ಗುರುಭ್ಯೋ ನಮಃ
ನಿಮ್ಮ ನಿವೃತ್ತಿ ಜೀವನ ಸುಖಕರವಾಗಿರಲಿ
ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸೇವೆಯನ್ನು ಸಲ್ಲಿಸಿ ಅದೆಷ್ಟೋ ವಿದ್ಯಾರ್ಥಿಗಳ ಜೀವನವನ್ನು ಬೆಳಗಿಸಿ ಸಾರ್ಥಕ್ಯವನ್ನು ಪಡೆದು ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿರುವ ಶಿಕ್ಷಕರ ಪರಿಚಯವನ್ನು ತಮ್ಮ ಮುಂದಿಡಲು ಹೆಮ್ಮೆ ಪಡುತ್ತಿದ್ದೇವೆ.
ಶ್ರೀಮತಿ ಮೋನಿಕಾ ಮಸ್ಕರೇನಸ್
ಸ.ಉ.ಪ್ರಾ ಶಾಲೆ ಬೊಳಿಯಾರ್ ಮಂಗಳೂರು ದಕ್ಷಿಣ
ದಿನಾಂಕ 12.10.1961 ರಲ್ಲಿ ಜನಿಸಿದ ಇವರು 29.11.1989 ರಂದು ಸೇವೆಗೆ ಸೇರಿದರು. ದಿನಾಂಕ 30.10.2021 ರಂದು ಸ.ಉ.ಪ್ರಾ ಶಾಲೆ ಬೊಳಿಯಾರ್ ನಲ್ಲಿ ಸೇವಾ ನಿವೃತ್ತಿ ಹೊಂದುತ್ತಿದ್ದಾರೆ. ಇವರ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಹಾರೈಸುತ್ತೇವೆ.
ಶ್ರೀಮತಿ ಲಿಲ್ಲಿ ಮಸ್ಕರೇನಸ್
ಸಹಶಿಕ್ಷಕರು
ಸ.ಹಿ.ಪ್ರಾ ಶಾಲೆ ಬದ್ರಿಯಾ ನಗರ
ಮಂಗಳೂರು ದಕ್ಷಿಣ
19.10.1961 ರಂದು ಜನಿಸಿದ ಇವರು 12.01.1999 ರಲ್ಲಿ ಸೇವೆಗೆ ಸೇರಿದರು. 22 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ ಇವರು ಈ ತಿಂಗಳು ಸ.ಹಿ.ಪ್ರಾ ಶಾಲೆ ಬದ್ರಿಯಾ ನಗರದಲ್ಲಿ ನಿವೃತ್ತಿ ಹೊಂದುತ್ತಿದ್ದಾರೆ. ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ಪ್ರಭಾ ಕೆ
ಸ.ಹಿ.ಪ್ರಾ.ಶಾಲೆ ಕಾಟಿಪಳ್ಳ
ಮಂಗಳೂರು ಉತ್ತರ
08.10.1961 ರಲ್ಲಿ ಜನಿಸಿದ ಇವರು 01.12.1988 ರಲ್ಲಿ ಸ.ಕಿ.ಪ್ರಾ. ಶಾಲೆ ಕೆಮ್ರಾಲ್ ಅತ್ತೂರ್ ನಲ್ಲಿ ಸೇವೆಗೆ ಸೇರಿದರು. ಮುಂದೆ ಮುಲ್ಲಕಾಡು ಕಣ್ಣೋರಿ ಎಡಪದವು ಶಾಲೆಗಳಲ್ಲಿ ಸೇವೆ ಸಲ್ಲಿಸಿಈ ತಿಂಗಳು ಸ.ಹಿ.ಪ್ರಾ ಶಾಲೆ ಕಾಟಿಪಳ್ಳ 3 ಇಲ್ಲಿ ಸೇವಾ ನಿವೃತ್ತಿ ಹೊಂದುತ್ತಿದ್ದಾರೆ. ಮಕ್ಕಳ ಜೀವನ ಬೆಳಗಲು ಶ್ರಮಿಸಿದ ತಮ್ಮ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸುತ್ತೇವೆ
ಶ್ರೀಮತಿ ಮೇರಿ ಫಿಲೋಮಿನಾ ಪಿರೇರಾ
ಶಿಕ್ಷಕರು
ಸ.ಹಿ.ಪ್ರಾ ಶಾಲೆ ಕವತ್ತಾರು ಮಂಗಳೂರು ಉತ್ತರ
22.10.1961 ರಲ್ಲಿ ಜನಿಸಿದ ಇವರು 29.11.2003 ರಲ್ಲಿ ಸೇವೆಗೆ ಸೇರಿದರು. ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ಇವರು ಈ ತಿಂಗಳು ಸ.ಕಿ.ಪ್ರಾ.ಶಾಲೆ ಕವತ್ತಾರುವಿನಲ್ಲಿ ಈ ತಿಂಗಳು ಸೇವಾ ನಿವೃತ್ತಿ ಹೊಂದುತ್ತಿದ್ದಾರೆ. ತಮ್ಮ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಹಾರೈಸುತ್ತೇವೆ.
