---Advertisement---

ಹೆಚ್ಚುವರಿ ಶಿಕ್ಷಕರು ಹೆಚ್ಚುವರಿಯಿಂದ ವಿನಾಯಿತಿ ಕೋರಿ ಅರ್ಜಿ ಸಲ್ಲಿಸುವ ಕುರಿತು ಮಾಹಿತಿ ಇಲ್ಲಿದೆ.

By kspstadk.com

Updated On:

Follow Us
---Advertisement---
WhatsApp Group Join Now
Telegram Group Join Now

ಆತ್ಮೀಯ ಶಿಕ್ಷಕರೇ,
ಹೆಚ್ಚುವರಿ ಶಿಕ್ಷಕರು ವಿನಾಯಿತಿ ಪಡೆದುಕೊಳ್ಳಬೇಕಾದರೆ EEDS ನ Employee login ನಲ್ಲಿ ಲಾಗಿನ್ ಆಗಿ Raise excess transfer exmpetion ಅನ್ನು ಕ್ಲಿಕ್ ಮಾಡಿದಾಗ ವಿನಾಯಿತಿ ಪಡೆಯುವ ಪ್ರಕರಣಗಳು ಕಾಣುತ್ತವೆ. ಅದರಲ್ಲಿ ಮೊದಲು rule 10 for KCSR ನಲ್ಲಿ YES ಎಂದು ಕ್ಲಿಕ್ ಮಾಡಿ ತಮಗೆ ಅನ್ವಯಿಸುವ (ಈ ಮೇಲಿನ PDF file ನಲ್ಲಿ ತೋರಿಸಿರುವ) ಪ್ರಕರಣದ ಮುಂದೆ YES ಎಂದು ಕ್ಲಿಕ್ ಮಾಡಿ ಅದಕ್ಕೆ ಸಂಬಂಧಿಸಿದ Document ನ್ನು Upload ಮಾಡುವುದು. ನಂತರ Diclaration ಮುಂದೆ ಇರುವ ಬಾಕ್ಸ್ ಮೇಲೆ ಕ್ಲಿಕ್ ಮಾಡಿ Submit ಮಾಡುವುದು. ಆಗ ತಮ್ಮ objection BEO login ಗೆ ಹೋಗುತ್ತದೆ.ತದನಂತರ ಮೇಲಾಧಿಕಾರಿಗಳು ಅದರ ಪರಿಶೀಲನೆ ಮಾಡಿ Accept or reject ಮಾಡುತ್ತಾರೆ. ಕಡ್ಡಾಯವಾಗಿ ಹೆಚ್ಚುವರಿ ಶಿಕ್ಷಕರು *EEDS Employee login ನಲ್ಲಿಯೇ Objection file ಮಾಡಬೇಕಾಗುತ್ತದೆ

ಹೆಚ್ಚುವರಿ ಪಟ್ಟಿಯಲ್ಲಿರುವ ಶಾಲೆಗಳ ಶಿಕ್ಷಕರು ಕೂಡಾ ತಮ್ಮ ಹೆಸರು ಇರದಿದ್ದರೂ ವಿನಾಯತಿಗೆ ಅರ್ಹರಿದ್ದಲ್ಲಿ ದಾಖಲೆ ಸಿದ್ದಪಡಿಸಿಕೊಳ್ಳಲು ಕೋರಿಕೆ

ಕೆಳಕಂಡ ವಿನಾಯಿತಿಗಳನ್ನು ಕೋರಿ ಅರ್ಜಿ ಸಲ್ಲಿಸಬಹುದು

1ತಾಲ್ಲೂಕಿನೊಳಗೆ ಚಿಕಿತ್ಸೆ ಸಿಗದಿರುವ ಮಾರಕ ಕಾಯಿಲೆ ಅಥವಾ ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ಶಿಕ್ಷಕ/ಶಿಕ್ಷಕಿ ಅಥವಾ ಅವರ ಪತಿ/ಪತ್ನಿ ಅಥವಾ ಮಕ್ಕಳು ಇದ್ದಲ್ಲಿ ಬಗ್ಗೆ ಜಿಲ್ಲಾ ವೈದ್ಯಕೀಯ ಮಂಡಳಿಯಿಂದ ಪಡೆದ ಪ್ರಮಾಣ ಪತ್ರ

