“ವಿಶ್ವ ಪರಿಸರ ದಿನಾಚರಣೆ” ಜೂನ್-5 ರಂದು ಶಾಲಾ – ಕಾಲೇಜುಗಳ
ಹಂತದಲ್ಲಿ ಪರಿಸರ ಸಂರಕ್ಷಣೆ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು
ಪರಿಸರದ ಸುಸ್ಥಿರ ಬೆಳವಣಿಗೆಯಲ್ಲಿ ಶಾಲಾ ಮಕ್ಕಳ ಪಾತ್ರ ಪ್ರಮುಖವಾಗಿದೆ. ಈ
ಹಿನ್ನಲೆಯಲ್ಲಿ “ವಿಶ್ವ ಪರಿಸರ ದಿನಾಚರಣೆ “ಅಂಗವಾಗಿ ಶಾಲಾ ಹಂತದಲ್ಲಿ “ಪರಿಸರ
ಸಂರಕ್ಷಣೆ ಕುರಿತು ಮಕ್ಕಳಿಗೆ ಜಾಗೃತಿ ಮೂಡಿಸುವ ಚಟುವಟಿಕೆಗಳನ್ನು ಹಮ್ಮಿಕೊಂಡು
ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ ಮಾಡುವಂತೆ ಪ್ರೇರೇಪಿಸುವುದು.
ವಿಶ್ವಪರಿಸರ ದಿನಾಚರಣೆಯಂದು ಶಿಕ್ಷಕರು ಶಾಲಾ – ಕಾಲೇಜುಗಳ ಹಂತದಲ್ಲಿ
ಹಮ್ಮಿಕೊಳ್ಳಬೇಕಾದ ಚಟುವಟಿಕೆಗಳು:
- ಜೂನ್-5 ರಂದು ಶಿಕ್ಷಕರು ಶಾಲಾ-ಕಾಲೇಜುಗಳ ಆವರಣದಲ್ಲಿ ಸಸಿಗಳನ್ನು ನೆಟ್ಟು ಮಕ್ಕಳಿಗೆ ದತ್ತು ನೀಡಿ, ಅವುಗಳನ್ನು ಪೋಷಿಸುವುದರ ಮೂಲಕ ಶಾಲಾ
ಕಾಲೇಜುಗಳನ್ನು ಹಸಿರು ವಾತಾವರಣವನ್ನಾಗಿ ರೂಪಿಸುವುದು. - ಶಾಲಾ ಕಾಲೇಜುಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ತ್ಯಜಿಸುವುದು ಹಾಗೂ ಪ್ಲಾಸ್ಟಿಕ್ ಮುಕ್ತ ಶಾಲಾ-ಕಾಲೇಜುಗಳನ್ನಾಗಿ ಪರಿವರ್ತಿಸುವುದು.
- ಶಾಲೆಗಳಲ್ಲಿ ಅಡುಗೆ ಮನೆಯಿಂದ ಹೊರ ಹೋಗುವ ತ್ಯಾಜ್ಯ ನೀರಿನಿಂದ ಶಾಲಾ
ಕೈತೋಟ ನಿರ್ಮಿಸುವುದು - ಮಕ್ಕಳಿಗೆ ತ್ಯಾಜ್ಯದ ವಿಲೇವಾರಿ ಬಗ್ಗೆ ಜಾಗೃತಿ ಮೂಡಿಸಿ ಶಾಲಾ- ಕಾಲೇಜುಗಳ
ಪರಿಸರವನ್ನು ಸ್ವಚ್ಛವಾಗಿಟ್ಟು, ಕೊಳ್ಳುವುದು - ಶಿಕ್ಷಕರು ಪರಿಸರ ಮಾಲಿನ್ಯದಿಂದ (ಹವಾಮಾನ ವ್ಯಪರಿತ್ಯ ಉಂಟಾಗುವ
ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದು. - ಶಾಲಾ ಮಕ್ಕಳಿಂದ ಜಾಥಾ ಹೊರಟು ಘೋಷಣೆಗಳನ್ನು ಕೂಗಿ ಸಮುದಾಯದಲ್ಲಿ
ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವುದು. - ನೀರಿನ ಮಿತ ಬಳಕೆ ಹಾಗೂ ನೀರಿನ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸುವುದು.
- ಪರಿಸರ ಸಂರಕ್ಷಣೆ ಕುರಿತು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ, ಚರ್ಚಾ ಸ್ಪರ್ಧೆ
ರಸಪ್ರಶ್ನೆ ಸ್ಪರ್ಧೆ, ಭಾಷಣ ಸ್ಪರ್ಧೆ, ಘೋಷವಾಕ್ಯಗಳ ರಚನೆ, ಕವನ, ವ್ಯಂಗ್ಯ ಚಿತ್ರಗಳ
ರಚನೆ ಹಾಗೂ ಚಿತ್ರಕಲೆ ಮುಂತಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು.