---Advertisement---

SATS ತಂತ್ರಾಂಶದಲ್ಲಿ ವಿದ್ಯಾರ್ಥಿಗಳ ಆಧಾರ್ ಮೌಲೀಕರಣದ ಕುರಿತು ಪ್ರಮುಖ ಮಾಹಿತಿ

By kspstadk.com

Published On:

Follow Us
Sats Aadhar related
---Advertisement---
WhatsApp Group Join Now
Telegram Group Join Now

SATS ತಂತ್ರಾಂಶದಲ್ಲಿ ವಿದ್ಯಾರ್ಥಿಗಳ ಆಧಾರ್ ಮೌಲೀಕರಣ ಸಂಬಂಧಿಸಿದ ಕಾರ್ಯಗಳನ್ನು ತುರ್ತಾಗಿ ಪೂರ್ಣಗೊಳಿಸುವ ಕುರಿತು

ಸುಮಾರು 2 ವರ್ಷಗಳಿಂದ SATS ತಂತ್ರಾಂಶದಲ್ಲಿ ವಿದ್ಯಾರ್ಥಿಗಳ ಆಧಾರ್ ಮೌಲೀಕರಣವನ್ನು ಪೂರ್ಣಗೊಳಿಸಲು ಅವಕಾಶ ಕಲ್ಪಿಸಲಾಗಿರುತ್ತದೆ.ರಾಜ್ಯದಲ್ಲಿ ಒಟ್ಟಾರೆ 1.04 ಕೋಟಿ ವಿದ್ಯಾರ್ಥಿಗಳಲ್ಲಿ 78 ಲಕ್ಷ ವಿದ್ಯಾರ್ಥಿಗಳ ಆಧಾರ್ ಮೌಲೀಕಣ ಮಾತ್ರ ಯಶಸ್ವಿಯಾಗಿ ಪೂರ್ಣಗೊಂಡಿರುತ್ತದೆ. 18 ಲಕ್ಷ ವಿದ್ಯಾರ್ಥಿಗಳ ಆಧಾರ್ ಮೌಲೀಕರಣ ಇದುವರೆಗೂ ತಂತ್ರಾಂಶದಲ್ಲಿ ಮೌಲೀಕರಿಸಲಾಗಿರುವುದಿಲ್ಲ. ಹಾಗೂ ಸುಮಾರು 8 ಲಕ್ಷ ವಿದ್ಯಾರ್ಥಿಗಳ ಆಧಾರ್ ಮೌಲೀಕರಿಸಲಾಗಿದ್ದರು ಆಧಾರ್ ಮತ್ತು SATS ನಲ್ಲಿ ವಿದ್ಯಾರ್ಥಿಯ ಹೆಸರು ತಾಳೆಯಾಗದ ಕಾರಣ ಮೌಲೀಕರಣ ವಿಫಲವೆಂದು ಪರಿಗಣಿಸಲಾಗಿದೆ. ಈ ಅಂತರವನ್ನು ಪೂರ್ಣಗೊಳಿಸಲು ಉಲ್ಲೇಖ-4 ರ ಈ ಕಚೇರಿಯ ಸುತ್ತೋಲೆಯಲ್ಲಿ ಶಾಲೆಗಳಲ್ಲಿ ವಿಶಿಷ್ಟ್ಯ ಆಧಾ‌ರ್ ಶಿಬಿರಗಳನ್ನು ಹಮ್ಮಿಕೊಳ್ಳಲು ತಿಳಿಸಲಾಗಿರುತ್ತದೆ.

ಇದುವರೆಗೂ ಒಟ್ಟಾರೆ 26 ಲಕ್ಷ ವಿದ್ಯಾರ್ಥಿಗಳ ಆಧಾರ್ ಮೌಲೀಕರಣ ತಂತ್ರಾಂಶದಲ್ಲಿ ಬಾಕಿಯಿರುವುದರಿಂದ ವಿವಿಧ ಇಲಾಖೆಯ ವಿದ್ಯಾರ್ಥಿವೇತನ ಮತ್ತು ಇತರೆ ಯೋಜನೆಗಳ ಅನುಷ್ಠಾನಕ್ಕೆ ತೊಂದರೆಯುಂಟಾಗುತ್ತಿದೆ. ಸದರಿ ಪ್ರಕ್ರಿಯೆಯನ್ನು ಪೂರ್ಣಗೊಳಿಸದೆ ವಿಳಂಬವಾಗಿರುವುದು ಇಲಾಖೆಗೆ ವಿವಿಧ ಸಂದರ್ಭಗಳಲ್ಲಿ ಮುಜುಗರ ಉಂಟಾಗಿರುತ್ತದೆ. ಆದ್ದರಿಂದ ಇದಕ್ಕೆ ಕಾರಣವಾದವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಪರಿಗಣಿಸಲಾಗಿದೆ. ಕೊನೆಯ ಅವಕಾಶವಾಗಿ ಇಂದಿನಿಂದ ಮುಂದಿನ 7 ದಿನಗಳವರೆಗೆ ಅವಕಾಶ ನೀಡಿ ಈ ಕೆಳಗಿನಂತೆ ತುರ್ತಾಗಿ ಕ್ರಮವಹಿಸಲು ಆದೇಶಿಸಿದೆ.

ಕೈಗೊಳ್ಳಬೇಕಾದ ಕ್ರಮಗಳು :

  1. ಜಿಲ್ಲೆ ಹಾಗೂ ತಾಲ್ಲೂಕು ಹಂತದಲ್ಲಿ SATS ತಂತ್ರಾಂಶದ ಅನುಸಾರ ದಾಖಲಾಗಿರುವ ಒಟ್ಟು ಮಕ್ಕಳಲ್ಲಿ ಆಧಾ‌ರ್ ಮೌಲೀಕರಣವಾಗಿರುವ ಮಾಹಿತಿಯನ್ನು ಪರಿಶೀಲಿಸುವುದು
  2. ಇದುವರೆಗೂ ಆಧಾರ್ ಮೌಲೀಕರಣ ಆಗದಿರುವ ವಿದ್ಯಾರ್ಥಿಗಳ ಶಾಲಾವಾರು, ವಿದ್ಯಾರ್ಥಿವಾರು ಪರಿಶೀಲಿಸುವುದು.
  3. ಪರಿಶೀಲಿಸಿದ ವಿದ್ಯಾರ್ಥಿಗಳಿಗೆ ಆಧಾರ್ ಇದು SATS ತಂತ್ರಾಂಶದಲ್ಲಿ ಮೌಲೀಕರಣ ಆಗದೇ ಇದ್ದಲ್ಲಿ, ವಿದ್ಯಾರ್ಥಿಯ ಆಧಾರ್ ಮಾಹಿತಿಯನ್ನು ಪೋಷಕರಿಂದ ಪಡೆದು ತುರ್ತಾಗಿ SATS ತಂತ್ರಾಂಶದಲ್ಲಿ ಮೌಲೀಕರಣ ಮಾಡುವುದು.
  4. ನಂತರ ಆಧಾರ್ ಮೌಲೀಕರಣ ಬಾಕಿಯಿರುವ ವಿದ್ಯಾರ್ಥಿಗಳ ಮಾಹಿತಿಯನ್ನು ಜಿಲ್ಲಾವಾರು, ತಾಲ್ಲೂಕವಾರು, ಶಾಲಾವಾರು ಪಟ್ಟಿ ಮಾಡುವುದು ಪಟ್ಟಿ ಮಾಡಲಾದ ಮಾಹಿತಿಯನ್ನು EDCS ಸಂಸ್ಥೆಯಿಂದ ರಚಿಸಲಾಗುವ ತಂಡಕ್ಕೆ ಸಲ್ಲಿಸಿ ಸದರಿ ರವರೊಂದಿಗೆ ಸಮನ್ವೆಯಿಸಿ ಅತೀ ಹೆಚ್ಚು ಬಾಕಿಯಿರುವ ಶಾಲೆಗಳಲ್ಲಿ ವಿಶೇಷ ಆಧಾರ್ ಶಿಬಿರ ಹಮ್ಮಿಕೊಳ್ಳುವುದು. (ಸದರಿ ಕಾರ್ಯಕ್ಕೆ ಒಬ್ಬ ಇಲಾಖೆಯ ನೋಡಲ್ ಅಧಿಕಾರಿಯನ್ನು ಜಿಲ್ಲೆ ಹಾಗೂ ತಾಲ್ಲೂಕು ಹಂತದಲ್ಲಿ ಸಮನ್ವಯಿಸಲು ರಚಿಸುವುದು)
  5. ತಂತ್ರಾಂಶದಲ್ಲಿ ವಿದ್ಯಾರ್ಥಿಗಳ ಆಧಾರ್ ಮೌಲೀಕರಿಸಿಯೂ ಆಧಾರ್ ಮತ್ತು SATS ನಲ್ಲಿ ಹೆಸರು ತಾಳೆಯಾಗದೆ ಮೌಲೀಕರಣ ವಿಫಲವಾದ ಪ್ರಕರಣಗಳಲ್ಲಿ ಈ ಕೆಳಕಂಡಂತೆ ಕ್ರಮವಹಿಸುವುದು.
  6. ಆಧಾರ್‌ನಲ್ಲಿರುವಂತೆ ವಿದ್ಯಾರ್ಥಿಯ ಹೆಸರನ್ನು SATS ತಂತ್ರಾಂಶದಲ್ಲಿ ತಿದ್ದುಪಡಿ ಮಾಡಬೇಕಾದ ಕುರಿತು.