2..ಶೇಕಡಾ 40ರಷ್ಟು ಅಥವಾ ಅದಕ್ಕಿಂತ ಹೆಚ್ಚು ಅಂಗವೈಕಲ್ಯವಿರುವ ಶಿಕ್ಷಕ/ಶಿಕ್ಷಕಿ ಅಥವಾ ಪತಿ/ಪತ್ನಿ ಅಥವಾ ಮಕ್ಕಳು ಇದ್ದಲ್ಲಿ ಬಗ್ಗೆ ಜಿಲ್ಲಾ ವೈದ್ಯಕೀಯ ಮಂಡಳಿಯಿಂದ ಪಡೆದ ಪ್ರಮಾಣ ಪತ್ರ
3..12 ವರ್ಷಗಳ ಒಳಗಿನ ಅವಲಂಬಿತ ಮಕ್ಕಳು ಇರುವ ವಿಧವೆ /ವಿಧುರ ಅಥವಾ ವಿವಾಹ ವಿಚ್ಚೇದಿತ ಶಿಕ್ಷಕ/ಶಿಕ್ಷಕಿ, ಶಿಕ್ಷಕರ ಪತಿ ಅಥವಾ ಪತ್ನಿ ಮರಣ ಪ್ರಮಾಣ ಪತ್ರ/ ನ್ಯಾಯಾಲಯದ ಡಿಕ್ರಿ/ಮುಸಲ್ಮಾನರಾಗಿದ್ದಲ್ಲಿ ಮಸೀದಿ ಸಮಿತಿಯಿಂದ ನೀಡಲಾದ ಖುಲನಾಮಾ, ತಲಾಖ್-ನಾಮ ಅಥವಾ ತಲಾಖ್-ಇ-ಮುಬಾರತ್ ಮತ್ತು ಮರುವಿವಾಹ ಮಾಡಿಕೊಳ್ಳದಿರುವ ಬಗ್ಗೆ ಮ್ಯಾಜಿಸ್ಟ್ರೇಟ್ ಅಫಿಡವಿಟ್. ಹಾಗೂ ಮಗುವಿನ ವಯಸ್ಸು ಧೃಡೀಕರಿಸುವ ದಾಖಲೆ.

4..ಭಾರತೀಯ ರಕ್ಷಣಾ ದಳಗಳು ಅಥವಾ ಅರೆಮಿಲಿಟರಿ ದಳಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸೈನಿಕ ಅಥವಾ ನಿವೃತ್ತಿ ಹೊಂದಿದ ಅಥವಾ ಶಾಶ್ವತವಾಗಿ ಅಂಗವಿಕಲರಾದ ಅಥವಾ ಮೃತ ಸೈನಿಕರ ಪತಿ ಅಥವಾ ಪತ್ನಿಯಾಗಿರುವ ಶಿಕ್ಷಕರು ಕಮಾಂಡಿಂಗ್ ಆಫೀಸರ್ ಅಥವಾ ನಿರ್ದೇಶಕರು, ಸೈನಿಕ ಕಲ್ಯಾಣ ಮಂಡಳಿಯಿಂದ ಪಡೆದ ಪ್ರಮಾಣ ಪತ್ರ.
5..ಪತಿ ಪತ್ನಿ ಪ್ರಕರಣದಲ್ಲಿ ವಿನಾಯತಿ ಇರುವುದಿಲ್ಲ ಆದರೆ ಆದ್ಯತೆ ಇರುತ್ತದೆ

