Bilingual | ದ್ವಿಭಾಷಾ ಮಾಧ್ಯಮದ ಶಾಲೆಗಳ ಒಂದನೇ ತರಗತಿಯಲ್ಲಿಯೂ 40 ದಿನಗಳ ವಿದ್ಯಾ ಪ್ರವೇಶಕಾರ್ಯಕ್ರಮವನ್ನು ಅನುಬಂಧದಲ್ಲಿನ ಸೂಚಿತ ಚಟುವಟಿಕೆಗಳಂತೆ ಅನುಷ್ಠಾನಗೊಳಿಸುವುದು.
ಸದರಿ ಶಾಲೆಗಳ 02 ಮತ್ತು 03ನೇ ತರಗತಿಗಳಲ್ಲಿ ಜೂನ್ ಮಾಹೆಯ ಆರಂಭದ ದಿನದಿಂದಲೂ Transition Activities ಅನುಷ್ಠಾನಕ್ಕೆ ಕ್ರಮವಹಿಸುವುದು. ಇವುಗಳ ಕಲಿಕೆ ಮುಕ್ತಾಯವಾದ ನಂತರ ಮಾಹೆವಾರು ಪಾಠಗಳ ಹಂಚಿಕೆಯಂತೆ ಪ್ರಸಕ್ತ ಸಾಲಿನ ಕಲಿಕಾಂಶಗಳ ನಿರಂತರ ಕಲಿಕೆಯನ್ನು ಆರಂಭಿಸಲು ಕ್ರಮವಹಿಸುವುದು.
ದ್ವಿಭಾಷಾ ಮಾಧ್ಯಮದ 04 ಮತ್ತು 05ನೇ ತರಗತಿಗಳಲ್ಲಿ ಆಯುಕ್ತರ ಹಂತದಿಂದ ಹೊರಡಿಸಲಾದ ಶೈಕ್ಷಣಿಕ ಮಾರ್ಗದರ್ಶಿಯಂತೆಯೇ ನಿಗದಿತ ದಿನಗಳವರೆಗೂ ಸೇತು ಬಂಧ ಚಟುವಟಿಕೆಗಳ ಅನುಷ್ಠಾನಕ್ಕೆ ಅಗತ್ಯ ಕ್ರಮವಹಿಸಲು ಶಿಕ್ಷಕರಿಗೆ ಮಾರ್ಗದರ್ಶನ ನೀಡುವುದು. (Transition Activities ಮತ್ತು Bridge Course Activities ವಿವರಗಳನ್ನು ಡಿ.ಎಸ್.ಇ.ಆರ್.ಟಿ. ವೆಬ್‌ಸೈಟ್‌ನಲ್ಲಿ ಪ್ರಕಟಗೊಳಿಸಲಾಗುವುದು.)