ಸರ್ಕಾರದ ಇಲಾಖೆಗಳಲ್ಲಿ ನೇರವಾಗಿ/ ಪರೋಕ್ಷವಾಗಿ ಇರುವ ವಿವಿಧ ಉದ್ಯೋಗಿಗಳಿಗೆ ಸಾಮಾಜಿಕ ಭದ್ರತಾ ಜಾಲವನ್ನು ಜಾರಿಗೆ ತರಲು ಅಥವಾ ಹೆಚ್ಚಿಸಲು ಉದ್ದೇಶಿಸಿರುವ ಸರ್ಕಾರಿ ಆದೇಶ ಎಫ್ ಡಿ- ಸಿಎಎಂ/1/2025 ದಿನಾಂಕ 21.02.2025ರ ಬಗ್ಗೆ ತಮ್ಮ ಗಮನವನ್ನು ಸೆಳೆಯಲಾಗಿದೆ ಮೇಲಿನ ಸರಕಾರಿ ಆದೇಶದ ಉದ್ದೇಶವೇನೆಂದರೆ ವಿವಿಧ ಬ್ಯಾಂಕುಗಳು ಸಂಬಳ ಪ್ಯಾಕೇಜುಗಳಲ್ಲಿ ಉಚಿತವಾಗಿ ಅಥವಾ ನಾಮ ಮಾತ್ರ ವೆಚ್ಚದಲ್ಲಿ ನೀಡುವ ಅಪಘಾತ ಅವಧಿ ವಿಮಾನಕ್ಷಣೆ ಮತ್ತು ಇತರ ಪ್ರಯೋಜನಗಳನ್ನು ಅಧಿಕಾರಿ ನೌಕರರು ಪಡೆದು ತಮ್ಮ ಅವಲಂಬಿತ ಕುಟುಂಬಗಳನ್ನು ಸುರಕ್ಷಿತಗೊಳಿಸುವುದು ಅಲ್ಲದೆ ಸಂಬಂಧ ಪಟ್ಟ ಅಧಿಕಾರಿ ನೌಕರರು ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆ (PMSBY)ಮತ್ತು ಪ್ರಧಾನಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆ(PMJJBY) ಯೋಜನೆಗಳಡಿ ಹೆಚ್ಚಿನ ವಿಮ ರಕ್ಷಣೆಗಾಗಿ ನೋಂದಾವಣೆ ಮಾಡಿಕೊಳ್ಳಲು ಪ್ರೇರೇಪಿಸುವುದು, ಅದಲ್ಲದೆ ಹೆಚ್ಚುವರಿ ನಾಮಪತ್ರ ಪ್ರೀಮಿಯಂ ಪಾವತಿಸುವ ಮೂಲಕ ಹೆಚ್ಚಿನ ವಿಮ ರಕ್ಷಣೆಗಾಗಿ ಬ್ಯಾಂಕುಗಳು ನೀಡುತ್ತಿರುವ ವೈಯಕ್ತಿಕ ಅಪಘಾತ ವಿಮೆಯನ್ನು ಪಡೆಯಲು ಪ್ರೋತ್ಸಾಹಿಸುವುದು.
ಅದ್ದರಿಂದ ಸರಕಾರಿ ಆದೇಶ ಹೊರಡಿಸಿದ ಮೂರು ತಿಂಗಳಲ್ಲಿ ಎಲ್ಲಾ ಅಧಿಕಾರಿ ನೌಕರರು ಮತ್ತು ವಿವಿಧ ನಿಗಮಗಳು/ ಮಂಡಳಿಗ/ಳ ಉದ್ಯೋಗಿಗಳು ತಮ್ಮ ಕುಟುಂಬಗಳ ಹಿತ ದೃಷ್ಟಿಯಿಂದ ತಮ್ಮ ಆಯ್ಕೆಯ ಯಾವುದೇ ಬ್ಯಾಂಕ್ ನೀಡುವ ಸಂಬಳ ಪ್ಯಾಕೇಜ್ ಗಳನ್ನು ಸ್ವಯಂ ಪ್ರೇರಿತ ವಾಗಿ ಆಯ್ಕೆ ಮಾಡಲು ಹೆಚ್ಚಿನ ಆಸಕ್ತಿಯಿಂದ ಮನವೊಳಿಸುವುದು ಮತ್ತು ಸಂಬಂಧಪಟ್ಟ ಬ್ಯಾಂಕಿಗೆ ಸಂಬಳ ಸಂಬಳ ಪ್ಯಾಕೇಜ್ ಗಳಲ್ಲಿ ಸೇರಿಸಲು ಅರ್ಜಿಯನ್ನು ಸಲ್ಲಿಸಲು ತಮ್ಮನ್ನು ಎಲ್ಲಾ ಅಧಿಕಾರಿ/ಸರ್ಕಾರಿ ನೌಕರರನ್ನು ಪ್ರೇರೇಪಿಸಲು ಸೂಕ್ತ ಕ್ರಮ ಕೈಗೊಳ್ಳಲು ಎಲ್ಲಾ ಇಲಾಖಾ ಮುಖ್ಯಸ್ಥರನ್ನು ಕೋರಲಾಗಿತ್ತು.
ಸರಕಾರಿ ಆದೇಶ ಹೊರಡಿಸಿ ನಾಲ್ಕುವರೆ ತಿಂಗಳಾದರೂ ಸಂಬಳ ಪ್ಯಾಕೇಜ್ ನಲ್ಲಿ ನೋಂದಾಯಿಸಿಕೊಂಡ ಅಧಿಕಾರಿಗಳು/ ನೌಕರರ ಸಂಖ್ಯೆ 3 ಲಕ್ಷಗಳಿಗೆ ಮಾತ್ರ ತಲುಪಿದೆಯೆಂದು ಹಾಗೂ ಪ್ರಧಾನಮಂತ್ರಿ ಸುರಕ್ಷಾ ಭಿಮಾ ಯೋಜನೆ ಅಡಿ 32,611 ಮತ್ತು ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮ ಯೋಜನೆ ಅಡಿ 25,386 ಮಾತ್ರ ಎಚ್ ಆರ್ ಎಂ ಎಸ್ ನಲ್ಲಿ ದಾಖಲಾಗಿದ್ದು ಯೋಜನೆಯಡಿ, ಹೆಚ್ಚಿನ ಪ್ರಗತಿ ಯಾಗಿರುವುದಿಲ್ಲವೆಂದು ತಿಳಿದು ಬಂದಿದೆ.
ನೋಂದಾಯಿಸಿಕೊಳ್ಳಲು ಕಡೆಯ ದಿನಾಂಕ
ಎ ಗುಂಪಿನ ಅಧಿಕಾರಿಗಳು -31.08.2025 ರೊಳಗೆ
ಬಿ ಗುಂಪಿನ ಅಧಿಕಾರಿಗಳು- 30.09.2025ರೊಳಗೆ
ಸಿ ಗುಂಪಿನ ಅಧಿಕಾರಿಗಳು- 30.11.2025ರೊಳಗೆ
ಡಿ ಗುಂಪಿನ ಅಧಿಕಾರಿಗಳು- 31.01.2026ರೊಳಗೆ

