ಶಿಕ್ಷಕರ ಕಲ್ಯಾಣ ನಿಧಿಯಿಂದ ಶಿಕ್ಷಕರಿಗೆ ದೊರೆಯುವ ವಿವಿಧ ಸವಲತ್ತುಗಳ ವಿವರ ಇಲ್ಲಿದೆ

ಶಿಕ್ಷಕರ ಕಲ್ಯಾಣ ನಿಧಿಯಿಂದ ಶಿಕ್ಷಕರಿಗೆ ದೊರೆಯುವ ವಿವಿಧ ಸವಲತ್ತುಗಳ ವಿವರ ಇಲ್ಲಿದೆ.

ಶಿಕ್ಷಕರ ಕಲ್ಯಾಣ ನಿಧಿ ಸಹಾಯಧನಕ್ಕೆ ಶಿಕ್ಷಕರು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31/10/2022

ಮಾಹಿತಿ ಪುಸ್ತಕ ಮತ್ತು ಅರ್ಜಿ ನಮೂನೆಗಳು ಕೆಳಗೆ ನೀಡಲಾಗಿದೆ

ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯಡಿಯಲ್ಲಿ ಶಿಕ್ಷಕರಿಗೆ ನೀಡಲಾಗುತ್ತಿರುವ ಸೌಲಭ್ಯಗಳು:

1) ಶಿಕ್ಷಕರಿಗೆ ಹಾಗೂ ಅವರ ಅವಲಂಬಿತರಿಗೆ ವೈದ್ಯಕೀಯ ಧನ ಸಹಾಯ :
ಶಿಕ್ಷಕರಿಗೆ / ನಿವೃತ್ತ ಶಿಕ್ಷಕರಿಗೆ ಹಾಗೂ ಅವರ ಅವಲಂಬಿತರಿಗೆ ಖಾಯಿಲೆಯ ತೀವ್ರತೆಯನ್ನು ಆಧರಿಸಿ ಗರಿಷ್ಠ ರೂ. 50,000/- ಗಳ ಮಿತಿಗೊಳಪಟ್ಟು ವೈದ್ಯಕೀಯ ಧನ ಸಹಾಯವನ್ನು ನೀಡಲಾಗುತ್ತಿದೆ

2) ಸೇವೆಯಲ್ಲಿರುವಾಗ ಹಾಗೂ ನಿವೃತ್ತಿಯ ನಂತರ ಮೃತ ಹೊಂದಿದ ಶಿಕ್ಷಕರ ಕುಟುಂಬಗಳಿಗೆ ಕುಟುಂಬ ನಿರ್ವಹಣೆಗಾಗಿ ಧನ ಸಹಾಯ :
ಸರ್ಕಾರಿ ಮತ್ತು ಅನುದಾನಿತ ಶಾಲಾ ಶಿಕ್ಷಕರು ಸೇವೆಯಲ್ಲಿರುವಾಗಲೇ / ನಿವೃತ್ತಿಯ ನಂತರ ಮೃತಪಟ್ಟಲ್ಲಿ ಅವರ ವಾರಸುದಾರರಿಗೆ ಕುಟುಂಬ ಪಿಂಚಣಿ ಮಂಜೂರಾತಿಗೆ ಮುನ್ನ ತುರ್ತು ಕುಟುಂಬ ನಿರ್ವಹಣೆಗಾಗಿ ಸೇವೆಯಲ್ಲಿರುವಾಗ ಮೃತಪಟ್ಟಲ್ಲಿ ರೂ. 10,000/-ಗಳ ಧನಸಹಾಯ, ನಿವೃತ್ತಿಯ ನಂತರ ಮೃತಪಟ್ಟಲ್ಲಿ ರೂ.5,000/-ಗಳ ಧನಸಹಾಯವನ್ನು ನೀಡಲಾಗುವುದು.

