ಉದ್ದೇಶ :-
ಬೇರಿನ ಕಾರ್ಯವನ್ನು ಕಂಡು ಹಿಡಿಯುವುದು
ಅಗತ್ಯ ಸಾಮಗ್ರಿಗಳು :-
ಸಸ್ಯವಿರುವ ಎರಡು ಕುಂಡಗಳುಕಪ್ಪು ಮಣ್ಣು
ಯಾವುದಾದರೂ ಎರಡು ಒಂದೇ ಬಗೆಯ ಬೇರಿರುವ ಸಸ್ಯಗಳು,..
ಕತ್ತರಿ
ವಿಧಾನ :-
ಎರಡು ಸಸ್ಯದ ಕುಂಡದೊಳಗೆ ಕಪ್ಪು ಮಣ್ಣು ಹಾಕು. ಅದಕ್ಕೊಂದಿಷ್ಟು ನೀರು ಚಿಮುಕಿಸು, ನಿಧಾನವಾಗಿಒಂದು ಬೇರಿರುವ ಸಸ್ಯವನ್ನು ಮಣ್ಣಿನಾಳಕ್ಕೆ ಪಾತಿ ಮಾಡು, ಮತ್ತೊಂದು ಸಸ್ಯವನ್ನು ತೆಗೆದುಕೊಂಡು ಕತ್ತರಿಯಿಂದಆ ಸಸ್ಯದ ಬೇರಿನ ಭಾಗವನ್ನು ಕತ್ತರಿಸು. ಈಗ ಕತ್ತರಿಸಿದ ಸಸ್ಯವನ್ನು ಎರಡನೆಯ ಕುಂಡದೊಳಗೆ ಪಾತಿ ಮಾಡು,ಈಗ ಎರಡು ಕುಂಡಗಳನ್ನು ಸೂರ್ಯನ ಬಿಸಿಲು ಬೀಳುವ ಸ್ಥಳದಲ್ಲಿರಿಸು, ಒಂದು ವಾರದವರೆಗೆ ಎರಡೂ ಸಸ್ಯದಕುಂಡಗಳಿಗೆ ಸ್ವಲ್ಪ ನೀರನ್ನು ಹಾಕುತ್ತಿರು..
ಬೇರಿರುವ ಸಸ್ಯವು ಚೆನ್ನಾಗಿ ಬೆಳೆದಿರುತ್ತದೆ.ಒಂದು ವಾರದವರೆಗೂ ಎರಡೂ ಕುಂಡದಲ್ಲಿನ ಸಸ್ಯಗಳ ಬೆಳವಣಿಗೆಯನ್ನು ಗಮನಿಸು. ಸಸ್ಯದ ಬೆಳವಣಿಗೆಯಲ್ಲಿಏನಾದರೂ ಬದಲಾವಣೆಗಳಾಗಿವೆಯೇ ಗಮನಿಸು
ತೀರ್ಮಾನ :-
- ಒಂದು ವಾರದ ನಂತರ ಎರಡೂ ಕುಂಡದಲ್ಲಿನಸಸ್ಯಗಳಲ್ಲಿ ಅನೇಕ ಬದಲಾವಣೆಗಳಾಗಿರುತ್ತವೆ..
- ಬೇರಿರದ ಸಸ್ಯವು ಬಾಡಿ ಹೋಗಿರುತ್ತದೆ.
- ಸಸ್ಯಗಳು ಬೆಳೆಯಲು ನೀರು ಬೇಕು.
- ಬೇರಿರುವ ಸಸ್ಯವು ನೀರನ್ನುಹೀರಿಕೊಂಡಿರುವ ಕಾರಣ ಅದು ಚೆನ್ನಾಗಿಬೆಳೆದಿರುತ್ತದೆ.
ಕೃಪೆ : ಸಾರ್ವಜನಿಕ ಶಿಕ್ಷಣ ಇಲಾಖೆ, ಆಯುಕ್ತರ ಕಛೇರಿ, ಕಲಬುರಗಿ ವಿಭಾಗ ಪ್ರಯೋಗ ದರ್ಪಣ science experiment