‘ಕರ್ನಾಟಕ ಆರೋಗ್ಯ ಸಂಜೀವಿನಿ
ಯೋಜನೆ'(KASS)ಯ ಅನುಷ್ಠಾನ ಹಾಗೂ ನಿರ್ವಹಣೆಗಾಗಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ನಲ್ಲಿ
ಆದೇಶದೊಂದಿಗೆ ಲಗತ್ತಿಸಲಾಗಿರುವ ಅನುಬಂಧದಲ್ಲಿ ತಿಳಿಸಿರುವ ಅಧಿಕಾರಿ/ಸಿಬ್ಬಂದಿಯೊಂದಿಗೆ
ಒಂದು ಪ್ರತ್ಯೇಕ KASS ಘಟಕವನ್ನು ಸೃಜಿಸಲು ಸರ್ಕಾರವು ಮಂಜೂರಾತಿ ನೀಡಿದೆ.
- ಈ ಯೋಜನೆಯ ಕಾರ್ಯನೀತಿಗೆ (Policy Framework) ಹಾಗೂ ಅನುಷ್ಠಾನಕ್ಕೆ
ಸಂಬಂಧಿಸಿದಂತೆ ಸರ್ಕಾರದಿಂದ ವಿವರವಾದ ಪ್ರತ್ಯೇಕ ಸೂಚನೆಗಳನ್ನು
ನೀಡಲಾಗುವುದು. - ಈ ಆದೇಶವನ್ನು ಆರ್ಥಿಕ ಇಲಾಖೆಯ ಹಿಂಬರಹ ಸಂಖ್ಯೆ: ಆಇ 242 ವೆಚ್ಚ-12/2022,
ದಿನಾಂಕ: 04.06.2022 ರಲ್ಲಿ ನೀಡಿರುವ ಸಹಮತಿಯಂತೆ ಹೊರಡಿಸಲಾಗಿದೆ.
ನಗದು ರಹಿತ ವೈದ್ಯಕೀಯ ಚಿಕಿತ್ಸೆ ಒದಗಿಸಲು “ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ” ಯನ್ನು ನಿರ್ವಹಿಸಲು ಹಾಗೂ ಅನುಷ್ಠಾನ ಗೊಳಿಸಲು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನಲ್ಲಿ ಪ್ರತ್ಯೇಕ ಕೋಶ ಸೃಜಿಸುವ ಬಗ್ಗೆ ಆದೇಶ ಹೊರಡಿಸಲಾಗಿದೆಯೋಜನೆ ಅತೀ ಶೀಘ್ರದಲ್ಲೇ ಲೋಕಾರ್ಪಣೆ ಆಗಲಿದೆ