3) ಶಿಕ್ಷಕರ ಮಕ್ಕಳ ಉನ್ನತ ವ್ಯಾಸಂಗಕ್ಕೆ ಧನ ಸಹಾಯ:
ಶಿಕ್ಷಕರಿಗೆ ಹಾಗೂ ನಿವೃತ್ತ ಶಿಕ್ಷಕರಿಗೆ ಪಿ.ಯು.ಸಿ ಯಿಂದ ಪದವಿ ತರಗತಿಗಳಲ್ಲಿ (ಡಿಪ್ಲೊಮಾ ಸೇರಿದಂತೆ) ವ್ಯಾಸಂಗ ಮಾಡುತ್ತಿರುವ ಅವರ ಮಕ್ಕಳ ವ್ಯಾಸಂಗಕ್ಕಾಗಿ ಕೋರ್ಸುಗಳನ್ನು ಆಧರಿಸಿ ಕನಿಷ್ಠ ರೂ. 1,000/- ರಿಂದ ಗರಿಷ್ಠ ರೂ. 3,000/-ಗಳ ಧನಸಹಾಯವನ್ನು ನೀಡಲಾಗುತ್ತಿದೆ.

4)ಶಿಕ್ಷಕರ / ನಿವೃತ್ತ ಶಿಕ್ಷಕರ ಮಕ್ಕಳಿಗೆ ಪ್ರತಿಭಾ ವಿದ್ಯಾರ್ಥಿ ವೇತನ:
ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಪದವಿ ಹಾಗೂ ಸ್ನಾತಕೋತ್ತರ ಪರೀಕ್ಷೆಗಳಲ್ಲಿ ಅತೀ ಹೆಚ್ಚು ಅಂಕ ಗಳಿಸಿದಂತಹ ಶಿಕ್ಷಕರ ಮಕ್ಕಳಿಗೆ ಪ್ರತಿಭಾ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ.

5) ಗುರುಭವನಗಳ ಹಾಗೂ ಅತಿಥಿ ಗೃಹಗಳ ನಿರ್ಮಣಕ್ಕೆ ಅನುದಾನ:
ಶಿಕ್ಷಕರ ಸಭೆ, ಸಮಾರಂಭ ಮತ್ತು ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸಲು ತಾಲ್ಲೂಕು/ಜಿಲ್ಲಾ ಕೇಂದ್ರಗಳಲ್ಲಿ ನಿರ್ಮಿಸುವ ಗುರುಭವನಕ್ಕೆ ಸಭಾಂಗಣದ ವಿಸ್ತೀರ್ಣವನ್ನಾಧರಿಸಿ ಕನಿಷ್ಠ ರೂ.12 ಲಕ್ಷದಿಂದ ಗರಿಷ್ಠ 30 ಲಕ್ಷ ರೂಗಳ ವರೆವಿಗೂ ಅನುದಾನವನ್ನು ಹಾಗೂ ಅತಿಥಿಗೃಹಗಳ ನಿರ್ಮಾಣಕ್ಕೆ (ತಲಾ ಕೊಠಡಿಗೆ ರೂ.1,10,000/-ರಂತೆ) ಗರಿಷ್ಠ 11 ಲಕ್ಷ ರೂಗಳ ಅನುದಾನವನ್ನು ನೀಡಲಾಗುತ್ತದೆ.

6) ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯಿಂದ ಶಿಕ್ಷಕರಿಗೆ ನೀಡುವ ವಿವಿಧ ಪ್ರಶಸ್ತಿಗಳು:
ಶ್ಲಾಘನೀಯ ಸೇವೆ ಸಲ್ಲಿಸಿದ ಪ್ರಾಥಮಿಕ/ಪ್ರೌಢಶಾಲಾ ಶಿಕ್ಷಕರನ್ನು ಗುರುತಿಸಿ ಜಿಲ್ಲಾ / ರಾಜ್ಯ ಮಟ್ಟದ ವಿಶೇಷ ಶಿಕ್ಷಕ / ಉತ್ತಮ ವಿಜ್ಞಾನ ಶಿಕ್ಷಕ ಪ್ರಶಸ್ತಿಗಳನ್ನು ನೀಡಲಾಗುವುದು.

7) ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆಗಳಲ್ಲಿ ವಿಜೇತರಾದ ಶಿಕ್ಷಕರಿಗೆ ಪ್ರಶಸ್ತಿ :
ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆಗಳ ಆಯೋಜನೆ ಮಾಡಲಾಗುತ್ತದೆ. ರಾಜ್ಯ ಮಟ್ಟದಲ್ಲಿ ಮೊದಲ ಮೂರು ಪ್ರಶಸ್ತಿ ಪಡೆದ ಶಿಕ್ಷಕರಿಗೆ ತಲಾ ರೂ. 5,000/- ರೂ. 3,000/- ಹಾಗೂ ರೂ. 2,000/- ಗಳ ನಗದು ಪ್ರಶಸ್ತಿ ನೀಡಲಾಗುತ್ತದೆ. ರಾಜ್ಯ ಮಟ್ಟದಲ್ಲಿ ಕಲಿಕಾ ವಸ್ತುಗಳ ತಯಾರಿಕೆ ಸ್ಪರ್ಧೆಯಲ್ಲಿ ಭಾಗವಹಿಸಿದ ಶಿಕ್ಷಕರಿಗೆ ತಯಾರಿಕಾ ವೆಚ್ಚವಾಗಿ ರೂ. 500/-ರ ಮೊತ್ತವನ್ನು ಹೆಚ್ಚುವರಿಯಾಗಿ ನೀಡಲಾಗುತ್ತದೆ

8) ಶಿಕ್ಷಕರಿಗೆ ಸುರಕ್ಷಾ ಪರಿಹಾರ ಯೋಜನೆ:
ಅಪಘಾತಗಳಿಂದಾಗಿ ಮೃತ ಹೊಂದಿದ ಸರ್ಕಾರಿ ಹಾಗೂ ಅನುಮೋದಿತ ಅನುದಾನಿತ ಶಾಲಾ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಾಥಮಿಕ ಶಾಲಾ ಹಂತದಿಂದ ವಿಶ್ವವಿದ್ಯಾಲಯದ ಹಂತದವರೆಗಿನ ಶಿಕ್ಷಕರುಗಳಿಗೆ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ವತಿಯಿಂದ ಸುರಕ್ಷಾ ಪರಿಹಾರ ಯೋಜನೆ” ಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯಡಿ ಶಿಕ್ಷಕರ ಕುಟುಂಬದವರಿಗೆ ರೂ. 50,000/- ವರೆಗೆ ಪರಿಹಾರ ಧನ ನೀಡಲಾಗುತ್ತಿದೆ

9) ಲ್ಯಾಪ್ ಟಾಪ್ ಖರೀದಿಗಾಗಿ ಬಡ್ಡಿ ರಹಿತ ಸಾಲ:
ಲ್ಯಾಪ್ ಟಾಪ್ ಖರೀದಿಗಾಗಿ ಪ್ರತಿ ತಾಲ್ಲೂಕಿನ 10 ಶಿಕ್ಷಕರುಗಳಿಗೆ ತಲಾ ರೂ. 30,000/- ಗಳ ಬಡ್ಡಿ ರಹಿತ ಸಾಲ ನೀಡಿ, ಮುಂದಿನ 10 ತಿಂಗಳಲ್ಲಿ ತಿಂಗಳಿಗೆ ರೂ. 3,000/- ದಂತೆ ಸಂಬಳದಲ್ಲಿ ಕಟಾಯಿಸಿ ಬಡ್ಡಿರಹಿತವಾಗಿ ಹಿಂಪಡೆಯಲಾಗುವುದು

