ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ನೆಲ್ಯಾಡಿಯ ನೂತನ ಕೊಠಡಿಗಳ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಆಗಮಿಸಿದ ಮಾನ್ಯ ಶಿಕ್ಷಣ ಸಚಿವರ ಜೊತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಘಟಕ ದಕ್ಷಿಣ ಕನ್ನಡದ ಪದಾಧಿಕಾರಿಗಳಿಂದ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ
🌹ಕಡಬ ತಾಲೂಕು ನೂತನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ರಚನೆ ಮುಂಬರುವ ಬಜೆಟ್ನಲ್ಲಿ ಘೋಷಣೆ ಮಾಡುವುದಾಗಿ ಸಚಿವರು ಭರವಸೆ ನೀಡಿದರು.
🌹ಸೇವಾ ನಿರತ ಪದವೀಧರ ಶಿಕ್ಷಕರಿಗೆ ಅತೀ ಶೀಘ್ರ ಪ್ರಕ್ರಿಯೆ ಪೂರ್ಣಗೊಳಿಸಿ ನ್ಯಾಯ ಒದಗಿಸುವ ಭರವಸೆ ನೀಡಿದರು.
🌹ಹೆಚ್ಚುವರಿ ಪ್ರಕ್ರಿಯೆಯಲ್ಲಿ ಶಿಕ್ಷಕರಿಗೆ ಇನ್ನಷ್ಟು ಅನುಕೂಲ ಮಾಡುವಂತೆ ಸಂಘದಿಂದ ಬೇಡಿಕೆ ಸಲ್ಲಿಸಲಾಯಿತು. ಹೆಚ್ಚಿನ ಶಿಕ್ಷಕರಿಗೆ ಅನುಕೂಲವಾಗುವಂತೆ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸುವ ಭರವಸೆ ನೀಡಿದರು.
🌹 ಜಿಲ್ಲೆಯ ವಿದ್ಯಾರ್ಥಿಗಳಿಗೆ ಕುಚಲಕ್ಕಿ ನೀಡುವ ಕುರಿತು ಬೇಡಿಕೆ , ಶೀಘ್ರ ಈಡೇರಿಸುವುದಾಗಿ ಸಚಿವರ ಭರವಸೆ ನೀಡಿದ್ದಾರೆ.
🌹ಅಕ್ಷರ ದಾಸೋಹದ ನಿರ್ವಹಣಾ ವೆಚ್ಚ ಹೆಚ್ಚಿಸಲು ಸಚಿವರ ಗಮನ ಸೆಳೆಯಲಾಯಿತು. ಈ ಕುರಿತು ಚಿಂತಿಸುವುದಾಗಿ ಭರವಸೆ ನೀಡಿದರು.
🌹ಜಿಲ್ಲೆಯ ಹಲವು ಶಾಲೆಗಳ network ಸಮಸ್ಯೆಗೆ ಪರಿಹಾರ ಒದಗಿಸುವಂತೆ ಬೇಡಿಕೆ ಸಲ್ಲಿಸಲಾಯಿತು. ಈ ಕುರಿತು ಪ್ರಯತ್ನಗಳು ನಡೆಯುತ್ತಿವೆ ಎನ್ನುವ ಮಾಹಿತಿ ನೀಡಿರುವರು.
🌹 ಮುಖ್ಯ ಗುರುಗಳ ವೇತನ ವ್ಯತ್ಯಾಸದ ಸಮಸ್ಯೆಯ ಕುರಿತು ಸಚಿವರ ಗಮನ ಸೆಳೆಯಲಾಯಿತು. ಸಚಿವರಿಂದ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ.
🌹ದೈಹಿಕ ಶಿಕ್ಷಕರ ವಿವಿಧ ಬೇಡಿಕೆಗಳ ಕುರಿತು ಸಚಿವರ ಗಮನ ಸೆಳೆಯಲಾಯಿತು.
🌹ಶಾಲಾ ಅನುದಾನದ ಶೀಘ್ರ ಬಿಡುಗಡೆಗೆ ಸಚಿವರಿಗೆ ಮನವಿ ಸಲ್ಲಿಸಲಾಯಿತು.
