾ ಹಿರಿತವನ್ನು ಪರಿಗಣಿಸಿ ಜೇಷ್ಠತೆ ಆಧಾರದ ಮೇಲೆ ಈ ಹಿಂದಿನAತೆ ಪರೀಕ್ಷೆ ಇಲ್ಲದೆ ನೇಮಿಸುವುದು.

• ಸುಮಾರು 40 ವರ್ಷಗಳಿಂದ ಪರಿಷ್ಕರಣೆಯಾಗದೆ ಬಾಕಿ ಇರುವ ಶಿಕ್ಷಣ ಇಲಾಖೆಯ ಎಲ್ಲಾ ವೃಂದಗಳನ್ನೊಳಗೊAಡAತೆ ಸಮಗ್ರ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಕಾಲಮಿತಿಯೊಳಗೆ ರೂಪಿಸುವುದು.

• ದಿನಾಂಕ: 01-08-2008ರ ನಂತರ ನೇಮಕವಾದ 2008, 2010 ಮತ್ತು 2013ರ ಬ್ಯಾಚ್‌ನ ಪ್ರೌಢಶಾಲಾ ಶಿಕ್ಷಕರುಗಳಿಗೆ ಒಂದು ವಾರ್ಷಿಕ ವೇತನ ಬಡ್ತಿ ನೀಡಿ ವೇತನ ತಾರತಮ್ಯ ನಿವಾರಿಸುವುದು.

• ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ವರ್ಗಾವಣೆ ಕಾಯ್ದೆಯನ್ನು ಜಾರಿಗೆ ತರುವುದು.

• ಪ್ರೌಢಶಾಲಾ ಶಿಕ್ಷಕರಿಗೆ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ವೃಂದಕ್ಕೆ ಪದೋನ್ನತಿ ನೀಡುವ ಪ್ರಕ್ರಿಯೆ ಸುಮಾರು 10 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು, ಈಗಾಗಲೇ ಅಂತಿಮಗೊಳಿಸಿರುವ ಅರ್ಹ ಪ್ರೌಢಶಾಲಾ ಸಹ ಶಿಕ್ಷಕರ ಜ್ಯೇಷ್ಠತಾ ಪಟ್ಟಿಗೆ ಅನುಗುಣವಾಗಿ ಮುಂಬಡ್ತಿಗೆ ಕ್ರಮವಹಿಸುವುದು.

• 2022ನೇ ಜನವರಿಯಲ್ಲಿ ನಡೆಯಲಿರುವ 2ನೇ ಹಂತದ ಅವಧಿ ಮುಗಿದ ಸಿ.ಆರ್.ಪಿ. / ಬಿ.ಆರ್.ಪಿ.ಗಳನ್ನು ಆಯಾ ತಾಲ್ಲೂಕಿನಲ್ಲಿ ಕ್ರಮೇಣ ಖಾಲಿಯಾಗಲಿರುವ ಕೌನ್ಸಲಿಂಗ್ ಮೂಲಕ ಸ್ಥಳಾವಕಾಶ ಕಲ್ಪಿಸುವುದು.

ಮೇಲ್ಕಂಡ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಸಕರಾತ್ಮಕವಾಗಿ ಸ್ಪಂದಿಸಿ ಪತ್ರ ಬರೆದಿರುತ್ತಾರೆ ಹಾಗೂ ವಿವರವಾದ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಸಂಬAಧಪಟ್ಟ ಅಧಿಕಾರಿಗಳಿಗೆ ಮಾನ್ಯ ಸಚಿವರು ಸೂಚಿಸಿರುತ್ತಾರೆ.

  • ಸಿ.ಎಸ್.ಷಡಾಕ್ಷರಿ, ರಾಜ್ಯಾಧ್ಯಕ್ಷರು
IMG 20211110 WA0019 min 1IMG 20211110 WA0020 min
WhatsApp Group Join Now
Telegram Group Join Now
Sharing Is Caring:

Leave a Comment