ಶಿಕ್ಷಕರ ಸಂಘದಿಂದ ಮಾನ್ಯ ಉಪನಿರ್ದೇಶಕರ ಭೇಟಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಂಪೂರ್ಣ ಮಾಹಿತಿ ಇಲ್ಲಿದೆ

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಿ ಬೆಂಗಳೂರು ದಕ್ಷಿಣ ಕನ್ನಡ ಜಿಲ್ಲೆ ಇದರ ವತಿಯಿಂದ ಮಾನ್ಯ ಉಪನಿರ್ದೇಶಕರು ಶ್ರೀ ಸುಧಾಕರ ಇವರನ್ನು ಭೇಟಿಯಾಗಿ ಈ ಕೆಳಗಿನ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಲಾಯಿತು.

👉 ಮುಖ್ಯಗುರಗಳ ಹುದ್ದೆಗೆ ಭಡ್ತಿಗೆ ಸಂಬಂಧಿಸಿದಂತೆ ಈಗಾಗಲೇ ಪ್ರಕಟಿಸಿರುವ ದಕ್ಷಿಣ ಕನ್ನಡ ಜಿಲ್ಲಾ ಸಹಶಿಕ್ಷಕರ ಮತ್ತು ಮುಖ್ಯ ಗುರುಗಳ ಜೇಷ್ಠ ತಾ ಪಟ್ಟಿಯಲ್ಲಿನ ಮಾಹಿತಿಯನ್ನು ಸರಿಪಡಿಸಲು ಆಕ್ಷೇಪಣೆ ನೀಡುವ ಕುರಿತು ಚರ್ಚಿಸಲಾಗಿ ,ಶಾಲಾವರು ಮುಖ್ಯಗುರುಗಳ ಮೂಲಕ ಮಾಹಿತಿಯನ್ನು ದೃಢೀಕರಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನೀಡುವಂತೆ ತಿಳಿಸಿದ್ದು ಈ ಕುರಿತು ಇಲಾಖೆಯಿಂದ ಸೂಕ್ತ ಸೂಚನೆಯನ್ನು ನೀಡುವುದಾಗಿ ತಿಳಿಸಿರುತ್ತಾರೆ

👉ಗುರುಸೇವೆ ಕಾರ್ಯಕ್ರಮದ ಮೂಲಕ ಮಾಹಿತಿ ನೀಡಿರುವ ಮೆಡಿಕಲ್ ಬಿಲ್ ಬಾಕಿ ಇರುವ ಶಿಕ್ಷಕರ ಬಿಲ್ ಗಳನ್ನು ಶೀಘ್ರ ಮಂಜೂರಾತಿಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿರುತ್ತಾರೆ ಮತ್ತು ಮೆಡಿಕಲ್ ಬಿಲ್ ಸಲ್ಲಿಸುವಾಗ ನೀಡಬೇಕಾದ ಮಾಹಿತಿಯ ಕುರಿತಾದ ಅಧಿಕೃತ ಚೆಕ್ ಲಿಸ್ಟ್ ಅನ್ನು ಇಲಾಖೆಯಿಂದ ಹೊರಡಿಸುವುದಾಗಿ ತಿಳಿಸಿರುತ್ತಾರೆ

👉ಕಡಿತ ಗೊಳಿಸಿರುವ ರಜಾ ಅವಧಿಯನ್ನು ಮರು ಪರಿಶೀಲಿಸುವಂತೆ ಮತ್ತು ರಜಾ ಅವಧಿಯಲ್ಲಿ ಯಾವುದೇ ತರಬೇತಿ ಹಮ್ಮಿಕೊಳ್ಳದಂತೆ ವಿನಂತಿ ಮಾಡಲಾಯಿತು

👉ಉರ್ದು ಶಿಕ್ಷಕರ ಜೇಷ್ಟತಾ ಪಟ್ಟಿಯನ್ನು ಪ್ರತ್ಯೇಕ ಪ್ರಕಟಿಸುವಂತೆ ಮನವಿ ಸಲ್ಲಿಸಲಾಯಿತು

👉ಶಿಕ್ಷಕಿಯರ ಆರೋಗ್ಯ ತಪಾಸಣೆಯ ಕುರಿತು ಚರ್ಚಿಸಲಾಗಿ , ಈ ಯೋಜನೆಯು ಉತ್ತಮ ಯೋಜನೆಯಾಗಿದ್ದು ಶಿಕ್ಷಕಿಯರಿಗೆ ಅನುಕೂಲ ಆಗುವಂತೆ ಸಮೀಪದ ತಪಾಸಣಾ ಕೇಂದ್ರದಲ್ಲಿ ತಪಾಸಣೆಗೆ ಹಾಜರಾಗಿ ಮಾಹಿತಿ ನೀಡುವಂತೆ ಮತ್ತು ಅಗತ್ಯ ಬಂದಲ್ಲಿ ದಿನಾಂಕವನ್ನು ವಿಸ್ತರಿಸುವುದಾಗಿ ತಿಳಿಸಿರುತ್ತಾರೆ ಮತ್ತು ಶಿಕ್ಷಕಿಯರ ಆರೋಗ್ಯದ ದೃಷ್ಟಿಯಿಂದ ಕಡ್ಡಾಯವಾಗಿ ಆರೋಗ್ಯ ತಪಾಸಣೆಗೆ ಹಾಜರಾಗುವಂತೆ ತಿಳಿಸಿರುತ್ತಾರೆ

ಮನವಿಗಳಿಗೆ ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದ ಮಾನ್ಯ ಉಪನಿರ್ದೇಶಕರಿಗೆ ಅನಂತ ಧನ್ಯವಾದಗಳು

Sharing Is Caring:

Leave a Comment