ಜೇನು ಶುದ್ಧವೋ? ಅಶುದ್ಧವೋ?
ಉದ್ದೇಶ :- ನಾವು ಉಪಯೋಗಿಸುವ ಜೇನು ಶುದ್ಧವೋ ಅಲ್ಲವೋ ಎಂಬುದನ್ನು ಕಂಡುಹಿಡಿಯುವುದು.
ಅಗತ್ಯ ಸಾಮಗ್ರಿಗಳು :
- ಜೇನು ತುಪ್ಪ.
- ಚಮಚ,
- ಗಾಜಿನ ಲೋಟ,
- ನೀರು
ವಿಧಾನ :
ಒಂದು ಗಾಜಿನ ಲೋಟವನ್ನು ತೆಗೆದುಕೊ, ಅದರಲ್ಲಿ ಮುಕ್ಕಾಲು ಭಾಗದಷ್ಟು ನೀರನ್ನು ಹಾಕು ಒಂದು ಟೇಬಲ್ ಸ್ಪೂನ್(ಚಮಚ)ದ ತುಂಬ ಜೇನು ತುಪ್ಪವನ್ನು ತೆಗೆದುಕೊ, ಅದನ್ನು ಗಾಜಿನ ಲೋಟದಲ್ಲಿರುವ ನೀರಿಗೆ ಹಾಕು ಈಗ ನೀನು ಜೇನು ತುಪ್ಪವನ್ನು ಲೋಟದಲ್ಲಿರುವ ನೀರಿಗೆ ಹಾಕಿದಾದ ಏನಾಗುತ್ತದೆ ಎಂಬುದನ್ನು ಗಮನಿಸು
ತೀರ್ಮಾನ : ನೀನು ಜೇನು ತುಪ್ಪವನ್ನು ಗಾಜಿನ ಲೋಟದೊಳಕ್ಕೆ ಹಾಕಿದಾಗ ಆದು ಲೋಟದ ತಳಭಾಗಕ್ಕೆ ಹೋಗಿ ಎಳೆ ಎಳೆಯಾಗಿ ತಳಭಾಗದಲ್ಲಿ ಸಂಗ್ರಹಗೊಂಡು ನಿಧಾನವಾಗಿ ಬೆರೆತರ ಅದು ಶುದ್ಧವಾದ ಜೇನುತುಪ್ಪ ಒಂದು ವೇಳೆ ಅದು ಲೋಟದ ತಳಭಾಗಕ್ಕೆ ಹೋಗುವ ಮೊದಲೇ ನೀರಿನಲ್ಲಿ ಕರಗಿದರೆ ಅದು ಶುದ್ಧವಾದ ಜೇನು ತುಪ್ಪವಲ್ಲ.
ಶ್ರೀ ಮಂಜಪ್ಪ ಅಂಗರಗಟ್ಟಿ ಇವರು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಕೊಡಿಯಾಲ ಬೈಲ್ ಮಂಗಳೂರು ಇಲ್ಲಿ TCH ತರಬೇತಿಯನ್ನು ಪಡೆದು 2008ರಲ್ಲಿ ಅಂಕೋಲಾದಲ್ಲಿ ವಿಜ್ಞಾನ ಶಿಕ್ಷಕರಾಗಿ ಆಯ್ಕೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ . ಇವರು 20ಕ್ಕೂ ಹೆಚ್ಚು ಬ್ರಿಟಿಷ್ ಕೌನ್ಸಿಲ್ ಇಂಗ್ಲಿಷ್ ತರಬೇತಿಗಳಲ್ಲಿ ಜಿಲ್ಲಾ MRP ಆಗಿ ಮತ್ತು 15ಕ್ಕೂ ಹೆಚ್ಚು ವಿಜ್ಞಾನ ತರಬೇತಿಗಳಲ್ಲಿ MRP ಯಾಗಿ ಕಾರ್ಯನಿರ್ವಹಿಸಿರುತ್ತಾರೆ. ಗುರುಚೇತನ ಕಾರ್ಯಕ್ರಮದಲ್ಲಿ ಕೂಡ MRP ಆಗಿ ಕೆಲಸ ನಿರ್ವಹಿಸಿರುತ್ತಾರೆ.
Mob: 93421 38131