---Advertisement---

​2026-27 ನೇ ಸಾಲಿನ ಪಠ್ಯಪುಸ್ತಕ ಬೇಡಿಕೆ ಸಂಬಂಧ ಪ್ರಮುಖ ಮಾಹಿತಿ

By kspstadk.com

Published On:

Follow Us
Textbook demand and supply
---Advertisement---
WhatsApp Group Join Now
Telegram Group Join Now

ಕರ್ನಾಟಕ ಪಠ್ಯಪುಸ್ತಕ ಸಂಘ (ರಿ), ಬೆಂಗಳೂರು ​2026-27 ನೇ ಸಾಲಿನ ಪಠ್ಯಪುಸ್ತಕ ಬೇಡಿಕೆ ಸಂಬಂಧ ಸಮಸ್ಯೆಗಳು ಮತ್ತು ಪರಿಹಾರ

ಮಾನ್ಯ ಅಪರ ಮುಖ್ಯ ಪ್ರಧಾನ ಕಾರ್ಯದರ್ಶಿಗಳು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇವರ ನಿರ್ದೇಶನದಂತೆ ದ್ವಿಭಾಷಾ ಮಾಧ್ಯಮದ ನಂತರ 6 ನೇ ತರಗತಿಗೆ ಬಡ್ತಿ ಪಡೆಯುವ ವಿದ್ಯಾರ್ಥಿಗಳಿಗೆ ಆಂಗ್ಲ ಮಾಧ್ಯಮದ ಪಠ್ಯಪುಸ್ತಕಗಳಿಗೆ ಬೇಡಿಕೆ ಸಲ್ಲಿಸಬೇಕು. ರಾಜ್ಯದಲ್ಲಿ ಇಂತಹ 4134 ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮ ತರಗತಿಗಳು ನಡೆಯುತ್ತಿವೆ.

2026-27 ನೇ ಸಾಲಿನಲ್ಲಿ ವಿದ್ಯಾರ್ಥಿಗಳ ವಾಸ್ತವ ಸಂಖ್ಯೆಗೆ ಮಾತ್ರ ಬೇಡಿಕೆ ಸಲ್ಲಿಸಲು ಮಿತಿಗೊಳಪಡಿಸಿದೆ. ಆದರೂ ನೆರೆಹೊರೆ ಶಾಲೆಗಳಿಂದ ದಾಖಲಾಗುವ ತರಗತಿಗಳಲ್ಲಿ ಹೆಚ್ಚುವರಿಯಾಗಿ ವಿದ್ಯಾರ್ಥಿಗಳು ದಾಖಲಾಗುವ ಸಂಭವ ಇರುವುದರಿಂದ 1, 6, 8 ಮತ್ತು 9 ನೇ ತರಗತಿಗಳ ಬೇಡಿಕೆ ಮಿತಿಯನ್ನು ಎಸ್.ಎ.ಟಿ.ಎಸ್ ನಲ್ಲಿ ತೆಗೆಯಲು ಕೋರಿರುವುದು ಸರಿಯಷ್ಟೆ. ಆದರೆ ದಾಖಲಾತಿಯಲ್ಲಿ ಹೆಚ್ಚಳ ಕಂಡು ಬಂದಲ್ಲಿ ಹೆಚ್ಚುವರಿ ಬೇಡಿಕೆ ಸಲ್ಲಿಸುವ ಪ್ರಕ್ರಿಯೆಗೆ ಮುಂದಿನ ದಿನಗಳಲ್ಲಿ ಅವಕಾಶ ಮಾಡಿಕೊಡಲಾಗುವುದು. ಇದು ಖಾಸಗಿ ಶಾಲೆಗಳಿಗೂ ಅನ್ವಯವಾಗುತ್ತದೆ.

ಸರ್ಕಾರದ ಆದೇಶದಂತೆ ಕಡ್ಡಾಯವಾಗಿ ಎಲ್ಲಾ ಖಾಸಗಿ ಶಾಲೆಗಳು ಕೆ.ಟಿ.ಬಿ.ಎಸ್ ಮೂಲಕ ಪಠ್ಯಪುಸ್ತಕಗಳನ್ನು ಮಾರಾಟ ವಿಭಾಗದಿಂದ ಸಂಬಂಧಿಸಿದ ಶೀರ್ಷಿಕೆಗಳಿಗೆ ಬೇಡಿಕೆ ಸಲ್ಲಿಸಬೇಕು. ಸಿ.ಬಿ.ಎಸ್.ಸಿ ಹಾಗೂ ಐ.ಸಿ.ಎಸ್.ಸಿ ಶಾಲೆಗಳು ಪ್ರಥಮ ಅಥವಾ ದ್ವಿತೀಯ ಭಾಷೆ ಕನ್ನಡ ಪಠ್ಯಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ಕಲಿಸಬೇಕಿರುವುದರಿಂದ ಸದರಿ ಪಠ್ಯಪುಸ್ತಕಗಳಿಗೆ ಬೇಡಿಕೆ ಸಲ್ಲಿಸಬೇಕು.

