ಮುಖ್ಯ ಮಾಹಿತಿ :
ಆತ್ಮೀಯ
ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರುಗಳ ತುರ್ತು ಕ್ರಮಕ್ಕಾಗಿ
ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಸಹಶಿಕ್ಷಕರ ಮತ್ತು ಮುಖ್ಯ ಶಿಕ್ಷಕರ ಹಾಗೂ ತತ್ಸಮಾನ ವೃಂದದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರ. ಎಲ್ಲಾ ಅಧಿಕಾರಿಗಳ ಮಾಹಿತಿಯ ಇಂದೀಕರಣಕ್ಕೆ, ಸಂಬಂಧಿಸಿದಂತೆ. ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಇಇಡಿಎಸ್ ನಲ್ಲಿ ಇರುವ ಸೇವಾ ಮಾಹಿತಿಯು ಅಂತಿಮವಾಗಿರುವುದರಿಂದ ಈ ಕೆಳಕಂಡ ಅಂಶಗಳ ಸೇವಾ ವಿವರಗಳನ್ನು ನಿಖರವಾಗಿ ಪರಿಶೀಲಿಸಿಕೊಂಡು ಇ.ಇ.ಡಿ.ಎಸ್ ತಂತ್ರಾಂಶದಲ್ಲಿ ದಿನಾಂಕ:15/03/2025 ರೊಳಗೆ ಸರಿಪಡಿಸಿಕೊಳ್ಳಲು ಸೂಚಿಸಿದೆ.
- ಶಿಕ್ಷಕರ ಕ್ರಮಬದ್ರವಾದ ಪ್ರಥಮ ಕೆ.ಜಿ.ಐ.ಡಿ ಸಂಖ್ಯೆ ನಮೂದಾಗಿರುವ ಬಗ್ಗೆ ಪರಿಶೀಲಿಸುವುದು.
- ಶಿಕ್ಷಕರ ಹೆಸರು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಕ್ರಮಬದ್ಧವಾಗಿರುವ ಬಗ್ಗೆ, ಪರಿಶೀಲಿಸುವುದು. ಕನ್ನಡ ಹಾಗೂ ಆಂಗ್ಲ ಹೆಸರುಗಳನ್ನು ಶಿಕ್ಷಕರ ಸೇವಾವಹಿ ಹಾಗೂ ಎಸ್.ಎಸ್.ಎಲ್.ಸಿ. ಅಂಕಪಟ್ಟಿಯಲ್ಲಿ ಇರುವಂತೆ ಸರಿಯಾದ ಮಾಹಿತಿಯನ್ನು ಇಂದೀಕರಿಸಿಕೊಳ್ಳುವುದು.
- ಶಿಕ್ಷಕರ ಜನ್ಮ ದಿನಾಂಕ. ಸೇವೆಗೆ ಸೇರಿದ ದಿನಾಂಕ. ಪ್ರಸ್ತುತ ವೃಂದಕ್ಕೆ ಸೇರಿದ ದಿನಾಂಕ ಮುಂತಾದ ಅಂಶಗಳು ಕ್ರಮಬದ್ರವಾಗಿ ನಮೂದಾಗಿರುವ ಬಗೆ, ಮತ್ತೊಮ್ಮೆ ಪರಿಶೀಲಿಸಿಕೊಳ್ಳುವುದು.
- ಶಿಕ್ಷಕರ ಸೇವಾ ವಿವರದಲ್ಲಿ ಯಾವುದೇ ಅಂಕಣ ಖಾಲಿ ಉಳಿಯದಂತೆ ಮತೊಮ್ಮೆ ಪರಿಶೀಲಿಸಿಕೊಳ್ಳುವುದು
- ಶಿಕ್ಷಕರ ಪದನಾಮ, ಆಯ್ಕೆ ಮಾಡುವಾಗ ಗ್ರೇಡ್ 1, ಗ್ರೇಡ್-2 ಎಂದು ಸರಿಯಾಗಿ ಪರಿಶೀಲಿಸಿಕೊಳ್ಳುವುದು. ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪ್ರೌಢಶಾಲಾ ಶಿಕ್ಷಕರೆಂದು ತಪ್ಪಾಗಿ ನಮೂದಾಗಿದ್ದಲ್ಲಿ ಕೂಡಲೇ ಪರಿಶೀಲಿಸಿ ಕಛೇರಿಗೆ ವರದಿ ಮಾಡುವುದು.