6..ಮಹಿಳಾ ಶಿಕ್ಷಕರ ಸಂದರ್ಭದಲ್ಲಿ ಐವತ್ತು ವರ್ಷಗಳು ಮತ್ತು ಪುರುಷ ಶಿಕ್ಷಕರ ಸಂದರ್ಭದಲ್ಲಿ ಐವತ್ತೈದು ವರ್ಷಗಳನ್ನು ಮೀರಿದ ಶಿಕ್ಷಕರು ಸೇವಾ ರಿಜಿಸ್ಟರ್ ಪ್ರಕಾರ ಡಿಡಿಒ ರವರಿಂದ ಪಡೆದ ದೃಢೀಕರಣ ಪತ್ರ ಪಡೆಯುವದು

7..ಗರ್ಭಿಣಿ ಶಿಕ್ಷಕಿ ಅಥವಾ 01 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವನ್ನು ಹೊಂದಿರುವ ಮಹಿಳಾ ಶಿಕ್ಷಕರು ಜಿಲ್ಲಾ ವೈದ್ಯಕೀಯ ಮಂಡಳಿಯಿಂದ ಪಡೆದ ಪ್ರಮಾಣ ಪತ್ರ ಲಗತ್ತಿಸುವದು

ಮೇಲಿನ ಪ್ರಕರಣಗಳಲ್ಲಿ ಆದ್ಯತೆ/ ವಿನಾಯಿತಿಗಳು ಅಧಿನಿಯಮದ ಸೆಕ್ಷನ್-10 ಮತ್ತು ನಿಯಮಗಳಲ್ಲಿನ ನಿಯಮ-10ರಂತೆ ಮತ್ತು ತಿದ್ದುಪಡಿ ಅಧಿನಿಯಮ-2022 ಹಾಗೂ ತಿದ್ದುಪಡಿ ನಿಯಮ ನಿಯಮಗಳು-2022 ಸಂದರ್ಭಾನುಸಾರ ಇರುತ್ತವೆ. ಈ ಬಗ್ಗೆ ಯಾವ ಪ್ರಕರಣಗಳು ಆದ್ಯತೆ ಪಡೆಯಲು ಅರ್ಹ ಮತ್ತು ಯಾವ ಪ್ರಕರಣಗಳು ವಿನಾಯಿತಿಯನ್ನು ಪಡೆಯಲು ಅರ್ಹ ಎಂಬ ಕುರಿತಂತೆ ಸದರಿ ಸೆಕ್ಷನ್ ಮತ್ತು ನಿಯಮಗಳನ್ನು ಕಡ್ಡಾಯವಾಗಿ ಗಮನಿಸತಕ್ಕದ್ದು. ಆದ್ಯತೆ/ ವಿನಾಯಿತಿ ಕೋರುವ ಶಿಕ್ಷಕರು ಕಡ್ಡಾಯವಾಗಿ ಇಇಡಿಎಸ್‌ನಲ್ಲಿ ನಮೂದುಗಳನ್ನು ಮಾಡಿರತಕ್ಕದ್ದು ಮತ್ತು ಅಗತ್ಯ ದಾಖಲೆಗಳನ್ನು ನಿಗದಿತ ಕಾಲಾವಧಿಯಲ್ಲಿ ಸಲ್ಲಿಸಿರತಕ್ಕದ್ದು. ಈ ಪ್ರಮಾಣ ಪತ್ರಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದ ಒಳಗೆ ಅರ್ಹತೆ ಹೊಂದಿರುವ ಪ್ರಮಾಣ ಪತ್ರಗಳಾಗಿರಬೇಕು ಮತ್ತು ಪ್ರಮಾಣ ಪತ್ರಗಳನ್ನು ನಿಗದಿಪಡಿಸಿರುವ ಆಯಾ ಸಕ್ಷಮ ಪ್ರಾಧಿಕಾರಿಯವರಿಂದ ಪಡೆದಿರಬೇಕಾಗುತ್ತದೆ.

