PDF ಮಾಹಿತಿ ಇಲ್ಲಿ ನೀಡಲಾಗಿದೆ
ಅಕ್ಷರ ದಾಸೋಹ ಕಾರ್ಯಕ್ರಮದ ಅಡುಗೆ ಸಿಬ್ಬಂದಿಯವರ ಅಯ್ಕೆ :
ಆಯ್ಕೆ ಸಮಿತಿಯು ಈ ಕೆಳಕಂಡ ಅಂಶಗಳನ್ನು ಒಳಗೊಂಡಿದೆ,
(1) ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಮುನ್ಸಿಪಾಲಿಟಿ/ಪಟ್ಟಣ ಕಾರ್ಪೋರೇಷನ್ ವಾರ್ಡ್‌ನ ಸದಸ್ಯರು ಈ ಸಮಿತಿಯ ಅಧ್ಯಕ್ಷರಾಗಿರಬೇಕು,
(2) ಎಸ್, ಡಿ, ಎಂ, ಸಿ, ಅಧ್ಯಕ್ಷರು-ಸದಸ್ಯರು,
(3) ಶಾಲಾ ಮುಖ್ಯಸ್ಥರು-ಸದಸ್ಯರು,
(4) ಪಟ್ಟಣ ಕಾರ್ಪೋರೇಷನ್ನಿನ ಮುಖ್ಯಾಧಿಕಾರಿ /ಮುನ್ಸಿಪಾಲಿಟಿಯ ಪ್ರಧಾನ ಕಾರ್ಯದರ್ಶಿ/ಗ್ರಾಮ
ಪಂಚಾಯತಿಯ ಕಾರ್ಯದರ್ಶಿ ಇವರಲ್ಲಿ ಯಾರಾದರೂ ಸಮಿತಿಯ ಕಾರ್ಯದರ್ಶಿಯಾಗಿರಬೇಕು,
ಸರ್ಕಾರಿ ಆದೇಶದಂತೆ ಅಡುಗೆ ಸಿಬ್ಬಂದಿಯನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಈ ಕೆಳಕಂಡ ಅಂಶಗಳು ಒಳಗೊಂಡಿರಬೇಕು :
• ಗ್ರಾಮ ಪಂಚಾಯತಿಯ ಅಧ್ಯಕ್ಷರು/ಪಟ್ಟಣ ಕಾರ್ಪೋರೇಷನ್ನಿನ ವಾರ್ಡ್ ಸದಸ್ಯರ ಅಧ್ಯಕ್ಷತೆಯಲ್ಲಿ ಆಯ್ಕೆಸಮಿತಿಯ ಪ್ರಾಥಮಿಕ ಸಭೆಯು ನಡೆಯುವುದು,
• ಒಂದು ಶಾಲೆಗಿಂತ ಹೆಚ್ಚಿನ ಶಾಲೆಗಳಲ್ಲಿ ಅಡುಗೆ ಕೇಂದ್ರ ತೆರೆಯಬೇಕಾದ ಸಂದರ್ಭದಲ್ಲಿ ಆಯಾ ಶಾಲಾ
ಮುಖ್ಯಸ್ಥರು ಆ ಸಭೆಯ ವಿಶೇಷ ಆಹ್ವಾನಿತರಾಗಿರುವುದು,
• ಈ ಸಭೆಯಲ್ಲಿ ಅಡುಗೆ ಸಿಬ್ಬಂದಿಯನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಅನುಸರಿಸಬೇಕಾದ
ಮಾರ್ಗಸೂಚಿಗಳನ್ನು ಕುರಿತು ಚರ್ಚಿಸುವುದು ಮತ್ತು ಅರ್ಜಿ ಅಹ್ವಾನಿಸುವ ಹಾಗೂ ನೇಮಕಾತಿಯ
ದಿನಾಂಕಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು,
• ಅರ್ಜಿಗಳನ್ನು ಆಹ್ವಾನಿಸುವ ಸಂದರ್ಭದಲ್ಲಿ ಸಭಾ ನಡಾವಳಿಯನ್ನು ಅನುಸರಿಸುವುದು.
