ಸೇವಾ ನಿರತ ಪದವೀಧರ ಶಿಕ್ಷಕರಿಗೆ 25% ರಿಂದ 33% ರವರೆಗೆ ತದನಂತರ 33% ರಿಂದ 40% ರವರೆಗೆ ಪರೀಕ್ಷೆಯನ್ನು ರದ್ದುಗೊಳಿಸಿ ಹೆಚ್ಚುವರಿ ಭಡ್ತಿ ಕೊಡಿಸಿ 6 ರಿಂದ 8 ಕ್ಕೆ ಪರಿಗಣಿಸುವ ಐತಿಹಾಸಿಕ ಆದೇಶ ಮಾಡಿಸಿದ ಸನ್ಮಾನ್ಯ ಶಿಕ್ಷಣ ಸಚಿವರಾದ ಬಿ.ಸಿ ನಾಗೇಶ್ ಇವರನ್ನು ಈ ದಿನ ಮಂಗಳೂರಿಗೆ ಆಗಮಿಸಿದ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಘಟಕ ದಕ್ಷಿಣ ಕನ್ನಡದ ವತಿಯಿಂದ ಅಭಿನಂದಿಸಿ ಜಿ.ಪಿ.ಟಿ ಶಿಕ್ಷಕರ ನೇಮಕಾತಿಗೂ ಮೊದಲೇ ಸೇವಾ ನಿರತ ಪದವೀಧರ ಶಿಕ್ಷಕರಿಗೆ ಸೇವಾ ಜೇಷ್ಟತೆಯನ್ನು ಒಳಗೊಂಡು ಭಡ್ತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಮನವಿ ಸಲ್ಲಿಸಲಾಯಿತು.ಸೇವಾ ನಿರತ ಪದವೀಧರ ಶಿಕ್ಷಕರಿಗೆ ಯಾವುದೇ ರೀತಿ ತೊಂದರೆ ಆಗದಂತೆ ಪ್ರಕ್ರಿಯೆಯನ್ನು ಅತೀ ಶೀಘ್ರ ಪೂರ್ಣ ಗೊಳಿಸುವುದಾಗಿ ತಿಳಿಸಿದ ಮಾನ್ಯ ಸಚಿವರಿಗೆ ರಾಜ್ಯದ ಸಮಸ್ತ ಶಿಕ್ಷಕರ ಪರವಾಗಿ ಅನಂತ ವಂದನೆಗಳು