ರಾಜ್ಯ ಅಕ್ಷರ ಸಿರಿ ಪ್ರಶಸ್ತಿಗೆ ಭಾಜನರಾದ ಚಿತ್ರಕಲಾ ಇವರ ಸಾಧನೆಗಳ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಈ ಲೇಖನದಲ್ಲಿದೆ. ಇವರು ಬಾಳತಾಲೂಕಿನ ಸಾಲೆತ್ತೂರ ಗ್ರಾಮದ ದ.ಕ.ಜಿ.ಪಂ ಹಿ.ಪ್ರಾ ಶಾಲೆ ಶಾಲೆತ್ತೂರು ಇಲ್ಲಿಗೆ ಸಹಶಿಕ್ಷಕಿಯಾಗಿ ಸೇವೆಗೆಸೇರಿದ್ದು ಸುಮಾರು 15 ವರ್ಷಗಳ ಕಾಲ ಇಲ್ಲಿ ಸೇವೆ ಸಲ್ಲಿಸಿದರು. ಉತ್ತಮ ರೀತಿಯಲ್ಲಿ ಎಲ್ಲರೊಂದಿಗೆ ಬೆರೆಯುತ್ತಾಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಒತ್ತು ನೀಡಿದವರು.ಮಕ್ಕಳ ಪ್ರತಿಭೆಯನ್ನು ಗುರುತಿಸಿ ಸ್ವತಃ ಖರ್ಚುಮಾಡಿ ತರಬೇತುದಾರರನ್ನು ಕರೆಸಿ ಮಕ್ಕಳ ಪ್ರತಿಭೆಗೆಪ್ರೋತ್ಸಾಹ ನೀಡುತ್ತಿದ್ದಾರೆ. ಸಮುದಾಯದಲ್ಲಿ ಗೈರು ಹಾಜರಿದ್ದ ಮಕ್ಕಳ ಮನೆಗೆ ಭೇಟಿ ಕೊಟ್ಟು ಮಕ್ಕಳಮನವೊಲಿಸಿ:
ಶಾಲೆಗೆ ಬರುವಂತೆ ಮಾಡುತಿದ್ದಾರೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಶಾಲೆಯ ಅವಧಿಯನಂತರ ಪರಿಹಾರ ಬೋಧನೆ ಮಾಡುತ್ತಿದ್ದಾರೆ. ಮಕ್ಕಳ ಸಹಾಯದಿಂದ ಬಾಳೆಯ ತೋಟ ಮಾಡಿದರು.ರಂಗಮಂಟಪ ಸ್ಥಾಪನೆ ಮಾಡಲು ಎಲ್ಲರ ಸಹಕಾರ ಪಡೆದುಕೊಂಡರು.ಯೆನಪೋಯಾ ವೈದ್ಯಕೀಯ ವಿದ್ಯಾರ್ಥಿಗಳಿಂದ ಶಾಲೆಯ ದತ್ತು ಸ್ವೀಕಾರತದನಂತರ 2016ರಲ್ಲಿ ಕಟ್ಟತ್ತಿಲ ಶಾಲೆಗೆ ಹೆಚ್ಚುವರಿಯಾಗಿ ವರ್ಗಾವಣೆಗೊಂಡು ಆ ಶಾಲೆಯಲ್ಲಿಸೇರ್ಪಡೆಯಾದಾಗ ಶಾಲೆಯು ತೀರಾ ಶಿಥಿಲಾವಸ್ಥೆಯಲ್ಲಿತ್ತು.