ಶ್ರೀಮತಿ ಗ್ರೇಸಿ ಹಿಲ್ಡಾ ಎಂ ಕ್ರಾಸ್ತಾ
ದ.ಕ.ಜಿ.ಪಂ ಹಿ.ಪ್ರಾ ಶಾಲೆ ಬೈಕಂಪಾಡಿ ಮಂಗಳೂರು ಉತ್ತರ ತಾಲೂಕು
ದಿನಾಂಕ 25-10-1961 ರಂದು ಜನಿಸಿದ ಇವರು 17.011996 ರಲ್ಲಿ ಸ.ಹಿ.ಪ್ರಾ.ಶಾಲೆ ಬನ್ನೂರು ಪುತ್ತೂರಿನಲ್ಲಿ ಸೇವೆಗೆ ಸೇರಿದರು. ಮುಂದೆ ತಾರಿಕರಿಯ ಗುರುಪುರದಲ್ಲಿ ಕರ್ತವ್ಯ ನಿರ್ವಹಿಸಿ ಇದೀಗ ಸ.ಹಿ.ಪ್ರಾ ಶಾಲೆ ಬೈಕಂಪಾಡಿಯಲ್ಲಿ ನಿವೃತ್ತರಾಗುತ್ತಿದ್ದಾರೆ.
ಪ್ರಾಮಾಣಿಕತೆ ಹಾಗೂ ದಕ್ಷತೆಯಿಂದ ವಿದ್ಯಾರ್ಥಿಗಳ ಅಭಿವೃದ್ಧಿಗೆ ತನ್ನನ್ನು ತಾನು ತೊಡಗಿಸಿಕೊಂಡ ತಮ್ಮ ಮುಂದಿನ ನಿವೃತ್ತಿ ಜೀವನವು ಉಜ್ವಲವಾಗಲಿ ಎಂದು ಹಾರೈಸುತ್ತೇವೆ.
ಶ್ರೀಮತಿ ಗಟ್ರೂಡ್ ಡಿಸೋಜ
ಸ.ಹಿ.ಪ್ರಾ.ಶಾಲೆ ಮಂಕುಡೆ
ಬಂಟ್ವಾಳ ತಾಲೂಕು
ಶ್ರೀ ಲಾರೆನ್ಸ್ ಡಿಸೋಜ ಹಾಗೂ ಶ್ರೀಮತಿ ಸೆವ್ರಿನ್ ಡಿಸೋಜಾ ದಂಪತಿಗಳ ಪುತ್ರಿಯಾಗಿ ಕರೋಪಾಡಿ ಗ್ರಾಮದ ವಿಜಯಡ್ಕ ಎಂಬಲ್ಲಿ ದಿನಾಂಕ 04-10-1961 ರಲ್ಲಿ ಜನಿಸಿ, ಪ್ರಾಥಮಿಕ ಶಿಕ್ಷಣವನ್ನು ಲಾರೆನ್ಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ವಿಜಯಡ್ಕ ಇಲ್ಲಿ, ಪ್ರೌಢಶಿಕ್ಷಣವನ್ನು ಸ್ಟೆಲ್ಲಾ ಮೇರಿಸ್ ಗರ್ಲ್ಸ್ ಹೈಸ್ಕೂಲ್ ಇಲ್ಲಿ, ಹಾಗೂ ಟಿಸಿಎಚ್ ಶಿಕ್ಷಣವನ್ನು ಸೈಂಟ್ ಅನ್ನಸ್ ಟಿ ಟಿ ಐ ಮಂಗಳೂರು ಇಲ್ಲಿ ಮುಗಿಸಿರುತ್ತೀರಿ. ದಿನಾಂಕ 08- 02-1990 ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮೋಂತಿಮಾರು, ಇಲ್ಲಿ ವೃತ್ತಿ ಜೀವನ ಆರಂಭಿಸಿ ಶಿಕ್ಷಕಿಯಾಗಿ 6 ವರ್ಷಗಳ ಕಾಲ ಸೇವೆ ಸಲ್ಲಿಸಿ, ದಿನಾಂಕ 17-01-1996 ರಿಂದ 2016ರವರೆಗೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕನ್ಯಾನ ಇಲ್ಲಿ ಸೇವೆ ಸಲ್ಲಿಸಿ, ನಂತರ ಭಡ್ತಿ ಹೊಂದಿ ದಿನಾಂಕ 22-01-2016 ರಿಂದ 30 -10- 2021 ರವರೆಗೆ ಮುಖ್ಯ ಶಿಕ್ಷಕಿಯಾಗಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮಂಕುಡೆ ಇಲ್ಲಿ ಕರ್ತವ್ಯ ನಿರ್ವಹಿಸಿರುತ್ತೀರಿ.
