ಶ್ರೀ ಪ್ರಶಾಂತ್
ಬಿನ್ ಶ್ರೀ ಗಿರಿಯಪ್ಪ ಪೂಜಾರಿ
ದೇವಗಿರಿ ಮರೋಡಿ ಗ್ರಾಮ
ಬೆಳ್ತಂಗಡಿ ತಾಲ್ಲೂಕು
ಶ್ರೀಯುತ ಪ್ರಶಾಂತ್ ಇವರು ದಿನಾಂಕ 19-09-2007ರಂದು ದ.ಕ ಜಿಲ್ಲಾ ಪಂಚಾಯತ್ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಬಂದಾರು ಈ ಶಾಲೆಗೆ ದೈಹಿಕ ಶಿಕ್ಷಣ ಶಿಕ್ಷಕರಾಗಿ ನೇಮಕಗೊಂಡು ತಮ್ಮ ಸೇವಾ ಕರ್ತವ್ಯವನ್ನು ಆರಂಭಿಸಿರುತ್ತಾರೆ. ಸೇವೆಗೆ ಸೇರಿದ ಕೆಲವೇ
ದಿನಗಳಲ್ಲಿ ಬಂದಾರು ಎಂಬ ಕುಗ್ರಾಮದಲ್ಲಿರುವ ನಮ್ಮ ಶಾಲೆಯ ಕ್ರೀಡಾಪಟುಗಳನ್ನು ತರಬೇತಿಗೊಳಿಸಿ ಕ್ರೀಡಾ ಕ್ಷೇತ್ರದ ಕೀರ್ತಿಯನ್ನು
ಉತ್ತುಂಗಕ್ಕೆರಿಸುವ ಕನಸು ಕಂಡವರು. ಅಲ್ಲದೇ ಆ ಕನಸನ್ನು ನನಸುಮಾಡುವಲ್ಲಿ ಹಗಲಿರುಳು ಅರ್ಪಣಾತ್ಮಕ ಮನೋಭಾವದಿಂದ ಶ್ರಮಿಸಿದ
ಯಶಸ್ವಿ ಶಿಕ್ಷಕರಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮರೋಡಿಯ ದೇವಗಿರಿ ನಿವಾಸದ ದಂಪತಿಗಳಾದ ಶ್ರೀಮತಿ ದೇವಕಿ ಮತ್ತು
ಗಿರಿಯಪ್ಪ ಪೂಜಾರಿಯವರ ಸುಪುತ್ರನಾಗಿ ದಿನಾಂಕ 22-06-1981ರಂದು ಜನಿಸಿದರು.ಇವರು ಪ್ರಾಥಮಿಕ ಶಿಕ್ಷಣವನ್ನು ಸ ಹಿ ಪ್ರಾ ಶಾಲೆ
ಬಡಗಕಾರಂದೂರು, ಪ್ರೌಢ ಶಿಕ್ಷಣವನ್ನು ಸರಕಾರಿ ಪ್ರೌಢ ಶಾಲೆ ಅಳದಂಗಡಿಯಲ್ಲಿ, ಪದವಿಪೂರ್ವ ಶಿಕ್ಷಣವನ್ನು ಸರಕಾರಿ ಪದವಿ ಪೂರ್ವ
ಕಾಲೇಜು ಅಳದಂಗಡಿಯಲ್ಲಿ ಪೂರ್ಣಗೊಳಿಸಿರುತ್ತಾರೆ.
ಬೆಳೆಯುವ ಸಿರಿ ಮೊಳಕೆಯಲ್ಲಿ ಈ ಗಾದೆ ಮಾತಿನಂತೆ ಇವರು ಶಾಲಾ ಹಂತದಲ್ಲೇ ಕ್ರೀಡಾ ಸಾಧನೆಗಳಿಗಾಗಿ ಆನೇಕ ಪ್ರಶಸ್ತಿಗಳನ್ನು ಪಡೆದಿರುತ್ತಾರೆ.
ಶಾಲಾ ಹಂತದಲ್ಲೇ ಕ್ರೀಡಾ ಚಟುವಟಿಕೆಗಳಲ್ಲಿ ಹೆಚ್ಚು ಆಸಕ್ತಿ ಇರುವುದನ್ನು ಕಂಡ ಶಿಕ್ಷಕರು ಪ್ರಶಾಂತ್ ಇವರಿಗೆ ಸೂಕ್ತ
ಮಾರ್ಗದರ್ಶನ ನೀಡಿ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿರುವುದು ಅವರು ಈ ಮಟ್ಟಕ್ಕೆ ಬರಲು ಬದ್ರ ಬುನಾದಿ ಆಗಿರುತ್ತದೆ.
ಕ್ರೀಡಾ ಚಟುವಟಿಕೆಯಿಂದ ತಾನು ಮಾತ್ರ ಹೆಸರು ವಾಸಿಯಾಗುವುದು ಅವರ ಧ್ಯೇಯವಾಗಿರಲಿಲ್ಲ. ತನ್ನೊಂದಿಗೆ ಈ ಕ್ಷೇತ್ರದಲ್ಲಿ
ಸಾಧನೆಗಯ್ಯುವಲ್ಲಿ ಆಸಕ್ತಿವಂತರನ್ನು ಗುರುತಿಸಿ ತರಬೇತಿ ನೀಡಿ ಅವರುಗಳು ಕೂಡ ಪ್ರಸಿದ್ದಿ ಹೊಂದುವಂತಗಲೂ ಒಂದು ವೇದಿಕೆಯ ಅಗತ್ಯವಿತ್ತು.ಅದುವೇ “ದೈಹಿಕ ಶಿಕ್ಷಣದ” ವೃತ್ತಿ.
