ರಾಜ್ಯದ ಸರ್ಕಾರಿ ನೌಕರರ ಆದ್ಯ ಗಮನಕ್ಕೆ
ರಾಜ್ಯದ ಸರ್ಕಾರಿ ನೌಕಕರಿಗೆ ಸಂಬಂಧಿಸಿದ ಪ್ರತಿ ತಿಂಗಳ ವೇತನದ ವಿವರ ಹಾಗೂ ಪಿಡಿಎಫ್ ಪೇ-ಸ್ಲಿಪ್ ಲಿಂಕ್ ನ್ನು ಪ್ರತಿಯನ್ನು ನೌಕರರ ಮೊಬೈಲ್ ಸಂಖ್ಯೆಗೆ ತಲುಪಿಸುವಂತೆ ಹೆಚ್.ಆರ್.ಎಂ.ಎಸ್-2.0 ಯೋಜನಾ ನಿರ್ದೇಶಕರಾದ ಶ್ರೀಮತಿ ದೀಪ್ತಿ ಆದಿತ್ಯ ಕಾನಡೆ, ಐ.ಎ.ಎಸ್ ಅವರನ್ವು ರಾಜ್ಯಾಧ್ಯಕ್ಷರಾದ ಷಡಾಕ್ಷರಿರವರು ಭೇಟಿ ಮಾಡಿ ಮನವಿ ಮಾಡಿದರು.
ಸಂಘದ ಮನವಿಯಂತೆ ಮಾರ್ಚ್-2022ನೇ ತಿಂಗಳಿನಿಂದ ನೌಕರರ ವೇತನದ ವಿವರ ಹಾಗೂ ಪೇ-ಸ್ಲಿಪ್ ಪಿಡಿಎಫ್ ಲಿಂಕನ್ನು ಆಯಾ ನೌಕರರ ಮೊಬೈಲ್ ಸಂಖ್ಯೆಗೆ ಕಳುಹಿಸುವ ವ್ಯವಸ್ಥೆಯನ್ನು ಪ್ರಾರಂಭಿಸಲಾಗುವುದೆಂಬ ಭರವಸೆಯನ್ನು ನೀಡಿರುತ್ತಾರೆ.
ಹಾಗಾಗಿ ಹೆಚ್.ಆರ್.ಎಂ.ಎಸ್ ತಂತ್ರಾಂಶದಲ್ಲಿ ಸರ್ಕಾರಿ ನೌಕರರು ತಮ್ಮ ಮೊಬೈಲ್ ಸಂಖ್ಯೆಯನ್ನು ಹಾಗೂ ಇ-ಮೇಲ್ ಐ.ಡಿ-ವಿವರಗಳನ್ನು ಕಡ್ಡಾಯವಾಗಿ update ಮಾಡಿ ಸೌಲಭ್ಯವನ್ನು ಸದುಪಯೋಗಪಡಿಸುವಂತೆ ಕೋರಿದೆ