ನಗದು ರಹಿತ ಚಿಕಿತ್ಸೆ update ಮಾಹಿತಿ ಇಲ್ಲಿದೆ ದಿನಾಂಕ29/06/22

IMG 20220629 WA0072 1

ನಗದುರಹಿತ ಚಿಕಿತ್ಸಾ ಯೋಜನೆ ಬಗ್ಗೆ ಮಾಹಿತಿ

ರಾಜ್ಯ ಸರ್ಕಾರಿ ನೌಕರರಿಗೆ ನಗದುರಹಿತ ಚಿಕಿತ್ಸಾ ಸೌಲಭ್ಯವನ್ನು ಒದಗಿಸುವ ಮಹತ್ವಾಕಾಂಕ್ಷೆ ಯೋಜನೆ-ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಶೀಘ್ರ ಜಾರಿಗೊಳಿಸುವ ನಿಟ್ಟಿನಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್.ಷಡಾಕ್ಷರಿರವರ ಮನವಿಯಂತೆ ಇಂದು ಮಾನ್ಯ ಆರೋಗ್ಯ ಇಲಾಖೆಯ ಆಯುಕ್ತರಾದ ಶ್ರೀಯುತ ರಂದೀಪ್ ರವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಈ ಸಭೆಯಲ್ಲಿ ಕೆಳಕಂಡ ನಿರ್ಣಯಗಳನ್ನು ಕೈಗೊಳ್ಳಲಾಯಿತು.

1.ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಪ್ರತ್ಯೇಕ ಕೋಶವನ್ನು ಸೃಜಿಸುವುದು ಹಾಗೂ ಪೂರಕ ಸಿಬ್ಬಂದಿಯನ್ನು ನೇಮಿಸುವುದು.

2.ತಾಲ್ಲೂಕು/ಜಿಲ್ಲಾ/ರಾಜ್ಯ ಮಟ್ಟದ ಪ್ರತಿಷ್ಠಿತ ಆಸ್ಪತ್ರೆಗಳೊಂದಿಗೆ ಒಡಂಬಡಿಕೆ ಕರಾರು (ಎಂ.ಓ.ಯು) ಮಾಡಿಕೊಳ್ಳುವುದು.

3.ನೌಕರರಿಗೆ ಸ್ಮಾರ್ಟ್ ಕಾರ್ಡ್ ವಿತರಣೆಗೆ ಕ್ರಮಕೈಗೊಳ್ಳುವುದು.

IMG 20220629 WA0071 1
Sharing Is Caring:

Leave a Comment