ಜೂನ್ ತಿಂಗಳ ಚಟುವಟಿಕೆಗಳು
ಥೀಮ್ : ಪರಿಸರ
ಅರಣ್ಯಗಳ ಪರಿಚಯ:
- ಅರಣ್ಯಗಳ ಪ್ರಾಮುಖ್ಯತೆಯನ್ನು ವಿವರಿಸುವುದು.
- ವಿವಿಧ ಅರಣ್ಯಗಳ ಚಿತ್ರಗಳನ್ನು ಮಕ್ಕಳಿಗೆ ತೋರಿಸುವ ಮೂಲಕ ಅರಣ್ಯಗಳ ಪರಿಚಯ ಮಾಡುವುದು.
- ಭಾರತ ಕರ್ನಾಟಕದಲ್ಲಿರುವ ವಿವಿಧ ಅರಣ್ಯಗಳನ್ನು ಪಟ್ಟಿ ಮಾಡಿ ತಿಳಿಸುವುದು.
- ಅರಣ್ಯಗಳು ಹೇಗೆ ಹವಮಾನದ ಮೇಲೆ ಪರಿಣಾಮ ಬೀರುತ್ತವೆ ಎಂದು ವಿವರಿಸುವುದು,
ಕೃಷಿಯ ಪ್ರಾಮುಖ್ಯತೆ
- ನಮ್ಮ ದಿನನಿತ್ಯದ ಜೀವನದಲ್ಲಿ ಕೃಷಿ ಎಷ್ಟು ಮುಖ್ಯ ಎಂದು ವಿವರಿಸುವುದು .
*ಆಹಾರ ಬೆಳೆಗಳು ಮತ್ತು ವಾಣಿಜ್ಯ ಬೆಳೆಗಳನ್ನು ವಿವರಿಸಿವುದು.
*ನಿಮ್ಮ ಮನೆಯ ಸುತ್ತಮುತ್ತ ಬೆಳೆಯುವ ಯಾವುದಾದರೂ ಒಂದು ಬೆಳೆಯ ಬಗ್ಗೆ ವಿವರಣೆ ನೀಡುವುದು. - ಕೃಷಿ ಸಲಕರಣೆಗಳ ಪರಿಚಯ ಮಾಡುವುದು.
ವಿಶ್ವ ಪರಿಸರ ದಿನಾಚರಣೆಯ /ಪರಿಸರದ ಮಹತ್ವ
- ನಮ್ಮ ಸುತ್ತಲಿನ ಪರಿಸರ ಮತ್ತು ಪರಿಸರದಿಂದ ಆಗುವ ಪ್ರಯೋಜನಗಳನ್ನು ಬಿತ್ತಿಪತ್ರಗಳನ್ನು ತೋರಿಸುವ ಮೂಲಕ ವಿವರಿಸುವುದು.
- ಶಾಲೆಯ ಸುತ್ತಮುತ್ತಲಿನ ಪರಿಸರದ ಬಗ್ಗೆ ವಿವರಿಸುವುದು.
- ಪರಿಸರಕ್ಕೆ ಮಕ್ಕಳ ಕೊಡುಗೆಗಳನ್ನು ಪರಿಚಯಿಸುವುದು. *ಶಾಲೆಯ ಸುತ್ತಮುತ್ತಲಿನ ಪರಿಸರದ ಬಗ್ಗೆ ವಿವರಿಸಿವುದು *ಪರಿಸರಕ್ಕೆ ಮಕ್ಕಳ ಕೊಡುಗೆಗಳನ್ನು ಪಟ್ಟಿ ಮಾಡಿ ಹಂಚಿಕೊಳ್ಳುವುದು. ಪರಿಸರ ಮಾಲಿನ್ಯ
*ವಾಹನಗಳಿಂದ ಹೇಗೆ ಪರಿಸರ ಮಾಲಿನ್ಯ ಆಗುತ್ತದೆ ಎಂದು ವಿವರಿಸುವುದು.
*, ಕಾರ್ಖಾನೆಗಳಿಂದ ಪ್ಲಾಸ್ಟಿಕ್ ಬಳಕೆಯಿಂದ ಹೇಗೆ ಪರಿಸರ ಮಾಲಿನ್ಯಗೊಳ್ಳುತ್ತದೆ ವಿವರಿಸುವುದು . - ಪರಿಸರ ನಾಶದ ದುಷ್ಪರಿಣಾಮಗಳನ್ನು ನಾಟಕ ಪ್ರದರ್ಶನದ ಮೂಲಕ ಅರ್ಥ ಮಾಡಿಸುವುದು.