• ವಿದ್ಯಾರ್ಹತೆ, ಕಾಲಾವಧಿ ಮತ್ತು ಅಡುಗೆ ಸಿಬ್ಬಂದಿಯನ್ನು ನೇಮಕಾತಿ ಮಾಡಲು ನೀಡುವ ಸಂಭಾವನೆ ಕುರಿತಾದ ವಿವರಗಳನ್ನು ಗ್ರಾಮ ಪಂಚಾಯಿತಿಯು ಹತ್ತು ದಿನಗಳಿಗೆ ಮೊದಲೇ ಸೂಚನಾಫಲಕದಲ್ಲಿ ಸೂಚಿಸುವುದು,
• ಮುಖ್ಯ ಅಡುಗೆಯವರೂ ಸೇರಿದಂತೆ ಉಳಿದ ಅಡುಗೆಯವರೆಲ್ಲರೂ ಮಹಿಳೆಯರಾಗಿರಬೇಕು,
• ಮುಖ್ಯ ಅಡುಗೆಯವರ ವಿದ್ಯಾರ್ಹತೆ ಕನಿಷ್ಠ ಏಳನೇ ತರಗತಿ ತೇರ್ಗಡೆಯಾಗಿರಬೇಕು,
• ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಯು ಅದೇ ಗ್ರಾಮಕ್ಕೆ ಸೇರಿದವರೆಂದು ಪಡಿತರ ಚೀಟಿ ಮತ್ತು ಮತದಾರರ ಗುರುತಿನ ಚೀಟಿಗಳಿಂದ ದೃಢೀಕರಿಸುವುದು,
• ಅಡುಗೆ ಸಿಬ್ಬಂದಿ ಸಹಾಯಕರಿಗೆ ವಿದ್ಯಾರ್ಹತೆಯನ್ನು ನಿಗದಿ ಪಡಿಸಿರುವುದಿಲ್ಲ, ಆದರೆ ಅಕ್ಷರಸ್ಥರಿಗೆ ಆದ್ಯತೆ
ನೀಡುವುದು,
• ಮುಖ್ಯ ಅಡುಗೆಯವರು/ಅಡುಗೆಯವರನ್ನು ಆರಿಸುವಾಗ 30 ವರ್ಷ ವಯಸ್ಸಿನ ಹಾಗೂ ಅದೇ ಗ್ರಾಮಕ್ಕೆ ಸೇರಿದ ಮಹಿಳೆಯರಿಗೆ ಆದ್ಯತೆ ನೀಡುವುದು,
• ಆಯ್ಕೆಯ ಸಂದರ್ಭದಲ್ಲಿ ವಿಧವೆಯರು ಹಾಗೂ ನೊಂದ ಮಹಿಳೆಯರಿಗೆ ಹೆಚ್ಚಿನ ಆದ್ಯತೆಯನ್ನು ನೀಡುವುದು,
• ಎ-1 ಮಾದರಿಯ ಅಡುಗೆ ಕೇಂದ್ರಗಳಿಗೆ ಅಡುಗೆಯವರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ
ಪ.ಜಾ./ಪ.ಪಂ.ಕ್ಕೆ ಸೇರಿದವರನ್ನೇ ಆಯ್ಕೆ ಮಾಡಬೇಕು,
• ಎ-1 ಮಾದರಿಯ ಅಡುಗೆ ಕೇಂದ್ರಗಳಿಗೆ ಅಡುಗೆಯವರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಒಬ್ಬರು ಪ.ಜಾ./ಪ.ಪಂ.ಕ್ಕೆ ಸೇರಿದವರು ಹಾಗೂ ಮತ್ತೊಬ್ಬರು ಹಿಂದುಳಿದ ವರ್ಗಕ್ಕೆ ಸೇರಿದವರಾಗಿರಬೇಕು.
