25% ಹುದ್ದೆಗಳು ಕಡಿಮೆ ಇರುವ ತಾಲೂಕಿನ ವರ್ಗಾವಣೆ ಸಮಸ್ಯೆಗೆ ಪರಿಹಾರಕ್ಕಾಗಿ ಒತ್ತಾಯಿಸಿ ಶಿಕ್ಷಕರ ಸಂಘ ದಿಂದ ಧರಣಿ ವಿವರ ಇಲ್ಲಿದೆ

ಕರ್ನಾಟಕ..ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ.) ಬೆಂಗಳೂರು.

ಮಾನ್ಯ ಆಯುಕ್ತರಿಗೆ ಮಾನ್ಯ ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಮೂಲಕ ಮನವಿ ಸಲ್ಲಿಸುವುದು.

ಸಾಂಕೇತಿಕ ಧರಣಿಯಲ್ಲಿ ಜಿಲ್ಲಾ ಪದಾಧಿಕಾರಿಗಳು ಹಾಗೂ ಜಿಲ್ಲಾ ಕಾರ್ಯಕಾರಿ ಸಮಿತಿಯ ಎಲ್ಲಾ ಪದಾಧಿಕಾರಿಗಳು,ಸರ್ವ ಪದಾಧಿಕಾರಿಗಳು ಭಾಗವಹಿಸಿ ಸಾಂಕೇತಿಕ ಧರಣಿಯನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ.

ದಿನಾಂಕ:29-11-2021 ರಂದು ನಡೆಯುವ ಜಿಲ್ಲಾ ಮಟ್ಟದ ಕೌನ್ಸಿಲಿಂಗ್ ಪ್ರಕ್ರಿಯೆಯಲ್ಲಿ ರಾಜ್ಯದ ಬಹುತೇಕ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಸಂಘದ ನಿರಂತರ ಪ್ರಯತ್ನದಿಂದ ತಾಲೂಕುಗಳಲ್ಲಿ ಮಂಜೂರಾದ ಹುದ್ದೆಗಳಿಗೆ ಶೇಕಡ 25ರಷ್ಟು ಹುದ್ದೆಗಳನ್ನು ಪರಿಗಣಿಸಬೇಕೆಂಬ ಆದೇಶ ಆದರೂ ಕೂಡ ತಾಲೂಕಿನ ಒಳಗೆ ಮತ್ತು ತಾಲೂಕಿನ ಹೊರಗೆ ವರ್ಗಾವಣೆ ಆಗುತ್ತಿಲ್ಲ. ಕಾರಣ ಈ ಅಂಶವನ್ನು ತಮ್ಮ ಜಿಲ್ಲಾ ಮಟ್ಟದ ಕೌನ್ಸಿಲಿಂಗ್ ಸಂದರ್ಭದಲ್ಲಿ ಮಾನ್ಯ ಉಪನಿರ್ದೇಶಕರ ಗಮನಕ್ಕೆ ಈ ಪತ್ರದ ಜೊತೆ ಇರುವ ಮನವಿ ಪತ್ರವನ್ನು ಸಲ್ಲಿಸುವ ಮೂಲಕ ಸಾಂಕೇತಿಕ ಧರಣಿಯನ್ನು ಮಾಡಿ ಒತ್ತಾಯ ಮಾಡುವ ಮೂಲಕ ಯಾವ ತಾಲೂಕಿನಿಂದ ವರ್ಗಾವಣೆಯಾಗುವುದಿಲ್ಲವೋ, ಆ ತಾಲೂಕಿನ ಶಿಕ್ಷಕರಿಗೆ ನ್ಯಾಯ ಒದಗಿಸುವಂತೆ ನ್ಯಾಯಯುತ ಬೇಡಿಕೆಗಾಗಿ ಸಾಂಕೇತಿಕ ಧರಣಿಯ ಮೂಲಕ ಮಾನ್ಯ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿ ಸೂಕ್ತ ಕ್ರಮಕೈಗೊಳ್ಳಲು ಒತ್ತಾಯಿಸಬೇಕಾಗಿ ಮೂಲಕ ಸೂಚಿಸಲಾಗಿದೆ.

ಇಂದ,
KSPSTA,Bangalore

Sharing Is Caring:

Leave a Comment