ಮುಷ್ಕರದ ದಿನವನ್ನು ಅರ್ಹ ರಜೆ ಎಂದು ಪರಿಗಣಿಸಲಾಗಿದೆ.

WhatsApp Group Join Now
Telegram Group Join Now

ವಿಷಯ:

ದಿನಾಂಕ:01-03-2023ರಂದು ರಾಜ್ಯ ಸರ್ಕಾರಿ ನೌಕರರು ಮುಷ್ಕರ ಮಾಡಿಗೈರುಹಾಜರಾದುದನ್ನು ನೌಕರರ ಹಕ್ಕಿನಲ್ಲಿರುವ ಅಥವಾ ಪಡೆಯಲು ಅರ್ಹರಿರುವ ರಜೆ ಎಂದು ಪರಿಗಣಿಸುವ ಬಗ್ಗೆ.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕರೆಯ ಮೇರೆಗೆ ದಿನಾಂಕ: 01.03.2023ರಂದುನಡೆದ ಮುಷ್ಕರದಲ್ಲಿ ಭಾಗವಹಿಸಿದ ಕಾರಣದಿಂದಾಗಿ ಕಛೇರಿಗೆ ಗೈರು ಹಾಜರಾದ ನೌಕರರಿಗೆ ಅಂದಿನ ದಿನವನ್ನು ನೌಕರರ ಹಕ್ಕಿನಲ್ಲಿರುವ ಮತ್ತು ಪಡೆಯಲು ಅರ್ಹರಿರುವ ರಜೆ ಎಂದು ಪರಿಗಣಿಸಿ ಆದೇಶ ಹೊರಡಿಸಲು ಮೇಲೆ ಓದಲಾದ ಪತ್ರದನ್ವಯ ಅಧ್ಯಕ್ಷರು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಬೆಂಗಳೂರು ಇವರು ಸರ್ಕಾರವನ್ನು ಕೋರಿದ್ದು, ಈ ಕೋರಿಕೆಯನ್ನು ಪರಿಶೀಲಿಸಿ, ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 19 ಸೇನಿಸಿ 2023, ಬೆಂಗಳೂರು, ದಿನಾಂಕ: 27-03-2023

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕರೆಯ ಮೇರೆಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ದಿನಾಂಕ:01.03.2023ರಂದು ಮುಷ್ಕರ ಮಾಡಿ ಕಚೇರಿಗೆ ಗೈರು ಹಾಜರಾದುದನ್ನು, ಆ ದಿನಾಂಕದಂದು ನೌಕರರ ಹಕ್ಕಿನಲ್ಲಿರುವ ರಜೆ ಅಥವಾ ಪಡೆಯಲು ಅರ್ಹರಿರುವ ರಜೆ ಎಂದು ಪರಿಗಣಿಸಲು ಆದೇಶಿಸಿದೆ.

ಈ ಆದೇಶವನ್ನು ಆರ್ಥಿಕ ಇಲಾಖೆಯ ದಿನಾಂಕ: 24.03.2023ರ ಟಿಪ್ಪಣಿ ಸಂಖ್ಯೆ: ಆಇ240 ವೆಚ್ಚ-12/2023 ರಲ್ಲಿನ ಸಹಮತಿಯೊಂದಿಗೆ ಹೊರಡಿಸಲಾಗಿದೆ.

WhatsApp Group Join Now
Telegram Group Join Now
Sharing Is Caring:

Leave a Comment