• ಬಿ-1 ಮಾದರಿಯ ಅಡುಗೆ ಕೇಂದ್ರಗಳಿಗೆ ಅಡುಗೆಯವರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಒಬ್ಬರು ಪ.ಜಾ./ಪ.ಪಂ.ಕ್ಕೆ ಸೇರಿದವರು, ಇನ್ನೊಬ್ಬರು ಹಿಂದುಳಿದ ವರ್ಗಕ್ಕೆ ಹಾಗೂ ಮತ್ತೊಬ್ಬರು ಸಾಮಾನ್ಯ ವರ್ಗಕ್ಕೆಸೇರಿದವರಾಗಿರಬೇಕು,
• ಸಿ-1 ಮಾದರಿಯ ಅಡುಗೆ ಕೇಂದ್ರಗಳಿಗೆ ಅಡುಗೆಯವರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಒಬ್ಬರು ಪ.ಜಾ./ಪ.ಪಂ.ಕ್ಕೆ ಸೇರಿದವರು, ಇನ್ನೊಬ್ಬರು ಹಿಂದುಳಿದ ವರ್ಗಕ್ಕೆ ಮತ್ತು ಮತ್ತೊಬ್ಬರು ಸಾಮಾನ್ಯ ವರ್ಗಕ್ಕೆ ಸೇರಿದವರಾಗಿದ್ದು, ನಾಲ್ಕನೆಯವರು ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದವರಾಗಿರಬೇಕು,
• ಸರ್ಕಾರಕ್ಕೆ ಹೊರೆಯಾಗದಂತೆ ಆಯಾ ಮುನ್ಸಿಪಾಲಿಟಿ ಹಾಗೂ ಸಿಟಿ ಕಾರ್ಪೋರೇಷನ್ ವ್ಯಾಪ್ತಿಗೆ ಒಳಪಡುವ ಸ್ಥಳೀಯ ದಿನಪತ್ರಿಕೆಗಳಲ್ಲಿ ಸಂಪೂರ್ಣ ವಿವರಗಳನ್ನು ಒಳಗೊಂಡ ಉಚಿತ ಸಾರ್ವಜನಿಕ ಪತ್ರಿಕಾ ಪ್ರಕಟಣೆಯನ್ನು ನೀಡುವುದು, ಪ್ರಕಟಣೆಯು ಭಿತ್ತಿ ಪತ್ರ, ಕರ ಪತ್ರ ಹಾಗೂ ಪ್ಲೇ ಕಾರ್ಡ್‌ಗಳ ಮೂಲಕವೇ
ಇರಬೇಕು,ಸ್ಥಳೀಯವಾಗಿ ಪ್ರಕಟಿಸುವ ಸಂದರ್ಭದಲ್ಲಿ ಸಂದರ್ಶನ ದಿನಾಂಕವನ್ನು ತಪ್ಪದೇ ತಿಳುಸುವುದು,
• ಸಂದರ್ಶನಕ್ಕೆ ಬರುವ ಅಭ್ಯರ್ಥಿಗೆ ಯಾವುದೇ ಪ್ರಯಾಣ ಭತ್ಯೆಯನ್ನು ನೀಡಲಾಗುವುದಿಲ್ಲ
• ಸಂದರ್ಶನಕ್ಕೆ ಹಾಜರಾಗುವ ಸಂದರ್ಭದಲ್ಲಿ ವಿದ್ಯಾರ್ಹತೆಗೆ ಸಂಬಂಧಿಸಿದ ಮೂಲ ಅಂಕ ಪಟ್ಟಿಯನ್ನು
ಜೆರಾಕ್ಸ್ ದ್ವಿಪ್ರತಿಯಲ್ಲಿ ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಎರಡು ಭಾವಚಿತ್ರಗಳನ್ನು ತರುವುದು,
• ಆಯ್ಕೆ ಸಮಿತಿಯು ಸಂದರ್ಶನದ ವೇಳೆಯಲ್ಲಿ ಅಭ್ಯರ್ಥಿಗಳ ದಾಖಲೆಗಳನ್ನು ಪರಿಶೀಲಿಸಿದ ನಂತರ
ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು,