ಇಂತಹ ಪ್ರಕರಣಗಳಲ್ಲಿ ಆಧಾರ್‌ನಲ್ಲಿರುವಂತೆ SATS ತಂತ್ರಾಂಶದಲ್ಲಿ ವಿದ್ಯಾರ್ಥಿಯ ಹೆಸರು ಇಂಧೀಕರಣ ಮಾಡುವ ಕುರಿತು ಪೋಷಕರಿಂದ ಒಪ್ಪಿಗೆಯನ್ನು (ಸ್ವಯಂ ಘೋಷಿತ ದೃಢೀಕರಣ) ಪಡೆದು ಆಧಾರ್‌ನಲ್ಲಿರುವಂತೆ ವಿದ್ಯಾರ್ಥಿಯ ಹೆಸರನ್ನು SATS ತಂತ್ರಾಂಶದಲ್ಲಿ ಶಾಲಾ ಮುಖ್ಯ ಶಿಕ್ಷಕರು ಇಂದೀಕರಿಸುವುದು. (ನಮೂನೆಯನ್ನು ಲಗತ್ತಿಸಿದೆ). ನಂತರ ಉಲ್ಲೇಖ-5 ರ ಸರ್ಕಾರದ ಸುತ್ತೋಲೆಯಂತೆ ಸಂಬಂಧಿಸಿದ ಶಾಲಾ ದಾಖಲಾತಿಯಲ್ಲಿ ತಿದ್ದುಪಡಿ ಮಾಡಿಕೊಳ್ಳುವುದು.

ತಿದ್ದುಪಡಿಯಾದ ನಂತರ ತಪ್ಪದೇ SATS ತಂತ್ರಾಂಶದಲ್ಲಿ ಮತ್ತು ವಿದ್ಯಾರ್ಥಿವೇತನಕ್ಕೆ ಸಂಬಂಧಿಸಿದ ಲಾಗಿನ್‌ನಲ್ಲಿ ವಿದ್ಯಾರ್ಥಿಯ ಆಧಾ‌ರ್ ಮೌಲೀಕರಣವನ್ನು ಪೂರ್ಣಗೊಳಿಸುವುದು

  1. ಶಾಲೆಯ ದಾಖಲೆಗಳಲ್ಲಿ ಮತ್ತು SATS ನಲ್ಲಿ ವಿದ್ಯಾರ್ಥಿಯ ಹೆಸರು ಸರಿಯಿದ್ದು ಆಧಾರ್‌ನಲ್ಲಿ ತಿದ್ದುಪಡಿ ಮಾಡಬೇಕಾದ ಕುರಿತು.

ಇಂತಹ ಪ್ರಕರಣಗಳಲ್ಲಿ UIDAI/ಆಧಾರ್ ಸ್ವೀಕಾರಾರ್ಹ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಆಧಾರ್ ನಲ್ಲಿ ವಿದ್ಯಾರ್ಥಿಯ ಹೆಸರನ್ನು ತಿದ್ದುಪಡಿ ಮಾಡಿಸಿಕೊಳ್ಳುವುದು.