🌹ಪ್ರಭಾರ ಮುಖ್ಯ ಗುರುಗಳಿಗೆ ಪ್ರಭಾರ ಭತ್ತೆಯನ್ನು ನೀಡುವ ಬಗ್ಗೆ ಸಚಿವರ ಗಮನ ಸೆಳೆಯಲಾಯಿತು.
🌹NPS ರದ್ದತಿಯ ಕುರಿತು ಸಚಿವರನ್ನು ಒತ್ತಾಯಿಸಲಾಯಿತು.ಇನ್ನು ಹಲವಾರು ಬೇಡಿಕೆಗಳ ಕುರಿತು ಸಚಿವರಿಗೆ ಮನವಿ ಸಲ್ಲಿಸಲಾಯಿತು
ಪುತ್ತೂರು ಮತ್ತು ಕಡಬ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೇಡಿಕೆಗೆ ಸೂಕ್ತ ಸ್ಪಂದನೆಗೆ ಕಾರಣಕರ್ತರದ ಸುಳ್ಯ ಕ್ಷೇತ್ರ ಶಾಸಕರು, ಗೌರವಾನ್ವಿತ ಸಚಿವರಾದ ಶ್ರೀ ಎಸ್ ಅಂಗಾರ ಇವರಿಗೆ, ಮಾನ್ಯ ಶಿಕ್ಷಣ ಸಚಿವರಿಗೆ ಹೃತ್ಪೂರ್ವಕ ವಂದನೆಗಳು.ಈ ಸಂದರ್ಭದಲ್ಲಿ ಮಾರ್ಗದರ್ಶನ ನೀಡಿದ ಉಪನಿರ್ದೇಶಕರಾದ ಸುಧಾಕರ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಲೋಕೇಶ್ ಇವರಿಗೂ ವಂದನೆಗಳು.ಈ ಸಂದರ್ಭದಲ್ಲಿ ಶ್ರೀ ಶಿವಪ್ರಸಾದ್ ಶೆಟ್ಟಿ, ಜಿಲ್ಲಾಧ್ಯಕ್ಷರು , ವಿಮಲ್ ನೆಲ್ಯಾಡಿ ಪ್ರಧಾನ ಕಾರ್ಯದರ್ಶಿ, ಶ್ರೀಮತಿ ವಾಣಿ ಉಪಾಧ್ಯಕ್ಷರು, ಶ್ರೀ ರಾಜೇಶ್ ನೆಲ್ಯಾಡಿ ಕೋಶಾಧಿಕಾರಿ, ಶ್ರೀ ನಾಗೇಶ್ ಮೂಡಬಿದರೆ ಅಧ್ಯಕ್ಷರು, ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷರಾದ ಶಾಂತರಾಮ್ ಓಡ್ಲಾ, ಶ್ರೀ ಮೆಲ್ವಿನ್ ಮೂಡಬಿದರೆ ಕಾರ್ಯದರ್ಶಿ, ಶ್ರೀ ಬಾಲಕೃಷ್ಣ ಕಡಬ ಕಾರ್ಯದರ್ಶಿ, ಶ್ರೀ ಯತೀಶ್ ಬಂಟ್ವಾಳ ಕಾರ್ಯದರ್ಶಿಗಳು, ರಾಜ್ಯ ಪ್ರತಿನಿಧಿ ಹೇಮಲತಾ ಪ್ರದೀಪ್, ಪದಾಧಿಕಾರಿಗಳಾದ ಇಂದ್ರಾವತಿ, ಜಯಂತಿ, ಶಾರದ , ಗೋವಿಂದ ನಾಯ್ಕ,ಪುರಂದರ ಗೌಡ, ಪ್ರದೀಪ್ ಬಾಕಿಲ, ತಾಲೂಕಿನ ಅನೇಕ ಶಿಕ್ಷಕರು ಉಪಸ್ಥಿತರಿದ್ದರು.