ದ್ವಿಭಾಷಾ ತರಗತಿಗಳಿಗೆ ಪ್ರಥಮ ಭಾಷೆ ಕನ್ನಡ ಮತ್ತು ಎನ್.ಸಿ.ಆರ್.ಟಿ ಯ ಮೃದಂಗ್ (1 ಮತ್ತು 2 ನೇ ತರಗತಿ) ಹಾಗೂ ಸಂತೂರ್ (3 ರಿಂದ 5 ನೇ ತರಗತಿ) ಪುಸ್ತಕಗಳನ್ನು ಆಯ್ಕೆ ಮಾಡಿಕೊಳ್ಳಬೇಕು.

2026-27 ನೇ ಶೈಕ್ಷಣಿಕ ಸಾಲಿಗೆ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಪಠ್ಯಪುಸ್ತಕಗಳು ಇರುವುದಿಲ್ಲ.

ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ 1 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣ ಪಠ್ಯವಸ್ತುವನ್ನು ಒಳಗೊಂಡ ಮೌಲ್ಯ ಶಿಕ್ಷಣ (ದ್ವಿಭಾಷಾ) ಪಠ್ಯಪುಸ್ತಕ ಜಾರಿಗೆ ಬರಲಿದೆ.

ಸರ್ಕಾರಿ ಶಾಲೆಗಳಲ್ಲಿ ಪ್ರಾರಂಭವಾಗಿರುವ ಪೂರ್ವ ಪ್ರಾಥಮಿಕ ತರಗತಿಗಳಿಗೆ (ಎಲ್.ಕೆ.ಜಿ ಹಾಗೂ ಯು.ಕೆ.ಜಿ) ಬಾಲಚೇತನ ಚಟುವಟಿಕೆ ಪುಸ್ತಕಗಳನ್ನು ಪರಿಚಯಿಸಲಾಗುತ್ತಿದೆ.

5 ನೇ ತರಗತಿಯವರೆಗೆ ದ್ವಿಭಾಷಾ ತರಗತಿಗಳಲ್ಲಿ ಕಲಿತು 6 ನೇ ತರಗತಿಗೆ ದಾಖಲಾಗುವ ಕೆ.ಪಿ.ಎಸ್. ಶಾಲೆ ವಿದ್ಯಾರ್ಥಿಗಳು ಆಂಗ್ಲ ಮಾಧ್ಯಮದ ಪಠ್ಯಪುಸ್ತಕಗಳನ್ನು ಕಲಿಯಬೇಕು. ಅಂದರೆ (ಪ್ರಥಮ ಭಾಷೆ-ಕನ್ನಡ, ಆಂಗ್ಲ ಭಾಷೆ-ಎನ್.ಸಿ.ಇ.ಆರ್.ಟಿ-ಪೂರ್ವಿ, ಹಿಂದಿ-ವಲ್ಲರಿ, ಗಣಿತ (ಆಂಗ್ಲ ಮಾಧ್ಯಮ) ವಿಜ್ಞಾನ (ಆಂಗ್ಲ ಮಾಧ್ಯಮ) ಸಮಾಜ ವಿಜ್ಞಾನ (ಆಂಗ್ಲ ಮಾಧ್ಯಮ)).

ತಮ್ಮ ಶಾಲೆಗೆ ಅಗತ್ಯವಿರುವ ಶೀರ್ಷಿಕೆಗಳು ಎಸ್.ಎ.ಟಿ.ಎಸ್ ನಲ್ಲಿ ಪ್ರದರ್ಶನಗೊಳ್ಳದಿದ್ದರೆ ಸಂಬಂಧಿಸಿದ ತಾಲೂಕು ನೋಡಲ್ ಅಧಿಕಾರಿಗಳು ಸಂಪೂರ್ಣ ಮಾಹಿತಿಯೊಂದಿಗೆ ಹಾಗೂ ಸ್ಕ್ರೀನ್ ಶಾಟ್ ಮೂಲಕ ಜಿಲ್ಲಾ ನೋಡಲ್ ಅಧಿಕಾರಿಗಳ ಮೂಲಕ ರಾಜ್ಯ ಹಂತದ ಅಧಿಕಾರಿಗಳೊಂದಿಗೆ ಸಂವಹನ ಸಾಧಿಸಿ ಸರಿಪಡಿಸಿಕೊಳ್ಳುವುದು.

ಸಂಬಂಧಿಸಿದ ತಾಲೂಕು ನೋಡಲ್ ಅಧಿಕಾರಿಗಳು ಸಂಪೂರ್ಣ ಮಾಹಿತಿಯೊಂದಿಗೆ ಹಾಗೂ ಸ್ಕ್ರೀನ್ ಶಾಟ್ ಮೂಲಕ ಜಿಲ್ಲಾ ನೋಡಲ್ ಅಧಿಕಾರಿಗಳ ಮೂಲಕ ರಾಜ್ಯ ಹಂತದ ಅಧಿಕಾರಿಗಳೊಂದಿಗೆ ಸಂವಹನ ಸಾಧಿಸಿ ಸರಿಪಡಿಸಿಕೊಳ್ಳುವುದು.