ಪರಿಸರದ ಕುರಿತು ರಸಪ್ರಶ್ನೆ,
- ಪರಿಸರದ ಬಗ್ಗೆ ರಸಪ್ರಶ್ನೆಯನ್ನು ಕೇಳುವುದು.( ವಿಶ್ವ ಪರಿಸರ ದಿನವನ್ನು ಯಾವಾಗ ಆಚರಿಸುತ್ತಾರೆ? ಪರಿಸರ ಪ್ರೇಮಿ ಎಂದು ಯಾರನ್ನು ಕರೆಯುತ್ತಾರೆ? ಇತ್ಯಾದಿ ) *ಕರ್ನಾಟಕದಲ್ಲಿರುವ ರಾಷ್ಟ್ರೀಯ ಉದ್ಯಾನವನಗಳನ್ನು ಹೆಸರಿಸುವುದು.
ಥೀಮ್ :ಪರಿಸರ ಅಧ್ಯಯನ
ಋತುಮಾನದ ಹಣ್ಣುಗಳ ಪರಿಚಯ
ಮಿಂಚು ಪಟ್ಟಿ/ಪ್ಲಕ್ ಕಾರ್ಡ್ ಮೂಲಕ ಒಂದು ಕಡೆ ಕಾಲ ಮತ್ತು ಒಂದು ಕಡೆ ಹಣ್ಣುಗಳ ಚಿತ್ರಗಳನ್ನು ತೋರಿಸಿ, ವಿವರಿಸುವುದು. ಒಂದು ಮಗು ಕಾಲಗಳನ್ನು ಪ್ಲಕ್ ಕಾರ್ಡು ಮೂಲಕ ತೋರಿಸುವುದು. ಇತರ ಮಕ್ಕಳು ವಿವಿಧ ಹಣ್ಣುಗಳ ವೇಷ ಧರಿಸಿ ಪರಿಚಯ ಮಾಡಿಸಿಕೊಳ್ಳುವುದು. ಉದಾಹರಣೆಗೆ : ನಾನು ಮಾವಿನಹಣ್ಣು ಬೇಸಿಗೆ ಕಾಲದಲ್ಲಿ ನಿಮಗೆ ತಿನ್ನಲು ಲಭ್ಯವಿರುತ್ತೇನೆ.
ಕಾಲಗಳು ಮತ್ತು ಉಡುಗೆಗಳು
*ಬೇರೆ ಬೇರೆ ಕಾಲದಲ್ಲಿ ಬಳಸುವ ಉಡುಗೆ ತೊಡುಗೆಗಳ ಚಿತ್ರಗಳನ್ನು ತೋರಿಸಿ ಅವುಗಳ ಬಗ್ಗೆ ವಿವರಿಸುವುದು. (ಲಭ್ಯವಿದ್ದಲ್ಲಿ ಪ್ರದರ್ಶಿಸಿ ವಿವರಿಸುವುದು)
*ಪ್ರಾದೇಶಿಕ ಉಡುಗೆ ತೊಡುಗೆಗಳು ಮತ್ತು ಬಳಸುವ ಕಚ್ಚಾವಸ್ತುಗಳ ಬಗ್ಗೆ ವಿವರಿಸುವುದು.
*ಉಡುಗೆಗಳು ತಯಾರಿಸುವ ವಿವಿಧ ವಿಧಾನಗಳನ್ನು ವಿವರಿಸಿವುದು. ನೂಲು ತೆಗೆಯುವುದು, ನೇಯುವುದು, ಬಣ್ಣ ಕಟ್ಟುವುದು ಇತ್ಯಾದಿ.
ನಗರ ಮತ್ತು ಗ್ರಾಮೀಣ ಜೀವನಶೈಲಿ :
*ನಗರ ಮತ್ತು ಗ್ರಾಮೀಣ ಜನರ ಜೀವನಶೈಲಿ ಕುರಿತು ಚರ್ಚಾ ಕಾರ್ಯಕ್ರಮ ಹಮ್ಮಿಕೊಳ್ಳುವುದು.
*ಸಲಹಾತ್ಮಕ ವಿಷಯಗಳು ಗ್ರಾಮೀಣ ಮತ್ತು ನಗರ ಭಾಗದಲ್ಲಿ ಕಂಡುಬರುವ ಆಟಗಳು, ಆಹಾರ, ಪದ್ಧತಿ, ವಾಸ ಸ್ಥಳ , ಮಾಲಿನ್ಯ ,ಪ್ರಾಣಿ ಪಕ್ಷಿಗಳು, ಜನಸಂಖ್ಯೆ ಇತ್ಯಾದಿ.
- ಹಳ್ಳಿಯ ಸೊಗಡನ್ನು ಮತ್ತು ನಗರ ಜೀವನ ಶೈಲಿಯನ್ನು ನಾಟಕಗಳ ಮೂಲಕ ಪ್ರದರ್ಶಿಸುವುದು.
