ಶುಭಾಶಯ ವಿನಿಮಯ
(ಮಕ್ಕಳೊಂದಿಗೆ ಶಿಕ್ಷಕರ
ಬೆಳಗಿನ ಕುಶಲೋಪರಿ)
ಸಾಮರ್ಥ್ಯ: ಶುಭಾಶಯಗಳು ಮತ್ತು ಸ್ವಾಗತದಂತಹ ಸಾಮಾಜಿಕ ನಡವಳಿಕೆಯ ಅಭಿವೃದ್ಧಿ, ಚಟುವಟಿಕೆಯ ಉದ್ದೇಶ:ಆತ್ಮೀಯತೆ ಭಾವನೆಯನ್ನು ಮೂಡಿಸುವುದು.
ಮಾತು ಕತೆ(ಶಿಕ್ಷಕರು ಮಕ್ಕಳೊಂದಿಗಿನ ಬೆಳಗಿನ )
ಸಾಮರ್ಥ್ಯ: ಸ್ವಯಂ ಪಚ್ಚೆ, ಧನಾತ್ಮಕ ವೈಯುಕ್ತಿಕ ಪರಿಕಲ್ಪನೆಗಳ ಅಭಿವೃದ್ಧಿ, ಆಲಿಸುವುದು ಮತ್ತು ಮಾತನಾಡುವುದು.
ಉದ್ದೇಶ: ತನ್ನ ಕುರಿತು ಮಾತನಾಡಲು ಪ್ರೇರೇಪಿಸುವುದು,
ನನ್ನ ಸಮಯ
ತರಗತಿಯ ಎಲ್ಲಾ ಕಲಿಕಾಮೂಲೆಗಳಿಗೆ ಶಿಕ್ಷಕರು ಮಕ್ಕಳನ್ನು ಕರೆದೊಯ್ದು, ಪ್ರತಿ ಮೂಲೆಯಲ್ಲಿನ ಸಾಮಗ್ರಿಗಳು ಹಾಗೂ ಅವುಗಳ ಬಳಕೆಯ ಕುರಿತು ಮಾರ್ಗದರ್ಶನ ಮಾಡುತ್ತಾರೆ ಹಾಗೂ ಕೆಲವು ಮಾದರಿ ಚಟುವಟಿಕೆಗಳನ್ನು ಪರಿಚಯಿಸುತ್ತಾರೆ.ಮಕ್ಕಳಿಗೆ ಪ್ರಶ್ನೆಗಳನ್ನು ಕೇಳುತ್ತ ಅವರ ಅರ್ಥೈಸಿಕೊಳ್ಳುವಿಕೆಯನ್ನು ಖಾತ್ರಿಪಡಿಸಿಕೊಳ್ಳುವುದು.
ಬುನಾದಿ ಸಂಖ್ಯಾ ಜ್ಞಾನ, ಪರಿಸರದ ಅರಿವು ಮತ್ತು ವೈಜ್ಞಾನಿಕ ಚಿಂತನೆ
(ಶಿಕ್ಷಕರಿಂದ ನಿರ್ದೇಶಿತ ಚಟುವಟಿಕೆ)
ಸಾಮರ್ಥ್ಯ : ದೃಷ್ಟಿ, ಜ್ಞಾನ, ಸ್ಮರಣೆ, ಪರಿಸರದ ಅರಿವು
ಸೃಜನಶೀಲ ಕಲೆ ಹಾಗೂ ಸೂಕ್ಷ್ಮ ಸ್ನಾಯುಚಟುವಟಿಕೆ)ಚಲನಾ ಕೌಶಲಗಳು(ಮಕ್ಕಳ ಚಟುವಟಿಕೆ )
ಸಾಮರ್ಥ್ಯ : ಸೂಕ್ಷ್ಮ ಚಲನಾ ಕೌಶಲಗಳ ಅಭಿವೃದ್ಧಿ ಮತ್ತು ಸೃಜನಶೀಲತೆಯ ವಿಕಾಸ, ಹಂಚಿಕೊಳ್ಳುವುದು.
ಆಲಿಸುವುದು ಮತ್ತು ಮಾತನಾಡುವುದು :
ಸಾಮರ್ಥ್ಯ: ನೆನಪಿಸಿಕೊಳ್ಳುವುದು, ಕ್ರಮಾನುಗತ ಆಲೋಚನೆ, ಪದ ಸಂಪತ್ತಿನ ಅಭಿವೃದ್ಧಿ, ಅನುಭವ ಹಂಚಿಕೆ
ಅರ್ಥಗ್ರಹಿಕೆ ಯೊಂದಿಗಿನ ಓದು
ಸಾಮರ್ಥ್ಯ: ಮುದ್ರಿತ ಪಠ್ಯದ ಅರಿವು, ಪದ ಗುರುತಿಸುವಿಕೆ, ಅರ್ಥಗ್ರಹಿಕೆ, ಪದ ಸಂಪತ್ತಿನ ಬೆಳವಣಿಗೆ ಮತ್ತು ಪರಿಸರದ ಅರಿವು.
