ಆಲಂಕಾರು ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ನಿಂಗರಾಜು ಇವರಿಗೆ ಯೆನಪೋಯಾ ಶಿಕ್ಷಕ ಪ್ರಶಸ್ತಿ -2021

IMG 20211117 WA0001 min

ದ.ಕ.ಜಿ.ಪಂ.ಹಿ.ಪ್ರಾ ಶಾಲೆಯ ಮುಖ್ಯ ಗುರುಗಳಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಯುತ ನಿಂಗರಾಜು ಕೆ.ಪಿ.ಇವರ ಪ್ರಾಮಾಣಿಕ ಸೇವೆ, ಶಾಲೆಯನ್ನು ಸರ್ವತೋಮುಖ ಅಭಿವೃದ್ಧಿಯೆಡೆಗೆ ಸಾಗಿಸಿದ ಸಾಧನೆಗೆ ಯೆನಪೋಯ ಮೊಯ್ಯದ್ದೀನ್ ಕುಂ ಆಂಡ್ ಮೆಮೋರಿಯಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಇದರ ವತಿಯಿಂದ ಸಂಸ್ಥಾಪಕರ ದಿನಾಚರಣೆಯ ಪ್ರಯುಕ್ತ ‘ಯೆನಪೋಯ ಶಿಕ್ಷಕ ಪ್ರಶಸ್ತಿ’-2021ಯನ್ನು ನೀಡಲಾಯಿತು

IMG 20211117 WA0000 min

ಶಾಲೆಯನ್ನು ದಾನಿಗಳ ನೆರವಿನಿಂದ ಅಭಿವೃದ್ಧಿ ಪಥದೆಡೆಗೆ ಸಾಗುವಲ್ಲಿ ಕಾರಣಕರ್ತರಾಗಿ ಶಾಲೆಗೆ ಅಗತ್ಯವಾಗಿ ಬೇಕಾದ ಸುಸ್ಸಜ್ಜಿತ ಶಾಲಾ ಕಟ್ಟಡ, ಇಂಗ್ಲಿಷ್ ನಾವಿನ್ಯಯುತ ಕಲಿಕೆ,ಗುಬ್ಬಚ್ಚಿ ಸ್ಪೀಕಿಂಗ್ ಕಾರ್ಯಕ್ರಮ,ಹೆಣ್ಣುಮಕ್ಕಳ, ವಿಕಲಚೇತನರ ಶಿಕ್ಷಣಕ್ಕೆ ಪ್ರೋತ್ಸಾಹ, ಬಾಲಕಾರ್ಮಿಕರಾಗಿದ್ದ ಮಕ್ಕಳನ್ನು ಶಾಲೆಗೆ ಸೇರ್ಪಡೆ ಮಾಡುವುದು ಇತ್ಯಾದಿ ಕೆಲಸಗಳನ್ನು ಅತ್ಯಂತ ಉತ್ಸಾಹದಿಂದ ಯಶಸ್ವಿಯಾಗಿ ನಿರ್ವಹಿಸಿದ ಇವರು ತಮ್ಮ ಅದ್ಭುತ ಸಂಘಟನಾ ಸಾಮರ್ಥ್ಯದಿಂದ ಸಮಾಜದ ಮತ್ತು ಶಾಲಾ ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರರಾಗಿರುತ್ತಾರೆ.
ಸ.ಹಿ.ಪ್ರಾ.ಶಾಲೆ.ಅಲಂಕಾರು ಇಲ್ಲಿಯ ಸರ್ವತೋಮುಖ ಅಭಿವೃದ್ಧಿಗೆ ಬೆನ್ನೆಲುಬಾಗಿ ನಿಂತು ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಶ್ರೀಯುತರಿಗೆ ಈ ಪ್ರಶಸ್ತಿ ಸಂದಿರುವುದು ಹೆಮ್ಮೆಯ ವಿಷಯವಾಗಿದೆ.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ದಕ್ಷಿಣ ಕನ್ನಡ ಜಿಲ್ಲೆಯ ನಾಮನಿರ್ದೇಶಿತ ಉಪಾಧ್ಯಕ್ಷರಾಗಿ ರುವ ಇವರು ಉತ್ತಮ ಸಂಘಟಕರು ಆಗಿರುತ್ತಾರೆ.
ಇವರಿಗೆ ಜಿಲ್ಲೆಯ ಸಮಸ್ತ ಶಿಕ್ಷಕರ ಪರವಾಗಿ ಹಾರ್ದಿಕ ಅಭಿನಂದನೆಗಳು

Sharing Is Caring:

Leave a Comment