  1. ವಿದ್ಯಾರ್ಥಿವೇತನ ಬಗ್ಗೆ SSP ತಂತ್ರಾಶದಲ್ಲಿ ಕೈಗೊಳ್ಳಬೇಕಾದ ಕ್ರಮದ ಬಗ್ಗೆ :
  2. Designation of Institute Nodal Officers (INO) ಪ್ರತಿ ಶಾಲೆಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿ SSP Portal Login Access ನೀಡಲಾಗಿರುತ್ತದೆ
  3. INO ಲಾಗಿನ್ ಸೃಜನೆಗೆ ಸಂಬಂಧಿಸಿದಂತೆ ಹಾಗೂ eKYC, Biometric ಪೂರ್ಣಗೊಳಿಸುವ ಪ್ರಕ್ರಿಯೆ ಬಗ್ಗೆ, ಶಾಲಾ ಮುಖ್ಯ ಶಿಕ್ಷಕರು ತಾಲ್ಲೂಕು ಹಂತದ ಸಮಾಜ ಕಲ್ಯಾಣ ಇಲಾಖೆಯ ಕಛೇರಿಯನ್ನು ಸಂಪರ್ಕಿಸುವುದು.
  4. INO ಲಾಗಿನ್‌ನಲ್ಲಿ SATS ದತ್ತಾಂಶದನ್ವಯ ಆಯಾ ಶಾಲೆಯಲ್ಲಿ ದಾಖಲಾದ ಎಲ್ಲಾ ವಿದ್ಯಾರ್ಥಿಗಳ ಪಟ್ಟಿಯನ್ನು ಒದಗಿಸಲಾಗಿರುತ್ತದೆ. ಈ ಪಟ್ಟಿಯಲ್ಲಿ ವಿದ್ಯಾರ್ಥಿಯ ಹೆಸರು, SSP ID (ವಿದ್ಯಾರ್ಥಿಯು ಈಗಾಗಲೇ SSP ಯಲ್ಲಿ ಖಾತೆಯನ್ನು ಸೃಜಿಸಿದ್ದಲ್ಲಿ). Application Submitted (Yes/No) (ಪ್ರಸಕ್ತ ಆರ್ಥಿಕ ವರ್ಷದಲ್ಲಿ ವಿದ್ಯಾರ್ಥಿವೇತನ ಕೋರಿ ಅರ್ಜಿ ಸಲ್ಲಿಕೆಯಾಗಿದ್ದಲ್ಲಿ).adhaar seeding status ಮುಂತಾದ ವಿವರ ಗಳನ್ನು ಒದಗಿಸಲಾಗಿರುತ್ತದೆ.
    INO ಲಾಗಿನ್‌ನಲ್ಲಿ ಕೈಗೊಳ್ಳಬೇಕಾದ ಕ್ರಮ :
  5. INO ಲಾಗಿನ್‌ನಲ್ಲಿ SATS ದತ್ತಾಂಶದನ್ವಯ ಆಯಾ ಶಾಲೆಯಲ್ಲಿ ದಾಖಲಾದ ಎಲ್ಲಾ ವಿದ್ಯಾರ್ಥಿಗಳ ಪಟ್ಟಿಯನ್ನು ಒದಗಿಸಲಾಗಿರುತ್ತದೆ. ಈ ಪಟ್ಟಿಯಲ್ಲಿ ವಿದ್ಯಾರ್ಥಿಯ ಹೆಸರು, SSP ID (ವಿದ್ಯಾರ್ಥಿಯು ಈಗಾಗಲೇ SSP ಯಲ್ಲಿ ಖಾತೆಯನ್ನು ಸೃಜಿಸಿದ್ದಲ್ಲಿ), Application Submitted (Yes/No) (ಪ್ರಸಕ್ತ ಆರ್ಥಿಕ ವರ್ಷದಲ್ಲಿ ವಿದ್ಯಾರ್ಥಿವೇತನ ಕೋರಿ ಅರ್ಜಿ ಸಲ್ಲಿಕೆಯಾಗಿದ್ದಲ್ಲಿ). Aadhar Seeding Status ಮುಂತಾದ ವಿವರಗಳನ್ನು ಒದಗಿಸಲಾಗಿರುತ್ತದೆ.