ಶಿಕ್ಷಕಿಯಾಗಿ ನಿಷ್ಠೆ, ಪ್ರಾಮಾಣಿಕತೆ ಹಾಗೂ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿ ವಿದ್ಯಾರ್ಥಿಗಳ, ಪೋಷಕರ ಹಾಗೂ ಸಹೋದ್ಯೋಗಿಗಳ ಪ್ರೀತಿ-ವಿಶ್ವಾಸಕ್ಕೆ ಪಾತ್ರರಾಗಿರುತ್ತೀರಿ. ಕಬ್ಸ್ ನಲ್ಲಿ ಉತ್ತಮ ಸಾಧನೆ ಮಾಡಿದ ನೀವು ಹಿಮಾಲಯ ವುಡ್ ಬ್ಯಾಡ್ಜ್ ಅನ್ನು ಪಡೆದಿರುತ್ತೀರಿ. ದಿನಾಂಕ 31- 10- 2021 ರಂದು ನಿವೃತ್ತಿ ಹೊಂದುತ್ತಿರುವ ನಿಮ್ಮ ಮುಂದಿನ ನಿವೃತ್ತಿ ಜೀವನವು ಉಜ್ವಲವಾಗಲಿಎಂದು ಹಾರೈಸುತ್ತೇವೆ.
ಶ್ರೀಮತಿ ಪ್ರೆಸಿಲ್ಲಾ ಪೆರ್ನಾಂಡಿಸ್
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಪ್ರಾಥಮಿಕ ಶಾಲೆ ಕೊಡ್ಮಾಣ್, ಬಂಟ್ವಾಳ ತಾಲೂಕು
ಶ್ರೀ ಆಲ್ಬರ್ಟ್ ಫೆರ್ನಾಂಡಿಸ್ ಹಾಗೂ ಶ್ರೀಮತಿ ಅನ್ನ ಮಾರಿಯ ಡಿಸೋಜ ದಂಪತಿಗಳ ಪುತ್ರಿಯಾಗಿ ದಿನಾಂಕ 13-10-1961 ರಲ್ಲಿ ಅಮ್ಮುಂಜೆ ಗ್ರಾಮದ ಮೂಡಾಯಿಕೋಡಿ ಯಲ್ಲಿ ಜನಿಸಿ, ಪ್ರಾಥಮಿಕ ಶಿಕ್ಷಣವನ್ನು ಸೈಂಟ್ ಮೈಕೆಲ್ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ತೆಂಕಬೆಳ್ಳೂರು ಇಲ್ಲಿ, ಪ್ರೌಢಶಿಕ್ಷಣವನ್ನು ಸ್ಟೆಲ್ಲಾ ಮೇರಿಸ್ ಗರ್ಲ್ಸ್ ಹೈಸ್ಕೂಲ್ ಗಂಗೊಳ್ಳಿಯಲ್ಲಿ, ಟಿ.ಸಿ.ಎಚ್ ಶಿಕ್ಷಣವನ್ನು ಸೈಂಟ್ ಅನ್ನಸ್ ಟಿ ಟಿ ಐ ಮಂಗಳೂರು ಇಲ್ಲಿ ಮುಗಿಸಿರುತ್ತೀರಿ. 1985ರಲ್ಲಿ ಜೋಸೆಫ್ ಫೆರ್ನಾಂಡಿಸ್ ಇವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿರಿಸಿ ಇಬ್ಬರು ಮಕ್ಕಳನ್ನು ಪಡೆದು, ದಿನಾಂಕ 18-12-1993ರಲ್ಲಿ ಶಿಕ್ಷಕಿಯಾಗಿ ವೃತ್ತಿಜೀವನವನ್ನು ಆರಂಭಿಸಿದಿರಿ. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೆಳಗೂರು, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತ್ ಹಿರಿಯ ಪ್ರಾಥಮಿಕ ಶಾಲೆ ಸುಜೀರು, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕೊಡ್ಮಾಣ್, ಹೀಗೆ ನಾನಾ ಶಾಲೆಗಳಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿರುತ್ತೀರಿ.