ಮಕ್ಕಳ ಸಂಖ್ಯೆಯು ಕಡಿಮೆ ಇತ್ತು ಶಾಲೆಯುಮುಚ್ಚುವ ಹಂತದಲ್ಲಿತ್ತು. ಇವರು ಸಾಲೆತ್ತೂರಿನಲ್ಲಿರುವಾಗ ಅಲ್ಲಿಯ ಮಕ್ಕಳ ವೈದ್ಯಕೀಯ ತಪಾಸಣೆಗೆ ಬಂದಯೆನಪೋಯದ ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ಕಟ್ಟತ್ತಿಲ ಶಾಲೆಗೆ ಬರುವಂತೆ ಒತ್ತಾಯ ಮಾಡಿದುದರಿಂದಅವರು ಈ ಶಾಲೆಗೂ ಭೇಟಿ ಕೊಟ್ಟರು. ಇವರ ಶಾಲೆಯ ಪರಿಸ್ಥಿತಿಯನ್ನು ವಿವರಿಸಿದಾಗ ಅವರಿಗೆ ಶಾಲೆಗೆಸಹಾಯಮಾಡಬೇಕೆಂದು ಅನಿಸಿತು. ಹಾಗೆಯೇ 8 ಜನ ವೈದ್ಯಕೀಯ ವಿದ್ಯಾರ್ಥಿಗಳ ಕರಸೇವಾ ತಂಡವುಶಾಲೆಯನ್ನು ದತ್ತು ತೆಗೆದುಕೊಳ್ಳಲು ಮುಂದಾದರು.
ಹಾಗೆಯೇ ದತ್ತು ತೆಗೆದುಕೊಂಡು ಶಾಲೆಯ ಸರ್ವತೋಮುಖಅಭಿವೃದ್ಧಿಗೆ ತುಂಬಾ ಶ್ರಮವಹಿಸಿದರು.ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಸತತ ಪ್ರಯತ್ನಕಿರಿಯ ಪ್ರಾಥವಿಕ ಶಾಲೆಯಾಗಿದ್ದ ಕಟ್ಟತ್ತಿಲ ಶಾಲೆಯಲ್ಲಿ ಮಕ್ಕಳ ಸಂಖ್ಯೆಯು ತೀರಾ ಕಡಿಮೆಯಾಗಿದ್ದು ಮಕ್ಕಳಸಂಖ್ಯೆ ಹೆಚ್ಚಳ ಮತ್ತು ಮಕ್ಕಳಿಗೆ ಅನುಕೂಲವಾಗುವಂತೆ 6 ಮತ್ತು 7 ನೇ ತರಗತಿ ಪ್ರಾರಂಭವಾಯಿತು.
2016-17 ರಲ್ಲಿ ಮಕ್ಕಳ ಸಂಖ್ಯೆ 1ರಿಂದ 5ನೇ ತರಗತಿಯವರೆಗೆ 17 ಮಕ್ಕಳು ಇದ್ದರು. 2017-I8ರಲ್ಲಿ 22ಮಕ್ಕಳ ಸಂಖ್ಯೆ 2018-19ರಲ್ಲಿ 27 2019-20 ರಲ್ಲಿ 38 2020-2021ರಲ್ಲಿ ಮಕ್ಕಳ ಸಂಖ್ಯೆ 52 ರಷ್ಟುಏರಿಕೆ ಕಂಡಿತು. ಪ್ರಸ್ತುತ ಸಾಲಿನಲ್ಲಿ 65 ವಿದ್ಯಾರ್ಥಿಗಳು ದಾಖಲಾಗಿರುತ್ತಾರೆ.6ನೇ ಮತ್ತು 7 ನೇ ತರಗತಿಯನ್ನು ಸೇರಿಸಲು ಪ್ರಯತ್ನ2020-21 ರಲ್ಲಿ ಶಾಲೆಗೆ 6ನೇ ತರಗತಿಗೆ ಇಲಾಖೆಯಿಂದ ಅನುಮತಿ ಸಿಕ್ಕಿತು. ಹಾಗೇ 2021-22ರಲ್ಲಿ 7ನೇ ತರಗತಿ ಪ್ರಾರಂಭಗೊಂಡಿತು.