  6. INO ಲಾಗಿನ್ ನಲ್ಲಿ ಒದಗಿಸಲಾದ ಪಟ್ಟಿಯಲ್ಲಿ ಯಾವುದಾದರೂ ವಿದ್ಯಾರ್ಥಿಯ ಹೆಸರು ಬಿತ್ತರವಾಗದೇ ಇದ್ದಲ್ಲಿ ಸದರಿ ಸಮಸ್ಯೆಯನ್ನು ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದು SATS ನಲ್ಲಿ ನಮೂದು ಮಾಡಲು ಹಾಗೂ SSP Portal ನಲ್ಲಿ ಅಳವಡಿಸಲು ಕ್ರಮವಹಿಸುವುದು. ಈ ಪ್ರಕ್ರಿಯೆಗೆ ಸಂಬಂಧಪಟ್ಟ ಶಾಲೆಯ Institute Nodal Officer (INO) ಅಧಿಕಾರಿಯು ಖುದ್ದು ನಿರ್ವಹಿಸಬೇಕಾಗಿರುತ್ತದೆ.
  7. INO ಲಾಗಿನ್ ನಲ್ಲಿ ಒದಗಿಸಲಾದ ಪಟ್ಟಿಯಲ್ಲಿ ವಿದ್ಯಾರ್ಥಿಯು ವಿದ್ಯಾರ್ಥಿವೇತನ ಕೋರಿ ಅರ್ಜಿ ಸಲ್ಲಿಸದೇ ಇದ್ದಲ್ಲಿ ಸದರಿ ವಿದ್ಯಾರ್ಥಿಯ ವಿದ್ಯಾರ್ಥಿವೇತನ ಅರ್ಜಿಯನ್ನು ಸಲ್ಲಿಸಲು ವಿದ್ಯಾರ್ಥಿಗೆ ಅಥವಾ ವಿದ್ಯಾರ್ಥಿಯ ಪೋಷಕರಿಗೆ ತಿಳಿಸುವುದು ಸಾಧ್ಯವಾದಲ್ಲಿ ವಿದ್ಯಾರ್ಥಿಯ ಒಮ್ಮತಿ ಮೇರೆಗೆ ಅಗತ್ಯ ಮಾಹಿತಿಯನ್ನು ಪಡೆದು ತಮ್ಮ ಲಾಗಿನ್ ಮೂಲಕವು ಅರ್ಜಿ ಸಲ್ಲಿಸಲು ಅವಕಾಶವಿದ್ದು, ಅರ್ಜಿ ಸಲ್ಲಿಸಲು ಕ್ರಮವಹಿಸುವುದು.
  8. INO ಲಾಗಿನ್ ನಲ್ಲಿ ಒದಗಿಸಲಾದ ಪಟ್ಟಿಯಲ್ಲಿ Aadhar Seeding Status ಅನ್ನು ಒದಗಿಸಲಾಗಿರುತ್ತದೆ. ವಿದ್ಯಾರ್ಥಿಯ ಆಧಾರ್ ಜೋಡಣೆಯಾಗದೇ ಇದ್ದಲ್ಲಿ ಸಂಬಂಧಪಟ್ಟ ಬ್ಯಾಂಕ್‌ನಲ್ಲಿ ಆಧಾರ್ ಜೋಡಣೆ ಮಾಡಿಸುವ ಸಂಬಂಧ ವಿದ್ಯಾರ್ಥಿಯ ಪೋಷಕರಿಗೆ ಸೂಕ್ತ ಮಾರ್ಗದರ್ಶನ ನೀಡಲು ಹಾಗೂ ಹತ್ತಿರದ ಅಂಚೆ ಕಛೇರಿ ಅಧಿಕಾರಿಯನ್ನು ಸಂಪರ್ಕಿಸಿ ಆಧಾರ್ ಜೋಡಣೆ ಸಲುವಾಗಿ IPPB ಖಾತೆಯನ್ನು ತೆರೆಯುವಂತೆ ಸಂಬಂಧಪಟ್ಟ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುವಂತೆ ಎಲ್ಲಾ ಶಾಲೆಗಳ ಮುಖ್ಯೋಪಾಧ್ಯಾಯರಿಗೆ ಸೂಚಿಸುವುದು.
WhatsApp Group Join Now
Telegram Group Join Now

Join WhatsApp

Join Now

Join Telegram

Join Now

Leave a Comment