ಅಂಗವಿಕಲ ಶಿಕ್ಷಕರು ಕೇಂದ್ರ/ರಾಜ್ಯ ಸರ್ಕಾರದಿಂದ ನೀಡಲಾಗಿರುವ “UNIQUE DISABILITY ID” (ಶಾಶ್ವತ ಅಂಗವಿಕಲ ಪ್ರಮಾಣ ಪತ್ರ ಪಡೆದಿದ್ದಲ್ಲಿ ಅದನ್ನು ಮತ್ತೊಮ್ಮೆ ಮರು ವೈದ್ಯಕೀಯ ಪರಿಶೀಲನೆಗೆ ಒಳಪಡಿಸುವ ಷರತ್ತಿನೊಂದಿಗೆ ಪರಿಗಣಿಸಲಾಗುವುದು (ಕಾರಣ: ಕಳೆದ ಸಾಲಿನಲ್ಲಿ ಶಾಶ್ವತ ಅಂಗವಿಕಲ ಪ್ರಮಾಣ ಪತ್ರ ಪಡೆದಿದ್ದು ಮರು ವೈದ್ಯಕೀಯ ನೈಜತೆ ಪರಿಶೀಲನೆಯಲ್ಲಿ ಶೇ 40% ಕ್ಕಿಂತ ಕಡಿಮೆ ಅಂಗವಿಕಲತೆಯ ಪ್ರಮಾಣ ಇರುವುದು ಕಂಡುಬಂದಿದ್ದು ಇದರಿಂದ ನೈಜ ಅಂಗವಿಕಲರಿಗೆ ಆಗುವ ಅನ್ಯಾಯ/ತಾರತಮ್ಯವನ್ನು ತಪ್ಪಿಸುವುದಾಗಿದೆ).

ರಾಜ್ಯದ ಎಲ್ಲಾ ಉಪನಿರ್ದೇಶಕರು ತಮ್ಮ ಜಿಲ್ಲೆಯಲ್ಲಿನ ಅಂಗವಿಕಲ/ವೈದ್ಯಕೀಯ ಪ್ರಕರಣದಡಿಯಲ್ಲಿ ವಿನಾಯಿತಿ/ಆದ್ಯತೆ ಕೋರುವ ಶಿಕ್ಷಕರ ವೈದ್ಯಕೀಯ ತಪಾಸಣೆ ನಡೆಸಲು ಜಿಲ್ಲಾ ಮಟ್ಟದ ತ್ರಿಸದಸ್ಯ ವೈದ್ಯಕೀಯ ಮಂಡಳಿಯನ್ನು ರಚಿಸಿ ಹೃದಯ, ಲಿವರ್, ಕಿಡ್ನಿ ಮತ್ತು ಶ್ವಾಸಕೋಶಗಳ ಸಂಬಂಧಿಸಿದ ತೀವ್ರತರವಾದ ಖಾಯಿಲೆಯಿಂದ (Terminally ill) ಅಥವಾ ಕ್ಯಾನ್ಸರ್‌ನಂತಹ ತೀವ್ರತರವಾದ (Terminally ill) ಖಾಯಿಲೆಯಿಂದ ಬಳಲುತ್ತಿರುವ, ಪ್ರಸ್ತುತ ಚಿಕಿತ್ಸೆ ಪಡೆಯುತ್ತಿರುವ ಹಾಗೂ ಸದರಿ ಚಿಕಿತ್ಸೆ ಆ ತಾಲ್ಲೂಕಿನಲ್ಲಿ ಲಭ್ಯವಿಲ್ಲದಿರುವ ಬಗ್ಗೆ ಹಾಗೂ ಶೇ 40% ಮತ್ತು ಹೆಚ್ಚಿನ ಅಂಗವೈಕಲ್ಯತೆ ಇರುವ ಬಗ್ಗೆ ಪರೀಕ್ಷಿಸಿ ವೈದ್ಯಕೀಯ ಪ್ರಮಾಣ ಪತ್ರದಲ್ಲಿ ಕಡ್ಡಾಯವಾಗಿ ಖಾಯಿಲೆಯ ಸ್ವರೂಪ/ತೀವ್ರತೆ, ಶಿಕ್ಷಕರ/ಅವಲಂಬಿತರ ಭಾವಚಿತ್ರ, ಕೆ.ಜಿ.ಐ.ಡಿ ಸಂಖ್ಯೆ, ಶಾಲೆಯ ವಿಳಾಸ ಶಿಕ್ಷಕರು ಹಾಗೂ ಅವಲಂಬಿತರಿಗಿರುವ ಸಂಬಂಧದ ವಿವರವನ್ನು ಸ್ಪಷ್ಟವಾಗಿ ತ್ರಿಸದಸ್ಯ ವೈದ್ಯಕೀಯ ಮಂಡಳಿಯ ಪ್ರಮಾಣ ಪತ್ರದಲ್ಲಿ ನಮೂದಿಸಿ ನೀಡಲು ತಮ್ಮ ಜಿಲ್ಲೆಯ ಜಿಲ್ಲಾ ಆಸ್ಪತ್ರೆಯ ಆಡಳಿತಾಧಿಕಾರಿಗಳಿಗೆ ಪತ್ರ ಬರೆದು ಕ್ರಮವಹಿಸಲು ತಿಳಿಸಿದೆ.