ಮಕ್ಕಳ ಸಂಖ್ಯೆಯನ್ನು ಹೆಚ್ಚಿಸುವ ಸಲುವಾಗಿ ಮನೆ ಮನೆಗೆಭೇಟಿಕೊಟ್ಟು ಪರಿಶ್ರಮ ಪಟ್ಟಿರುತ್ತಾರೆ.ದಾನಿಗಳ ಮುಖೇನ ಶಾಲೆಯ ಬೆಳವಣಿಗೆ ಮೊದಲಿಗೆ ಶಾಲೆಯನ್ನು ಸುಂದರಗೊಳಿಸಲು ದಾನಿಗಳು ಹಾಗೂ ಶಿಕ್ಷಕರು ಸೇರಿ ಶಾಲೆಗೆ ಸುಣ್ಣ ಬಣ್ಣ ಕೊಡಿಸಿ ಶಾಲೆಯನ್ನು ಮೆರುಗುಗೊಳಿಸಿದರು. ರೋಟರಿ ಕ್ಲಬ್ ವತಿಯಿಂದ ಬಾವಿಗೆ ರಿಂಗ್ ಹಾಕಿಸಿಶಾಲೆಗೆ ನಿರಂತರವಾಗಿ ನೀರು ಸಿಗುವಂತೆ ಸಹಕರಿಸಿದರು.
ಸೆಲ್ಕೋ ಕಂಪೆನಿಯಿಂದ ದೊರೆತ ಅನೇಕ ಉಪಕರಣಗಳುಸೆಲ್ಕೋ ಕಂಪೆನಿಯಿಂದ ಸೋಲಾರ್ ಶಕ್ತಿಯಿಂದ ಕಾರ್ಯನಿರ್ವಹಿಸುವ ಸೋಲಾರ್ ರೊಟ್ಟಿ ತಯಾರಿಕಾಯಂತ್ರ, ಸೋಲಾರ್ ಇನ್ವಾರ್ಟರ್, ಸೋಲಾರ್ ವಾಟರ್ ಹೀಟರ್, ಸೋಲಾರ್ ಪ್ಯಾನಲ್, ಸೋಲಾರ್ದಾರಿ ದೀಪಗಳನ್ನು ಶಾಲೆಗೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ರೊಟ್ಟಿ ತಯಾರಿಕಾ ಯಂತ್ರದಿಂದ ಉದ್ಯೋಗ ಸೃಷ್ಟಿ ಸೆಲ್ಕೋ ಕಂಪೆನಿಯು ಈ ಶಾಲೆಗೆ ದಾನವಾಗಿ ನೀಡಿರುವ ರೊಟ್ಟಿ ತಯಾರಿಕಾ ಯಂತ್ರದಿಂದ ಈಶಾಲೆಯಲ್ಲಿ ಇಬ್ಬರಿಗೆ ಉದ್ಯೋಗಾವಕಾಶ ದೊರಕಿರುತ್ತದೆ. ಅಲ್ಲದೆ ರೊಟ್ಟಿ ಮಾರಾಟ ಮಾಡಿ ಬಂದ ಲಾಭವನ್ನು ಶಾಲಾ ಕಾರ್ಯಗಳಿಗೆಬಳಸಲಾಗುತ್ತಿದೆ.