ರಾಷ್ಟ್ರೀಯ ಶಿಕ್ಷಕರ ಕಲ್ಯಾಣ ಪ್ರತಿಷ್ಠಾನ, ನವದೆಹಲಿಯಿಂದ ಶಿಕ್ಷಕರಿಗೆ ನೀಡಲಾಗುತ್ತಿರುವ ಸೌಲಭ್ಯಗಳು:


1) ಶಿಕ್ಷಕರಿಗೆ ಹಾಗೂ ಅವರ ಅವಲಂಬಿತರಿಗೆ ವೈದ್ಯಕೀಯ ಚಿಕಿತ್ಸೆಗೆ ಧನಸಹಾಯ :
ಶಿಕ್ಷಕರಿಗೆ / ನಿವೃತ್ತ ಶಿಕ್ಷಕರಿಗೆ ಹಾಗೂ ಅವರ ಅವಲಂಬಿತರಿಗೆ ಮಾರಕ ರೋಗಗಳ ಚಿಕಿತ್ಸೆಗಾಗಿ ವೈದ್ಯಕೀಯ ಧನಸಹಾಯವನ್ನು ನೀಡಲಾಗುತ್ತದೆ.

2) ಶಿಕ್ಷಕರ ಮಕ್ಕಳ ಉನ್ನತ ವ್ಯಾಸಂಗಕ್ಕೆ ಧನಸಹಾಯ :
ರಾಜ್ಯಮಟ್ಟದಲ್ಲಿ ವೈಜ್ಞಾನಿಕ ಹಾಗೂ ವಿನೂತನ ಶೈಕ್ಷಣಿಕ ಪ್ರಯೋಗಗಳನ್ನು ಮಾಡಿದ ಎಂಟು ಜನ (ಪ್ರಾಥಮಿಕ-4 ಮತ್ತು ಪ್ರೌಢ-4) ಶಿಕ್ಷಕರಿಗೆ ತಲಾ ರೂ.12,000/-ಗಳ ನಗದು ಬಹುಮಾನ ಒಳಗೊಂಡಂತೆ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. ಪ್ರತಿ ವರ್ಷ ಅರ್ಹ ಶಿಕ್ಷಕರಿಂದ ಈ ಪ್ರಶಸ್ತಿಗೆ ಕ್ಷೇತ್ರಶಿಕ್ಷಣಾಧಿಕಾರಿಗಳ ಮೂಲಕ ಅರ್ಜಿಗಳನ್ನು ಪಡೆಯಲಾಗುತ್ತದೆ.

3)ಗುರುಭವನಗಳ ನಿರ್ಮಾಣಕ್ಕೆ ಅನುದಾನ :
ಐತಿಹಾಸಿಕ ಜಿಲ್ಲಾ ಕೇಂದ್ರಗಳಲ್ಲಿ ಗುರುಭವನ ನಿರ್ಮಾಣಕ್ಕೆ ಸೂಕ್ತ ದಾಖಲೆಗಳೊಂದಿಗೆ ಪ್ರಸ್ತಾವನೆ ಸಲ್ಲಿಸಿದಲ್ಲಿ ರಾ.ಶಿ.ಕ.ಪ್ರ.ನವದೆಹಲಿಯ ವತಿಯಿಂದ ರೂ.20 ಲಕ್ಷಗಳವರೆಗೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲಾಗುತ್ತದೆ.
_

ಶಿಕ್ಷಕರ ಕಲ್ಯಾಣ ನಿಧಿ , ಮಾಹಿತಿ ಪುಸ್ತಕ

Sharing Is Caring:

1 thought on “ಶಿಕ್ಷಕರ ಕಲ್ಯಾಣ ನಿಧಿಯಿಂದ ಶಿಕ್ಷಕರಿಗೆ ದೊರೆಯುವ ವಿವಿಧ ಸವಲತ್ತುಗಳ ವಿವರ ಇಲ್ಲಿದೆ”

Leave a Comment