ಮಣ್ಣಿನ ವಿಧಗಳು ಮತ್ತು ಅದರ ಬಳಕೆ
- ಮಣ್ಣಿನ ವಿಧಗಳನ್ನು ವಿವರಿಸಿವುದು.
- ವಿವಿಧ ಮಣ್ಣುಗಳನ್ನು ಸಂಗ್ರಹಿಸಿ ಪ್ರದರ್ಶಿಸುವುದು. *ಮಣ್ಣಿನಿಂದ ಆಗುವ ಪ್ರಯೋಜನಗಳು ಏನು ಎಂದು ವಿವರಿಸುವುದು.( ಹೆಚ್ಚಿನ ಮಾಹಿತಿಗಾಗಿ 7ನೇ ತರಗತಿಯ ವಿಜ್ಞಾನ ಭಾಗ ಒಂದು ಪುಸ್ತಕದ 7ನೇ ಅಧ್ಯಾಯವನ್ನು ಗಮನಿಸುವುದು)
ಥೀಮ್ :ವಿಜ್ಞಾನ
ವಿಜ್ಞಾನ ಸರಳ ಪ್ರಯೋಗಗಳ ಪರಿಚಯ :&
ಮಕ್ಕಳು 5 ನಿಮಿಷಗಳ ಒಳಗಾಗಿ ಮಾಡುವ ವಿಜ್ಞಾನ ಪ್ರಯೋಗಗಳನ್ನು ಮಾಡಿ ತೋರಿಸುವುದು. (ಉದಾಹರಣೆಗಳು:- ಸರಳ ಬಲೂನ್ ಕಾರ್ ಚಟುವಟಿಕೆ, ಅಡಿಗೆ ಸೋಡಾ ಜ್ವಾಲಾಮುಖಿ ಲ, ಬೆಳಕಿನ ಚಲನೆಗಳು , ಬೆಳಕು ಸರಳ ರೇಖೆಯಲ್ಲಿ ಚಲಿಸುತ್ತದೆ, ಪದಾರ್ಥಗಳನ್ನು ಬೇರ್ಪಡಿಸುವಿಕೆ , ಗಾಳಿಗೆ ತೂಕವಿದೆ (5ನೇ ತರಗತಿಯ ಪರಿಸರ ಅಧ್ಯಯನ ಪುಸ್ತಕದ ಪುಟ ಸಂಖ್ಯೆ 28ನ್ನು ಗಮನಿಸಿ)
ನೀರಿನ ಮೂಲಗಳು ಮತ್ತು ಅವುಗಳ ಮಹತ್ವ:-
- ನೀರಿನ ಮೂಲಗಳು ಯಾವುವು ಎಂದು ತಿಳಿಸುವುದು. (ನದಿಗಳು ಕೆರೆಗಳು, ಕೊಳವೆಬಾವಿ ಇತ್ಯಾದಿ)
- ನೀರಿನ ಮೂಲಗಳು ಹೇಗೆ ಕಲುಷಿತಗೊಳ್ಳುತ್ತವೆ ?ಎಂದು ವಿವರಿಸುವುದು.
- ಶಾಲೆ ಇರುವ ಪ್ರದೇಶದಲ್ಲಿನ ನೀರಿನ ಮೂಲಗಳನ್ನು ಪಟ್ಟಿ ಮಾಡಿ ವಿವರಿಸುವುದು.
ನೈಸರ್ಗಿಕ ಸಂಪನ್ಮೂಲಗಳು :-
*ನೈಸರ್ಗಿಕ ಸಂಪನ್ಮೂಲಗಳು ಯಾವುವು? ಎಂದು ಪಟ್ಟಿ ಮಾಡಿ ತಿಳಿಸುವುದು.
- ನೈಸರ್ಗಿಕ ಸಂಪನ್ಮೂಲಗಳ ವಿಧಗಳನ್ನು ವಿವರಿಸಿವುದು. *ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಮಾಡುವುದು ಹೇಗೆ? ಎಂಬುದನ್ನು ವಿವರಿಸುವುದು( 5ನೇ ತರಗತಿಯ ಪರಿಸರ ಅಧ್ಯಯನ ಪುಸ್ತಕದ ನೈಸರ್ಗಿಕ ಸಂಪನ್ಮೂಲ ಪಾಠಗಳಲ್ಲಿರುವ ಒಗಟುಗಳನ್ನು ಪರಿಚಯಿಸುವುದು) ಸಸ್ಯಗಳ ಪೋಷಣೆ:-
- ಸಸ್ಯಗಳ ಪೋಷಣೆ ಸಸ್ಯಗಳ ಪೋಷಣೆಗೆ ಬೇಕಾದ ಅಂಶಗಳನ್ನು ವಿವರಿಸುವುದು, ಫಲವತ್ತಾದ ಮಣ್ಣು ಗೊಬ್ಬರ ನೀರು ಗಾಳಿ ಇತ್ಯಾದಿ.