- ಶಿಕ್ಷಕರು ಕಾರ್ಯನಿರ್ವಹಿಸುತ್ತಿರುವ ಆದ್ಯತಾ ವಲಯ (ಎ/ಬಿ/ಸಿ ಜೋನ್) ಪರಿಶೀಲಿಸಿಕೊಳ್ಳುವುದು.
- ಶಿಕ್ಷಕರ ವಿನಾಯಿತಿಗೆ ಸಂಬಂಧಿಸಿದ ಎಲ್ಲಾ ವಿವರ ಕ್ರಮಬದ್ರವಾಗಿ ನಮೂದಾಗಿರುವ ಬಗ್ಗೆ ಪರಿಶೀಲಿಸಿಕೊಳ್ಳುವುದು.
- ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಶಾಲೆ/ಕಛೇರಿಯಲ್ಲಿಯೇ ಆ ಶಿಕ್ಷಕರು/ಸಿಬ್ಬಂದಿ ಮ್ಯಾಪಿಂಗ್ ಆಗಿರುವ ಬಗ್ಗೆ, ಕಡ್ಡಾಯವಾಗಿ ಪರಿಶೀಲಿಸಿಕೊಳ್ಳುವುದು.
- ಶಿಕ್ಷಕರ ಬೋಧನಾ ವಿಷಯ , ಖಾಯಂಪೂರ್ವ ಅವಧಿ ಘೋಷಣೆ ಮಾಹಿತಿ ಮತ್ತು ಪತಿ ಅಥವಾ ಪತ್ನಿ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲೆ ಮತ್ತು ಕಂದಾಯ ತಾಲ್ಲೂಕನ್ನು ಕಡ್ಡಾಯವಾಗಿ ಹಾಗೂ ಸರಿಯಾಗಿ ಪರಿಶೀಲಿಸಿಕೊಳ್ಳುವುದು.
- ಸೇವಾ ವಿವರಗಳಾದ ಸೇವೆಗೆ ಸೇರಿದ ದಿನಾಂಕ. ಶಾಲೆ ವಲಯ. ಕಾರ್ಯ ನಿರ್ವಹಿಸಿದ ಅವಧಿಯನ್ನು ಕ್ರಮ ಬದ್ದವಾಗಿ ಪರಿಶೀಲಿಸಿಕೊಳ್ಳುವುದು.
ಶಿಕ್ಷಕರ ಸರ್ವಿಸ್ ಡೀಟೇಲ್ಸ್ ನಲ್ಲಿ ಶಾಲಾ ವಲಯ ವಿವರ, ಈಗಿನ ಶಾಲೆಗೆ ಬಂದ ದಿನಾಂಕ, ವೃಂದ, ವಿಷಯ ಹಾಗೂ ಇನ್ನಿತರೆ ವರ್ಗಾವಣೆ ಪ್ರಕ್ರಿಯೆ ಸಂಬಂಧಿಸಿದ ಸಾಮಾನ್ಯ ಮಾಹಿತಿಯನ್ನು ಸರಿಪಡಿಸಿಕೊಳ್ಳಲು ಹಾಗೂ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ಕೋರಿದೆ.
ಶಿಕ್ಷಕರ ವರ್ಗಾವಣೆಯ ಭಾಗವಾಗಿ Weighted ಅಂಕಗಳನ್ನು ಶಿಕ್ಷಕ ಮಿತ್ರ ಲಾಗಿನ್ ನಲ್ಲಿ ಪ್ರಕಟಿಸಲಾಗಿದೆ. ಪರಿಶೀಲಿಸಿಕೊಳ್ಳಲು ಜ್ಞಾಪನ ಹೊರಡಿಸಲಾಗಿದೆ….
ಆಕ್ಷೇಪಣೆ ಸಲ್ಲಿಸಲು 20/03/25 ಕಡೆಯ ದಿನಾಂಕವಾಗಿರುತ್ತದೆ.