ಪ್ರಯೋಗದ ಹೆಸರು : ಬೆಳಕಿನ ವಕ್ರೀಭವನ
ಅಗತ್ಯವಿರುವ ಸಾಮಗ್ರಿಗಳು: ಒಂದು ಗಾಜಿನ ಗ್ಲಾಸು, ಒಂದು ಗ್ಲಾಸ್ ರಾಡ್, ನೀರು.
ಪ್ರಯೋಗದ ವಿವರ:
ಒಂದು ಗಾಜಿನ ಲೋಟದಲ್ಲಿ ಒಂದು ಪ್ಲಾಸ್ಟಿಕ್ ಕಡ್ಡಿಯನ್ನು ಇಟ್ಟು ನೋಡಿ. ಏನನ್ನು ಗಮನಿಸುವಿರಿ? ನಂತರ ಗಾಜಿನ ಗ್ಲಾಸಿನಲ್ಲಿ ನೀರನ್ನು ತುಂಬಿ ಪ್ಲಾಸ್ಟಿಕ್ ಕಡ್ಡಿಯನ್ನು ಇಟ್ಟು ನೋಡಿ ಈಗ ಏನು ಕಾಣುವುದು ನಿಮಗೆ? ಪ್ಲಾಸ್ಟಿಕ್ ಕಡ್ಡಿಯು ನೀರಿನ ಬಾಗಿದಂತೆ ಕಾಣುವುದು ಕಾರಣವೇನು ಊಹಿಸಬಲ್ಲಿರಾ?
ತೀರ್ಮಾನ : ಬೆಳಕು ಒಂದು ಮಾಧ್ಯಮದಿಂದ ಇನ್ನೊಂದು ಮಾಧ್ಯಮಕ್ಕೆ ಚಲಿಸುವಾಗ ಸ್ವಲ್ಪ ಓರೆಯಾಗಿ ಚಲಿಸುತ್ತದೆ. ಇದನ್ನು ಬೆಳಕಿನ ವಕ್ರೀಭವನ ಎನ್ನುವರು.
ಶ್ರೀ ಮಂಜಪ್ಪ ಅಂಗರಗಟ್ಟಿ ಇವರು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಕೊಡಿಯಾಲ ಬೈಲ್ ಮಂಗಳೂರು ಇಲ್ಲಿ TCH ತರಬೇತಿಯನ್ನು ಪಡೆದು 2008ರಲ್ಲಿ ಅಂಕೋಲಾದಲ್ಲಿ ವಿಜ್ಞಾನ ಶಿಕ್ಷಕರಾಗಿ ಆಯ್ಕೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ . ಇವರು 20ಕ್ಕೂ ಹೆಚ್ಚು ಬ್ರಿಟಿಷ್ ಕೌನ್ಸಿಲ್ ಇಂಗ್ಲಿಷ್ ತರಬೇತಿಗಳಲ್ಲಿ ಜಿಲ್ಲಾ MRP ಆಗಿ ಮತ್ತು 15ಕ್ಕೂ ಹೆಚ್ಚು ವಿಜ್ಞಾನ ತರಬೇತಿಗಳಲ್ಲಿ MRP ಯಾಗಿ ಕಾರ್ಯನಿರ್ವಹಿಸಿರುತ್ತಾರೆ. ಗುರುಚೇತನ ಕಾರ್ಯಕ್ರಮದಲ್ಲಿ ಕೂಡ MRP ಆಗಿ ಕೆಲಸ ನಿರ್ವಹಿಸಿರುತ್ತಾರೆ.
Mob: 93421 38131