ಈಗ ಶಾಲೆಯ ಪರಿಸರವು ಉತ್ತಮ ರೀತಿಯಲ್ಲಿದೆ. ಸಮುದಾಯದ ಸಹಕಾರವೂ ಉತ್ತಮರೀತಿಯಲ್ಲಿ ದೊರೆಯುತ್ತಿದೆ. ಕರಸೇವಾ ಟ್ರಸ್ಟ್ ಇವರ ಸಹಕಾರದಿಂದ ಶಾಲೆಯು ತುಂಬಾಅಭಿವೃದ್ಧಿಯನ್ನು ಹೊಂದುತ್ತಿದೆ.ಕಂಪ್ಯೂಟರ್ ಕಲಿಕೆಗ್ರಾಮೀಣ ಪ್ರ
ದೇಶದ ವಿದ್ಯಾರ್ಥಿಗಳು ಆಧುನಿಕ ತಂತ್ರಜ್ಞಾನದ ಜ್ಞಾನ ಪಡೆಯಲು ಅನುಕೂಲವಾಗಲು ಸ್ವಂತಖರ್ಚಿನಿಂದ ಕಂಪ್ಯೂಟರ್ನ್ನು ಖರೀದಿಸಿ ಓರ್ವ ಗೌರವ ಶಿಕ್ಷಕಿಯನ್ನು ನೇಮಿಸಿ ಕಂಪ್ಯೂಟರ್ ಕಲಿಕೆಯನ್ನುವಿದ್ಯಾರ್ಥಿಗಳಿಗೆ ಉಚಿತವಾಗಿ ಕಲಿಸಲಾಗುತ್ತದೆ ಹಾಗೆಯೇ ಗೌರವ ಶಿಕ್ಷಕಿಯ ಸಂಭಾವನೆಯನ್ನು ಇವರು ಸ್ವಂತಹಣದಲ್ಲಿ ಭರಿಸುತ್ತಿದ್ದಾರೆ.
ಕ್ರೀಡೆಪ್ರಾಥಮಿಕ ಶಾಲಾ ಮಕ್ಕಳು ಖಾಸಗಿ ಶಾಲಾ ಮಕ್ಕಳಿಗಿಂತ ಏನೂ ಕಡಿಮೆ ಇಲ್ಲಎನ್ನುವಂತೆ ಮಕ್ಕಳಿಗೆ ವಿಶೇಷ ಕ್ರೀಡಾ ತರಬೇತಿ ನೀಡಿ ತಾಲೂಕು, ಜಿಲ್ಲೆ ಹಾಗೂ ರಾಜ್ಯಮಟ್ಟದವರೆಗೆಸ್ಪರ್ಧಿಸಿ ಬಹುಮಾನ ಪಡೆಯುವಂತೆ ಮಾಡಿರುತ್ತಾರೆ.ಸಾಂಸ್ಕೃತಿಕ ಕಾರ್ಯಕ್ರಮಗಳುನುರಿತ ನೃತ್ಯಗುರುಗಳನ್ನು ಕರೆಯಿಸಿ ಮಕ್ಕಳಿಗೆ ಒಳ್ಳೆಯ ರೀತಿಯಲ್ಲಿ ನೃತ್ಯ ತರಬೇತಿ ಕೊಡಿಸಿ ವಿವಿಧಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆಯುವಂತೆ ಮಾಡಿರುತ್ತಾರೆ.
ಸಾಹಿತ್ಯ ಕಮ್ಮಟಸಂಪನ್ಮೂಲ ವ್ಯಕ್ತಿಗಳಿಂದ ವಿದ್ಯಾರ್ಥಿಗಳಿಗೆ ಕಥೆ ಕವನ ರಚನೆಮಾಡುವ ಕಮ್ಮಟಗಳನ್ನು ಏರ್ಪಡಿಸಿವಿದ್ಯಾರ್ಥಿಗಳಿಂದ ಬರಹಗಳನ್ನು ಬರೆಯಿಸಿ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ.
ದಾನಿಗಳ ಮುಖೇನ ಶಾಲೆಯ ಬೆಳವಣಿಗೆಮೊದಲಿಗೆ ಶಾಲೆಯನ್ನು ಸುಂದರಗೊಳಿಸಲು ದಾನಿಗಳು ಹಾಗೂ ಶಿಕ್ಷಕರು ಸೇರಿ ಶಾಲೆಗೆ ಸುಣ್ಣ ಬಣ್ಣವನ್ನುಕೊಡಿಸಿ ಶಾಲೆಯನ್ನು ಮೆರುಗುಗೊಳಿಸಿದರು.