ಪ್ರಭಾವತಿ ಪಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಡ್ನೂರು
ಮಂಗಳೂರು ದಕ್ಷಿಣ
ದಿನಾಂಕ 28-11-2003 ರಲ್ಲಿ ಸೇವೆಗೆ ಸೇರಿದ ಇವರಿಗೆ ಮಕ್ಕಳೆಂದರೆ ತುಂಬಾ ಪ್ರೀತಿ ಅತ್ಯಂತ ಹುರುಪಿನಿಂದ ತನ್ನ ನಿವೃತ್ತ ದಿನಾಂಕದ ವರೆಗೆ ಉತ್ತಮ ಸೇವೆಯನ್ನು ನೀಡಿರುತ್ತಾರೆ.ತಮ್ಮ ಉತ್ತಮ ಗುಣ ನಡತೆಯಿಂದ ಮಕ್ಕಳ ಶಿಕ್ಷಕರ ಊರವರ ಪ್ರೀತಿಗೆ ಪಾತ್ರರಾದ ಇವರು ದಿನಾಂಕ 31-10-2021 ರಂದು ನಿವೃತ್ತಿ ಹೊಂದಿರುತ್ತಾರೆ .ಅವರ ನಿವೃತ್ತಿ ಜೀವನವು ಸುಖಮಯ ಆಗಿರಲಿ ಎಂದು ಹಾರೈಕೆ.
ಶಿಕ್ಷಕರಾಗಿ ನಿಷ್ಠೆ, ಪ್ರಾಮಾಣಿಕತೆ ಹಾಗೂ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿ ವಿದ್ಯಾರ್ಥಿಗಳ, ಪೋಷಕರ ಹಾಗೂ ಸಹೋದ್ಯೋಗಿಗಳ ಪ್ರೀತಿ-ವಿಶ್ವಾಸಕ್ಕೆ ಪಾತ್ರರಾಗಿರುತ್ತೀರಿ. ದಿನಾಂಕ 31- 10- 2021 ರಂದು ನಿವೃತ್ತಿ ಹೊಂದುತ್ತಿರುವ ನಿಮ್ಮ ಮುಂದಿನ ನಿವೃತ್ತಿ ಜೀವನವು ಉಜ್ವಲವಾಗಲಿ ಎಂದು ಹಾರೈಸುತ್ತೇವೆ.
ಈ ತಿಂಗಳು ಸೇವಾ ನಿವೃತ್ತಿ ಹೊಂದುತ್ತಿರುವ ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಭಗವಂತನು ಆಯುರಾರೋಗ್ಯ ಭಾಗ್ಯವನ್ನು ನೀಡಲಿ ಎಂದು ಪ್ರಾರ್ಥಿಸುತ್ತೇವೆ. ವಿದ್ಯಾದಾನದ ಮೂಲಕ ಸಹಸ್ರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶ್ರಮಿಸಿದ ನಿಮ್ಮೆಲ್ಲರ ಭವಿಷ್ಯ ಉಜ್ವಲವಾಗಲಿ ಎಂದು ಸಂಘದ ಗುರುಭ್ಯೋ ನಮಃ ಕಾರ್ಯಕ್ರಮದಲ್ಲಿ ಶುಭ ಕೋರುತ್ತಾ ಗೌರವಪೂರ್ಣವಾಗಿ ನಿಮಗೆ ವಂದಿಸುತ್ತಿದ್ದೇವೆ.