ಮುಖ್ಯ ಗುರುಗಳ ಪ್ರಭಾರ ಭತ್ಯೆಯ ಕುರಿತು

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲೆಗಳಲ್ಲಿ ಮುಖ್ಯಶಿಕ್ಷಕರ ಹುದ್ದೆಯ ಪ್ರಭಾರವಹಿಸುವ ಪ್ರಾಥಮಿಕ ಶಾಲಾ ಸಹಶಿಕ್ಷಕರಿಗೆ ಪ್ರಭಾರ ಭತ್ಯೆ ಮಂಜೂರಿಸುವ ಕುರಿತಂತೆ, ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳ
ಪ್ರವೇಶಾತಿಯು 400 ಕ್ಕೂ ಮೀರಿದಲ್ಲಿ ಮಾತ್ರ ಮುಖ್ಯ ಶಿಕ್ಷಕರ ಹುದ್ದೆಯ ಮಂಜೂರಾತಿಗೆ ಅವಕಾಶವಿದ್ದು
ವಿದ್ಯಾರ್ಥಿಗಳ ಪ್ರವೇಶಾತಿಯು 400 ಕ್ಕಿಂತ ಕಡಿಮೆ ಇದ್ದಲ್ಲಿ ಮುಖ್ಯ ಶಿಕ್ಷಕರ ಹುದ್ದೆಗೆ ಒಬ್ಬ ಸಹ ಶಿಕ್ಷಕರನ್ನು ಮುಖ್ಯ ಶಿಕ್ಷಕರೆಂದು ಪರಿಗಣಿಸಲಾಗುತ್ತದೆಯೇ ಹೊರತು ಮುಖ್ಯ ಶಿಕ್ಷಕರ ಹುದ್ದೆಯನ್ನು ಮಂಜೂರು ಮಾಡಲು ನಿಯಮಗಳಲ್ಲಿ ಅವಕಾಶವಿಲ್ಲ. ಈ ಹಿನ್ನಲೆಯಲ್ಲಿ ಮಂಜೂರಾದ ಹುದ್ದೆಯಲ್ಲಿ
ಪ್ರಭಾರವಿರಿಸಿದಲ್ಲಿ ಮಾತ್ರ ಕರ್ನಾಟಕ ನಾಗರಿಕ ಸೇವಾ ನಿಯಮ 68 ರನ್ವಯ ಪ್ರಭಾರ ಭತ್ಯೆ ನೀಡಲು ಅವಕಾಶವಿದ್ದು,
ಪ್ರಕರಣದಲ್ಲಿ ಮಂಜೂರಾದ ಹುದ್ದೆಗದುರಾಗಿ ಪ್ರಭಾರ
ವ್ಯವಸ್ಥೆಯಿರುವುದಿಲ್ಲವಾದ್ದರಿಂದ ನಿಯಮ 68 ರಡಿಯಲ್ಲಿ ಪ್ರಭಾರ ಭತ್ಯೆ ಮಂಜೂರು ಮಾಡಲು ನಿಯಮಗಳಲ್ಲಿ ಅವಕಾಶವಿರುವುದಿಲ್ಲ

Sharing Is Caring:

Leave a Comment