ರೋಟರಿ ಕ್ಲಬ್ ವತಿಯಿಂದ ಬಾವಿಗೆ ರಿಂಗ್ನ ಅಳವಡಿಸಿಶಾಲೆಗೆ ನಿರಂತರವಾಗಿ ನೀರು ಸಿಗುವಂತೆ ಸಹಕರಿಸಿದರು.ಕೊಲ್ನಾಡು ಗ್ರಾಮ ಪಂಚಾಯತ್ನ ಸಹಾಯದಿಂದ ಮೇಲ್ಫಾವಣಿ ರಿಪೇರಿ, ಸಿಂಟೆಕ್ಸ್, ಗೇಟು, ಪೈಪ್ ನವ್ಯವಸ್ಥೆ ಮಾಡಿಕೊಟ್ಟರೆ ಸ್ಥಳೀಯ ದಾನಿಗಳು ಬಾವಿಗೆ ಪಂಪು, ಅಡುಗೆ ಪರಿಕರಗಳು, ಕಿಟಕಿಯ ಗಾಜಿನವ್ಯವಸ್ಥೆ, ಮೇಜು ಕುರ್ಚಿಗಳು, ಕಪಾಟು, ನಲಿ ಕಲಿ ಮಕ್ಕಳಿಗೆ ಮೇಜು ಕುರ್ಚಿಗಳನ್ನು ಅಲ್ಲದೆ ನಗದುರೂಪದಲ್ಲಿಯೂ ಸಹಾಯ ಮಾಡಿರುತ್ತಾರೆ.
ಇಂಗ್ಲೀಷ್ ಕಲಿಕೆಗೆ ಒತ್ತುಇಂಗ್ಲೀಷ್ ಕಲಿಕೆಗೆ ಒತ್ತು ಕೊಟ್ಟು ಇದಕ್ಕಾಗಿ ಪ್ರತ್ಯೇಕ ಶಿಕ್ಷಕಿಯೊಬ್ಬರನ್ನು ಸ್ವಂತ ಖರ್ಚಿನಿಂದನೇಮಕಮಾಡಿರುತ್ತಾರೆ.ಇಂಗ್ಲೀಷ್ ಭಾಷೆಯನ್ನು ಕಲಿಸುವ ಉದ್ದೇಶದಿಂದ ಆನ್ಲೈನ್ ತರಗತಿ, ಕೋವಿಡ್19 ಲಾಕ್ ಡೌನ್ ಸಮಯದಲ್ಲಿ ಇ ವಿದ್ಯಾಲೋಕ ಬೆಂಗಳೂರು ಇವರಿಂದ ಆನ್ಲೈನ್ ತರಗತಿ ಮಾಡಿದ40 ಶಾಲೆಗಳಲ್ಲಿ ಈ ಶಾಲೆಯೂ ಸೇರಿದೆ.
ಇದರಿಂದ ಮಕ್ಕಳು ಇಂಗ್ಲೀಷ್ ಮಾತನಾಡಲುಉತ್ಸುಕರಾಗಿದ್ದಾರೆ.ಕೃಷಿ ಚಟುವಟಿಕೆಯಲ್ಲಿ ಮಕ್ಕಳ ಪಾಲ್ಗೊಳ್ಳುವಿಕೆಮಕ್ಕಳಿಗೆ ಪ್ರಕೃತಿಯೊಂದಿಗೆ ಬೆರೆತು ದುಡಿದು ಬದುಕುವ ಕಲೆ ಗೊತ್ತಾಗಲು ಈ ಶಾಲೆಯ ಮಕ್ಕಳು ಊರಿನವರಸಹಕಾರದೊಂದಿಗೆ ಊರಿನವರ ಗದ್ದೆಯಲ್ಲಿ ಭತ್ತ ಬೆಳೆಸಿ ಬಂದ ಫಸಲನ್ನು ಮಾರಿ ಅದರಿಂದ ಬಂದಲಾಭಾಂಶವನ್ನು ಶಾಲೆಗೆ ನೀಡಿರುತ್ತಾರೆ.