ಉದ್ದೇಶಿತ ಬರೆಹ:
ಸಾಮರ್ಥ್ಯ: ಬರವಣಿಗೆಯ ಆರಂಭಿಕ ಕೌಶಲಗಳನ್ನು ಅಭ್ಯಾಸ ಮಾಡಿಸುವುದು, ಬರವಣಿಗೆಯೆಡೆಗೆ ಮಕ್ಕಳನ್ನು ಸೆಳೆಯುವುದು.
ಹೊರಾಂಗಣ ಆಟಗಳು
ಸಾಮರ್ಥ್ಯ: ಸ್ಕೂಲ ಸ್ನಾಯು ಚಲನ ಕೌಶಲ ಬೆಳವಣಿಗೆ, ನಿರ್ಧಾರ ತೆಗೆದುಕೊಳ್ಳುವಿಕೆ.
ಕಥಾ ಸಮಯ
ಶೀರ್ಷಿಕೆ : ಸಿಂಹ ಮತ್ತು ಇಲಿ
ಸಾಮಗ್ರಿಗಳು : ಕಥೆಯ ಸಾಹಿತ್ಯ
ಉದ್ದೇಶಗಳು :> ಆಲಿಸುವ ಸಾಮರ್ಥ್ಯ ಬೆಳೆಸುವುದು.
> ಊಹಿಸುವ ಕೌಶಲವನ್ನು ಹೆಚ್ಚಿಸುವುದು
ವಿಧಾನ : ಕಥಾ ಸಾಹಿತ್ಯ ನಿರೂಪಣೆಶಿಕ್ಷಕರು ಕಥೆ ಹೇಳುವ ಮುನ್ನ ಕಥೆಯನ್ನು ಓದಿ ಅರ್ಥೈಸಿಕೊಳ್ಳಬೇಕು.
> ಕಥೆ ಹೇಳುವಾಗ ಶಿಕ್ಷಕರು ಮಕ್ಕಳೊಂದಿಗೆ ವೃತ್ತದಲ್ಲಿ ಕುಳಿತುಕೊಳ್ಳಬೇಕು.
> ಸೂಕ್ತ ಆಂಗಿಕ ಚಲನೆಯೊಂದಿಗೆ ಸರಳ ಭಾಷೆಯಲ್ಲಿ ಕಥೆಯನ್ನು ಹೇಳಬೇಕು.ಸರಳ ಪ್ರಶ್ನೆಗಳು ಕೇಳಿ ಕಥೆಯನ್ನು ಅರ್ಥೈಸಬೇಕು.
ಕಥೆ :
ಒಮ್ಮೆ ಕಾಡಿನ ರಾಜನಾದ ಸಿಂಹವು ಆಹಾರಕ್ಕಾಗಿ ಕಾಡೆಲ್ಲಾ ಅಲೆದಾಡಿತು. ಎಷ್ಟು ಹುಡುಕಾಡಿದರೂ ಆ ದಿನ ಒಂದೂಪ್ರಾಣಿಯು ಅದರ ಕಣ್ಣಿಗೆ ಬೀಳಲಿಲ್ಲ. ಸಮಯ ಮೀರಿದ್ದರಿಂದ ಕಂಗಾಲಾದ ಸಿಂಹವು ಸುಸ್ತಾಗಿ ಒಂದು ಮರದಡಿಯಲ್ಲಿ ಮಲಗಿತು.ಇದರ ಪರಿವೆಯೇ ಇಲ್ಲದೇ ಇಲಿ ಮರಿಯೊಂದು ಮರದ ಬುಡದಲ್ಲಿದ್ದ ಬಿಲದಿಂದ ಹೊರಗೆ ಬಂದು ಆಟವಾಡತೊಡಗಿತ್ತು.ಆಟವಾಡುತ್ತಾ ಸಿಂಹದ ಮೈಮೇಲೆಲ್ಲಾ ಓಡಾಡುತ್ತಿತ್ತು. ಇದರಿಂದ ಸಿಟ್ಟಿಗೆದ್ದ ಸಿಂಹವು ತನ್ನ ಕೈಯಲ್ಲಿ ಇಲಿಮರಿಯನ್ನು ಹಿಡಿದು, ಎಲೈಪಿಳ್ಳೆಯೇ ನೀನು ನನ್ನ ಬೆರಳಿನಷ್ಟಿರುವೆ. ನನ್ನ ಮೈಮೇಲೆ ಓಡಾಡಲು ನಿನಗೆಷ್ಟು ಧೈರ್ಯ? ಹಸಿವೆಯಿಂದ ಬಳಲುತ್ತಿರುವ ನನ್ನ ನಿದ್ರಾಭಂಗಮಾಡಿದೆ. ನಿನ್ನನ್ನು ಈಗಲೇ ಒಂದೇ ಬಾರಿಗೆ ತಿಂದು ಮುಗಿಸುವೆ ಎಂದು ಘರ್ಜಿಸಿತು. ಅದಕ್ಕೆ ಹೆದರಿದ ಇಲಿಮರಿಯು ಅಯ್ಯಾ!