ಸ್ಯಾಲರಿ ಅಲರ್ಟ್ ಮೆಸೇಜ್ ಬಗ್ಗೆ ಮಾಹಿತಿ
ಸರ್ಕಾರಿ ನೌಕರರಿಗೆ ಅನುಕೂಲವಾಗುವ ವಿಶಿಷ್ಟ ಯೋಜನೆಯಾದ ಪ್ರತಿತಿಂಗಳು ಸಂಬಳದ ವಿವರಗಳನ್ನು ನೌಕರರ ಮೊಬೈಲ್ ಸಂಖ್ಯೆಗೆ SMS ಮೂಲಕ ಕಳುಹಿಸುವ ಸೌಲಭ್ಯವನ್ನು ಜಾರಿಗೊಳಿಸುವುದಕ್ಕೆ ಸಂಬಂಧಿಸಿದಂತೆ ರಾಜ್ಯಾಧ್ಯಕ್ಷರಾದ ಷಡಾಕ್ಷರಿರವರು HRMS-2ನ ಜಂಟಿ ನಿರ್ದೇಶಕರಾದ ಶ್ರೀ ಪುರುಷೋತ್ತಮ್ ಸಿಂಗ್ ಹಾಗೂ ಶ್ರೀ ತಿಮ್ಮಾರೆಡ್ಡಿ ಇವರೊಂದಿಗೆ ಸಭೆ ನಡೆಸಿದರು. ಈ ಸಭೆಯಲ್ಲಿ ಪ್ರತಿತಿಂಗಳು ಸಂಬಳದ ವಿವರಗಳನ್ನು ನೌಕರರ ಮೊಬೈಲ್ ಸಂಖ್ಯೆಗೆ ಕಳುಹಿಸುವ ಯೋಜನೆಯು ಈ ತಿಂಗಳಿನಿಂದ ಪ್ರಾರಂಭಗೊಳ್ಳಲಿದ್ದು, ಈ ಯೋಜನೆಗೆ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಎಸ್ ಬೊಮ್ಮಾಯಿರವರು ದಿನಾಂಕ:30-05-2022ರ ಸೋಮವಾರದಂದು ಚಾಲನೆ ನೀಡಲಿದ್ದಾರೆ.