ದಿನಾಂಕ 14.02.2022 ರಿಂದ ನಡೆಯಲಿರುವ ಎರಡನೇ ಹಂತದ ಶಿಕ್ಷಕರ ಸಾಮಾನ್ಯ ವರ್ಗಾವಣೆಗಳ ಬಗ್ಗೆ ಮಾಹಿತಿ
(ದಿನಾಂಕ 30.06.2021 ರಂತೆ ಪಡೆದ ಅರ್ಜಿಗಳು)
- ಒಂದು ಮತ್ತು ಎರಡನೇ ಹಂತದ ವರ್ಗಾವಣೆಗೆ ವರ್ಗಾವಣಾ ಮಿತಿ ಒಂದೇ ಆಗಿದೆ. ಉದಾ: ಜಿಲ್ಲಾ ಹಂತಕ್ಕೆ ಶೇಕಡಾ 7.
- ಒಂದನೇ ಹಂತದಲ್ಲಿ ಉಳಿದಿರುವ ಶೇಕಡಾ ಮಿತಿಯ ಮುಂದುವರಿದ ಭಾಗಕ್ಕೆ ಮಾತ್ರ ಎರಡನೇ ಹಂತದಲ್ಲಿ ಅವಕಾಶ.
- ಈಗಾಗಲೇ ಒಂದನೇ ಹಂತದಲ್ಲಿ ಶೇಕಡಾ 7 ರ ಮಿತಿಯನ್ನು ತಲುಪಿರುವ ವೃಂದಕ್ಕೆ ಎರಡನೇ ಹಂತದಲ್ಲಿ ಕೌನ್ಸಿಲಿಂಗ್ ನಡೆಯುವುದಿಲ್ಲ.
- ಶೇಕಡಾ ಮಿತಿ ವೃಂದವಾರು ನಿಗದಿಯಾಗುವುದರಿಂದ ಪ್ರತಿ ವೃಂದದಲ್ಲಿ ಈ ಬಗ್ಗೆ ಪರಿಶೀಲನೆ ಮಾಡಿ ಅವಶ್ಯವಿರುವ ವೃಂದದವರನ್ನು ಮಾತ್ರ ಕೌನ್ಸಿಲಿಂಗ್ ಗೆ ಹಾಜರಾಗಲು ತಿಳಿಸುವುದು.
- ದಿನಾಂಕ 09-02 2022 ರ ನಂತರ ಖಾಲಿ ಹುದ್ದೆ ಇಂದೀಕರಣಕ್ಕೆ ಬಂದಿರುವ ಪ್ರಸ್ತಾವನೆಗಳನ್ನು ಪರಿಗಣಿಸಿರುವುದಿಲ್ಲ.
- ವೇಳಾ ಪಟ್ಟಿಯಂತೆ ದಿನಾಂಕ : 14.02.2022 ರಿಂದ ಜಿಲ್ಲಾ ಹಂತದಲ್ಲಿ ಕೌನ್ಸಿಲಿಂಗ್ ಪ್ರಕ್ರಿಯೆ ನಡೆಸಲು ಅವಕಾಶ ಕಲ್ಪಿಸಿದೆ. ಏಕಕಾಲದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಕೌನ್ಸಿಲಿಂಗ್ ಪ್ರಕ್ರಿಯೆಯ ನಡೆಸಲು ಅವಕಾಶ ಕಲ್ಪಿಸಿದೆ).
- ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ವೃಂದವಾರು ಶೇಕಡಾ ವರ್ಗಾವಣೆ ಮಿತಿ ಜೇಷ್ಠತಾ ಪಟ್ಟಿ ಮತ್ತು ಖಾಲಿ ಹುದ್ದೆಗಳ ಮಾಹಿತಿಯನ್ನು ಡಿ. ಡಿ. ಪಿ. ಐ ವರ್ಗಾವಣಾ ಲಾಗಿನ್ ನಲ್ಲಿ ನೀಡಲಾಗಿದೆ.
- ಅಂತಿಮ ಜೇಷ್ಠತಾ ಪಟ್ಟಿಯಲ್ಲಿ ಕೆಲವು ಅರ್ಜಿಗಳು ತಿರಸ್ಕೃತಗೊಳ್ಳಲು ಇಇಡಿಎಸ್ ತಂತ್ರಾಶ ದಲ್ಲಿ ಪ್ರೊಬೇಷನರಿ ಅವಧಿ ಘೋಷಣೆ ಆಗದಿರುವುದು ಸೇವಾ ಮಾಹಿತಿ ತಪ್ಪಾಗಿರುವ ಪ್ರಕರಣಗಳಾಗಿವೆ.
- ಕೌನ್ಸಿಲಿಂಗ್ ನಡೆಯುವ ಮೊದಲೇ ಖಾಲಿ ಹುದ್ದೆ ಮಾಹಿತಿಯನ್ನು ಪ್ರಕಟಿಸುವುದು.
- ವರ್ಗಾವಣಾ ಆದೇಶಗಳನ್ನು ತಪ್ಪದೇ ಕೌನ್ಸಿಲಿಂಗ್ ಆದ ತಕ್ಷಣ ಸ್ಥಳದಲ್ಲೇ ವಿತರಿಸುವುದು.