ಮೃಗರಾಜ ತಿಳಿಯದೇ ತಪ್ಪು ಮಾಡಿದೆ. ನನ್ನನ್ನು ಬಿಟ್ಟು ಬಿಡು. ಮೇಲಾಗಿ ನನ್ನನ್ನು ತಿಂದರೂ ಹೊಟ್ಟೆ ತುಂಬಲಾರದು, ದಯವಿಟ್ಟುಕನಿಕರಿಸು ಎಂದು ಅಂಗಲಾಚಿತು. ಇಂದು ನನ್ನನ್ನು ಬಿಟ್ಟು ಉಪಕಾರ ಮಾಡಿದರೆ, ನಾನು ನಿನಗೆ ಎಂದಾದರೂ ಸಹಾಯ ಮಾಡುವೆಎಂದಿತು. ಒಂದುಕ್ಷಣ ಆಲೋಚಿಸಿದ ಸಿಂಹವು ಕಾಡಿನ ರಾಜನಾದ ನನಗೆ ನಿನ್ನ ಸಹಾಯವೇ!? ಎಂದು ಅಪಹಾಸ್ಯದಿಂದ ನಗುತ್ತಾ,ಎಲ್ಲಾದರೂ ಹೋಗಿ ಬದುಕಿಕೊ ಎಂದು ಹೇಳಿ ಇಲಿ ಮರಿಯನ್ನು ಬಿಸಾಡಿತು. ಬದುಕಿದೆಯಾ ಬಡಜೀವವೇ ಎಂದು ಇಲಿಯು ಓಡಿಬಿಲವನ್ನು ಸೇರಿಕೊಂಡಿತು. ಕೆಲವು ದಿನಗಳ ನಂತರ ದೂರದಲೆಲ್ಲೋ ಸಿಂಹವು ಕಾಪಾಡಿ, ಕಾಪಾಡಿ ಎಂದು ಚೀರುತ್ತಿದ್ದ ಧ್ವನಿಇಲಿಮರಿಗೆ ಕೇಳಿಸಿತು. ಆ ಧ್ವನಿ ಬಂದ ದಿಕ್ಕಿಗೆ ಇಲಿಮರಿಯು ಓಡಿಹೋಗಿ ನೋಡಿತು. ಸಿಂಹವು ಬಲೆಯೊಳಗೆ ಬಿದ್ದುಹೊರಬರಲಾರದೇ ಒದ್ದಾಡುತ್ತಿತ್ತು. ಇದನ್ನು ಗಮನಿಸಿದ ಇಲಿಯು ಎಲೈ ರಾಜನೇ ಸ್ವಲ್ಪ ನಿಲ್ಲು, ನಾನು ನನ್ನ ಚೂಪಾದಹಲ್ಲುಗಳಿಂದ ಈ ಬಲೆಯನ್ನು ಕತ್ತರಿಸಿ ನಿನ್ನನ್ನು ಪಾರು ಮಾಡವೆ ಎಂದಿತು. ಅದೇ ರೀತಿ ಬಲೆಯನ್ನು ಕಟ್.ಕಟ್… ಎಂದು ಕಡಿದುಸಿಂಹವನ್ನು ಬಿಡಿಸಿತು. ಬಲೆಯಿಂದ ಹೊರಬಂದ ಸಿಂಹವು ಇಲಿಮರಿಗೆ ಕೃತಜ್ಞತೆಯನ್ನು ತಿಳಿಸಿತು. ಇಲಿಯು ಸಿಂಹವು ತನಗೆ ಮಾಡಿದಉಪಕಾರಕ್ಕೆ ಪ್ರತ್ಯುಪಕಾರವನ್ನು ಮಾಡಿದೆನೆಂಬ ಸಂತೋಷದಿಂದ ತನ್ನ ಬಿಲವನ್ನು ಸೇರಿಕೊಂಡಿತು. ಕಥೆಯನ್ನು ಹೇಳಿದ ನಂತರ ಸರಳ ಪ್ರಶ್ನೆಗಳನ್ನು ಕೇಳಿ.