ಶಾಲಾ ಶಿಕ್ಷಣ ಇಲಾಖೆಯ ಪ್ರಾಥಮಿಕ ಶಾಲಾ ಮುಖ್ಯಗುರುಗಳನ್ನೊಳಗೊಂಡಂತೆ, ಪ್ರಾಥಮಿಕ ಶಾಲಾ ಶಿಕ್ಷಕರು, ಪ್ರೌಢಶಾಲಾ ಶಿಕ್ಷಕರು, ಪ್ರೌಢಶಾಲಾ ಮುಖ್ಯಗುರುಗಳು ಹಾಗೂ ತತ್ಸಮಾನ ಅಧಿಕಾರಿಗಳಿಗೆ ವರ್ಗಾವಣೆ ಕುರಿತಂತೆ ಮಾರ್ಗಸೂಚಿಗಳನ್ನೊಳಗೊಂಡಂತೆ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.
15.03.2024ರ ಅಧಿಸೂಚನೆಯಂತೆ ಕಡ್ಡಾಯ ವಲಯ ವರ್ಗಾವಣೆಯನ್ನೊಳಗೊಂಡಂತೆ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆ ಪ್ರಾರಂಭಿಸಲಾಗಿತ್ತು. ಆದರೆ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ವರ್ಗಾವಣೆ ಪ್ರಕ್ರಿಯೆಯನ್ನು ಮುಂದುವರೆಸಲು ಸಾಧ್ಯವಾಗಿರಲಿಲ್ಲ. ಶೈಕ್ಷಣಿಕ ವರ್ಷ ಪ್ರಾರಭವಾದ ನಂತರ ವಲಯ ವರ್ಗಾವಣೆ ನಡೆಸುವುದು ಸೂಕ್ತವಲ್ಲದ ಕಾರಣ 2024-25ನೇ ಸಾಲಿನಲ್ಲಿ ವಲಯ ವರ್ಗಾವಣೆ ಪ್ರಕ್ರಿಯೆ ಕೈ ಬಿಡಲಾಗಿದೆ.
ಸಾಮಾನ್ಯ/ಪರಸ್ಪರ ವರ್ಗಾವಣೆ ಅರ್ಜಿಯನ್ನುಆನ್ಲೈನ್ ಮೂಲಕ ನಿರ್ವಹಿಸಬೇಕಾಗಿದ್ದು, ವರ್ಗಾವಣೆ ಪ್ರಕ್ರಿಯೆಗಳು ಇಲಾಖೆಯ ತಂತ್ರಾಂಶದಲ್ಲಿಯೇ ನಿರ್ವಹಿಸುವುದು ಕಡ್ಡಾಯವಾಗಿರುತ್ತದೆ. ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ನಿಗದಿತ ವೇಳಾಪಟ್ಡಿಯಂತೆ ವರ್ಗಾವಣೆ ಪ್ರಕ್ರಿಯೆ ನಿರ್ವಹಿಸಲು ಸಾಧ್ಯವಾಗದ ಹಿನ್ನೆಲೆಯ ವೇಳಾಪಟ್ಟಿಯನ್ನು ಪರಿಷ್ಕರಿಸಿದ್ದು, ಅರ್ಜಿ ಸಲ್ಲಿಸುವ ದಿನಾಂಕವನ್ನು 26/06/2024 ರ ವರೆಗೆ ವಿಸ್ತರಿಸಲಾಗಿದೆ. ಮಾರ್ಗಸೂಚಿಯಲ್ಲಿ ತಿಳಿಸಿರುವಂತೆ ಶಿಕ್ಷಕರ ವರ್ಗಾವಣೆ ಕಾಯ್ದೆ/ನಿಯಮಗಳು- 2020 ಹಾಗೂ ತಿದ್ದುಪಡಿ ಕಾಯಿದೆ/ನಿಯಮಗಳು-2022ರಂತೆ ಕ್ರಮವಹಿಸಲು ಸೂಚಿಸಿದೆ.
ಪ್ರಾಥಮಿಕ ಶಿಕ್ಷಕರ ಜಿಲ್ಲಾ ಹಂತದ ವರ್ಗಾವಣೆ
*ಅಂತಿಮ ಜೇಷ್ಠತಾ ಪಟ್ಟಿ ಪ್ರಕಟಣೆ 18/07/2024
*ಖಾಲಿ ಹುದ್ದೆಗಳ ಪ್ರಕಟಣೆ 23/07/2024
*ಕೌನ್ಸೆಲಿಂಗ್ ಕೋರಿಕೆ24/07/2024ರಿಂದ 25/07/2024
*ಪರಸ್ಪರ ಕೌನ್ಸಿಲಿಂಗ್ ಮುಂಜಾನೆ 29/07/2024:-ವಿಭಾಗೀಯ ಹಂತದ ವರ್ಗಾವಣೆ:-
*ಅಂತಿಮ ಜೇಷ್ಠತಾ ಪಟ್ಟಿ ಪ್ರಕಟ18/07/2024
*ಖಾಲಿ ಹುದ್ದೆಗಳ ಪ್ರಕಟಣೆ 01/08/2024
*ಕೋರಿಕೆ.ವ.ಕೌನ್ಸಿಲಿಂಗ್02/8/2024ರಿಂದ05/08/2024ಪರಸ್ಪರ ಕೌನ್ಸಿಲಿಂಗ್ 12/08/2024 ಮುಂಜಾನೆ :-ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ:-
೧) ಜಿಲ್ಲಾ ಹಂತ
*ಅಂತಿಮ ಜೇಷ್ಠತಾ ಪಟ್ಟಿ ಪ್ರಕಟ 18/07/2024
*ಖಾಲಿ ಹುದ್ದೆ ಪ್ರಕಟಣೆ 23/07/2024
*ಕೋರಿಕೆ ವ. ಕೌನ್ಸಲಿಂಗ್ 26/07/2024ರಿಂದ27/07/24
*ಪರಸ್ಪರ ಕೌನ್ಸಿಲಿಂಗ್ 29/07/24 ಮಧ್ಯಾಹ್ನ
:-ವಿಭಾಗಿಯ ಹಂತ
*ಅಂತಿಮ ಜೇಷ್ಠತಾ ಪಟ್ಟಿ 18/07/2024
*ಖಾಲಿ ಹುದ್ದೆ ಪ್ರಕಟಣೆ 01/08/2024
*ಕೋರಿಕೆ ವ. ಕೌನ್ಸಲಿಂಗ್ 06/08/2024ರಿಂದ08/08/24
*ಪರಸ್ಪರ ಕೌನ್ಸಲಿಂಗ್ 12/08/24 ಮಧ್ಯಾಹ್ನ
:-ಅಂತರ್ ವಿಭಾಗದ ಕೌನ್ಸಿಲಿಂಗ್:-
*ಖಾಲಿ ಹುದ್ದೆ ಪ್ರಕಟ14/08/2024
*ಕೋರಿಕೆ ಕೌನ್ಸಿಲಿಂಗ್ ಪ್ರಾಥಮಿಕ ವಿಭಾಗ 17/08/24ರಿಂದ20/8/24
*ಪರಸ್ಪರ ಕೌನ್ಸಿಲಿಂಗ್ 27/8/24
*ಕೋರಿಕೆ ಕೌನ್ಸಿಲಿಂಗ್ ಪ್ರೌಢ ವಿಭಾಗ 21/8/24ರಿಂದ23/8/24
*ಪರಸ್ಪರ ಕೌನ್ಸಿಲಿಂಗ್ 27/8/24