ದಿನಾಂಕ:19.12.2022 ರಂದುಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘವು ನಡೆಸುವ ಧರಣಿಯಲ್ಲಿಭಾಗವಹಿಸುವ/ವಿವಿಧ ಸಂಘಟನೆಯ ಪದಾಧಿಕಾರಿಗಳು ಸಮಸ್ತ ನೌಕರರು ಈಕೆಳಕಂಡ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು.ಮತ್ತು ಯಾವುದೇ ಸೂಚನೆಗಳನ್ನು ಉಲ್ಲಂಘಿಸದಂತೆ nps ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಶಾಂತಾರಾಮ್ ತೇಜಾ ಇವರು ವಿನಂತಿಸಿರುತ್ತಾರೆ
1) ದಿನಾಂಕ:19.12.2022 ರಂದು ರಂದು ನಡೆಯುವ ಪ್ರತಿಭಟನೆ/ಧರಣಿಯನ್ನುಅತ್ಯಂತ ಶಾಂತಿಯುತವಾಗಿ, ಶಿಸ್ತುಬದ್ಧವಾಗಿ ಮತ್ತು ಅಹಿಂಸಾತ್ಮಕವಾಗಿನಡೆಸಲು ಪೂರ್ಣ ಸಹಕಾರ ನೀಡುವುದು.
2) ಸದರಿ ಹೋರಾಟವು ನೌಕರರ ಸಂಧ್ಯಾ ಕಾಲದ ಬದುಕಿಗೆ ಭದ್ರತೆ ಪಡೆಯುವಸಂವಿಧಾನಬದ್ಧ ಹೋರಾಟವಾಗಿರುತ್ತದೆ. ಈ ಹೋರಾಟವು ಮೌನಹೋರಾಟವಾಗಿರುತ್ತದೆ.
3) ಮಾನ್ಯಕರ್ನಾಟಕ ಉಚ್ಚರಿಟ್ನ್ಯಾಯಾಲಯವುಸಂಖ್ಯೆ:5781/2021, ದಿನಾಂಕ:01.08.2022ರ ಆದೇಶದಂತೆ ಯಾವುದೇ ರಸ್ತೆತಡೆ ಮಾಡುವ ಅಥವಾ ಉದ್ದೇಶಪೂರ್ವಕವಾಗಿ ಸಾರ್ವಜನಿಕ ಸಂಚಾರಕ್ಕೆಅಡ್ಡಿ ಪಡಿಸುವಂತಿಲ್ಲ. ಸದರಿ ಆದೇಶದ ಉಲ್ಲಂಘನ ಮಾಡಿದ್ದಲ್ಲಿ ಸದರಿವ್ಯಕ್ತಿಗಳು ನೇರ ಹೊಣೆಗಾರರಾಗಿರುತ್ತಾರೆ.
4) ಸದರಿ ಧರಣಿಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ನೌಕರರು ಬೆಂಗಳೂರಿನಪೊಲೀಸ್ ವ್ಯವಸ್ಥೆಯೊಂದಿಗೆ ಸಹಕರಿಸುವುದು ಅವರ ಸೂಚನೆಗಳನ್ನುಕಡ್ಡಾಯವಾಗಿ ಪಾಲಿಸತಕ್ಕದ್ದು.
5) ಧರಣಿಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ನೌಕರರು ಸಾರ್ವಜನಿಕ ಆಸ್ತಿನೇರ ಪಾಸ್ತಿಗೆ ಯಾವುದೇ ಹಾನಿ ಉಂಟು ಮಾಡಿದ್ದಲ್ಲಿ ಅವರಹೊಣೆಗಾರರಾಗಿರುತ್ತಾರೆ.
6) ಧರಣಿ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡುವ ದೃಷ್ಟಿಯಿಂದ ಕುಡಿಯುವನೀರನ್ನು ಬಳಸಲು ಪ್ರತ್ಯೇಕ ಟಪ್ಪರ್‌ವೇರ್ ಬಾಟಲ್/ಪ್ಲಾಸ್ಕ್ ನ್ನು ಕಡ್ಡಾಯವಾಗಿ ಬಳಸತಕ್ಕದ್ದು.
7) ತಾವು ಬಳಸುವ ಅನುಪಯುಕ್ತ ವಸ್ತುಗಳನ್ನು ಶೇಖರಿಸಿಕೊಳ್ಳಲು ಬಟ್ಟೆಯಬ್ಯಾಗನ್ನು ಪ್ರತ್ಯೇಕವಾಗಿ ತಮ್ಮ ಬಳಿ ಇರಿಸಿಕೊಳ್ಳತಕ್ಕದ್ದು
8) ಡಿಸೆಂಬರ್ ಅವಧಿಯಾಗಿರುವುದರಿಂದ ಬೆಂಗಳೂರಿನಲ್ಲಿ ಹೆಚ್ಚಿನ ಚಳಿಇರುವುದರಿಂದ, ಅಹೋರಾತ್ರಿಧರಣಿಯಲ್ಲಿಭಾಗವಹಿಸಬೇಕಾಗಿರುವುದರಿಂದ ಉಲನ್ ಟೋಪಿ, ಸ್ವೆಟರ್ ಹಾಗೂಬೆಚ್ಚನೆಯ ಹೊದಿಕೆಗಳನ್ನು ಕಡ್ಡಾಯವಾಗಿ ತರತಕ್ಕದ್ದು
9) ದಿನಾಂಕ:19.12.2022ರಿಂದ ವಿಧಾನಸೌಧ ಸುತ್ತಮುತ್ತ ಕಲಂ-144ಜಾರಿಯಲ್ಲಿರುವುದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆಜಾಗ್ರತೆ ವಹಿಸತಕ್ಕದ್ದು.
10) ಧರಣಿಯ ಸುಗಮ ನಿರ್ವಹಣೆಗಾಗಿ ಮತ್ತು ಸೂಕ್ತ ಸಮಯದಲ್ಲಿ ಅಗತ್ಯತೀರ್ಮಾನಗಳನ್ನು ತೆಗೆದುಕೊಳ್ಳಲು ಅನುವಾಗುವಂತೆ ಸಮಿತಿಗಳನ್ನುರಚಿಸಲಾಗಿದೆ. ಸಮಿತಿಯ ಪ್ರತಿಯನ್ನು ಇದರೊಂದಿಗೆ ಲಗತ್ತಿಸಿದೆ.
ಮೇಲಿನ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ನಮ್ಮಬದುಕಿನ ಹೋರಾಟವನ್ನು ಯಶಸ್ವಿಗೊಳಿಸಿಕೊಡುವಂತೆ ಈ ಹೋರಾಟಕ್ಕೆಬೆಂಬಲ ನೀಡಿದ ಸಮಸ್ತ ಸಂಘಟನೆಗಳ ಪ್ರತಿನಿಧಿಗಳನ್ನು/ನೌಕರರನ್ನು ಈ ಮೂಲಕ ವಿನಯಪೂರ್ವಕವಾಗಿ ಕೋರುತ್ತೇನೆ.