ತೀವ್ರತರವಾದ ಖಾಯಿಲೆಯಿಂದ ಶಿಕ್ಷಕರು/ಅವಲಂಭಿತರು ಬಳಲುತ್ತಿದ್ದು ಪ್ರಸ್ತುತ ಅರ್ಜಿ ಸಲ್ಲಿಸುವಾಗ ಅಧಿಸೂಚನೆ ಪ್ರಕಟಣೆಯ ಪೂರ್ವದಲ್ಲಿ ಈ ಹಿಂದೆ ಕನಿಷ್ಟ ಪಕ್ಷ 6 ತಿಂಗಳಿನ ಒಳಗೆ ಒಳರೋಗಿಯಾಗಿ/ಹೊರರೋಗಿಯಾಗಿ ಚಿಕಿತ್ಸೆ ಪಡೆದಿರುವ ಬಗ್ಗೆ ಹಾಗೂ ವೈದ್ಯರ ಶಿಫಾರಸ್ಸಿನನ್ವಯ ಅನುಸರಣಾ ಚಿಕಿತ್ಸೆ ಪಡೆದಿರುವ, ವೈದ್ಯರ ಸಲಹಾ ಚೀಟಿ, ಔಷಧ ಖರೀದಿಸಿದ ರಶೀದಿ, ಒಂದು ವೇಳೆ ಈ ಹಿಂದೆ ಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾದ ಬಿಡುಗಡೆ ಸಾರಾಂಶವನ್ನು (ಡಿಸ್ಟಾರ್ಜ್ ಸಮ್ಮರಿಯನ್ನು) ಕಡ್ಡಾಯವಾಗಿ ಸಲ್ಲಿಸುವುದು. ಇವುಗಳನ್ನು ಕಡ್ಡಾಯವಾಗಿ ವೈದ್ಯಕೀಯ ಪ್ರಮಾಣ ಪತ್ರದ ಜೊತೆಯಲ್ಲಿ ಅಪ್‌ಲೋಡ್ ಮಾಡತಕ್ಕದ್ದು. ಒಂದು ವೇಳೆ ನೈಜ ಮೂಲ ದಾಖಲೆಗಳನ್ನು ತಂತ್ರಾಂಶದಲ್ಲಿ ಅಪ್‌ ಲೋಡ್ ಮಾಡಿದ ನಂತರ ಯಾವುದೇ ಬದಲಾವಣೆಗೆ ಅವಕಾಶವಿರುವುದಿಲ್ಲ. ಪ್ರಮಾಣ ಪತ್ರದ ಮೂಲ ದಾಖಲೆಗಳನ್ನು ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ಸಲ್ಲಿಸತಕ್ಕದ್ದು.

KSPSTA DK

WhatsApp Group Join Now
Telegram Group Join Now

Join WhatsApp

Join Now

Join Telegram

Join Now

Leave a Comment