2021-22 ಶಿಕ್ಷಕರ ಮಕ್ಕಳಿಗೆ ಉನ್ನತ ವ್ಯಾಸಂಗಕ್ಕಾಗಿ ಧನಸಹಾಯ ಕೋರಿ ಅರ್ಜಿ ಆಹ್ವಾನಿಸಲಾಗಿದೆ

WhatsApp Group Join Now
Telegram Group Join Now

2021-22ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಶಿಕ್ಷಕರ ಮಕ್ಕಳ ಉನ್ನತ ವ್ಯಾಸಂಗಕ್ಕಾಗಿ ಧನಸಹಾಯ ಮಂಜೂರು ಮಾಡುವ ಸಲುವಾಗಿ ರಾಷ್ಟ್ರೀಯ ಶಿಕ್ಷಕರ ಕಲ್ಯಾಣ ನಿಧಿಯಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆಅರ್ಜಿ ಸಲ್ಲಿಸಲು ಅಂತಿಮ ದಿನಾಂಕ31/12/21

Shikahakar kalyana nidhi
Shikahakar kalyana nidhi

2021-22ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಶಿಕ್ಷಕರ ಮಕ್ಕಳ ಉನ್ನತ ವ್ಯಾಸಂಗಕ್ಕಾಗಿ ಧನಸಹಾಯ ಮಂಜೂರು ಮಾಡುವ ಸಲುವಾಗಿ ರಾಷ್ಟ್ರೀಯ ಶಿಕ್ಷಕರ ಕಲ್ಯಾಣ ನಿಧಿಯಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.ಅರ್ಜಿಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಂತರ್ಜಾಲದಿಂದ ಪಡೆದುಕೊಳ್ಳಬಹುದಾಗಿದೆ.ಆಯಾ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಕಛೇರಿಗೆ ಅರ್ಜಿಗಳನ್ನು ಸಲ್ಲಿಸುವುದು.

