ಮುಖ್ಯ ಗುರುಗಳ ಗಮನಕ್ಕೆ ಶಿಕ್ಷಕರ ಮಾಹಿತಿ update ಮಾಡುವ ಕುರಿತು

WhatsApp Group Join Now
Telegram Group Join Now

Dear All HM’s,

ಶಾಲಾ SATS Login Teacher Management ನಲ್ಲಿ 2023-24 ನೇ ಸಾಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರ ಮಾಹಿತಿಯನ್ನು ಅಪ್ಡೇಟ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.
ಎಲ್ಲಾ ಮುಖ್ಯ ಶಿಕ್ಷಕರು ತಮ್ಮ ಲಾಗಿನ್ ನಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರ (Teaching Staff only) ಮಾಹಿತಿ ಅನ್ನು ಅಪ್ಡೇಟ್ ಮಾಡಿಕೊಳ್ಳಲು ತಿಳಿಸಿದೆ.

ಸೂಚನೆ:

1) ಬೇರೆ ಶಾಲೆಗಳಿಗೆ Transfer ಆಗಿದ್ದರೆ , ಅಂತಹ ಶಿಕ್ಷಕರ ಮಾಹಿತಿಯನ್ನು ಮೊದಲು 2023-24 ನೇ ಸಾಲಿಗೆ ಅಪ್ಡೇಟ್ ಮಾಡಿ ನಂತರ Teacher Status Update ಎಂಬ ಆಪ್ಷನ್ ನಲ್ಲಿ ಟ್ರಾನ್ಸ್ಫರ್ ಎಂದು ಮಾರ್ಕ್ ಮಾಡುವುದು. ನಂತರ ಸದರಿ ಶಿಕ್ಷಕರು ಟ್ರಾನ್ಸ್ಫರ್ ಆಗಿರುವ ಶಾಲೆಯ ಹೆಸರು, ಡೈಸ್ ಸಂಖ್ಯೆ, ಕ್ಲಸ್ಟರ್ ಹೆಸರು, ತಾಲ್ಲೂಕು ಹೆಸರು ಮತ್ತು ಜಿಲ್ಲೆಯ ಹೆಸರನ್ನು ಕಚೇರಿಗೆ ಮಾಹಿತಿ ನೀಡುವುದು.

2) ಶಿಕ್ಷಕರು Death, Retire, VR, Duplicate, Resign ಆಗಿದ್ದರೆ ಅಂತಹ ಶಿಕ್ಷಕರ ಮಾಹಿತಿಯನ್ನು Teacher Status Update ಎಂಬ ಆಪ್ಷನ್ ನಲ್ಲಿ ಮಾರ್ಕ್ ಮಾಡುವುದು.

3) ಸರ್ಕಾರಿ ಶಾಲೆಗಳ ಶಿಕ್ಷಕರ ಮಾಹಿತಿಯನ್ನು UPDATE TEACHER DATA ಆಪ್ಷನ್ ನಲ್ಲಿ ಅಪ್ಡೇಟ್ ಮಾಡುವಾಗ ಅವರ KGID ನಂಬರ್ ಇರುವುದನ್ನು ಖಚಿತ ಪಡಿಸಿಕೊಳ್ಳಿ….KGID ಇದ್ದರೆ ಮಾತ್ರ ORIGINAL DATA.

4) ಸರ್ಕಾರಿ ಶಾಲೆಗಳನ್ನು ಹೊರತು ಪಡಿಸಿ ಉಳಿದ ಅನುದಾನಿತ ಅನುದಾನರಹಿತ ಸಮಾಜ ಕಲ್ಯಾಣ ಇಲಾಖೆ ಶಾಲೆಗಳಲ್ಲಿ ಹೊಸದಾಗಿ ಸೇರ್ಪಡೆ ಆಗಿರುವ ಶಿಕ್ಷಕರ ಮಾಹಿತಿ ಅನ್ನು UPDATE TEACHER DATA ನಲ್ಲಿ ಇರುವ NEW TEACHER REGISTRATION ಆಪ್ಷನ್ ಮೂಲಕ ಸೇರ್ಪಡೆ ಮಾಡಿಕೊಳ್ಳಬಹುದು.

WhatsApp Group Join Now
Telegram Group Join Now
Sharing Is Caring:

Leave a Comment