ವಿಶ್ವ ಪರಿಸರ ದಿನಆಚರಣೆಯ ಕುರಿತು ಮಾಹಿತಿ

WhatsApp Group Join Now
Telegram Group Join Now

“ವಿಶ್ವ ಪರಿಸರ ದಿನಾಚರಣೆ” ಜೂನ್-5 ರಂದು ಶಾಲಾ – ಕಾಲೇಜುಗಳ
ಹಂತದಲ್ಲಿ ಪರಿಸರ ಸಂರಕ್ಷಣೆ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು

ಪರಿಸರದ ಸುಸ್ಥಿರ ಬೆಳವಣಿಗೆಯಲ್ಲಿ ಶಾಲಾ ಮಕ್ಕಳ ಪಾತ್ರ ಪ್ರಮುಖವಾಗಿದೆ. ಈ
ಹಿನ್ನಲೆಯಲ್ಲಿ “ವಿಶ್ವ ಪರಿಸರ ದಿನಾಚರಣೆ “ಅಂಗವಾಗಿ ಶಾಲಾ ಹಂತದಲ್ಲಿ “ಪರಿಸರ
ಸಂರಕ್ಷಣೆ ಕುರಿತು ಮಕ್ಕಳಿಗೆ ಜಾಗೃತಿ ಮೂಡಿಸುವ ಚಟುವಟಿಕೆಗಳನ್ನು ಹಮ್ಮಿಕೊಂಡು
ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ ಮಾಡುವಂತೆ ಪ್ರೇರೇಪಿಸುವುದು.

ವಿಶ್ವಪರಿಸರ ದಿನಾಚರಣೆಯಂದು ಶಿಕ್ಷಕರು ಶಾಲಾ – ಕಾಲೇಜುಗಳ ಹಂತದಲ್ಲಿ
ಹಮ್ಮಿಕೊಳ್ಳಬೇಕಾದ ಚಟುವಟಿಕೆಗಳು:

  1. ಜೂನ್-5 ರಂದು ಶಿಕ್ಷಕರು ಶಾಲಾ-ಕಾಲೇಜುಗಳ ಆವರಣದಲ್ಲಿ ಸಸಿಗಳನ್ನು ನೆಟ್ಟು ಮಕ್ಕಳಿಗೆ ದತ್ತು ನೀಡಿ, ಅವುಗಳನ್ನು ಪೋಷಿಸುವುದರ ಮೂಲಕ ಶಾಲಾ
    ಕಾಲೇಜುಗಳನ್ನು ಹಸಿರು ವಾತಾವರಣವನ್ನಾಗಿ ರೂಪಿಸುವುದು.
  2. ಶಾಲಾ ಕಾಲೇಜುಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ತ್ಯಜಿಸುವುದು ಹಾಗೂ ಪ್ಲಾಸ್ಟಿಕ್ ಮುಕ್ತ ಶಾಲಾ-ಕಾಲೇಜುಗಳನ್ನಾಗಿ ಪರಿವರ್ತಿಸುವುದು.
  3. ಶಾಲೆಗಳಲ್ಲಿ ಅಡುಗೆ ಮನೆಯಿಂದ ಹೊರ ಹೋಗುವ ತ್ಯಾಜ್ಯ ನೀರಿನಿಂದ ಶಾಲಾ
    ಕೈತೋಟ ನಿರ್ಮಿಸುವುದು
  4. ಮಕ್ಕಳಿಗೆ ತ್ಯಾಜ್ಯದ ವಿಲೇವಾರಿ ಬಗ್ಗೆ ಜಾಗೃತಿ ಮೂಡಿಸಿ ಶಾಲಾ- ಕಾಲೇಜುಗಳ
    ಪರಿಸರವನ್ನು ಸ್ವಚ್ಛವಾಗಿಟ್ಟು, ಕೊಳ್ಳುವುದು
  5. ಶಿಕ್ಷಕರು ಪರಿಸರ ಮಾಲಿನ್ಯದಿಂದ (ಹವಾಮಾನ ವ್ಯಪರಿತ್ಯ ಉಂಟಾಗುವ
    ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದು.
  6. ಶಾಲಾ ಮಕ್ಕಳಿಂದ ಜಾಥಾ ಹೊರಟು ಘೋಷಣೆಗಳನ್ನು ಕೂಗಿ ಸಮುದಾಯದಲ್ಲಿ
    ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವುದು.
  7. ನೀರಿನ ಮಿತ ಬಳಕೆ ಹಾಗೂ ನೀರಿನ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸುವುದು.
  8. ಪರಿಸರ ಸಂರಕ್ಷಣೆ ಕುರಿತು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ, ಚರ್ಚಾ ಸ್ಪರ್ಧೆ
    ರಸಪ್ರಶ್ನೆ ಸ್ಪರ್ಧೆ, ಭಾಷಣ ಸ್ಪರ್ಧೆ, ಘೋಷವಾಕ್ಯಗಳ ರಚನೆ, ಕವನ, ವ್ಯಂಗ್ಯ ಚಿತ್ರಗಳ
    ರಚನೆ ಹಾಗೂ ಚಿತ್ರಕಲೆ ಮುಂತಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು.

WhatsApp Group Join Now
Telegram Group Join Now
Sharing Is Caring:

Leave a Comment