ಪಠ್ಯಪುಸ್ತಕ ಬೇಡಿಕೆ, ಪೂರೈಕೆಗೆ ಸಂಬಂಧ ಆನ್ ಲೈನ್ ಕಾರ್ಯಗಳು ನಿರಂತರವಾಗಿ ನಡೆಯುವುದರಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ನಿರ್ದೇಶನದಂತೆ ಈ ಕಾರ್ಯವನ್ನು ಯೋಜಿಸಿಕೊಳ್ಳುವುದು.

ಶೂನ್ಯ ದಾಖಲಾತಿಯ ತರಗತಿಗಳಿಗೆ 2026-27 ನೇ ಸಾಲಿಗೆ ಬೇಡಿಕೆ ಸಲ್ಲಿಸಲು ಅವಕಾಶ ನೀಡಿರುವುದಿಲ್ಲ. ಶೂನ್ಯ ದಾಖಲಾತಿಯ ತರಗತಿಗಳಿಗೆ ದಾಖಲಾತಿಯಾದಲ್ಲಿ ಅಂತಹ ತರಗತಿಗಳಿಗೆ ಮುಂದಿನ ದಿನಗಳಲ್ಲಿ ಬೇಡಿಕೆ ಪಡೆದು ಪಠ್ಯಪುಸ್ತಕಗಳನ್ನು ವಿತರಿಸಲಾಗುವುದು.

ಅಂತಹ ಶಾಲೆಯ ಮಾಹಿತಿಯನ್ನು ಜಿಲ್ಲಾ ಉಪ ನಿರ್ದೇಶಕರು ಕೂಡಲೇ ಆಯುಕ್ತರ ಪ್ರೌಢ ಶಿಕ್ಷಣ ನಿರ್ದೇಶಕರಿಗೆ ಮಾಹಿತಿಯನ್ನು ಸಲ್ಲಿಸಿ ಅನುಮೋದನೆ ಪಡೆಯುವುದು.

5 ನೇ ತರಗತಿಯವರೆಗೆ ದ್ವಿಭಾಷಾ ತರಗತಿಗಳಲ್ಲಿ ಕಲಿತು 6 ನೇ ತರಗತಿಗೆ ದಾಖಲಾಗುವ ದ್ವಿಭಾಷಾ ಮಾಧ್ಯಮ ವಿದ್ಯಾರ್ಥಿಗಳು ಆಂಗ್ಲ ಮಾಧ್ಯಮದ ಪಠ್ಯಪುಸ್ತಕಗಳನ್ನು ಕಲಿಯಬೇಕು. ಅಂದರೆ (ಪ್ರಥಮ ಭಾಷೆ-ಕನ್ನಡ, ಆಂಗ್ಲ ಭಾಷೆ-ಎನ್.ಸಿ.ಇ.ಆರ್.ಟಿ-ಪೂರ್ವ, ಹಿಂದಿ-ವಲ್ಲರಿ, ಗಣಿತ (ಆಂಗ್ಲ ಮಾಧ್ಯಮ) ವಿಜ್ಞಾನ(ಆಂಗ್ಲ ಮಾಧ್ಯಮ) ಸಮಾಜ ವಿಜ್ಞಾನ(ಆಂಗ್ಲ ಮಾಧ್ಯಮ))

2026-27 ನೇ ಶೈಕ್ಷಣಿಕ ಸಾಲಿಗೆ ಹೊಸದಾಗಿ ಪ್ರಾರಂಭವಾಗಲು ಅನುಮತಿ ಸಿಕ್ಕಿರುವ ತರಗತಿಗಳಿಗೆ ಬೇಡಿಕೆ ಸಲ್ಲಿಸಲು ಅಧಿಕೃತ ಅನುಮತಿ ಪತ್ರದೊಂದಿಗೆ ಸಂಬಂಧಿಸಿದ ಉಪನಿರ್ದೇಶಕರ ಮನವಿ ಪತ್ರದೊಂದಿಗೆ ಕೆ.ಟಿ.ಬಿ.ಎಸ್ ಗೆ ಪತ್ರವ್ಯವಹಾರ ಮಾಡಿ ಅಂತಹ ತರಗತಿಗಳಿಗೆ ಬೇಡಿಕೆ ಸಲ್ಲಿಸಲು ಅವಕಾಶ ಪಡೆದುಕೊಳ್ಳುವುದು.

ಸಂಬಂಧಿಸಿದ ದಾಖಲೆಗಳೊಂದಿಗೆ ಕೆ.ಟಿ.ಬಿ.ಎಸ್ ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಿ ಸರಿಪಡಿಸಿಕೊಳ್ಳುವುದು.

Join WhatsApp

Join Now

Join Telegram

Join Now

Leave a Comment