ಈ ಕೆಳಕಂಡ ನ್ಯೂನತೆ ಇರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ:-
👉🏻ನಿಯಂತ್ರಣಾಧಿಕಾರಿಯ ಸಹಿ ಇಲ್ಲದೆ ನೇರವಾಗಿ ಶಿಕ್ಷಕರೇ ಸಲ್ಲಿಸಿದ ಅರ್ಜಿಗಳು
👉🏻 ಅಜೀವ ಸದಸ್ಯತ್ವ ಪಡೆಯದ ಸದಸ್ಯರು(ಅಜೀವ ಸದಸ್ಯರ ಕಾರ್ಡ್ ಪ್ರತಿ ಕಡ್ಡಾಯವಾಗಿ ಲಗತ್ತಿಸುವುದು
👉🏻 ಅರ್ಜಿಯಲ್ಲಿ ನಮೂದಾಗದೇ ಇರುವ ಕೋರ್ಸ್ಗಳಿಗೆ ಅವಕಾಶವಿಲ್ಲ
👉🏻 CA,Phd ಕೋರ್ಸ್ಗಳಿಗೆ ಧನಸಹಾಯವಿಲ್ಲ
👉🏻 ಶಿಕ್ಷಕರ ಸಹಿ ಇಲ್ಲದ ಅರ್ಜಿಗಳು.(ಬೋಧಕೇತರ ಸಿಬ್ಬಂದಿ)
👉🏻ನಿವೃತ್ತ/ ಮೃತ ಶಿಕ್ಷಕರ ಪಿಂಚಣಿ ಪತ್ರ/ವಾರಸುದಾರರ ಪ್ರಮಾಣ ಪತ್ರ ಇಲ್ಲದ ಅರ್ಜಿಗಳಿಗೆ ಅವಕಾಶವಿಲ್ಲ.
👉🏻 ಪತಿ ಪತ್ನಿ ಇಬ್ಬರೂ ಅರ್ಜಿ ಸಲ್ಲಿಸಿದ್ದಲ್ಲಿ ಒಬ್ಬರ ಅರ್ಜಿಯನ್ನು ಪರಿಗಣಿಸಲಾಗುವುದು.
👉🏻ತಿದ್ದುಪಡಿ ಮಾಡಲಾದ ಅರ್ಜಿಗಳು
👉🏻ಪ್ರಸಕ್ತ ಸಾಲಿನಲ್ಲಿ ವ್ಯಾಸಂಗ ಮಾಡದಿರುವ ಮಕ್ಕಳಿಗೆ ಅವಕಾಶವಿಲ್ಲ.
👉🏻ಅನುತ್ತೀರ್ಣ/ಸಂಜೆಕಾಲೇಜು/ಖಾಸಗಿ/ಬಾಹ್ಯ/ಮುಕ್ತ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಧನ ಸಹಾಯದ ಅವಕಾಶವಿಲ್ಲ.
👉🏻ಶಿಕ್ಷಕರಲ್ಲದವರ ಅರ್ಜಿಗಳು
👉🏻ಅಪೂರ್ಣ ಅರ್ಜಿಗಳು
👉🏻31.12.2021ರ ನಂತರ ಬಂದ ಅರ್ಜಿಗಳು
👉🏻ವ್ಯಾಸಂಗ ಪ್ರಮಾಣ ಪತ್ರ ಸಲ್ಲಿಸದ ಅರ್ಜಿಗಳು
👉🏻 ಮೃತ ಶಿಕ್ಷಕ ವಾರಸುದಾರ/ಮೃತಪ್ರಮಾಣ ಪತ್ರ ಇಲ್ಲದ ಅರ್ಜಿಗಳು
👉🏻ಅರ್ಜಿದಾರನ ಹೆಸರು ಮತ್ತು ಸಲ್ಲಿಸಿದ ಅರ್ಜಿಯಲ್ಲಿ ವ್ಯತ್ಯಾಸ ಕಂಡುಬಂದಲ್ಲಿ
👉🏻ರಾಷ್ಟ್ರೀಕೃತ ಬ್ಯಾಂಕ್ ಗಳು ವಿಲೀನವಾದ ಕಾರಣ ಪ್ರಸ್ತುತ ಚಾಲ್ತಿಯಲ್ಲಿರುವ ಬ್ಯಾಂಕ್ ಅಕೌಂಟ್ ನಂಬರ್ ಮತ್ತು IFSC ಕೋಡನ್ನು ಕಡ್ಡಾಯವಾಗಿ ನಮೂದಿಸುವುದು.
👉🏻 2021-22ಸಾಲಿನ ಹೊಸ ಅರ್ಜಿಯ ನಮೂನೆಯಲ್ಲಿ ಸಲ್ಲಿಸುವುದು.

ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 24-12-2021
ಕಚೇರಿಯಿಂದ ಸಲ್ಲಿಸಲು ಕೊನೆಯ ದಿನಾಂಕ:-31-12-2021

ಮೃತ ಶಿಕ್ಷಕರು/ಪ್ರಾಧ್ಯಾಪಕರು/ಉಪನ್ಯಾಸಕರು/ನಿವೃತ್ತ ಶಿಕ್ಷಕರು ನೇರವಾಗಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 31-12-2021
ಈ ಸುತ್ತೋಲೆಯೊಂದಿಗೆ ಲಗತ್ಯಿರುವ ಪ್ರಕಟಣೆಯನ್ನು ಮತ್ತು ಅರ್ಜಿ ನಮೂನೆಯನ್ನು (schooleducation kar.nic.in ) ಅಂತರ್ಜಾಲ ವಿಳಾಸದಿಂದ ಡೌನ್ಲೋಡ್ ಮಾಡಿಕೊಳ್ಳಬಹುದು

ಸೂಚನೆ:-
ಕೊನೆಯ ದಿನಾಂಕದ ನಂತರ ಬಂದ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ.

WhatsApp Group Join Now
Telegram Group Join Now
Sharing Is Caring:

Leave a Comment