ಈ ಸೇವೆಗಾಗಿ ಅವರು ಬಿಜಾಪುರದ ಶ್ರೀ ಸಿದ್ದೇಶ್ವರ ದೈಹಿಕ ಶಿಕ್ಷಣ ಮಹಾವಿದ್ಯಾನಿಲಯದಲ್ಲಿ C.PEd ವೃತ್ತಿ ಶಿಕ್ಷಣವನ್ನು ಪಡೆದರು.
ಅಲ್ಲದೇ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದಿಂದ ಸ್ನಾತಕ ಪದವಿ (BA)ಪಡೆದರು.
ಶ್ರೀ ಪ್ರಶಾಂತ್ ಇವರ ನಿರಂತರ ಅರ್ಪಣಾತ್ಮಕ ಮಾರ್ಗದರ್ಶನದ ಫಲಿತಾಂಶಾಗಳು. ಸ.ಉ.ಹಿ.ಪ್ರಾ.ಶಾ. ಬಂದಾರು ಈ ಶಾಲೆಯ
ಕ್ರೀಡಾ ಪ್ರತಿಭೆಗಳು ಪ್ರತೀ ವರ್ಷವೂ ಕ್ರೀಡಾ ಚಟುವಟಿಕೆಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಬರುತ್ತಿದ್ದು ಖೋ -ಖೋ, ವಾಲಿಬಾಲ್,
ತ್ರೋಬಾಲ್ ಹಾಗೂ ಅಥ್ಲೆಟಿಕ್ಸ್ ಇವುಗಳಲ್ಲಿ ತಾಲ್ಲೂಕು ಮಟ್ಟ, ಜಿಲ್ಲಾಮಟ್ಟ, ಮೈಸೂರ್ ವಿಭಾಗ ಮಟ್ಟ, ರಾಜ್ಯ ಮಟ್ಟ ಹಾಗೂ ರಾಷ್ಟ್ರಮಟ್ಟದ
ಕ್ರೀಡಾ ಸ್ಪರ್ಧೆಗಳಲ್ಲಿ ಗಮನೀಯ ಸಾಧನೆ ಮಾಡಿರುತ್ತಾರೆ.
ಚೆನ್ನೈಯಲ್ಲಿ ನಡೆದ ರಾಷ್ಟ್ರಮಟ್ಟದ “ಖೇಲೋ ಇಂಡಿಯಾ” ಕ್ರೀಡಾಕೂಟದ ವಾಲಿಬಾಲ್ ಸ್ಪರ್ಧೆಯಲ್ಲಿ ನಮ್ಮ ಬಂದಾರು ಶಾಲೆಯ
3 ವಿದ್ಯಾರ್ಥಿನಿಯರು ಕರ್ನಾಟಕ ರಾಜ್ಯ ತಂಡದಿಂದ ಆಯ್ಕೆ ಆಗಿ “ಕಂಚಿನ ಪದಕ” ಪಡೆದಿರುತ್ತಾರೆ. ಇದು ನಮ್ಮ ಶಾಲೆ ಸದಾ ನೆನಪಿನಲ್ಲಿ
ಉಳಿಯಿವ ಮಹತ್ವದ ದಿನವಾಗಿ ಉಳಿದಿದೆ.
ಶ್ರೀಯುತ ಪ್ರಶಾಂತ್ ಇವರ ಗರಡಿಯಲ್ಲಿ ತರಬೇತುಗೊಂಡ ಒಟ್ಟು 16 ಕ್ರೀಡಾಪಟುಗಳು ರಾಷ್ಟ್ರಮಟ್ಟಕ್ಕೂ, 20 ಕಿಂತಲೂ ಹೆಚ್ಚು ಕ್ರೀಡಾಪಟುಗಳು ರಾಜ್ಯ ಮಟ್ಟಕ್ಕೂ ಹಾಗೂ 45 ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಮೈಸೂರ್ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುವುದು ಇವರ ಪ್ರಾಮಾಣಿಕ ಸೇವೆಗೆ ಸಂದ ಗೌರವ ಹಾಗೂ ಸಾಕ್ಷಿಗಳಾಗಿವೆ.
ಅಕ್ಷರ ಸಿರಿ ಪ್ರಶಸ್ತಿಗೆ ಭಾಜನರಾಗುವ ಮೂಲಕ ಇನ್ನಷ್ಟು ಶಿಕ್ಷಕರಿಗೆ ನೀವು ಪ್ರೇರಣೆಯಾಗಿದ್ದೀರಿ ನಿಮಗೆ ಜಿಲ್ಲಾ ಸಂಘದ ಮತ್ತು ತಾಲೂಕು ಘಟಕಗಳ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ. ನಿಮ್ಮಿಂದ ಇನ್ನಷ್ಟು ಸೇವೆ ಇಲಾಖೆಗೆ ಮತ್ತು ಸಮಾಜಕ್ಕೆ ದೊರಕುವಂತಾಗಲಿ ಎಂದು ಹಾರೈಸುತ್ತಿದ್ದೇವೆ.
ಅಧ್ಯಕ್ಷರು/ಪ್ರಧಾನ ಕಾರ್ಯದರ್ಶಿ/ಸರ್ವ ಪದಾಧಿಕಾರಿಗಳು
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಿ ಬೆಂಗಳೂರು
ದಕ್ಷಿಣ ಕನ್ನಡ ಜಿಲ್ಲೆ