ಭಾರತ ಸಂವಿಧಾನದ ಪೀಠಿಕೆಯನ್ನು ವಿದ್ಯಾರ್ಥಿಗಳು ಪ್ರತಿ ದಿನ ಶಾಲಾ ಪ್ರಾರ್ಥನೆಯ
ಸಮಯದಲ್ಲಿ ಓದಲು ಕ್ರಮವಹಿಸುವಂತೆ ಮತ್ತು ಭಾರತದ ಸಂವಿಧಾನದ ಪೀಠಿಕೆಯನ್ನು ಎಲ್ಲಾ
ಶಾಲೆಗಳಲ್ಲಿ ಪ್ರದರ್ಶಿಸುವಂತೆ ಕ್ರಮವಹಿಸಲು ಮಾನ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ
ಸಚಿವರು ಸೂಚಿಸಿರುತ್ತಾರೆ.
ಉಲ್ಲೇಖ-1ರ ಆದೇಶದಲ್ಲಿ ರಾಜ್ಯದ ಎಲ್ಲಾ ಶೈಕ್ಷಣಿಕ ಸಂಸ್ಥೆಗಳಲ್ಲಿನ ವಿದ್ಯಾರ್ಥಿಗಳು ಹಾಗೂ
ಶಿಕ್ಷಕರು ಪ್ರಾರ್ಥನಾ ಸಮಯದಲ್ಲಿ ಸಂವಿಧಾನ ಪೀಠಿಕೆಯನ್ನು ಓದುವುದು ಹಾಗೂ ಎಲ್ಲರೂ
ಸಂವಿಧಾನದ ಪೀಠಿಕೆಗೆ ಬದ್ಧರಾಗುವುದು, ಸಾಂವಿಧಾನಿಕ ತತ್ತ್ವಗಳನ್ನು ತಮ್ಮ ಜೀವನ ಹಾಗೂ
ಕರ್ತವ್ಯಗಳಲ್ಲಿ ಅಳವಡಿಸಿಕೊಳ್ಳಲು ಪ್ರತಿಜ್ಞೆಗೈಯುವುದು ಎಂದು ಆದೇಶಿಸಲಾಗಿರುತ್ತದೆ.
ಉಲ್ಲೇಖಿತ (2) ರ ಆದೇಶದಲ್ಲಿ, ಭಾರತ ಸರ್ಕಾರದ ಕಾನೂನು ಮತ್ತು ನ್ಯಾಯ ಮಂತ್ರಾಲಯ
ವಿಧಾಯಿ ಇಲಾಖೆ ಪ್ರಕಟಿಸಿರುವ ಸಂವಿಧಾನ ಪೀಠಿಕೆಯ ಕನ್ನಡ ಮತ್ತು ಆಂಗ್ಲ ಭಾಷೆಯ
ಆವೃತ್ತಿಯನ್ನು ಬಳಸಿಕೊಳ್ಳುವ ಸಂಬಂಧ ಪೀಠಿಕೆ ಮಾದರಿಯನ್ನು ನೀಡಲಾಗಿದೆ. ಸದರಿ ಮಾದರಿಯಂತೆ, ಸರ್ಕಾರದ ಆದೇಶ ಸಂಖ್ಯೆ:ಸಕಇ 69 ಪಕವಿ 2023 ದಿನಾಂಕ:30.06.2023ರ
ನಿರ್ದೇಶನದಂತೆ ಎಲ್ಲಾ ಕಛೇರಿಗಳಲ್ಲಿ ಪ್ರದರ್ಶಿಸಲು ಮತ್ತು ಓದಲು ಕ್ರಮ ಕೈಗೊಳ್ಳುವಂತೆ
ಆದೇಸಿರುತ್ತಾರೆ.
ಉಲ್ಲೇಖ-1 ಮತ್ತು 2ರ ಹಾಗೂ ಉಲ್ಲೇಖ-2ರಲ್ಲಿ ನೀಡಲಾಗಿರುವ ಭಾರತ ಸಂವಿಧಾನ
ಪೀಠಿಕೆಯ ಪ್ರತಿಗಳನ್ನು ಈ ಪತ್ರದೊಂದಿಗೆ ಲಗತ್ತಿಸಿದೆ.
ಹಿನ್ನೆಲೆಯಲ್ಲಿ ಈ ಕೆಳಗಿನಂತೆ ಕ್ರಮವಹಿಸಲು ರಾಜ್ಯದ ಎಲ್ಲಾ
ಉಪನಿರ್ದೇಶಕರು(ಆಡಳಿತ) ಇವರುಗಳಿಗೆ ತಿಳಿಸಿದೆ.
- ಉಲ್ಲೇಖ 1 ಮತ್ತು 2ರ ಆದೇಶಗಳಂತೆ ರಾಜ್ಯದ ಈ ಇಲಾಖೆಯ ಎಲ್ಲಾ ಅಧೀನ ಕಛೇರಿಗಳಲ್ಲಿ
ಹಾಗೂ ಎಲ್ಲಾ ಶಾಲೆಗಳಲ್ಲಿ ಭಾರತ ಸಂವಿಧಾನ ಪೀಠಿಕೆಯ ಭಾವಚಿತ್ರವನ್ನು ಎದ್ದು
ಕಾಣುವಂತೆ ಅನುಬಂಧದಲ್ಲಿ ನಮೂದಿಸಿರುವಂತೆ ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ
ಪ್ರದರ್ಶಿಸುವುದು. - ಭಾರತ ಸಂವಿಧಾನ ಪೀಠಿಕೆಯನ್ನು ಪ್ರತಿ ನಿತ್ಯ ವಿದ್ಯಾರ್ಥಿಗಳು ಶಾಲಾ ಪ್ರಾರ್ಥನೆ / Assembly
ಸಮಯದಲ್ಲಿ ಕಡ್ಡಾಯವಾಗಿ ಓದಲು ಅಗತ್ಯ ಕ್ರಮವಹಿಸುವುದು. ಸರದಿಯಂತೆ ಪ್ರತಿ ದಿನ
ಒಬ್ಬ ವಿದ್ಯಾರ್ಥಿ / ವಿದ್ಯಾರ್ಥಿನಿ ಇದರ ಮುಂದಾಳತ್ತ್ವವನ್ನು ವಹಿಸುವುದು ಹಾಗೂ
ಉಳಿದವರು ಪುನರುಚ್ಚರಿಸುವುದು. - ಭಾರತ ಸಂವಿಧಾನದ ಪೀಠಿಕೆ ಆಶಯಗಳನ್ನು ವಿದ್ಯಾರ್ಥಿಗಳು ಗ್ರಹಿಸಲು ಪೂರಕವಾದ
ಅವಕಾಶಗಳನ್ನು ಶಾಲಾ ಕಲಿಕೆಯಲ್ಲಿ ಒದಗಿಸುವುದು. ಅದಕ್ಕಾಗಿ ಸಂವಿಧಾನದ
ಪೀಠಿಕೆಯಲ್ಲಿ ಪ್ರಸ್ತಾಪಿಸಲ್ಪಟ್ಟ, ಅಂಶಗಳ ಮೇಲೆ ಧನಾತ್ಮಕ ಸಂವಾದ, ಚರ್ಚೆ, ಪ್ರಬಂಧ
ರಚನೆ, ಚಿತ್ರಕಲಾ ಪ್ರದರ್ಶನ, ಹಾಡುಗಳು, ಮತ್ತಿತರೆ ಪೂರಕ ಕಾರ್ಯಕ್ರಮಗಳನ್ನು
ಹಮ್ಮಿಕೊಳ್ಳುವುದು.