ವರ್ಗಾವಣೆ ತಿದ್ದುಪಡಿ ಪೂರ್ವಭಾವಿ ಸಭೆ

WhatsApp Group Join Now
Telegram Group Join Now

ಶಿಕ್ಷಕರ ವರ್ಗಾವಣಾ ಕಾಯಿದೆಯ ತಿದ್ದುಪಡಿಯ ಅಂಶಗಳ ಪೂರ್ವಭಾವಿ ಸಭೆ ಇಂದು ಜರುಗಿತು.
ಕರ್ನಾಟಕ ರಾಜ್ಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಕಾಯಿದೆಗೆ ಸಂಬಂಧಿಸಿದಂತೆ ಇಂದು ಶಿಕ್ಷಕರ ವರ್ಗಾವಣಾ ಕಾಯಿದೆಯ ತಿದ್ದುಪಡಿಯ ಅಂಶಗಳ ಪೂರ್ವಭಾವಿ ಸಭೆ ಇಂದು ಜರುಗಿತು.
ಕರ್ನಾಟಕ ರಾಜ್ಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಕಾಯಿದೆಗೆ ಸಂಬಂಧಿಸಿದಂತೆ ಇಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಶಾಲಾ ನಿರ್ದೇಶಕರಾದ ಸನ್ಮಾನ್ಯ ಶ್ರೀ ಕರಚೆನ್ನವರ ಸಾಹೇಬರು ಹಾಗೂ ಶ್ರೀಯುತ ಭೈಯಪರೆಡ್ಡಿ ಅವರ, ಪ್ರಸನ್ನಕುಮಾರ ಅವರ, ನೇತೃತ್ವದಲ್ಲಿ ಶಿಕ್ಷಕರ ವರ್ಗಾವಣೆ ಕಾಯಿದೆ ತಿದ್ದುಪಡಿಗೆ ಸಂಬಂಧಿಸಿದಂತೆ ಸುದೀರ್ಘ 3 ಗಂಟೆಗಳ ಸಭೆ ಜರುಗಿತು. ಹಲವಾರು ಶಿಕ್ಷಕ ಸ್ನೇಹ ತಿದ್ದುಪಡಿ ಅಂಶಗಳೊಂದಿಗೆ
1) ಪರಸ್ಪರ ವರ್ಗಾವಣೆಗೆ ಸಡಿಲಿಕೆ ಮಾಡುವ ಬಗ್ಗೆ,
2) ಅವಧಿ ಮುಗಿಸಿದ ಸಿ.ಆರ್. ಪಿ, ಬಿ.ಆರ್.ಪಿ ಅವರಿಗೆ ವರ್ಗಾವಣೆಯಲ್ಲಿ ಅವಕಾಶ ಕೊಡುವುದು,
3) ಕಲ್ಯಾಣ ಕರ್ನಾಟಕದ ಶಿಕ್ಷಕರಿಗೆ ಅಖಂಡ 10 ವರ್ಷಗಳ ಸೇವೆಯನ್ನು ಸಲ್ಲಿಸಿದ ಶಿಕ್ಷಕರಿಗೆ ವರ್ಗಾವಣೆ ಕೊಡುವುದು.
4) ವಿಧವಾ ಪ್ರಕರಣ, ವಿಶೇಷ ಶಿಕ್ಷಕರ ಪ್ರಕರಣ ಹಲವಾರು ಅಂಶಗಳ ಬಗ್ಗೆ ತಿದ್ದುಪಡಿತರಲು ಸುಧೀರ್ಘವಾಗಿ ಚರ್ಚಿಸಲಾಯಿತು.
ಆಯುಕ್ತರ ನಿರ್ದೇಶನದಂತೆ ಸಭೆ ನಡೆಸಿದ ನಿರ್ದೇಶಕರಿಗೆ ಹಾಗೂ ಎಲ್ಲರಿಗೂ ಅನಂತ ಅನಂತ ಧನ್ಯವಾದಗಳು ಬರುವ ಫೆಬ್ರುವರಿ ಬಜೆಟ್ ನಲ್ಲಿ ಕಾಯ್ದೆಯನ್ನು ತಿದ್ದುಪಡಿ ಮಾಡಿ ವರ್ಗಾವಣೆ ಪ್ರಾರಂಭ ಮಾಡಲು ವಿನಂತಿಸಲಾಯಿತು.
ಸಭೆಯಲ್ಲಿ ಪರಮೇಶ್ವರ ಓಕಳಿ, ಮಹೇಶ ಗಾಳಪ್ಪಗೋಳ ಉಪಸ್ಥಿತರಿದ್ದರು.

1000809773
WhatsApp Group Join Now
Telegram Group Join Now
Sharing Is Caring:

Leave a Comment