- ಸಸ್ಯಗಳ ಪೋಷಣೆಯ ಬಗ್ಗೆ ರಸಪ್ರಶ್ನೆಯನ್ನು ಹಮ್ಮಿಕೊಳ್ಳುವುದು.( ಗಮನಿಸಬಹುದು ಏಳನೇ ತರಗತಿಯಲ್ಲಿ ಇರುವ ಸಸ್ಯಗಳ ಪೋಷಣೆಯ ಪಾಠ )
- ಸಾವಯವ ಗೊಬ್ಬರ ತಯಾರಿಕೆಯ ಬಗ್ಗೆ ತಿಳಿಸುವುದು.
ಥೀಮ್ : ಭಾಷಾ ಕೌಶಲ
*ಕಥೆ ಹೇಳುವುದು
*ನೀತಿ ಕಥೆಗಳನ್ನು ಹೇಳುವುದು ಮತ್ತು ಅದರಲ್ಲಿರುವ ನೀತಿಯನ್ನು ತಿಳಿಸಿ, ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಲು ಸೂಚಿಸುವುದು.
ಸಾಮಾಜಿಕ ಪಿಡುಗು ಪಿಡುಗುಗಳ ಬಗ್ಗೆ ನಾಟಕ ಹಾಗೂ ಹಾಡುಗಳ ಮೂಲಕ ಜಾಗೃತಿ :
ಬಾಲ್ಯ ವಿವಾಹ ಬಾಲಕಾರ್ಮಿಕ ಪದ್ಧತಿ ಅಂತಹ ಸಾಮಾಜಿಕ ಪಿಡುಗುಗಳ ಬಗ್ಗೆ ಸಣ್ಣ ನಾಟಕ ಮತ್ತು ಹಾಡುಗಳ ಮೂಲಕ ಜಾಗೃತಿ ಮೂಡಿಸುವುದು.
ಗಾದೆಗಳು
*ವಿವಿಧ ಗಾದೆಗಳನ್ನು ಸಂಗ್ರಹಿಸುವುದು.
*ಗಾದೆಗಳನ್ನು ವಿವರಿಸಿ ಅದರ ಅರ್ಥವನ್ನು ವಿವರಿಸುವುದು, *ಕಥೆಗಳ ಮೂಲಕ ಗಾದೆಗಳನ್ನು ವಿವರಿಸಿವುದು (ಉದಾಹರಣೆ: ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಗಾದೆ ಬಗ್ಗೆ ಮಕ್ಕಳನ್ನು ಕುರಿತು ಕಥೆಯನ್ನು ಹೆಣೆಯಬಹುದು.
- ಮಕ್ಕಳನ್ನು ಉತ್ತೇಜಿಸುವ ಮತ್ತು ಮಕ್ಕಳ ಕಲಿಕೆಗೆ ಸಂಬಂಧಿಸಿದ ಗಾದೆಗಳನ್ನು ಪರಿಚಯಿಸುವುದು.
(ಉದಾಹರಣೆಗೆ ನಾಳೆ ಎಂದವನಿಗೆ ಹಾಳು ಇಂದೇ ಎಂದವನಿಗೆ ಬೀಳಾಗದು ಬಾಳು. ಒಗ್ಗಟ್ಟಿನಲ್ಲಿ ಬಲವಿದೆ )
ಭಾಷಣ
*ಶಿಕ್ಷಕರು ನೀಡಿದ ನಿರ್ದಿಷ್ಟ ವಿಷಯಗಳಿಗೆ ತಯಾರಾಗಿ ಭಾಷಣ ಮಾಡುವರು.
( ಉದಾಹರಣೆ:- ಪರಿಸರ ದಿನ, ಯಶಸ್ಸು ,ಸ್ನೇಹ, ಕ್ರೀಡೆ ಆರೋಗ್ಯ, ಶಿಕ್ಷಣ, ಆನ್ಲೈನ್ ತರಗತಿಗಳು, ಜಂಕ್ ಫುಡ್, ಮರವನ್ನು ಉಳಿಸಿ ಇದರ ಕುರಿತು ಭಾಷಣ ಇತ್ಯಾದಿ)
ಓದು ಮತ್ತು ಅಭಿನಯ:-
ಮಕ್ಕಳು ಆಯ್ಕೆ ಮಾಡಿದ ಚೀಟಿಯಲ್ಲಿ ಬರೆದಿರುವುದನ್ನು ಓದುವುದು ಮತ್ತು ಅದರಲ್ಲಿ ಕೊಟ್ಟಿರುವ ವಿಷಯಕ್ಕೆ ಸಂಬಂಧಿಸಿದಂತೆ ಅಭಿನಯಿಸುವುದು.