• ಸಭೆಯಲ್ಲಿ ತೀರ್ಮಾನಿಸಲಾದ ಸಭಾ ನಡಾವಳಿಗಳನ್ನು ದಾಖಲಿಸುವುದು, ಮೀಸಲಾತಿಯ ಪಟ್ಟಿಯನ್ನು
ಸಭಾ ನಡಾವಳಿಯೊಂದಿಗೆ ಲಗತ್ತಿಸುವುದು, ಆದ್ಯತೆಯ ಮೇರೆಗೆ ಅಭ್ಯರ್ಥಿಗಳನ್ನು ನೇಮಕ ಮಾಡುವುದು,
ಮುಖ್ಯ ಅಡುಗೆಯವರು ಯಾವುದೇ ವೈಯಕ್ತಿಕ ಕಾರಣಗಳಿಂದ ಕರ್ತವ್ಯಕ್ಕೆ ಹಾಜರಾಗದಿದ್ದಲ್ಲಿ ಆ ಸ್ಥಾನಕ್ಕೆ
ಬೇರೆಯವರನ್ನು ಆಯ್ಕೆ ಮಾಡಬಹುದು,
• ಮೇಲ್ಕಾಣಿಸಿದ ಎರಡು ಆಯ್ಕೆ ಪಟ್ಟಿಯನ್ನು ಅಂತಿಮ ಅನುಮೋದನೆಗಾಗಿ ತಾಲ್ಲೂಕು ಪಂಚಾಯಿತಿಯ
ಕಾರ್ಯನಿರ್ವಾಹಕ ಅಧಿಕಾರಿಯವರಿಗೆ ಕಳುಹಿಸತಕ್ಕದ್ದು,
• ಮೇಲ್ಕಾಣಿಸಿದ ಮಾನದಂಡಗಳನ್ನು ಬಳಸಿ, ಪಾರದರ್ಶಕವಾಗಿ ಆಯ್ಕೆ ಮಾಡುವುದು,
• ಮಾರ್ಗಸೂಚಿಯಂತೆ ಆಯ್ಕೆ ಮಾಡದಿದ್ದಲ್ಲಿ ಯಾವುದೇ ದೂರು ಬಂದಾಗ ಆಯ್ಕೆ ಪಟ್ಟಿಯನ್ನು
ನಿರಾಕರಿಸುವ ಅಧಿಕಾರವನ್ನು ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ/ತತ್ಸಮಾನಅಧಿಕಾರಿಯವರಿಗೆ ನೀಡಲಾಗಿದೆ,
• ಅಡುಗೆ ಸಿಬ್ಬಂದಿಯ ಅಂತಿಮ ಆಯ್ಕೆ ಪಟ್ಟಿಯನ್ನು ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ
ಅಧಿಕಾರಿ/ತತ್ಸಮಾನ ಅಧಿಕಾರಿಯವರಿಂದ ಅನುಮೋದನೆ ಪಡೆಯುವುದು,
• ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ/ತತ್ಸಮಾನ ಅಧಿಕಾರಿಯವರಿಂದ ಅನುಮೋದನೆ ಪಡೆದು, ಅಂತಿಮವಾಗಿ ಆಯ್ಕೆಯಾದ ಅಡುಗೆ ಸಿಬ್ಬಂದಿಗೆ ಅನುಸೂಚಿ-ಇನಲ್ಲಿ ಸೂಚಿಸಿದಂತೆ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ/ತತ್ಸಮಾನ ಅಧಿಕಾರಿಯವರು ನೇಮಕಾತಿ ಆದೇಶವನ್ನು ನೀಡುವುದು.
• ಆಯ್ಕೆಯಾದ ಅಡುಗೆ ಸಿಬ್ಬಂದಿಯು ಕರ್ತವ್ಯಕ್ಕೆ ಹಾಜರಾಗುವ ಮುನ್ನ ರೂ.10/- ಬಾಂಡ್ ಪೇಪರ್‌ನಲ್ಲಿ
ಅನುಸೂಚಿ-ಇನಲ್ಲಿ ತಿಳಿಸಿರುವಂತೆ ನಿಯಮ ನಿಬಂಧನೆಗಳಿಗೆ ಒಟ್ಟಿರುತ್ತೇನೆಂದು ಕರಾರು ಪತ್ರವನ್ನು ನೀಡುವುದು.