ಅಕ್ಷರ ಕೈತೋಟದ ನಿರ್ಮಾಣಶಾಲೆಯಲ್ಲಿ ಅಕ್ಷರ ಕೈತೋಟ ನಿರ್ಮಿಸಿ ಶಾಲೆಗೆ ಬಿಸಿಯೂಟಕ್ಕೆ ಬೇಕಾದ ತರಕಾರಿಗಳನ್ನು ಹಣ್ಣುಹಂಪಲುಗಳನ್ನು ಮಕ್ಕಳೇ ಬೆಳೆದಿರುತ್ತಾರೆ.ಹಿರಿಯ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಹಿರಿಯ ವಿದ್ಯಾರ್ಥಿಗಳು ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತಿದ್ದು ವಿದ್ಯಾರ್ಥಿ ಸಂಘದವರಿಂದಮಕ್ಕಳಿಗೆ ಉಚಿತ ಸಮವಸ್ತ್ರ ನೀಡಲಾಯಿತು.
ಮಕ್ಕಳಿಗೆ ಉಚಿತ ಪ್ರವಾಸ, ಬೆಳಗ್ಗಿನ ಉಪಹಾರ ವ್ಯವಸ್ಥೆಮಾಡಲಾಯಿತು. ವಿದ್ಯಾರ್ಥಿಗಳಿಗೆ ಶಾಲೆಗೆ ಬರಲು ಅನುಕೂಲವಾಗುವಂತೆ ಇವರ ಜವಾಬ್ದಾರಿಯಿಂದಉಚಿತ ವಾಹನ ವ್ಯವಸ್ಥೆಯನ್ನು ಮಾಡಲಾಯಿತು.
ಅಕ್ಷರ ಸಿರಿ ಪ್ರಶಸ್ತಿಗೆ ಭಾಜನರಾಗುವ ಮೂಲಕ ಇನ್ನಷ್ಟು ಶಿಕ್ಷಕರಿಗೆ ನೀವು ಪ್ರೇರಣೆಯಾಗಿದ್ದೀರಿ ನಿಮಗೆ ಜಿಲ್ಲಾ ಸಂಘದ ಮತ್ತು ತಾಲೂಕು ಘಟಕಗಳ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ. ನಿಮ್ಮಿಂದ ಇನ್ನಷ್ಟು ಸೇವೆ ಇಲಾಖೆಗೆ ಮತ್ತು ಸಮಾಜಕ್ಕೆ ದೊರಕುವಂತಾಗಲಿ ಎಂದು ಹಾರೈಸುತ್ತಿದ್ದೇವೆ.
ಅಕ್ಷರ ಸಿರಿ ಪ್ರಶಸ್ತಿಗೆ ಭಾಜನರಾಗುವ ಮೂಲಕ ಇನ್ನಷ್ಟು ಶಿಕ್ಷಕರಿಗೆ ನೀವು ಪ್ರೇರಣೆಯಾಗಿದ್ದೀರಿ ನಿಮಗೆ ಜಿಲ್ಲಾ ಸಂಘದ ಮತ್ತು ತಾಲೂಕು ಘಟಕಗಳ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ. ನಿಮ್ಮಿಂದ ಇನ್ನಷ್ಟು ಸೇವೆ ಇಲಾಖೆಗೆ ಮತ್ತು ಸಮಾಜಕ್ಕೆ ದೊರಕುವಂತಾಗಲಿ ಎಂದು ಹಾರೈಸುತ್ತಿದ್ದೇವೆ.
ಅಧ್ಯಕ್ಷರು/ಪ್ರಧಾನ ಕಾರ್ಯದರ್ಶಿ/ಸರ್ವ ಪದಾಧಿಕಾರಿಗಳು
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಿ ಬೆಂಗಳೂರುದಕ್ಷಿಣ ಕನ್ನಡ ಜಿಲ್ಲೆ